ಗರ್ಭಿಣಿಯರಿಗೆ ಮನೆ ಸ್ವಚ್ಛಗೊಳಿಸಲು ಸಲಹೆಗಳು

ನಿಮ್ಮ ಜೀವನದಲ್ಲಿ ಸಂತೋಷ ತಾಯ್ತನ ಎನ್ನುವ ಪದ ನಿಮ್ಮ ಎಲ್ಲಾ ನೋವನ್ನು ಬದಲಾಯಿಸುತ್ತದೆ. ಗರ್ಭಧಾರಣೆಯ ಸಮಯದಲ್ಲಿ ನೀವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಬಹುದು ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಬದಲಿಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನೀವು ಇನ್ನಷ್ಟು ಉಲ್ಲಾಸಭರಿತರಾಗುವಿರಿ.

ಉದಾಹರಣೆಗೆ ಅಚ್ಚುಕಟ್ಟಾಗಿ ಮತ್ತು ಶುದ್ಧವಾಗಿ ಮನೆಯನ್ನು ಸ್ವಚ್ಛಗೊಳಿಸುವುದು ನಿಮ್ಮನ್ನು ನೀವು ಆರೋಗ್ಯಕರವಾಗಿಟ್ಟುಕೊಳ್ಳಲು ಅತೀ ಮುಖ್ಯ. ಆದರೆ, ಈ ಕೆಲಸಗಳನ್ನು ಮಾಡುವುದರಿಂದ ಕೆಲವೊಮೆ ಗರ್ಭಿಣಿಯರಿಗೆ ಪ್ರಯಾಸಕರ ಕೆಲಸವಾಗಬಹುದು.

ನಿಮ್ಮ ಹೊಟ್ಟೆ ಬೆಳೆಯುತ್ತಿದ್ದಂತೆ, ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿ ನಿಮ್ಮ ಸ್ಥಿತಿಯಲ್ಲಿ ಇನ್ನೂ ಕಷ್ಟವಾಗಬಹುದು. ನೀವು ಬೆಳಗಿನ ಬೇನೆಯ ಜೊತೆಗೆ ಇತರ ಭೌತಿಕ ತೊಂದರೆಗಳನ್ನು ಹೊಂದಿದ್ದರೆ ಯಾವುದೇ ವಿವರಣೆ ನೀಡುವ ಅಗತ್ಯವಿಲ್ಲ. ಆದರೆ, ನೀವು ಗರ್ಭಿಣಿಯಾಗಿದ್ದಾಗ ಸ್ವಚ್ಛಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಯೋಜನೆಗಳಿದ್ದರೆ, ಸ್ವಚ್ಛಗೊಳಿಸುವುದು ಒಂದು ಬೇಸರದ ಕೆಲಸವಲ್ಲ!

Cleaning Tips For Pregnant Women

ಹೆರಿಗೆ ಸಮಯದಲ್ಲಿ ಹೆಂಗಸಿಗೆ ಹೇಳಲೆಬಾರದಂತಹ 5 ವಿಷಯಗಳು

ಎಲ್ಲಿಯವರೆಗೆ ನೀವು ಸಂಪೂರ್ಣವಾಗಿ ಫಿಟ್ ಮತ್ತು ಆರೋಗ್ಯಕರವಾಗಿರುತ್ತೀರೋ ಅಲ್ಲಿಯವರೆಗೆ, ನೀವು ಮನೆಕೆಲಸಗಳನ್ನು ಮಾಡುವುದರಿಂದ ದೂರವುಳಿಯುವ ಅವಶ್ಯಕತೆ ಇಲ್ಲ. ನೀವು ಎಷ್ಟು ಮಿತಿಯಲ್ಲಿ ಮನೆಗೆಲಸವನ್ನು ಮಾಡಬೇಕು ಎಂಬುದನ್ನು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಕೇಳಿ.

ಅದೇ ಸಮಯದಲ್ಲಿ, ಗರ್ಭಧಾರಣೆಯ ಅವಧಿಯಲ್ಲಿ ಭೌತಿಕ ಸುರಕ್ಷತೆ ಮಾತ್ರವಲ್ಲದೆ ಯಾವುದೇ ರಾಸಾಯನಿಕಗಳು ಅಥವಾ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಬಳಸುವಾಗ ಹೆಚ್ಚಿನ ಕಾಳಜಿ ಅಗತ್ಯ.

ನೀವು ನೆಲದ ಮೇಲಿರುವ ಡಗ್ ಪ್ಯಾನ್ ಅಥವಾ ಸ್ಕ್ರಬ್ ಗಳನ್ನು ಎತ್ತಿಕೊಳ್ಳುವಾಗ ಮೊದಲು ಇದು ನಿಮಗೆ ಸುರಕ್ಷಿತವೇ ಎಂಬುದನ್ನು ತಿಳಿದುಕೊಳ್ಳಿ. ಇಲ್ಲಿ ನೀವು ಗರ್ಭಿಣಿಯಾಗಿದ್ದಾಗ ಸ್ವಚ್ಛಗೊಳಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಸಹಾಯ ವಾಗುವ ಕೆಲವು ಸಲಹೆಗಳಿವೆ.

ಲೇಬಲ್ ಓದುವುದನ್ನು ಮರೆಯಬೇಡಿ:
ಯಾವುದೇ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಬಳಸುವ ಮೊದಲು, ನಿಮ್ಮ ಹುಟ್ಟುವ ಮಗುವಿನ ಹಾನಿಯಾಗುವ ಯಾವುದೇ ರಾಸಾಯನಿಕಗಳು ಇವೆಯೇ ಎಂಬುದನ್ನು ತಿಳಿಯಲು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ. ವಿಷಕಾರಿ, ಅಪಾಯ, ವಿಷ, ಅಥವಾ ನಾಶಕಾರಿ ಇಂತಹ ಲೇಬಲ್‌ಗಳನ್ನು ಗರ್ಭಿಣಿಯಾಗಿದ್ದಾಗ ಖಂಡಿತವಾಗಿಯೂ ಬಳಸಕೂಡದು.

ಸರಿಯಾದ ಗಾಳಿ:

ನೀವು ಗರ್ಭಿಣಿಯಾಗಿದ್ದಾಗ ಮತ್ತು ಸ್ವಚ್ಛಗೊಳಿಸುವ ಅನಿವಾರ್ಯತೆಯಿದ್ದಾಗ ಸ್ವಚ್ಛಗೊಳಿಸುವ ಪ್ರಕ್ರಿಯೆಯ ಅವಧಿಯಲ್ಲಿ ಎಲ್ಲಾ ಕಿಟಕಿಗಳನ್ನು ತೆರೆದಿಡಲು ಮರೆಯದಿರಿ. ಇದು ಕೋಣೆಯಲ್ಲಿ ಚೆನ್ನಾಗಿ ಗಾಳಿ ಬರಲು ಸಹಾಯ ಮಾಡುತ್ತದೆ ಮತ್ತು ಹೊಗೆಯನ್ನು ಮತ್ತು ಸ್ವಚ್ಛಗೊಳಿಸುವ ವಸ್ತುಗಳಿಂದ ಬರುವ ವಾಸನೆಯನ್ನು ತೆಗೆದುಹಾಕುತ್ತದೆ.

ಸುರಕ್ಷತೆಗೆ ಗಮನ ನೀಡಿ:

ನಿಮ್ಮ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ವಿಷಯ ಸುರಕ್ಷತೆ. ಸ್ವಚ್ಛಗೊಳಿಸುವ ಸಂದರ್ಭದಲ್ಲಿಯೂ ಇದನ್ನು ಗಮನಿಸಬೇಕು. ಸ್ವಚ್ಛಗೊಳಿಸುವಾಘ ನೀವು ಎಷ್ಟು ಭಾಗಬಹುದು, ಹತ್ತಬಹುದು ಎಂಬ ಮಿತಿಯನ್ನು ಅರಿತುಕೊಳ್ಳಿ. ನೀವು ಸುರಕ್ಷಿತ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ .

ಅತೀಯಾದ ಕೆಲಸ ಬೇಡ:
ಗರ್ಭಾವಸ್ಥೆಯಲ್ಲಿ ಸೌಮ್ಯ ಮನೆಕೆಲಸಗಳನ್ನು ಮಾಡುವುದು ಸಂಪೂರ್ಣವಾಗಿ ಒಪ್ಪಬಹುದು. ಆದರೆ ಈ ಕೆಲಸಗಳ್ನುಅ ತಿಯಾಗಿ ಮಾಡಿದರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಏಣಿಯ ಅಥವಾ ಕುರ್ಚಿ ಮೇಲೆ ಹತ್ತುವುದು, ತುಂಬಾ ಬಗ್ಗಿಸುವ ಅಥವಾ ಕುಳಿತುಕೊಳ್ಳುವ ಕೆಲಸ ಇಂತಹ ಯಾವುದೇ ಕೆಲಸವನ್ನು ಖಂಡಿತವಾಗಿಯೂ ಮಾಡಬೇಡಿ. ಇದು ಸುರಕ್ಷಿತವಲ್ಲ.

ಮನೆಯಲ್ಲಿ ತಯಾರಿಸಿದ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಬಳಸಿ :

ನೀವು ಗರ್ಭಿಣಿಯಾಗಿದ್ದಾಗ ಸ್ವಚ್ಛಗೊಳಿಸುವುದು ಹೇಗೆ ಎಂಬುದರ ಬಗ್ಗೆ ಗೊಂದಲಗಳಿದ್ದರೆ ಇಲ್ಲಿ ನಮಗೆ ಒಂದು ಅತ್ಯುತ್ತಮ ಸಲಹೆಯಿದೆ. ಮನೆಯಲ್ಲಿ ಶುದ್ಧೀಕರಣಗಳನ್ನು ತಯಾರಿಸಲು ಪ್ರಯತ್ನಿಸಿ. ಉದಾಹರಣೆಗೆ ಸಮಾನ ಭಾಗಗಳಲ್ಲಿ ಬಿಳಿ ವಿನೆಗರ್ ಮತ್ತು ನೀರಿನ ಮಿಶ್ರಣ ನೀವು ಸ್ವಚ್ಛಗೊಳಿಸಲು ಬಳಸಬಹುದಾದ ಉತ್ತಮ ಆಯ್ಕೆ.

ಗರ್ಭಿಣಿಯಾದಾಗ ನಿರ್ಲಕ್ಷಿಸಬೇಕಾದ 5 ಸೌಂದರ್ಯ ಸಾಧನಗಳು

ಭಾರ ಎತ್ತುವದನ್ನು ಮಾಡಬೇಡಿ:
ನಿಮ್ಮ ಧೂಳಿನ ಪೀಠೋಪಕರಣನ್ನು ಗರ್ಭಿಣಿಯಾಗಿದ್ದಾಗ ಸ್ವಚ್ಛಗೊಳಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದರೆ ಯೋಚನೆಯನ್ನು ಇಂದೇ ನಿಲ್ಲಿಸಿ! ಅಪಾಯಕಾರಿಯಾದ ಭಾರವಾದ ವಸ್ತುಗಳನ್ನು ಎತ್ತುವ ಕೆಲಸವನ್ನುಗರ್ಭಾವಸ್ಥೆಯಲ್ಲಿರುವಾಗ ಮಾಡಲೇ ಬೇಡಿ. ಯಾವುದೇ ಪೀಠೋಪಕರಣ ಅಥವಾ ನೀರಿನ ಬಕೆಟ್ ನ್ನೂ ಸಹ ಎತ್ತುವ ಪ್ರಯತ್ನ ಮಾಡಬೇಡಿ.

ವ್ಯಾಕ್ಯುಮ್ ಕ್ಲೀನರ್ ಬಳಸಿ:
ಗುಡಿಸುವುದರ ಬದಲಿಗೆ ವ್ಯಾಕ್ಯುಮ್ ಕ್ಲೀನರ್ ನ್ನು ಬಳಸಿ. ಇದು ನಿಮ್ಮ ಬೆಳೆಯುತ್ತಿರುವ ಹೊಟ್ಟೆಗೆ ತೊಂದರೆಯಾಗದ ರೀತಿಯಲ್ಲಿ ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ಕೆಲಸ ಮಾಡುತ್ತಿರುವಾಗ ಒಂದು ಮಾಸ್ಕ್ ಅನ್ನು ಧರಿಸಿ. ವ್ಯಾಕ್ಯೂಮಿಂಗ್, ಕಾರ್ಪೆಟ್ಸ್ (ರತ್ನಗಂಬಳಿಗಳು) ಕುಶನ್ ಗಳನ್ನು ಸ್ವಚ್ಛಗೊಳಿಸಲು ಸುರಕ್ಷಿತವಾಗಿದೆ.

ಇತರರ ಸಹಾಯ:
ನೀವು ಕನಿಷ್ಟ ವಾರಕ್ಕೊಮ್ಮೆ ಇನ್ನೊಬ್ಬ ವ್ಯಕ್ತಿಯ ಸಹಾಯವನ್ನು ಪಡೆದುಕೊಳ್ಳಬಹುದಾದರೆ ನಿಮ್ಮ ದೈನಂದಿನ ಸ್ವಚ್ಛಗೊಳಿಸುವ ಕೆಲಸವನ್ನು ಕಡಿಮೆ ಮಾಡಬಹುದು. ಇದು ನಿಮ್ಮ ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು.

X
Desktop Bottom Promotion