ಹೆರಿಗೆಗೆ ಹೋಗುವಾಗ ನಿಮ್ಮ ಬ್ಯಾಗ್‍ನಲ್ಲಿರಬೇಕಾದ 12 ವಸ್ತುಗಳು

By Deepak M

ಗರ್ಭಿಣಿಯಾಗಿ ಒಂಬತ್ತು ತಿಂಗಳು ಸಮೀಪಿಸಿದಾಗ ಅಥವಾ ತುಂಬಿದಾಗ ಅನುಕ್ಷಣವು ಕಾತರ. ಯಾವಾಗ ನೋವು ಶುರುವಾಗುತ್ತದೋ ಎಂದು ಇಡೀ ಮನೆಯವರೆಲ್ಲ ಕಾದು ಕುಳಿತುಕೊಳ್ಳುವಂತಹ ಸಂದರ್ಭ ಬಂದಿರುತ್ತದೆ. ಹಾಗೆಂದು ನೋವು ಶುರುವಾದ ಆಸ್ಪತ್ರೆಗೆ ಹೋಗುವಾಗ ನಾವು ಬ್ಯಾಗ್ ಹುಡುಕಿಕೊಂಡು ಕೂರಲು ಸಾಧ್ಯವೇ? ಅದರಲ್ಲಿ ಏನೀರಬೇಕು? ಅಥವಾ ಬೇಡ ಎಂದು ವಿಮರ್ಶೆ ಮಾಡಲು ಕೂರಲಾದೀತೆ?

ಅದಕ್ಕೆ ಸ್ವಲ್ಪ ಮಟ್ಟಿನ ಯೋಜನೆ ಇರಲಿ, ಫ್ಯಾಶನ್‍ಗೆ ತಕ್ಕಂತಹ ಬ್ಯಾಗ್ ತೆಗೆದುಕೊಂಡು ಹೋಗುವುದಕ್ಕಿಂತ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವ ಬ್ಯಾಗ್ ತೆಗೆದುಕೊಂಡು ಹೋಗುವುದು ಉತ್ತಮ. ಹಾಗಾದರೆ ಆ ಬ್ಯಾಗ್‍ನಲ್ಲಿ ಏನೇನಿರಬೇಕು. ಇಲ್ಲಿದೆ ನಿಮ್ಮ ಚೆಕ್ ಲಿಸ್ಟ್, ನೋಡಿ ಸಿದ್ಧವಾಗಿಟ್ಟುಕೊಳ್ಳಿ.

12 things in your maternity bag checklist

ಆಸ್ಪತ್ರೆಗೆ ಹೋದಾಗ ನಿಮಗೆ ಅತ್ಯಾವಶ್ಯಕವಾಗಿ ಬೇಕಾಗುವ ವಸ್ತುಗಳು;

1. ನಿಮ್ಮ ವೈಧ್ಯಕೀಯ ದಾಖಲೆಗಳು ಮತ್ತು ಫೈಲ್‍ಗಳು;
ಇದನ್ನು ಮಾತ್ರ ಮರೆಯಲೇಬೇಡಿ. ಕಡೆಯ ವೈಧ್ಯಕೀಯ ತಪಾಸಣೆಯ ನಂತರ ಬಂದ ಕೂಡಲೇ ಇದನ್ನು ಮೊದಲು ನಿಮ್ಮ ಬ್ಯಾಗ್‍ನಲ್ಲಿಡಿ.

2. ನೈಟಿಗಳು ಅಥವಾ ಗೌನ್‍ಗಳು;
ತೊಡಲು ಸಡಿಲವಾಗಿರುವಂತಹ ಮತ್ತು ಭಾರವಿಲ್ಲದಂತಹ ಒಂದೆರಡು ನೈಟಿ ಅಥವಾ ಗೌನ್‍ಗಳನ್ನು ಪ್ಯಾಕ್ ಮಾಡಿ. ನಿಮ್ಮ ಆಸ್ಪತ್ರೆಯವರು ಒಂದನ್ನು ನಿಮಗೆ ನೀಡಬಹುದು ಆದರೆ ನಿಮ್ಮ ಬಳಿ ಒಂದೆರಡು ಇದ್ದಷ್ಟು ಒಳ್ಳೆಯದು. ಪ್ರಸವದ ನಂತರ ಒಂದು ವೇಳೆ ರಕ್ತಸ್ರಾವವಾಗುತ್ತಿದ್ದಲ್ಲಿ, ಬದಲಾಯಿಸಿ ಹಾಕಿಕೊಳ್ಳಲು ನಿಮಗೆ ಇದು ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ. ಅದಕ್ಕಾಗಿ ಒಂದೆರಡು ಜೊತೆ ನೈಟಿ ಅಥವಾ ಗೌನ್ ಇಟ್ಟುಕೊಂಡಿರಿ, ಹೆರಿಗೆಗೆ ಮೊದಲು ಮತ್ತು ನಂತರ ಎರಡಕ್ಕು ಇವು ಬೇಕಾಗುತ್ತವೆ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರ್ಭಿಣಿಯರಿಗೆ ಬೆಸ್ಟ್ ಈ ಸ್ಟೈಲಿಷ್ ಉಡುಪು

3. ಹಗುರವಾದ ಹವಾಯ್ ಚಪ್ಪಲಿಗಳು;
ಇವು ಮತ್ತು ಚಪ್ಪಟೆಯಾಗಿರಲಿ. ನಿಮಗೆ ಧರಿಸಲು ಮತ್ತು ಕಳಚಲು ಸುಲಭವಾಗಿದ್ದಷ್ಟು ಉತ್ತಮ. ಮರೆಯದೆ ಇವನ್ನು ನಿಮ್ಮ ಬ್ಯಾಗ್‍ನಲ್ಲಿ ಹಾಕಿಡಿ.

4. ಒಂದು ಜೊತೆ ಸಾಕ್ಸ್;
ನಂಬಿದರೆ ನಂಬಿ ಬಿಟ್ಟರೆ ಬಿಡಿ ನೀವು ನೋವಿನಿಂದ ನರಳಾಡುವಾಗ ನಿಮ್ಮ ಪಾದಗಳು ಥಂಡಿಯಾಗಿಬಿಡುತ್ತವೆ. ಇದನ್ನು ಧರಿಸಲು ನಿಮ್ಮ ಸಂಗಾತಿ ಅಥವಾ ಆಸ್ಪತ್ರೆಯ ಸಿಬ್ಬಂದಿಯ ಸಹಾಯವನ್ನು ಪಡೆಯಿರಿ. ಹೆರಿಗೆ ನೋವು ಬಂದು ಪ್ರಸವದ ಸಮಯ ಸಮೀಪಿಸಿದಾಗ ಇದನ್ನು ಕಳಚಲು ಅವರ ಸಹಾಯವನ್ನು ಕೋರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರ್ಭಧಾರಣೆ ವೇಳೆ ರಕ್ತಸ್ರಾವವಾದರೆ ಏನರ್ಥ?

5. ಲೋಷನ್ ಮತ್ತು ಲಿಪ್ ಬಾಮ್‍ಗಳು;
ಈ ಸಂದರ್ಭದಲ್ಲಿ ನೀವು ನಿರ್ಜಲೀಕರಣದ ಸಮಸ್ಯೆಗೆ ಒಳಗಾಗುತ್ತೀರಿ. ಅದಕ್ಕಾಗಿ ನಿಮ್ಮ ತುಟಿಗಳಿಗಾಗಿ ಮೊಯಿಶ್ಚರೈಸರ್ ಮತ್ತು ಲಿಪ್ ಬಾಮ್‍ಗಳನ್ನು ಇಟ್ಟುಕೊಂಡಿರಿ. ಇವುಗಳು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತವೆ. ಇದನ್ನು ನಿಮ್ಮ ಬ್ಯಾಗ್‍ನಲ್ಲಿಟ್ಟುಕೊಂಡರೆ ಅದರಿಂದ ನಿಮಗೆ ಸಿಗುವ ಉಪಕಾರಕ್ಕೆ ನೀವೇ ಧನ್ಯವಾದ ಸಲ್ಲಿಸುವಿರಿ.

6. ನರ್ಸಿಂಗ್ ಗೌನ್‍ಗಳು;
ನೀವು ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಕಳೆಯುವಂತಹ ಪರಿಸ್ಥಿತಿ ಬಂದರೆ ಇವುಗಳು ನಿಮಗೆ ಅತ್ಯಾವಶ್ಯಕವಾಗಿ ಬೇಕಾಗುತ್ತವೆ. ಅದಕ್ಕಾಗಿ ನಾಲ್ಕರಿಂದ ಐದು ಗೌನ್ ಇಟ್ಟುಕೊಳ್ಳಿ. ಏಕೆಂದರೆ ಆಸ್ಪತ್ರೆಯಲ್ಲಿ ಲಾಂಡ್ರಿಯ ಸೌಲಭ್ಯ ಇರುತ್ತೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಗೌನ್‍ಗಳಿಂದ ನಿಮಗೆ ಮಗುವಿಗೆ ಎದೆಹಾಲು ಕುಡಿಸಲು ಸುಲಭವಾಗುತ್ತದೆ.

7. ಹಿತಕರವಾದ ಒಳ ಉಡುಪುಗಳು;
ಆದಷ್ಟು ಹತ್ತಿಯ ಒಳ ಉಡುಪುಗಳನ್ನು ಬಳಸಿ. ನಿಮಗೆ ಇನ್ನಿತರ ಯಾವುದೇ ನೆಚ್ಚಿನ ಬ್ರಾಂಡ್ ಇದ್ದರು ಪರವಾಗಿಲ್ಲ, ಸ್ವಲ್ಪ ದಿನ ಅದನ್ನು ದೂರವಿಡಿ. ಏಕೆಂದರೆ ಈ ಸಮಯದಲ್ಲಿ ಅವುಗಳು ಉಪಯೋಗಕ್ಕೆ ಬರುವುದಿಲ್ಲ. ಆದಷ್ಟು ನಿಮ್ಮ ದೇಹದ ಗಾತ್ರಕ್ಕಿಂತ ಸ್ವಲ್ಪ ದೊಡ್ಡ ಒಳ ಉಡುಪನ್ನು ಖರೀದಿಸಿ. ಏಕೆಂದರೆ ಸಿಸೇರಿಯನ್ ಹೆರಿಗೆಯಾದಲ್ಲಿ, ದೊಡ್ಡ ಒಳ ಉಡುಪುಗಳು ನಿಮ್ಮ ಗಾಯದ ಭಾಗಕ್ಕೆ ಸ್ಪರ್ಶಿಸುವುದಿಲ್ಲ ಅಥವಾ ಅದು ಮಾಯುವಾಗ ನಿಮಗೆ ತೊಂದರೆ ನೀಡುವುದಿಲ್ಲ. ಹಾಗಾಗಿ ನಿಮ್ಮ ಬ್ಯಾಗ್‍ನಲ್ಲಿ ಇವುಗಳು ತಪ್ಪದೆ ಇರಲಿ.

8. ನರ್ಸಿಂಗ್ ಬ್ರಾ ಮತ್ತು ಪ್ಯಾಡ್‍ಗಳು;
ಇವಂತು ನಿಮಗೆ ಅತ್ಯಾವಶ್ಯಕವಾಗಿ ಬೇಕಾಗುತ್ತವೆ. ಇವುಗಳಿಂದ ನಿಮಗೆ ದೊರೆಯುವ ಉಪಕಾರಗಳನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಅದರಲ್ಲು ನಿರಂತರವಾಗಿ ಹಾಲು ಸೋರಲು ಆರಂಭಿಸಿದರೆ ಇವುಗಳು ನಿಮಗೆ ಖಂಡಿತವಾಗಿ ಉಪಯೋಗಕ್ಕೆ ಬರುತ್ತವೆ.

9. ಡೈಪರ್‌ಗಳು; ಸಾಧ್ಯವಾದರೆ ಒಂದಿಡೀ ಪ್ಯಾಕ್ ನಿಮ್ಮ ಬ್ಯಾಗ್‍ನಲ್ಲಿಡಿ. ಏಕೆಂದರೆ ನಿಮ್ಮ ಹಸುಗೂಸಿಗೆ ಹಗಲು - ರಾತ್ರಿ ಪ್ಯಾಡ್ ಬದಲಿಸುತ್ತ ಇರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮಗುವಿನ ತ್ವಚೆಗೆ ಡೈಪರ್ ಸರಿಬರುವುದಿಲ್ಲ ಎಂದು ತೋರಿದಲ್ಲಿ, ನಿಮ್ಮ ದಾದಿಗೆ ಅಥವಾ ಮನೆಯವರಿಗೆ ಹೇಳಿ ಹತ್ತಿಯ ಬಟ್ಟೆಗಳನ್ನು ತರಿಸಿಕೊಳ್ಳಿ. ಅಥವಾ ಅಂತಹ ಬಟ್ಟೆಗಳನ್ನು ನಿಮ್ಮ ಬ್ಯಾಗ್‍ನಲ್ಲಿ ತಪ್ಪದೆ ಇಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರ್ಭಿಣಿಯರೇ ಬೆನ್ನುನೋವೇ ಹೀಗೆ ಮಾಡಿ

10. ಸಾಕ್ಸ್ ಮತ್ತು ಬೂಟ್‍ಗಳು;
ಹತ್ತಿಯಿಂದ ಮಾಡಿದ ಬಣ್ಣ ಬಣ್ಣದ ಸಣ್ಣಗಿನ ಸಾಕ್ಸ್ ಮತ್ತು ಬೂಟ್ಸ್ ನಿಮ್ಮ ಬ್ಯಾಗಿನಲ್ಲಿರಲಿ, ನಿಮ್ಮ ಮಗುವಿಗಾಗಿ.

11. ಟೋಪಿಗಳು;
ಮಗುವಿನ ಕಿವಿ ಮತ್ತು ತಲೆಯನ್ನು ಬೆಚ್ಚಗಿಡುವಂತಹ ಟೋಪಿ ತಪ್ಪದೆ ನಿಮ್ಮ ಬ್ಯಾಗಿನಲ್ಲಿರಲಿ.

12. ಬೇಬಿ ಬ್ಲಾಂಕೆಟ್;
ಮಗುವಿಗು ಸಹ ಬೆಚ್ಚಗಿನ ಹೊದಿಕೆ ಬೇಡವೇ, ಅದಕ್ಕಾಗಿ ತಪ್ಪದೆ ನಿಮ್ಮ ಮಗುವಿಗಾಗಿ ಒಂದು ಬ್ಲಾಂಕೆಟ್ ಖರೀದಿಸಿ ನಿಮ್ಮ ಬ್ಯಾಗ್‍ನಲ್ಲಿಡಿ.

X
Desktop Bottom Promotion