Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಸುಖೀ ಪ್ರಸವಕ್ಕೆ ಹತ್ತು ಸೂತ್ರಗಳು
ಸುಖೀ ಮತ್ತು ಆರೋಗ್ಯಕರ ಪ್ರಸವ ಎಲ್ಲಾ ಮಹಿಳೆಯರ ಕನಸು. ಹಾಗಾದರೆ ಅದು ಹೇಗೆ ಸಾಧ್ಯ. ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಹಾಗಾದರೆ ಅದಕ್ಕೆ ಉತ್ತರ ಪಡೆಯಲು ಇಲ್ಲಿ ನೋಡಿ. ನಿಮ್ಮ ಕೆಲಸಗಳನ್ನು ಆದ್ಯತೆಯ ಪ್ರಕಾರ ಮಾಡಿ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಸವದ ನಂತರ ತಾಯಂದಿರು ತಿನ್ನಬಾರದ ಆಹಾರಗಳು
ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕೆಲಸಗಳನ್ನು ಆದ್ಯತೆಯ ಮೇರೆಗ ಮಾಡಲು ಆರಂಭಿಸಿ. ಯಾವುದನ್ನು ಮಾಡಬೇಕು ಎಂದು ಯೋಚಿಸಿ, ಯಾವುದನ್ನು ನೀವು ಮಾಡಬಲ್ಲಿರಿ ಎಂದು ನಿರ್ಧರಿಸಿ ಹಾಗೂ ಉಳಿದವನ್ನು ಬಿಟ್ಟು ಬಿಡಿ. ಬೇರೆಯವರನ್ನು ಸೇರಿಸಿಕೊಂಡು ಕೆಲಸ ಮಾಡಿ

ಗರ್ಭಧಾರಣೆ ಸಂದರ್ಭದಲ್ಲಿ ನಿಮ್ಮ ಪತಿ, ನಿಮ್ಮ ಸಂಬಂಧಿಕರನ್ನು ಸೇರಿಸಿಕೊಂಡು ಕೆಲಸ ಮಾಡಿ ಆಗ ಅವರಿಗೆ ನಿಮ್ಮ ನೈಜ ಸ್ಥಿತಿಯ ಬಗ್ಗೆ ಅರಿವಾಗುತ್ತದೆದೆ. ಬೇರೆಯವರನ್ನು ಗೌರವ ಮತ್ತು ಪ್ರೀತಿಯಿಂದ ಕಾಣಿ.
ನಿಮ್ಮ ಗರ್ಭಧಾರಣೆಯ ಆರಂಭಿಕ ದಿನಗಳು ನಿಮಗೆ ಬಹಳವೇ ಕಷ್ಟಕರ ದಿನಗಳಾಗಿರಬಹುದು. ಬೆಳಗ್ಗಿನ ಜಾವ ಯಾವುದೇ ಕೆಲಸ ಮಾಡಲು ಆಗದೇ ಇರುವ ಸನ್ನಿವೇಶದಲ್ಲಿ ನೀವಿರಬಹುದು. ನೀವು ಜನರ ಜೊತೆ ಬೆರೆತರೆ ಈ ಎಲ್ಲಾ ಬದಲಾವಣೆಗಳ ಬಗ್ಗೆ ಅವರಿಗೆ ಅರಿವಾಗುತ್ತದೆ. ಆಗ ಅವರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆಯ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳು
ನೆನಪುಗಳ ಮಾತು ಮಧುರ
ಬಾಣಂತಿಯಾಗಿರುವಾಗ ಸಮಯ ಬೇಗನೇ ಹೋಗುವುದೇ ಇಲ್ಲ ಎಂದು ಆರಂಭದಲ್ಲಿ ಅನ್ನಿಸಬಹುದು ಆದರೆ ಅನುಭವಿಗಳು ಹೇಳುವಂತೆ ಈ ಅವಧಿ ಬಹಳ ಬೇಗನೆ ಕಳೆದು ಹೋಗುತ್ತದೆ. ದಿನ ಮಾತ್ರದಲ್ಲಿ ಇದೊಂದು ನೆನಪಷ್ಟೇ ಆಗಿ ಉಳಿಯುತ್ತದೆ. ಈ ಅವಧಿಯಲ್ಲಿ ನಿಮ್ಮ ಬದುಕಿನಲ್ಲಾಗುವ ಬದಲಾವಣೆಗಳನ್ನ್ನು ನಿಮ್ಮ ನೆನಪಿನ ಬುಟ್ಟಿಯಲ್ಲಿ ಶಾಶ್ವತವಾಗಿ ಕಟ್ಟಿಹಾಕುವ ಪ್ರಯತ್ನ ಮಾಡಿ. ನಿಮ್ಮ ಪತಿಯನ್ನು ಈ ವಿಷಯದಲ್ಲಿ ಒಟ್ಟಿಗೆ ಸೇರಿಸಿಕೊಳ್ಳಿ. ಅವನ ಅನುಭವಗಳನ್ನೂ ಬರೆದಿಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಎಲ್ಲಾ ಕಷ್ಟ ಹಾಗೂ ಸುಖಗಳನ್ನೂ ದಾಖಲಿಸಿ. ಮುಂದೆ ಇದೇ ನಿಮ್ಮ ಪಾಲಿಗೆ ಅತೀ ದೊಡ್ಡ ನೆನಪಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಎಷ್ಟು ಸರಿ ?
ಸಾಧ್ಯವಾದಾಗೆಲ್ಲಾ ವಿಶ್ರಾಂತಿ ಮಾಡಿ.
ಒತ್ತಡಕ್ಕೆ ಹೆಚ್ಚಾಗಿ ಸಿಲುಕಬೇಡಿ. ನಿಮಗೆ ವಿಶ್ರಾಂತಿ ಪಡೆಯಲು ಮತ್ತು ಮನಸ್ಸಿಗೆ ಆರಾಮವೆನಿಸುವ ಕೆಲಸಗಳನ್ನು ಮಾಡಿ.
ಈ ಅವಧಿಯನ್ನು ಆನಂದಿಸಿ
ಬಹಳ ಬೇಗನೆ ನೀವು ಗರ್ಭವತಿಯಿಂದ ಒಬ್ಬ ತಾಯಿ ಆಗುತ್ತೀರಿ ಎಂದು ಗಮನದಲ್ಲಿಡಿ. ಆಗ ನಿಮ್ಮ ಮೇಲೆ ಹೊಸತೊಂದು ಜವಾಬ್ದಾರಿ ಬರುತ್ತದೆ. ಆಗ ನೀವೊಬ್ಬ ಪತ್ನಿ ಹಾಗೂ ತಾಯಿ ಎರಡೂ ಆಗಿರುತ್ತೀರಿ. ಈ ಅವಧಿಯಲ್ಲಿ ನಿಮ್ಮ ಕೆಲಸದ ಒತ್ತಡಗಳನ್ನು ಬಿಟ್ಟು ನಿಮಗೆ ಹಾಗೂ ಪತಿಗೆ ಸ್ವಲ್ಪ ಸಮಯ ಕೊಡಿ.
ಧನಾತ್ಮಕ ಅಂಶಗಳ ಮೇಲೆ ಗಮನ ಕೊಡಿ
ಋಣಾತ್ಮಕ ಅಂಶಗಳಿಂದ ಎಷ್ಟೇ ದೂರವಿರಬೇಕು ಎಂದರೂ ಅದು ಸಾಧ್ಯವಿಲ್ಲ. ಹಾಗಾಗಿ ಸಾಧ್ಯವಾದಷ್ಟು ಧನಾತ್ಮಕ ಅಂಶಗಳ ಬಗ್ಗೆ ಗಮನ ಕೊಡಿ. ದುಃಖದಲ್ಲಿ ಅಂತ್ಯವಾಗುವ ಕತೆಗಳು ಹಾಗೂ ಪ್ರಸವದ ಬಗ್ಗೆ ಇರುವ ಋಣಾತ್ಮಕ ಕಥೆಗಳಿಂದ ದೂರವಿರಿ.
ಸಹಾಯ ಕೇಳಲು ನಾಚಿಕೆ ಬೇಡ
ನೀವು ತಾಯಿಯಾಗುವುದು ನಿಮಗೆ ನೀಡಿದಷ್ಟೇ ಖುಷಿ ನಿಮ್ಮ ಸಂಬಂಧಿಕರಿಗೂ ಕೊಡುತ್ತದೆ. ಹಾಗಾಗಿ ಏನಾದರೂ ಬೇಕು ಎಂದಾದಾಗ ನೆರವನ್ನು ಪಡೆಯಲು ಹಿಂಜರಿಯದಿರಿ. ಎಲ್ಲರೂ ಸಹಾಯಕ್ಕೆ ಸಿದ್ಧರಿರುತ್ತಾರೆ ಎಂದು ನೆನಪಿಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:6 ತಿಂಗಳ ಗರ್ಭಾವಸ್ಥೆ: ದೇಹದ ಬದಲಾವಣೆ
ಮಾಹಿತಿ ಇರಲಿ
ಗರ್ಭಧಾರಣೆ, ಬಾಣಂತನದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿರುತ್ತದೆ. ಮೊದಲ ದಿನದಿಂದಲೇ ಇದರ ಬಗ್ಗೆ ಮಾಹಿತಿ ಪಡೆಯುತ್ತಾ ಆನಂದಿಸಿ. ಕಿಡ್ ಸ್ಪಾಟ್ ನಿಮಗೆ ಬೇಕಾದ ಎಲ್ಲಾ ಮಾಹಿತಿಯ ಆಗರವಾಗಿದೆ. ಇಲ್ಲಿ ನೀವು ಹಲವು ಮಂದಿಯೊಂದಿಗೆ ಸಂಪರ್ಕವನ್ನೂ ಸಾಧಿಸಿದಂತಾಗುತ್ತದೆ.
ನಗುತ್ತಿರಿ
ನಿಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ. ಹಾಗಾಗಿ ಸ್ವಾಗತಕ್ಕೆ ನಗುಮೊಗವನ್ನು ಹೊಂದಲು ಮೊದಲಿನಿಂದ ಅಭ್ಯಾಸ ಮಾಡಿ. ಒತ್ತಡದಿಂದ ದೂರವಿರಿ ಮತ್ತು ಸದಾ ಖುಷಿಯಾಗಿರಿ.



Click it and Unblock the Notifications











