ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಮಾರ್ಗಗಳು

By Super

ಮದುವೆಯಾಗಿ ಸಂಸಾರವನ್ನು ಆರಂಭಿಸಿದ ಮೇಲೆ ತಮ್ಮ ಸಂಸಾರಕ್ಕೊಂದು ಪುಟ್ಟ ಮಗುವಿನ ಸೇರ್ಪಡೆಯಾಗಬೇಕು ಎಂದು ಯಾರಿಗೆ ತಾನೇ ಆಸೆಯಿರುವುದಿಲ್ಲ ಹೇಳಿ? ತಾನು ಗರ್ಭವತಿ ಎಂದು ಹೇಳಿಸಿಕೊಂಡಾಗಲೇ

ಪರಿಪೂರ್ಣ ಮಹಿಳೆಯಾಗುತ್ತೇನೆ ಎಂದು ಮದುವೆಯಾದ ಪ್ರತಿಯೊಬ್ಬ ಮಹಿಳೆಯೂ ಯೋಚಿಸುತ್ತಾಳೆ. ಆದರೆ ಗರ್ಭಧಾರಣೆಯಾಗಬೇಕಾದರೆ ಕೆಲವು ಅಂಶಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು.

ನೀವು ಈ ವರ್ಷದಲ್ಲೇ ಮಗುವನ್ನು ಪಡೆಯುವ ಕನಸು ಹೊಂದಿದ್ದರೆ ಅದನ್ನು ಸಾಕಾರಗೊಳಿಸಲು ಈ ಕೆಳಗಿನ ಮಾರ್ಗಗಳು ನಿಮಗೆ ನೆರವಾಗಬಹುದು.

ನಿಮ್ಮನ್ನು ನೀವು ಕೂಲ್ ಆಗಿರಿಸಿ

ನಿಮ್ಮನ್ನು ನೀವು ಕೂಲ್ ಆಗಿರಿಸಿ

ವೀರ್ಯಾಣುಗಳು ಹೆಚ್ಚಾಗಿ ತಂಪಾದ ವಾತಾವರಣದಲ್ಲಿ ಬೆಳವಣಿಗೆಯಾಗುತ್ತವೆ. ಗಂಡಸರು ತೊಡೆಯ ಮೇಲೆ ಲ್ಯಾಪ್ ಟಾಪ್ ಗಳನ್ನಟ್ಟು ಕೆಲಸ ಮಾಡುವುದರಿಂದ ಅವರಲ್ಲಿ ವೀರ್ಯಾಣುಗಳ ಕೊರತೆ ಉಂಟಾಗುತ್ತದೆ. ಹೆಚ್ಚಾಗಿ ಬಿಸಿನೀರಿನ ಸ್ನಾನವನ್ನು ಮಾಡಬಾರದು, ಒಂದು ಸಂಶೋಧನೆಯ ಪ್ರಕಾರ ತಂಪಾದ ನೀರಿನಲ್ಲಿ ಶವರ್ ಬಾತ್ ಮಾಡಿದರೆ ಐದು ಪಟ್ಟು ವೀರ್ಯಾಣುಗಳು ಉತ್ವಾದನೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಸೂರ್ಯನ ಬೆಳಕಿಗೆ ಮೈವೊಡ್ಡಿ

ಸೂರ್ಯನ ಬೆಳಕಿಗೆ ಮೈವೊಡ್ಡಿ

ಸೂರ್ಯನ ಕಿರಣಗಳು ಗಂಡಸರು ಹಾಗೂ ಮಹಿಳೆ ಇಬ್ಬರಿಗೂ ವಿಟಮಿನ್ ಡಿ ಪೋಷಕಾಂಶವನ್ನು ಒದಗಿಸುತ್ತದೆ. ಸಂಶೋಧನೆಗಳಿಂದ ಸಾಬೀತಾದಂತೆ, ಸೂರ್ಯನ ಕಿರಣಗಳು ಹೆಂಗಸರಲ್ಲಿ ಋತುವಕ್ರವನ್ನು ನಿಯಂತ್ರಿಸಿ ಗರ್ಭಧಾರಣೆಗೆ ಸಹಾಯಕವಾದ ಲೈಂಗಿಕ ಹಾರ್ಮೋನ್ ಗಳಾದ progesterone ಮತ್ತು oestrogen ಮಟ್ಟವನ್ನು ಅಭಿವೃದ್ಧಿಗೊಳಿಸುತ್ತದೆ. ಸೂರ್ಯನ ಕಿರಣಗಳು ಪುರುಷರಲ್ಲಿ ವೀರ್ಯಾಣುಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ.

ಮಾನಸಿಕ ಒತ್ತಡವನ್ನು ಹೊರಹಾಕಿ

ಮಾನಸಿಕ ಒತ್ತಡವನ್ನು ಹೊರಹಾಕಿ

ಅತೀಯಾದ ಒತ್ತಡ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಗಂಡಸರಲ್ಲಿಯೂ ಕಾಮ ಪ್ರವೃತಿ ಕುಗ್ಗಿ ವೀರ್ಯಾಣುಗಳ ಉತ್ಪಾದನೆ ಕಡಿಮೆಯಾಗಬಹುದು.

ಹಾಲಿನ ಉತ್ಪನ್ನಗಳನ್ನು ಸೇವಿಸಿ

ಹಾಲಿನ ಉತ್ಪನ್ನಗಳನ್ನು ಸೇವಿಸಿ

ದಿನವೂ ಹಾಲಿನ ಉತ್ಪನ್ನಗಳನ್ನು ಸೇವಿಸುವ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಅಧಿಕವಾಗುವುದು ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಅಲ್ಲದೇ ಹಾಲಿನ ಉತ್ಪನ್ನಗಳಲ್ಲಿರುವ ಕೊಬ್ಬಿನ ಅಂಶ ಅಂಡಾಶಯಗಳ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ.

ಮಲ್ಟಿವಿಟಮಿನ್ (ಬಹುರೂಪಿ ಜೀವಸತ್ವ)

ಮಲ್ಟಿವಿಟಮಿನ್ (ಬಹುರೂಪಿ ಜೀವಸತ್ವ)

ಸಂಶೋಧನೆಯಗಳ ಪ್ರಕಾರ ಪ್ರಸವಪೂರ್ವ ವಿಟಮಿನ್ ಅಂದರೆ ಫಾಲಿಕ್ ಆಮ್ಲದಂತಹ ಜೀವಸತ್ವಗಳು ಗರ್ಭಧಾರಣೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.

ವಿಟಮಿನ್ ಬಿ 12 ಮತ್ತು ಸೆಲೆನಿಯಂ - ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಧೂಮಪಾನ

ಧೂಮಪಾನ

ಧೂಮಪಾನ ಮಾಡುವ ಗಂಡಸರಲ್ಲಿ ಉಳಿದವರಿಗಿಂತ ಶೇ 50 ಕ್ಕಿಂತ ಕಡಿಮೆ ವೀರ್ಯಾಣು ಉತ್ಪಾದನಾ ಸಾಮರ್ಥ್ಯವಿರುತ್ತದೆ. ಹಾಗೂ ಧೂಮಪಾನ ಮಾಡುವ ಮಹಿಳೆಯರಲ್ಲಿ ಉಳಿದ ಮಹಿಳೆರಿಗಿಂತ ಶೇ 30 ಕಡಿಮೆ ಸಂತಾನೋತ್ಪತ್ತಿ ಸಾಮರ್ಥ್ಯವಿರುತ್ತದೆ ಅಥವಾ ಇನ್ನೂ ಕೆಲವರಲ್ಲಿ ಗರ್ಭ ನಿಲ್ಲದೇ ಹೋಗಬಹುದು.

ಮದ್ಯಪಾನ ಮಾಡುವ ಮೊದಲು ಯೋಚಿಸಿ

ಮದ್ಯಪಾನ ಮಾಡುವ ಮೊದಲು ಯೋಚಿಸಿ

ನೀವು ಗರ್ಭಧಾರಣೆಗೆ ಸಿದ್ಧರಾಗಿದ್ದರೆ ನೀವು ಹಾಗೂ ನಿಮ್ಮ ಸಂಗಾತಿ ಮದ್ಯಪಾನವನ್ನು ಕಡಿಮೆ ಮಾಡುವುದು ಒಳ್ಳೆಯದು. ಅತೀಯಾದ ಆಲ್ಕೋಹಾಲ್ ಸೇವನೆ ಅಂಡೋತ್ಪತ್ತಿ ಹಾಗೂ ವೀರ್ಯಾಣು ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.

ಫೋನ್ ಅಪ್ಲಿಕೇಶನ್ ಬಳಸಿ

ಫೋನ್ ಅಪ್ಲಿಕೇಶನ್ ಬಳಸಿ

ಮಹಿಳೆಯರು ಋತುಚಕ್ರವಾದ ದಿನ ಹಾಗೂ ತಿಂಗಳುಗಳನ್ನು ಸರಿಯಾಗಿ ನೆನಪಿಡಲು ಸಾಧ್ಯವಿಲ್ಲದಿದ್ದರೆ ಫೋನ್ ಗಳಲ್ಲಿನ ಡೈರಿಗಳನ್ನು ಬಳಸಬಹುದು. ಇದು ಗರ್ಭಧಾರಣೆಯ ಕ್ರಿಯೆಗೆ ಸಾಕಷ್ಟು ನೆರವಾಗುತ್ತದೆ.

ಲೈಂಗಿಕತೆ

ಲೈಂಗಿಕತೆ

ವಾರದಲ್ಲಿ ಒಂದು ದಿನ ಲೈಂಗಿಕತೆಯಲ್ಲಿ ತೊಡಗಿರುವ ದಂಪತಿಗಳಲ್ಲಿ ಶೇ 15 ಹಾಗೂ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸುವ ದಂಪತಿಗಳಲ್ಲಿ ಶೇ 50 ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಲೈಂಗಿಕತೆ ಆರೋಗ್ಯಕರ ವೀರ್ಯಾಣುಗಳನ್ನು ಹುಟ್ಟುಹಾಕುತ್ತದೆ. ಇದು ಮೂರು ದಿನಕ್ಕಿಂತ ಹೆಚ್ಚು ದೇಹದಲ್ಲಿದ್ದರೆ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ.

ಋತುಚಕ್ರ

ಋತುಚಕ್ರ

ನೀವು ಯಶಸ್ವಿಯಾಗಿ ಮಗುವನ್ನು ಮಡೆಯಲು ತಿಂಗಳ ಋತುಚಕ್ರದ ಸಮಯ ಅತ್ಯಂತ ಅಗತ್ಯ. ತಿಂಗಳ 28 ದಿನಗಳ ಲೆಕ್ಕದಲ್ಲಿ 10 ಮತ್ತು 17 ನೇ ದಿನದ ನಡುವಿನ ಸಮಯ ಲೈಂಗಿಕತೆಗೆ ಬಹಳ ಒಳ್ಳೆಯದು.

ಸಮತೂಕದ ಮೈಕಟ್ಟು ಪಡೆಯಿರಿ :

ಸಮತೂಕದ ಮೈಕಟ್ಟು ಪಡೆಯಿರಿ :

ಅಧಿಕ ತೂಕದಿಂದಾಗಿ ಅಂಡೋತ್ಪತ್ತಿ ಉತ್ಪಾದನೆಯಲ್ಲಿ ಗೊಂದಲವುಂಟಾಗುತ್ತದೆ. ಅತಿಯಾದ ತೂಕ ಹೊಂದುವ ಮಹಿಳೆಯರಲ್ಲಿ ಅನಿಯಮಿತ ಋತುಚಕ್ರಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ದೇಹದಲ್ಲಿ ಕೇವಲ ಶೇ. 5 ರಷ್ಟು ಪ್ರಮಾಣ ತೂಕ ಕಡಿಮೆಯಾದರೂ ಸಹ ಗರ್ಭಧಾರಣೆಯ ಸಾಧ್ಯತೆಗಳು ಅಧಿಕವಾಗುತ್ತವೆ.

ಅತೀ ಕಡಿಮೆ ತೂಕ ಬೇಡ

ಅತೀ ಕಡಿಮೆ ತೂಕ ಬೇಡ

ಸಾಮಾನ್ಯ ತೂಕಕ್ಕಿಂತ ಕಡಿಮೆ ತೂಕವಿದ್ದರೆ ಸಂತಾನೋತ್ಪತ್ತಿಯ ಸಾಧ್ಯತೆಗಳೂ ಕಡಿಮೆಯಾಗಿ ಬಿಡುತ್ತವೆ.

ಕಾರ್ಬೋಹೈಡ್ರೇಟ್ ಕಡಿಮೆ ಸೇವಿಸಿ

ಕಾರ್ಬೋಹೈಡ್ರೇಟ್ ಕಡಿಮೆ ಸೇವಿಸಿ

ತಜ್ಞರ ಪ್ರಕಾರ ಕಾರ್ಬೋಹೈಡ್ರೇಟ್ ಗಳು ಅತಿಯಾಗಿರುವ ಬಿಳಿ ಬ್ರೆಡ್, ಪಾಸ್ತಾ, ಬಿಸ್ಕೆಟ್ ಗಳು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತವೆ. ಈ ಆಹಾರಗಳು ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ಹೆಚ್ಚಿಸಿ, ಇನ್ಸುಲಿನ್ ಕಡಿಮೆಯಾಗಲು ಕಾರಣವಾಗುತ್ತದೆ.

ಮಾದಕ ದ್ರವ್ಯಗಳಿಂದ ದೂರವಿರಿ

ಮಾದಕ ದ್ರವ್ಯಗಳಿಂದ ದೂರವಿರಿ

ಮಾದಕ ದ್ರವ್ಯಗಳಾದ ಕೊಕೇನ್ ಗಾಂಜಾ ಮೊದಲಾದವುಗಳು ವೀರ್ಯಾಣು ಉತ್ಪಾದನೆಯನ್ನು ಕುಂಠಿತ ಗೊಳಿಸುತ್ತದೆ. ಜೊತೆಗೆ ಮಹಿಳಾ ಮಾದಕ ದ್ರವ್ಯ ಸೇವನೆ ಮಾಡುವವರಲ್ಲಿ ಅಂಡೋತ್ಪತ್ತಿ ಆಗದೇ ಇರಬಹುದು.

ಮೀನನ್ನು ತಿನ್ನಿ

ಮೀನನ್ನು ತಿನ್ನಿ

ಕೆಲವು ಅಧ್ಯಯನಗಳ ಪ್ರಕಾರ ಸಾಲ್ಮನ್ ಮತ್ತು ನಾರಗಸೆಯಂತಹ ಎಣ್ಣೆಯುಕ್ತ ಮೀನಿನಲ್ಲಿ ಕಂಡುಬರುವ ಒಮೇಗಾ 3, ಗರ್ಭಪಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಗಂಡಸರಲ್ಲಿ ಮತ್ತು ವೀರ್ಯಾಣು ಗುಣಮಟ್ಟವನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಗತ್ಯ ಕೊಬ್ಬು ಆರೋಗ್ಯಕರ ಹಾರ್ಮೋನ್ ಕ್ರಿಯೆಗಳಿಗೆ ಸಹಾಯಕವಾಗಿದೆ.

ಕೆಫೀನ್ ನಿಂದ ದೂರವಿರಿ

ಕೆಫೀನ್ ನಿಂದ ದೂರವಿರಿ

ಸಂಶೋಧನೆಗಳ ಪ್ರಕಾರ, ಪ್ರತಿದಿನ ಕುಡಿಯುವ ಒಂದು ಲೋಟ ಕಾಫಿ ಗರ್ಭಧಾರಣೆಯ ಸಾಮರ್ಥ್ಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಸ್ನಾಯುಗಳ ಸಾಮರ್ಥ್ಯವನ್ನು ಕಡಿಮೆಮಾಡಿ ಅಂಡಾಣುಗಳ ಉತ್ಪತ್ತಿಯನ್ನು ತಡೆಯುತ್ತದೆ.

ನೋವು ನಿವಾರಕ ಮಾತ್ರೆಗಳು

ನೋವು ನಿವಾರಕ ಮಾತ್ರೆಗಳು

ಅಂಡೋತ್ಪತ್ತಿ ಸಮಯದಲ್ಲಿ ತೆಗೆದುಕೊಂಡ ಪ್ಯಾರಸಿಟಮಲ್ ಮತ್ತು ಆಸ್ಪಿರಿನ್ ಮಾತ್ರೆಗಳು ಗರ್ಭಧಾರಣೆಯ ಮೇಲೆ ನೇರ ಪರಿಣಾಮ ಬೀರಬಹುದು. ಅಲ್ಲದೇ ಅಂಡಾಣುಗಳ ಬಿಡುಗಡೆಯಾಗಲು ಸಹಾಯ ಮಾಡುವ rostaglandins ಎಂಬ ಹಾರ್ಮೋನು ಅನ್ನು ನಿಗ್ರಹಿಸುತ್ತದೆ.

 ದೈಹಿಕ ವ್ಯಾಯಾಮ

ದೈಹಿಕ ವ್ಯಾಯಾಮ

ದಿನವೂ ಮನೆಯಲ್ಲಿ ಮನೆಗೆಲಸ, ಕೈತೋಟ ಇಂತಹ ಕಾರ್ಯಗಳನ್ನು ಮಾಡುತ್ತಿರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಕ್ರಿಯೆ ಸರಾಗವಾಗಿ ಆಗುತ್ತದೆ. ಇಂತಹ ಮಹಿಳೆಯರಿಗೆ ವ್ಯಾಯಾಮದ ಅವಶ್ಯಕತೆಯಿಲ್ಲ. ಆಫೀಸ್ ಕೆಲಸಕ್ಕೆ ಹೋಗುವವರು ವ್ಯಾಯಾಮ ಮಾಡುವುದು ಒಳ್ಳೆಯದು.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಆದ್ದರಿಂದ ದೇಹದ ಮುಖ್ಯವಾದ ಅಂಗಗಳಿಗೆ ಬೇಕಾಷ್ಟು ನೀರನ್ನು ಕುಡಿಯಿರಿ.

ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆ

ಮಕ್ಕಳಾಗದವರು ಸೂಜಿ ಚಿಕಿತ್ಸೆ ಮಾಡಿಸಿದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚುವುದು. ಈ ಚಿಕಿತ್ಸೆ ಮಾನಸಿಕ ಒತ್ತಡವನ್ನು ಹೊರಹಾಕಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು.

X
Desktop Bottom Promotion