Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ತನ್ಯಪಾನ ನೀಡಿದರೆ ತಾಯಿಂದಿರಿಗೆ 10 ಲಾಭ
ಅಮ್ಮನ ಎದೆ ಹಾಲನ್ನು ಅಮೃತ ಎನ್ನಲಾಗುತ್ತದೆ. ಮಗುವನ್ನು ಸಕಲ ರೋಗದಿಂದ ದೂರ ಇಡಬಲ್ಲ ತಾಯಿ ಹಾಲು ಅತ್ಯಂತ ಉತ್ತಮ. ಮಗು ಹುಟ್ಟಿದ ಆರು ತಿಂಗಳವರೆಗೆ ತಾಯಿಯ ಎದೆಹಾಲಿನಲ್ಲಿ ಸಿಗುವಷ್ಟು ಪೌಷ್ಠಿಕಾಂಶ ಬೇರೆ ಯಾವುದೇ ಆಹಾರದಿಂದಲೂ ಸಿಗಲು ಸಾಧ್ಯವೇ ಇಲ್ಲ. ಹುಟ್ಟಿದ ಮಗು ಆರೋಗ್ಯಪೂರ್ಣವಾಗಿ ಬೆಳವಣಿಗೆ ಹೊಂದಬೇಕಾದರೆ ಅದಕ್ಕೆ ತಾಯಿ ಹಾಲು ಸರಿಯಾದ ಪ್ರಮಾಣದಲ್ಲಿ ಸಿಗಲೇಬೇಕು.
ಎದೆ ಹಾಲು ಉಣಿಸುವುದರಿಂದ ಕೇವಲ ಮಗುವಿಗೆ ಮಾತ್ರವಲ್ಲದೆ ಹೆತ್ತ ತಾಯಿಗೂ ಅದರಿಂದ ಪ್ರಯೋಜನಗಳಿವೆ!

1. ದೈಹಿಕ ದಣಿವಿನಿಂದ ಚೇತರಿಸಿಕೊಳ್ಳಬಹುದು
ಸ್ತನ್ಯಪಾನ ಮಾಡಿಸುವುದರಿಂದ ಗರ್ಭಿಣಿಯಾದಾಗಿನ ದೈಹಿಕ ದಣಿವಿನಿಂದ ಚೇತರಿಸಿಕೊಳ್ಳಬಹುದು. ಅಲ್ಲದೇ ತಾಯಿಯಾದವಳು ತನ್ನೆಲ್ಲಾ ಸಂಕಟಗಳನ್ನು ಮರೆತು ಮಗುವಿನೊಂದಿಗೆ ಸಂತೋಷದಿಂದಿರಬಹುದು.

2. ಶಾರೀರಿಕವಾಗಿ ಚೇರಿಸಿಕೊಳ್ಳಲು
ಸ್ತನ್ಯಪಾನ ಮಾಡುವುದರಿಂದ ಗರ್ಭಕೋಶಿಯ ಕಾರ್ಯ ಶೀರ್ಘವಾಗಿ ಆಗುವಂತೆ ಮಾಡುತ್ತದೆ. ಹಾಗೂ ಗರ್ಭಧಾರಣೆಗೆ ಶಾರೀರಿಕವಾಗಿ ಪುನರ್ ತಯಾರಾಗುವಂತೆ ದೇಹವನ್ನು ಪ್ರೇರೆಪಿಸುತ್ತದೆ.

3. ರಕ್ತಸ್ರಾವ ಕಡಿಮೆಯಾಗುವುದು
ಮಗುವಿಗೆ ಎದೆಹಾಲು ಕುಡಿಸುವುದರಿಂದ ರಕ್ತಸ್ರಾವ ಕಡಿಮೆಯಾಗಿ ರಕ್ತಸ್ರಾವದ ಅಪಾಯವನ್ನು ತಪ್ಪಿಸುತ್ತದೆ.

4. ಅಂಡೋತ್ಪತ್ತಿ ಹೆಚ್ಚು ಮಾಡುತ್ತೆ
ಸ್ತನ್ಯಪಾನ ನಂತರದ ಅಂಡೋತ್ಪತ್ತಿ, ಅಂದರೆ ಋತುಚಕ್ರಕ್ಕೆ ದೇಹವನ್ನು ಸಿದ್ಧಪಡಿಸುತ್ತದೆ. ಉದಾಹರಣೆಗೆ ಪ್ರಸವದ ನಂತರ ಋತುಚಕ್ರದ ಆಕ್ರಮಣ ವಿಳಂಬವಾದರೆ ಆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

5. ತಾಯಿ-ಮಗುವಿನ ಬಾಂಧವ್ಯ ಉತ್ತೇಜಿಸುತ್ತದೆ
ಸ್ತನ್ಯಪಾನ ಮಗುವಿನೊಂದಿಗೆ ನಿಮ್ಮ ಮಾನಸಿಕ ಬಾಂಧವ್ಯ ಉತ್ತೇಜಿಸುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ನಿಮ್ಮ ಹೊಸ ಪ್ರೀತಿಯನ್ನು ಸಂಪರ್ಕಿಸಲು ಅತ್ಯುತ್ತಮ ಮಾರ್ಗವಾಗಿದೆ.

6. ಧನಾತ್ಮಕವಾಗಿ ಉತ್ತೇಜಿಸುತ್ತದೆ
ಸ್ತನ್ಯಪಾನದಿಂದ ತಾಯಂದಿರಿಗೂ ಆತ್ಮಾಭಿಮಾನವನ್ನು ಧನಾತ್ಮಕವಾಗಿ ಉತ್ತೇಜಿಸುತ್ತದೆ.

7. ಹಾಲು ಬಾಟಲಿ
ಸ್ತನ್ಯಪಾನದಿಂದ ಮಗುವಿಗೆ ಹಾಲನ್ನು ಕುಡಿಯುವ ಯಾವುದೇ ಸಾಧನ (ಬಾಟಲಿ) ಗಳ ಮೇಲೆ ಕ್ರಿಮಿಗಳ ಅಪಾಯವನ್ನು ತಪ್ಪಿಸುತ್ತದೆ.

8.ಖರ್ಚು ಇಲ್ಲ
ಸ್ತನ್ಯಪಾನ ಅತ್ಯಂತ ಮಿತವ್ಯಯಕಾರಿಯಾಗಿದೆ. ಉಪಕರಣಗಳನ್ನು ಕೊಂಡುಕೊಳ್ಳುವ ಖರ್ಚು ಉಳಿಸುತ್ತದೆ. ಕೃತಕ ಫೀಡ್ ಗಳಿಂದಾಗಿ ಸರಾಸರಿ ಕುಟುಂಬ ಆದಾಯದ ಮೂರನೇ ಒಂದು ಭಾಗವನ್ನು ಮೀಸಲಿಡಬೇಕಾಗುತ್ತದೆ ಅಂದಾಜಿಸಲಾಗಿದೆ!

9.ಅಂಡಾಶಯದ ಕ್ಯಾನ್ಸರ್
ಸ್ತನ್ಯಪಾನದಿಂದ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡಬಹುದು.

10.ತೂಕ ಕಡಿಮೆಗೊಳಿಸುತ್ತೆ
ಸ್ತನ್ಯಪಾನ ತಾಯಂದಿರಿಗೆ, ಮಗುವಿಗೆ ಜನ್ಮ ನೀಡಿದ ನಂತರ ತೂಕ ಕಡಿಮೆಗೊಳಿಸುವುದಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications
