Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ 10 ವೆಜ್ ಫುಡ್ಸ್
ಮಕ್ಕಳಾಗದಿರುವ ಸಮಸ್ಯೆ ಇತ್ತೀಚಿಕೆಗೆ ಹೆಚ್ಚಿನ ದಂಪತಿಗಳಲ್ಲಿ ಕಂಡು ಬರುತ್ತಿದೆ. ಅನಾರೋಗ್ಯಕರ ಜೀವನ ಶೈಲಿ, ಲೇಟಾಗಿ ಮದುವೆಯಾಗುವುದು ಅಥವಾ ಮಗು ನಾವು ಸೆಟಲ್ ಆದ ಮೇಲೆ ಸಾಕು ಎಂದು ತೀರ್ಮಾನಿಸಿ ಕೊನೆಗೆ ವಯಸ್ಸು ಹೆಚ್ಚಾದ ಕಾರಣ ಸಂತಾನೋತ್ಪತ್ತಿಯ ಸಾಮರ್ಥ್ಯ ಕಡಿಮೆಯಾಗಿ ಮಕ್ಕಳಾಗದಿರುವುದು, ಗಂಡ-ಹೆಂಡತಿ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಇರುವುದು, ಇವೆಲ್ಲಾ ಮಕ್ಕಳಾಗದಿರಲು ಪ್ರಮುಖ ಕಾರಣಗಳಾಗಿವೆ.
ಈಗ ಮಕ್ಕಳಾಗಲು ಇನ್ ವಿಟ್ರೋ ಫರ್ಟಿಲಿಟಿ ವ್ಯವಸ್ಥೆ ಇದ್ದರೂ ಆರೋಗ್ಯಕರ ಜೀವನ ಶೈಲಿ ಕೂಡ ಅಗತ್ಯ. ಆಹಾರ ವಸ್ತುಗಳಲ್ಲಿ ಕೆಲವು ಆಹಾರಗಳು ಮಹಿಳೆಯರಲ್ಲಿ ಅಂಡಾಣು ಹೆಚ್ಚು ಬಿಡುಗಡೆಯಾಗುವಂತೆ ಮಾಡುವ ಸಾಮರ್ಥ್ಯ ಹೊಂದಿವೆ. ಕೆಲವು ಆಹಾರಗಳು ಪುರುಷರಲ್ಲಿ ಸಂತಾನೋತ್ಪತ್ತಿ ಹೆಚ್ಚು ಮಾಡುವ ಸಾಮರ್ಥ್ಯ ಹೊಂದಿವೆ.
ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು ಮಾಡುವ ಆಹಾರಗಳಾವುವು ಎಂದು ನೋಡೋಣ ಬನ್ನಿ:

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿವಿಟಮಿನ್ ಬಿ6 ಇದ್ದು ಇದನ್ನು ತಿನ್ನುವುದರಿಂದ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಂತಾನೋತ್ಪತ್ತಿ ಸಾಮರ್ಥ್ಯ ಉಂಟಾಗುವಂತೆ ಮಾಡುತ್ತದೆ.

ದಾಳಿಂಬೆ
ದಾಳಿಂಬೆ ಬೀಜ ಪುರುಷರಲ್ಲಿ ವೀರ್ಯಾಣುವನ್ನು ವೃದ್ಧಿಸುವುದರಿಂದ ಮಗುವಿಗಾಗಿ ಪ್ರಯತ್ನಿಸುವವರು ದಾಳಿಂಬೆ ಬೀಜವನ್ನು ಪ್ರತಿನಿತ್ಯ ತಿನ್ನುವುದು ಒಳ್ಳೆಯದು.

ಬಾಳೆ ಹಣ್ಣು
ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ1, ವಿಟಮಿನ್ ಎ, ವಿಟಮಿನ್ ಸಿ, ಪ್ರೊಟೀನ್ ಅಂಶವಿದೆ. ಅಲ್ಲದೆ ಇದರಲ್ಲಿರುವ ಬ್ರೊಮೆಲೈನ್ (Bromelain) ಇದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿ, ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಪಾಲಕ್
ಪಾಲಕ್ ನಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ವೀರ್ಯಾಣುಗಳನ್ನು ಹೆಚ್ಚು ಉತ್ಪತ್ತಿ ಮಾಡುವಂತೆ ಮಾಡುತ್ತದೆ. ಇದರಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು.

ಮೆಣಸಿನಕಾಯಿ
ಮೆಣಸಿನ ಕಾಯಿ ಕೂಡ ಸಂತಾನೋತ್ಪತ್ತಿ ಹೆಚ್ಚಿಸುವ ಸೂಪರ್ ಆಹಾರವಾಗಿದೆ. ಇದು ಎಂಡ್ರೋಫೈನ್ಸ್ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಇದು ನಮ್ಮನ್ನು ಸಂತೋಷವಾಗಿ ಇಡುವಂತಹ ಹಾರ್ಮೋನ್ ಆಗಿದ್ದು ಇದು ಉತ್ಪತ್ತಿಯಾದರೆ ನಮ್ಮಲ್ಲಿರುವ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನಮ್ಮಲ್ಲಿರುವ ಮಾನಸಿಕ ಒತ್ತಡ ಕೂಡ ಮಕ್ಕಳಾಗದಿರಲು ಪ್ರಮುಖ ಕಾರಣವಾಗಿದೆ.

ಟೊಮೆಟೊ
ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಪ್ರತಿದಿನ ಟೊಮೆಟೊ ಜ್ಯೂಸ್ ಕುಡಿದರೆ ಸಾಕು. ಇದನ್ನು ಅಡುಗೆಗಳ ಜೊತೆ ಹಾಕಿ ಕೂಡ ತಿನ್ನಿ.

ಕಲ್ಲಂಗಡಿ
ಇದರಲ್ಲಿ ಲೈಕೊಪೆನೆ ಅಂಶವಿದ್ದು ಇದು ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ. ಅಧಿಕ ವೀರ್ಯಾಣುಗಳ ಉತ್ಪತ್ತಿಗೆ ದೇಹದಲ್ಲಿ ನೀರಿನಂಶ ಅವಶ್ಯಕ.

ವಿಟಮಿನ್ ಸಿ
ವಿಟಮಿನ್ ಸಿ ವೀರ್ಯಾಣುಗಳ ಒಳಗಿರುವ DNAಗಳಿಗೆ ಯಾವುದೇ ಹಾನಿ ಉಂಟಾಗದಂತೆ ರಕ್ಷಣೆ ಮಾಡುತ್ತದೆ. ವಿಟಮಿನ್ ಸಿ ವೀರ್ಯಾಣುಗಳಿಗೆ ಯಾವುದೇ ಹಾನಿಯಾಗದಂತೆ ತಡೆದು ಸ್ತ್ರೀಯಲ್ಲಿ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.

ಸೇಬು
ಆಪಲ್ ಸೈಡರ್ ವಿನಿಗರ್ ಇದ್ದು ಇದು ಇದನ್ನು ತಿನ್ನುವುದರಿಂದ ಮಗು ಬೇಕೆಂದು ಬಯಸುವವರಿಗೆ ಉತ್ತಮ ಫಲಿತಾಂಶ ದೊರೆಯುವಂತೆ ಮಾಡುತ್ತದೆ.

ಗೋಡಂಬಿ
ಇದರಲ್ಲಿ ಅಧಿಕ ಸತುವಿನಂಶ (zinc) ಇರುವುದರಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.



Click it and Unblock the Notifications
