Latest Updates
-
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ
ಗರ್ಭಧಾರಣೆಯ ಸಂದರ್ಭದಲ್ಲಿ ಸುರಕ್ಷಿತವಾಗಿ ತೂಕ ಇಳಿಸಿ
ಗರ್ಭಧಾರಣೆಯ ಸಂದರ್ಭದಲ್ಲಿ ಶಾರೀರಿಕ ಹಾಗೂ ಮಾನಸಿಕವಾಗಿ ನೀವು ಹಲವಾರು ತೊಂದರೆಗಳನ್ನು ಎದುರಿಸಬಹುದು, ಅಲ್ಲದೆ ತಾಯ್ತನದ ಅವಧಿಯಲ್ಲಿ ಇವೆಲ್ಲವೂ ನಿಮಗೆ ಹೊಸ ಅನುಭವವಾಗಿರುತ್ತದೆ. ಆದರೆ ಎಲ್ಲಾ ಮಹಿಳೆಯರು ಗರ್ಭಿಣಿಯಾಗುವ ಸಮಯದಲ್ಲಿ ತಮ್ಮ ದೇಹದ ತೂಕದ ಕಡೆ ಗಮನ ನೀಡುವುದು ಅತ್ಯವಶ್ಯಕ.
ಹೌದು, ತಾಯ್ತನದ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ತೂಕದ ಕಡೆಗೆ ಗಮನಹರಿಸುವುದರಿಂದ, ತಮ್ಮ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ತೂಕ, ನಿಮ್ಮ ತೂಕ್ಕೆ ತಾಳೆ ಆಗಬಹುದು, ಆದರೆ ಆದಷ್ಟು ನಾವು ಇದರ ಕುರಿತು ಕಾಳಜಿ ವಹಿಸಬೇಕು.
ಗರ್ಭಧಾರಣೆಯ ಸಮಯದಲ್ಲಿ ತೂಕವನ್ನು ಇಳಿಸುವುದರಿಂದ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಉಪಯೋಗವಾಗಲಿದೆ. ಒಂದು ವೇಳ ಗರ್ಭಧಾರಣೆಯ ಸಮಯದಲ್ಲಿ ನಿಮ್ಮ ತೂಕ ಹೆ್ಚ್ಚಾಗಿರುವುದನ್ನು ನಿಮ್ಮ ಗಮನಕ್ಕೆ ಬಂದರೆ, ಕೂಡಲೇ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ.

ತುಲನಾತ್ಮಕವಾಗಿ ಹೋಲಿಸಿದರೆ ಗರ್ಭಿಣಿಯರು ಗರ್ಭಧಾರಣೆಯ ಮೊದಲು ಹಾಗೂ ನಂತರ ಸುಲಭವಾಗಿ ನಿಮ್ಮ ತೂಕವನ್ನು ಇಳಿಸಬಹದು. ಆದರೆ ಗರ್ಭಧಾರಣೆಯ ಸಂದರ್ಭದಲ್ಲಿ ತೂಕ ಇಳಿಸುವುದು ಅಷ್ಟು ಸುಲಭವಲ್ಲ.
ಹಾಗಾಗಿ ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಿಣಿಯರು ಸುರಕ್ಷಿತವಾಗಿ ತೂಕವನ್ನು ಇಳಿಸಲು ಕೆಲವೊಂದು ಕ್ರಮವನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ. ಗರ್ಭಿಣಿಯರು ತಾಯ್ತನದ ಸಮಯದಲ್ಲಿ ತೂಕವನ್ನು ಇಳಿಸಲು ಜಾಗರೂಕತೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.
ಗರ್ಭಧಾರಣೆಯ ಸಂದರ್ಭದಲ್ಲಿ ತೂಕವನ್ನು ಇಳಿಸಲು ಇಲ್ಲಿ ಕೆಲವೊಂದು ಸುರಕ್ಷಿತವಾದ ಕ್ರಮಗಳನ್ನು ನೀಡಲಾಗಿದೆ
1.ಡಯಟ್ :
ಗರ್ಭಧಾರಣೆಯ ಸಂದರ್ಭದಲ್ಲಿ ನೀವು ಡಯಟ್ ಮಾಡಬೇಕಾಗಿರುವುದಿಲ್ಲ, ಬದಲಾಗಿ ನೀವು ಅನಾರೋಗ್ಯಕರ ಆಹಾರಗಳ ಸೇವನೆ ಕಡಿಮೆ ಮಾಡಿ. ಸಾಧ್ಯವಾದಷ್ಟು ಜಂಕ್ ಆಹಾರ ಹಾಗೂ ಸಂಸ್ಕರಿಸಲಾಗಿರುವ ಆಹಾರ ಪದ್ಧತಿಯನ್ನು ಆದಷ್ಟು ಕಡಿಮೆ ಮಾಡಿ. ತರಕಾರ. ಸೊಪ್ಪು, ಹಣ್ಣು, ಈಗೆ ಆರೋಗ್ಯಯುಕ್ತವಾಗಿರುವ ಆಹಾರವನ್ನು ಸಾಧ್ಯವಾದಷ್ಟು ಸೇವಿಸಿದರೆ ಕೂಡ ನಿಮ್ಮ ತೂಕವನ್ನು ನೀವು ನಿಯಂತ್ರಿಸಬಹುದು .
2.ಬೆಳಗಿನ ಜಾವ ದಿನ ವಾಕಿಂಗ್ ಮಾಡಿ:
ಗರ್ಭಧಾರಣೆಯ ಸಂದರ್ಭದಲ್ಲಿ ಬೆಳಗಿನ ಜಾವ ನೀವು ದಿನ ವಾಕಿಂಗ್ ಮಾಡಿದರೂ ಕೂಡ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಗರ್ಭಿಣಿಯ ಸಂದರ್ಭದಲ್ಲಿ ನೀವು ಶಾರೀರಿಕವಾಗಿ ಫಿಟ್ ಆಗಿದ್ದರೆ, ಖಂಡಿತವಾಗಿಯೂ ನೀವು ಪ್ರಯತ್ನಿಸಬಹುದು ಎಂಬುದನ್ನು ನೆನಪಿಡಿ. ನಿಮ್ಮ ತೂಕವನ್ನು ನಿಯಂತ್ರಿಸಲು ಇದು ಒಂದು ಸುರಕ್ಷಿತ ವಿಧಾನ.
3.ಸುರಕ್ಷಿತವಾಗಿರುವ ಸ್ನ್ಯಾಕ್ಸ್:
ಗರ್ಭಿಣಿಯರು, ತಮ್ಮ ಊಟದ ನಡುವೆ ಆರೋಗ್ಯಯುಕ್ತವಾಗಿರುವ ಸ್ನ್ಯಾಕ್ಸ್ ಅನ್ನು ಸೇವಿಸುವುದರಿಂದ ಕೂಡ, ಗರ್ಭಧಾರಣೆಯ ಸಂದರ್ಭದಲ್ಲಿ ಗ್ಯಾಸ್ ಸಮಸ್ಯೆಯನ್ನು ತೆಡೆಗಟ್ಟಬಹುದು, ಆದರೆ ನಿಮ್ಮ ತೂಕಕ್ಕೆ ಇದರಿಂದ ಋಣಾತ್ಮಕ ಪರಣಾಮ ಬೀರದಂತೆ ಎಚ್ಚರವಹಿಸಿ.
4.ವ್ಯಾಯಾಮ:
ನಿಮ್ಮ ಆರೋಗ್ಯದ ಕುರಿತು ಡಾಕ್ಟರ್ ಜೊತೆ ಚರ್ಚಿಸಿ, ಹಾಗೂ ದೈನಂದಿನ ವ್ಯಾಯಾಮ ಉತ್ತಮವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗರ್ಭಧಾರಣೆಯ ಸಮಯದಲ್ಲಿ ಮಾತ್ರ ಲಘುವಾದ ವ್ಯಾಯಾಮದ ಕಡೆ ಗಮನ ನೀಡಿ. ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯರಿಗೆ ತೂಕವನ್ನು ಇಳಿಸುವುದಕ್ಕೆ ಇದು ಕೂಡ ಒಂದು ಸುರಕ್ಷಿತ ವಿಧಾನವಾಗಿದೆ.
5.ನೀರನ್ನು ಕುಡಿಯಿರಿ:
ಗರ್ಭಧಾರಣೆಯ ಸಮಯದಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ, ಇದು ಕೂಡ ನಿಮ್ಮ ತೂಕವನ್ನು ನಿಯಂತ್ರಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
6. ನಿಮ್ಮ ಆಹಾರದ ಕಡೆ ಗಮನ ಇರಲಿ :
ಹೌದು, ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯರು ವಿಶಿಷ್ಟ ರೀತಿಯ ಆಹಾರಕ್ಕಾಗಿ ಹಂಬಲಿಸುವುದು ಸಾಮಾನ್ಯ, ಆದರೆ ನೀವು ಸೇವಿಸುವ ಆಹಾರ ಆರೋಗ್ಯಯುಕ್ತವಾಗಿದೆಯೇ ಎಂಬುದನ್ನು ದಯವಿಟ್ಟು ಮೊದಲು ಖಚಿತಪಡಿಸಿಕೊಳ್ಳಿ, ಅಲ್ಲದೆ, ನೀವು ಬಯಸುವ ಆಹಾರವನ್ನು ಸೇವಿಸಿ, ಆದರೆ ಅದಕ್ಕೂ ಒಂದು ಮಿತಿ ಇರಲಿ ಎಂಬುದನ್ನು ನೆನಪಿಡಿ.
7. ನಿಮ್ಮ ತೂಕವನ್ನು ಪರಿಶೀಲಿಸಿ :
ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯರು ತಮ್ಮ ತೂಕವನ್ನು ಆಗಾಗ ಪರಿಶೀಲಿಕೊಳ್ಳಿ, ಇದರಿಂದ ನಿಮ್ಮ ತೂಕದ ಕುರಿತು ನಿಮಗೆ ಸರಿಯಾದ ಮಾಹಿತಿ ದೊರೆಯುತ್ತದೆ.
ಈಗೆ ಗರ್ಭಧಾರಣೆಯ ಸಮಯದಲ್ಲಿ ಸುರಕ್ಷಿತ ಕ್ರಮವನ್ನು ಮೊದಲೇ ತೆಗೆದುಕೊಂಡರೆ ಖಂಡಿತವಾಗಿಯೂ ಗರ್ಭಿಣಿಯರು ಸುರಕ್ಷಿತವಾಗಿ ತೂಕವನ್ನು ಇಳಿಸಬಹುದು.



Click it and Unblock the Notifications











