Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
35ನೇ ವಯಸ್ಸಿನಲ್ಲಿ ತಾಯಿಯಾಗುವಿರಾ?
35ರ ನಂತರ ತಾಯಿಯಾಗುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜನ ಹೇಳುವುದನ್ನು ನೀವು ಕೇಳಿರುತ್ತೀರಿ. ನೀವು 35ರ ನಂತರ ತಾಯಿಯಾಗುತ್ತಿದ್ದಲ್ಲಿ ಮಗುವಿಗೆ ಕೆಲವು ಸಮಸ್ಯೆಗಳಿರುವ ಸಾಧ್ಯತೆಯಿರುತ್ತದೆ. ತಾಯಿ ಕೂಡ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪರಿಣತರು ಕೂಡ ಮಹಿಳೆಯರು 30ಕ್ಕೆ ಮುನ್ನ ತಾಯಿಯಾಗುವುದು ಒಳ್ಳೆಯದು ಎಂದು ಹೇಳುತ್ತಾರೆ. ಇದು ತಾಯಿ ಮತ್ತು ಮಗು ಎರಡರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅದೇನೆ ಇರಲಿ ನೀವು 35ರ ನಂತರ ತಾಯಿಯಾಗುತ್ತಿದ್ದಲ್ಲಿ ನಿಮಗಾಗಿ ನಾವಿಲ್ಲಿ ಕೆಲವು ಟಿಪ್ಸ್ ಗಳನ್ನು ಕೊಟ್ಟಿದ್ದೇವೆ.

ನೀವು 35ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿರುವಿರಾ ಹಾಗಿದ್ದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
1. ನೀವು 35ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಲ್ಲಿ ಮೊದಲೇ ಹೇಳಿದಂತೆ ಮಗು ಡೌನ್ಸ್ ಸಿಂಡ್ರೋಮ್ ಮತ್ತಿತರ ಬುದ್ಧಿ ಮಾಂದ್ಯ ಅಥವ ದೈಹಿಕ ಸಮಸ್ಯೆಗಳನ್ನು ಹೊಂದುವ ಅಪಾಯವಿರುತ್ತದೆ.
2. 35ನೇ ವಯಸ್ಸಿನಲ್ಲಿ ಮಹಿಳೆಯರಲ್ಲಿ ಫಾಲಿಕ್ ಆಸಿಡ್ ಕಡಿಮೆಯಿರುತ್ತದೆ. ಫಾಲಿಕ್ ಆಸಿಡ್ ಗರ್ಭಾವಸ್ಥೆಯಲ್ಲಿ ಅತ್ಯಗತ್ಯ. ತಾಯಿಯ ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಇದು ಅತ್ಯಂತ ಮುಖ್ಯ.
3. 35 ನೇ ವಯಸ್ಸಿನಲ್ಲಿ ಗರ್ಭಧರಿಸಿದರೆ ಗರ್ಭಜಾರಿ ಹೋಗುವ ಅಬಾರ್ಷನ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
35ರ ನಂತರ ತಾಯಿಯಾಗಲು ಬಯಸುತ್ತಿರುವಿರಾ?
ನೀವು 35ರ ನಂತರ ನಿಮ್ಮ ಸಾಂಸಾರಿಕ ಜೀವನವನ್ನು ಆರಂಭಿಸಲು ಇಚ್ಛಿಸುತ್ತಿದ್ದಲ್ಲಿ ಈ ಕೆಲವು ಸಲಹೆಗಳನ್ನು ಗಮನಿಸಿ.
1. ನೀವು ಗರ್ಭ ಧರಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಆರೋಗ್ಯಕರ ಗರ್ಭಧಾರಣೆಗಾಗಿ ನೀವು ಹಲವು ಟೆಸ್ಟ್ ಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
2. ನಿಮ್ಮ ಋತುಚಕ್ರವನ್ನು ಸರಿಯಾಗಿ ಗಮನಿಸಿಕೊಳ್ಳಿ. ನಿಮ್ಮ ಋತುಚಕ್ರ ಅನಿಯಮಿತವಾಗಿದ್ದಲ್ಲಿ ಅದು ನಿಮ್ಮ ಋತುಚಕ್ರ ನಿಲ್ಲುವ ಸೂಚನೆಯಾಗಿರುತ್ತದೆ.
3. ಲೈಂಗಿಕ ರೋಗಗಳು ಮತ್ತು ಜನನಾಂಗದ ಸಮಸ್ಯೆಗಳನ್ನು ಈ ವಯಸ್ಸಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ಗರ್ಭ ಧರಿಸುವ ಮುನ್ನ ಇವುಗಳನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.



Click it and Unblock the Notifications
