ಈ ರೀತಿಯ ಮಾತು ಪ್ರಯೋಗ ಮಕ್ಕಳ ಮೇಲೆ ಬೇಡ!

By Super

ಪೋಷಕರಾಗಿರುವುದು ಎಷ್ಟು ಕಷ್ಟವೋ ಹಾಗೆಯೇ ಹೆಮ್ಮೆಯ ಮಗುವಾಗಿ ಪೋಷಿಸುವುದು ಕೂಡ.ಮಾನವ ಕೆಟ್ಟ ಶಬ್ದಗಳನ್ನು ಬಳಸಿ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ.ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು ಮತ್ತು ಅದನ್ನು ನಿಯಂತ್ರಿಸಲು ಕಷ್ಟವಾಗಬಹುದು.

ಮಕ್ಕಳ ಮನಸ್ಸು ಮುಗ್ದ.ಅವರಿಗೆ ನಿಧಾನವಾಗಿ ನೋವಾಗದಂತೆ ತಿಳಿಸಿ ಹೇಳಿದರೆ ಎಲ್ಲವನ್ನೂ ಅರ್ಥೈಸಿಕೊಳ್ಳುತ್ತಾರೆ.ಅವರ ಮೇಲೆ ಕೂಗಾಡಿದರೆ ಇನ್ನಷ್ಟು ಹಟ ಮಾಡಬಹುದು.ಕೆಲವೊಮ್ಮೆ ನಮ್ಮ ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗದೆ ಅವರ ಮೇಲೆ ಅಸಹನೆ ತೋರಿದರೆ ಅದು ಮಕ್ಕಳ ಮೇಲೆ ಘೋರ ಪರಿಣಾಮ ಬೀರಬಹುದು.ಮಕ್ಕಳು ಮಂಕಾಗಿಬಿಡಬಹುದು.ನಾವು ಆಡಿದ ಎಷ್ಟೊಂದು ಮಾತುಗಳು ನಮಗೇ ಪಶ್ಚಾತಾಪ ಆಗುವಂತೆ ಮಾಡಿಬಿಡಬಹುದು.ಆದ್ದರಿಂದ ಸಹನೆ ,ತಾಳ್ಮೆ ಬೆಳೆಸಿಕೊಳ್ಳಿ.ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ. ಇತರರೊಂದಿಗೆ ಹೋಲಿಸಿ ಅವರನ್ನು ಇನ್ನಷ್ಟು ಕುಸಿಯುವಂತೆ ಮಾಡಿಬಿಡಬೇಡಿ.

ನಾವಿಲ್ಲಿ ನಿಮ್ಮ ಮಕ್ಕಳೆದುರು ಆಡಬಾರದ 9 ವಿಷಯಗಳನ್ನು ನೀಡಿದ್ದೇವೆ ಓದಿ ನೋಡಿ.

1.ನಾನು ನಿನ್ನ ವಯಸ್ಸಿನಲ್ಲಿದ್ದಾಗ ನಿನಗಿಂತ ಹೆಚ್ಚು ಜವಾಬ್ದಾರಿಯುತವಾಗಿದ್ದೆ

1.ನಾನು ನಿನ್ನ ವಯಸ್ಸಿನಲ್ಲಿದ್ದಾಗ ನಿನಗಿಂತ ಹೆಚ್ಚು ಜವಾಬ್ದಾರಿಯುತವಾಗಿದ್ದೆ

ನಿಮ್ಮ ಮಕ್ಕಳೆದುರು ನಿಮ್ಮನ್ನು ಹೋಲಿಕೆ ಮಾಡಿ ನೋಡಬೇಡಿ.ನೀವು ಮಗುವಾಗಿದ್ದಾಗ ಅವನಿಗಿಂತ ಸಾಕಷ್ಟು ಮುಂದಿದ್ದೆ ಎಂದು ಹೇಳಿಕೊಳ್ಳಬೇಡಿ ಇದು ಪೋಷಕರು ಮಾಡುವ ಮೊದಲ ತಪ್ಪು.ನಿಮ್ಮ ಉದ್ದೇಶ ಮಗುವನ್ನು ಇನ್ನಷ್ಟು ಉತ್ಸಾಹಿಸುವುದಾಗಿದ್ದರೂ ಕೂಡ ಮಗುವಿನ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ.ನೀನು ದೊಡ್ಡವನು ನಿನಗೆ ಎಲ್ಲ ತಿಳಿದಿರಬೇಕು ಎಂಬ ಮಾತುಗಳು ಮಗುವನ್ನು ಇನ್ನಷ್ಟು ಚಿಂತೆಗೀಡು ಮಾಡಿ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

2.ನೀನು ಯಾವಾಗಲೂ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೀಯ

2.ನೀನು ಯಾವಾಗಲೂ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೀಯ

ನಿಮ್ಮ ಮಗುವಿಗೆ ನಿನಗಿನ್ನು ಬುದ್ದಿ ಬಂದಿಲ್ಲ ಎಂದು ಹೇಳಬೇಡಿ.ಪ್ರತಿಯೊಬ್ಬರೂ ತಪ್ಪು ಮಾಡಿಯೇ ಮಾಡುತ್ತಾರೆ ಹಾಗೆ ಮಾಡಿ ಹೊಸ ಪಾಠ ಕಲಿಯುತ್ತಾರೆ.ಅವರಿಗೆ ಆಸಕ್ತಿ ಇರುವ ಫೀಲ್ಡ್ ನಲ್ಲಿ ನಿಮಗೆ ಇಷ್ಟವಾಗಿಲ್ಲದಿರಬಹುದು,ಅಥವಾ ಅವರಿರುವ ಕಂಪನಿ ನಿಮಗೆ ಹೆಮ್ಮೆ ಎನಿಸದಿರಬಹುದು.ಆದರೆ ನೀವು ಅವನನ್ನು ಖಂಡಿಸಬೇಡಿ ಅವಮಾನಿಸಬೇಡಿ ಪೋಷಕರಾಗಿ ನಿಮ್ಮ ಕರ್ತವ್ಯ ಅವರಿಗೆ ಸರಿಯಾದ ಮಾಹಿತಿ ನೀಡುವುದು ಪ್ರೋತ್ಸಾಹ ನೀಡುವುದು ಎಂಬುದು ಅರಿತುಕೊಳ್ಳಿ.

3.ನೀನೀಕೆ ನಿಮ್ಮ ಸಹೋದರ/ಸಹೋದರಿ ಅಂತಿಲ್ಲ ?

3.ನೀನೀಕೆ ನಿಮ್ಮ ಸಹೋದರ/ಸಹೋದರಿ ಅಂತಿಲ್ಲ ?

ಈ ಸಾಮಾನ್ಯವಾಗಿ ಎಲ್ಲಾ ಪೋಷಕರೂ ಮಾಡುವ ತಪ್ಪು.ನಿಮ್ಮ ಮಕ್ಕಳ ಸಾಮರ್ಥ್ಯವನ್ನು ಬೇರೆಯವರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ.ನೀವು ಹೀಗೆ ಮಾಡುವುದರಿಂದ ಸಹೋದರದಲ್ಲಿ ಬಿರುಕು ಮೂಡಿಸಬಹುದು.ನೀವು ನಿಮ್ಮ ಮಕ್ಕಳಲ್ಲಿ ಋಣಾತ್ಮಕ ಭಾವನೆ ಹುಟ್ಟುಹಾಕಬೇಡಿ ಅವರಿಗೆ ಅದನ್ನು ನಿರ್ಣಯಿಸಲು ಬಿಡಿ.

4.ಒಂಟಿಯಾಗಿ ಬಿಟ್ಟುಬಿಡು!

4.ಒಂಟಿಯಾಗಿ ಬಿಟ್ಟುಬಿಡು!

ಮಗುವಿನ ಮುಗ್ದತೆ ಕಾಪಾಡುವಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿ ಹೆಚ್ಚಿರುತ್ತದೆ.ಕೆಲವೊಮ್ಮೆ ಒಂಟಿಯಾಗಿ ಇರಬೇಕು ಎಂದೆನಿಸುತ್ತದೆ ಆದರೆ ಮಕ್ಕಳು ಆ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಹಂತದಲ್ಲಿರುವುದಿಲ್ಲ.ಅಸಹನೆಯಿಂದ " ನನ್ನ ಒಂಟಿಯಾಗಿ ಬಿಟ್ಟುಬಿಡು" ಎಂದು ಕಿರುಚಿದರೆ ಮಗುವಿಗೆ ನೀವು ಅವರನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದೆನಿಸಬಹುದು.ಸ್ವಲ್ಪ ಸಹನೆ ತೋರಿ ಅವರಿಗೆ ನೋವಾಗದಂತೆ ನೋಡಿಕೊಳ್ಳಿ.

5.ನಿನಗೆ ನೀನೆ ನಾಚಿಕೆ ಪಟ್ಟುಕೊಳ್ಳಬೇಕು!

5.ನಿನಗೆ ನೀನೆ ನಾಚಿಕೆ ಪಟ್ಟುಕೊಳ್ಳಬೇಕು!

ಈ ರೀತಿಯ ಕೆಟ್ಟ ಪದಗಳಿಂದ ಬೈದುಬಿಟ್ಟರೆ ಮಗುವಿಗೆ ಘಾಸಿ ಆಗುತ್ತದೆ.ಕೆಲವು ತುಂಟ ಮಕ್ಕಳು ಚೇಸ್ಟೆ ಗಳನ್ನೂ ಮಾಡಬಹುದು ಆದರೆ ಈ ರೀತಿ ಹೇಳಿದರೆ ಅದು ತಪ್ಪು.ಮಗುವಿಗೆ ಕೆಟ್ಟದು ಮತ್ತು ಒಳ್ಳೆಯದನ್ನು ಅರ್ಥ ಮಾಡಿಸಲು ಸಾಕಷ್ಟು ವಿಧಾನಗಳಿವೆ.ಅವುಗಳನ್ನು ಬಳಸಿ.

6.ನೀನು ನಿನ್ನ ಅಪ್ಪ/ಅಮ್ಮ ನಂತೆಯೇ

6.ನೀನು ನಿನ್ನ ಅಪ್ಪ/ಅಮ್ಮ ನಂತೆಯೇ

ಮದುವೆಯಾದ ಎಲ್ಲರೂ ಎಲ್ಲಾ ಸಮಯದಲ್ಲೂ ಸಂತೋಷವಾಗಿ ಇರುವುದಿಲ್ಲ ಕೆಲವೊಂದು ಕಹಿ ಅನುಭವಗಳು ಇರಬಹುದು.ಕೆಲವು ಸಂಬಂಧಗಳಲ್ಲಿ ಕೆಟ್ಟ ಪದಗಳಿಂದ ಜಗಳವಾಡಿಕೊಳ್ಳಬಹುದು.ಕೆಲವೊಮ್ಮೆ ಸಂಬಂಧಗಳು ಮುರಿದು ಬೀಳಬಹುದು.ಆದ್ದರಿಂದ ನೀವು ಮಗುವಿಗೆ ಅವರೆದುರು ಹೀಗೆ ಜಗಳವಾಗಿ ಅವರನ್ನು ಹೋಲಿಸುವುದರಿಂದ ನಿಮ್ಮ ಮೇಲಿನ ಅವರ ಗೌರವ ಕಡಿಮೆ ಆಗುತ್ತದೆ.

7.ನಿನಗೆ ನನ್ನ ನೋಯಿಸುದೇ ಕೆಲಸ

7.ನಿನಗೆ ನನ್ನ ನೋಯಿಸುದೇ ಕೆಲಸ

ಕೆಲವೊಂದು ಸಮಯದಲ್ಲಿ ಮಕ್ಕಳು ಪೋಷಕರು ಹೇಳಿದಂತೆ ನಡೆದುಕೊಳ್ಳದೆ ವಿರುದ್ಧ ವಾಗಿ ಮಾಡಬಹುದು.ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಆದರೆ ಇನ್ನು ಕೆಲವೊಮ್ಮೆ ಉದ್ದೇಶ ಇಲ್ಲದೇ ಹಾಗಾಗಿರುತ್ತದೆ.ಆದಾಗ್ಯೂ ನೀವು ಮೇಲೆ ತಿಳಿಸಿದಂತೆ ಹೇಳುವುದರಿಂದ ಮಕ್ಕಳು ಅಪರಾಧ ಮನೋಭಾವನೆ ಹೊಂದುತ್ತವೆ.ನಿಮ್ಮನ್ನು ಕುಶಿ ಪಡಿಸಲು ಅವರು ತಮ್ಮ ನಿರ್ಧಾರ ಬದಲಿಸಿಕೊಳ್ಳಬಹುದು ಆದರೆ ಅದರಿಂದ ಅವರ ಸಂತೋಷ ಬಿಟ್ಟುಕೊಟ್ಟಿರುತ್ತಾರೆ ಎಂಬುದನ್ನು ಗಮನಿಸಿ.ನಿಮ್ಮ ಮಕ್ಕಳಿಗೆ ಅವರ ನಿರ್ಧಾರ ಅವರೇ ತೆಗೆದುಕೊಂಡು ಸಂತೋಷವಾಗಿ ಬದುಕುವ ಅವಕಾಶ ಮಾಡಿಕೊಡಿ.

8.ನಿನ್ನಂತ ಮಕ್ಕಳಿರುವುದಕ್ಕಿಂತ ಇಲ್ಲದಿರುವುದೇ ವಾಸಿ!

8.ನಿನ್ನಂತ ಮಕ್ಕಳಿರುವುದಕ್ಕಿಂತ ಇಲ್ಲದಿರುವುದೇ ವಾಸಿ!

ತೀವ್ರ ಭಾವನಾತ್ಮಕ ಪ್ರಕೋಪಕ್ಕೆ ಒಳಗಾದಾಗ ಈ ಮೇಲಿನ ಹೇಳಿಕೆ ಹೇಳಿಬಿಡಬಹುದು ಆದರೆ ಇದು ಮಗುವಿನ ಮೇಲೆ ಅತಿ ಘೋರ ಪರಿಣಾಮ ಬೀರುತ್ತದೆ.ಇದು ಮಗುವಿಗೆ ಅತಿ ಹೆಚ್ಚು ನೋವು ನೀಡುವ ಸಂಗತಿ.ಬಿಕ್ಕಟ್ಟು ಯಾವ ರೀತಿಯದೇ ಇರಬಹುದು ಆದರೆ ಈ ರೀತಿ ಹೇಳುವುದು ತಪ್ಪು.

9.ನಿನ್ನ ಕೆಟ್ಟ ಸ್ನೇಹಿತರಿಂದ ದೂರವಿರು

9.ನಿನ್ನ ಕೆಟ್ಟ ಸ್ನೇಹಿತರಿಂದ ದೂರವಿರು

ನಾವು ಸ್ನೇಹ ಬೆಳೆಸುವ ಮೊದಲು ಯೋಚಿಸುವುದಿಲ್ಲ ಹಾಗೆಯೇ ಮಕ್ಕಳು ಕೂಡ.ನಮ್ಮಲ್ಲಿರುವ ಒಂದೇ ವ್ಯತ್ಯಾಸವೆಂದರೆ ನಮಗೆ ಕೆಟ್ಟವರಿಂದ ಹೇಗೆ ದೂರ ಇರಬೇಕು ಎಂಬುದು ತಿಳಿದಿರುತ್ತದೆ ಮಕ್ಕಳಿಗೆ ತಿಲಿದಿರುವುದಿಲ್ಲ. ಅವರಿಗೆ ಸ್ನೇಹಿತರೇ ಪ್ರಪಂಚ ಆದ್ದರಿಂದ ತಕ್ಷಣ ಹೊಸ ಸ್ನೇಹಿತರನ್ನು ಮಾಡಿಕೊ ಎಂದು ಒತ್ತಾಯಿಸಬೇಡಿ.

Story first published: Tuesday, August 6, 2013, 17:40 [IST]
X
Desktop Bottom Promotion