ಮಗು ಇಷ್ಟು ಬೇಗ ಬೇಡ ಎಂದು ತೀರ್ಮಾನಿಸಿದ್ದೀರಾ?

By Staff

ಮಕ್ಕಳನ್ನು ಹಡೆಯಲು ಕೆಲವರು ಕಾಯೋಣ ಎನ್ನುತ್ತಾರೆ. ಅದಕ್ಕೆ ಅವರಿಗೆ ತಮ್ಮದೇ ಆದ ಅಭಿಪ್ರಾಯಗಳು ಇರುತ್ತವೆ. ನೀವು ಮಕ್ಕಳನ್ನು ಪಡೆಯಲು ಕಾದು ನೋಡುವ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದೀರಾ? ಹಾಗಾದರೆ ಈ ತೀರ್ಮಾನ ತೆಗೆದುಕೊಳ್ಳುತ್ತಿರುವವರಲ್ಲಿ ಕೇವಲ ನೀವು ಒಬ್ಬರೇ ಅಲ್ಲ. ನಿಮ್ಮ ಹಾಗೆಯೇ ಹಲವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ತೆಗೆದುಕೊಳ್ಳುತ್ತಲೆ ಇದ್ದಾರೆ.

ನೀವು ಮಕ್ಕಳನ್ನು ಹಡೆಯಲು ಏಕೆ ತಡಮಾಡುತ್ತಿದ್ದೀರಾ ಎಂಬುದು ನಿಮ್ಮ ವೈಯುಕ್ತಿಕ ವಿಚಾರ. ಇದಕ್ಕೆ ಕೆಲವೊಂದು ಮೂಲಭೂತ ಕಾರಣಗಳನ್ನು ನೀವು ಒದಗಿಸಬಹುದು. ಅವುಗಳ ಅರ್ಥ ಯೌವನಾವಸ್ಥೆಯಲ್ಲಿ ನೀವು ಉತ್ತಮ ಪೋಷಕರಾಗಲು ಸಾಧ್ಯವಿಲ್ಲ ಅಥವಾ ನೀವು ಅಪ್ಪ- ಅಮ್ಮ ಹಾಗಬಾರದು ಎಂದೆನಿಲ್ಲ. ಒಂದು ವೇಳೆ ನೀವೇನಾದರು ಮಕ್ಕಳನ್ನು ಪಡೆಯಲು ತಡ ಮಾಡುವ ನಿರ್ಧಾರ ತೆಗೆದುಕೊಂಡಿದ್ದಲ್ಲಿ, ಇಲ್ಲಿ ನೀಡಲಾಗಿರುವ ಒಂಭತ್ತು ಉತ್ತಮ ಸಲಹೆಗಳು ನಿಮ್ಮ ನೆರವಿಗೆ ಬರುತ್ತವೆ.

ಇದು ಕೇವಲ ತೀರ್ಮಾನದ ಪ್ರಶ್ನೆಯಲ್ಲ. ಮಕ್ಕಳನ್ನು ಹೆರುವುದು ಎನ್ನುವುದು ಸಮಯ, ಸಂದರ್ಭ, ವಯಸ್ಸು ಮತ್ತು ಪರಿಸ್ಥಿತಿಯನ್ನು ನೋಡಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ. ಮಕ್ಕಳನ್ನು ಹೆರಲು ನಿಮಗೆ ಇರುವ ಗೊಂದಲ ಮತ್ತು ಕಾಯಲು ನೀವು ಕೊಡಬೇಕಾದ ಕೆಲವು ಉತ್ತಮ ಕಾರಣಗಳನ್ನು ನಾವು ಇಲ್ಲಿ ನಿಮಗಾಗಿ ನೀಡಿದ್ದೇವೆ.

1. ಆರ್ಥಿಕ ಪರಿಸ್ಥಿತಿ

1. ಆರ್ಥಿಕ ಪರಿಸ್ಥಿತಿ

ಮಕ್ಕಳನ್ನು ಹಡೆಯಲು ವಿಳಂಬ ಮಾಡಲು ಇರುವ ಅತಿದೊಡ್ಡ ಕಾರಣ ಆರ್ಥಿಕ ಪರಿಸ್ಥಿತಿ. ಮಕ್ಕಳೇ ಜೀವಮಾನದ ಸಂಪತ್ತು. ಯೋಚಿಸಿ, ಮಗುವಾದರೆ ಅದಕ್ಕೆ ನೀವು ಅಂಗಡಿಯಲ್ಲಿ ದೊರೆಯುವ ಹೊಚ್ಚ ಹೊಸ ವಸ್ತುಗಳನ್ನು, ಬಟ್ಟೆ- ಬರೆಗಳನ್ನು ಎಲ್ಲವನ್ನು ತಂದು ಕೊಡಬೇಕು ಎಂದು ಬಯಸುವಿರಿ. ಅದಕ್ಕೆ ಸಮಾಜದಲ್ಲಿ ತನ್ನತನವನ್ನು ಗುರುತಿಸಿಕೊಳ್ಳಲು ಮತ್ತು ಸ್ಥಾನಮಾನವನ್ನು ಬೆಳೆಸಿಕೊಳ್ಳಲು ನೀವು ಹಣವನ್ನು ಖರ್ಚುಮಾಡಬೇಕಾಗುತ್ತದೆ. ಅದಕ್ಕೆ ಮಕ್ಕಳ ಬಗ್ಗೆ ಯೋಚಿಸುವ ಮೊದಲು ನಿಮ್ಮ ಆದಾಯ- ವ್ಯಯದ ಲೆಕ್ಕಾಚಾರ ಹಾಕುವುದು ಉತ್ತಮ. ಏಕೆಂದರೆ ಮಕ್ಕಳಾದ ನಂತರ ನಿಮಗೆ ಪಶ್ಚಾತ್ತಾಪ ಪಡುವ ಅವಕಾಶವಿರುವುದಿಲ್ಲ.

2. ತಾಳ್ಮೆ

2. ತಾಳ್ಮೆ

ತಾಳಿದವನು ಬಾಳಿಯಾನು ಎಂಬಂತೆ ಮಕ್ಕಳಾದ ನಂತರ ನಿಮಗೆ ತಾಳ್ಮೆ ಗಳಿಸಿಕೊಳ್ಳುವ ಅವಕಾಶವಿರುವುದಿಲ್ಲ. ಅದನ್ನು ಮೊದಲೆ ಗಳಿಸಿ ನಂತರ ಮಗುವಿನ ಲಾಲನೆ , ಪಾಲನೆ ನೋಡಿಕೊಳ್ಳಿ. ಏಕೆಂದರೆ ಮಗುವನ್ನು ಪೋಷಿಸುವ ಅತಿ ಮುಖ್ಯ ಅಗತ್ಯತೆಗಳಲ್ಲಿ ತಾಳ್ಮೆ ಸಹ ಪ್ರಮುಖ ಪಾತ್ರವಹಿಸುತ್ತದೆ. ಜಗಳ, ಕೋಪ, ತಾಪಗಳನ್ನು ನಿಯಂತ್ರಿಸಿಕೊಳ್ಳಿ. ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳಿ.

3. ನಿಮ್ಮ ಯೌವನಾವಸ್ಥೆಯಲ್ಲಿ ಬಳಲಬೇಡಿ.

3. ನಿಮ್ಮ ಯೌವನಾವಸ್ಥೆಯಲ್ಲಿ ಬಳಲಬೇಡಿ.

ಇಪ್ಪತ್ತರ ಹರೆಯದಲ್ಲಿ ಮಕ್ಕಳನ್ನು ಹಡೆದು ನಂತರ ಜೀವನ ಪರ್ಯಂತ ಕಳೆದು ಹೋದ ಯೌವನಕ್ಕಾಗಿ ಕೊರಗಬೇಡಿ. ಪ್ರತಿಯೊಬ್ಬರಿಗು ತಮ್ಮ ಯೌವನಾವಸ್ಥೆಯನ್ನು ತಮ್ಮ ಆಪ್ತರ ಜೊತೆ ಹರಟುತ್ತ, ಕಾಲ ಕಳೆಯುತ್ತ, ಸ್ನೇಹಿತರ ಜೊತೆ ಸುತ್ತಾಡುತ್ತ ಕಳೆಯಬೇಕೆಂಬ ಬಯಕೆ ಇರುತ್ತದೆ. ಆದರೆ ಒಮ್ಮೆ ನಿಮಗೇನಾದರು ಮಗುವಾಯಿತೊ? ಅಲ್ಲಿಗೆ ಮುಗಿಯಿತು. ನಿಮಗೆ ನಿಮ್ಮದೇ ಆದ ಕಾಲಾವಕಾಶ ಸಿಗುವುದು ದುರ್ಲಭವಾಗುತ್ತದೆ. ಒಬ್ಬ ಪೋಷಕರಾಗಿ ನೀವು ನಿಮ್ಮ ಸಮಯವನ್ನು ನಿಮ್ಮ ಮಗುವಿಗಾಗಿ ಒದಗಿಸಬೇಕಾದು ಅಗತ್ಯವಾಗುತ್ತದೆ. ಆದರೆ ಈ ವಯಸ್ಸಿನಲ್ಲಿ ನೀವು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಬ್ಬ ಪೋಷಕರಾಗಲು ಸಿದ್ಧವಾದಾಗ ಮಕ್ಕಳನ್ನು ಪಡೆಯಿರಿ. ಆಗ ನಿಮಗೆ ಒಂದು ಹೊಸ ಪ್ರಪಂಚ ಸಿಗುತ್ತದೆ. ಹೊಸ ಜನರನ್ನು, ಹೊಸ ಹೊಸ ಸನ್ನಿವೇಶಗಳನ್ನು ಎದುರಿಸುವಂತಹ ಸ್ಥೈರ್ಯ ನಿಮ್ಮಲ್ಲಿ ಮೂಡಿರುತ್ತದೆ. ಏಕೆಂದರೆ ಆಗ ನೀವು ಹಳೆಯ ಪೋಷಕರಾಗಿರುತ್ತೀರಿ.

4. ಸೂಕ್ತ ಸಂಗಾತಿಯ ಸಾಂಗತ್ಯ

4. ಸೂಕ್ತ ಸಂಗಾತಿಯ ಸಾಂಗತ್ಯ

ಸಮಾಜದಲ್ಲಿ ಇತ್ತೀಚೆಗೆ ಒಂದು ಪ್ರವೃತ್ತಿ ಹೆಚ್ಚಾಗಿದೆ. ತಾರುಣ್ಯದಲ್ಲಿಯೇ ಮದುವೆಗಳಾಗುವುದು. ನಂತರ ಶೀಘ್ರವಾಗಿ ಮಕ್ಕಳನ್ನು ಹೆರುವುದು. 45 ವರ್ಷಕ್ಕೆಲ್ಲ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ, ಇಬ್ಬರು ಬೇರಾಗುವುದು. ಇದಕ್ಕೆ ಕಾರಣ ದಂಪತಿಗಳ ನಡುವೆ ಹೊಂದಾಣಿಕೆಯ ಸಮಸ್ಯೆ. ನೀವು ಮಕ್ಕಳನ್ನು ಪಡೆಯಲು ನಿಧಾನ ಮಾಡಿದರೆ ನಿಮ್ಮ ನಿಮ್ಮ ಬಾಳಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಆಗ ಒಬ್ಬರಿಗೆ ಮತ್ತೊಬ್ಬರು ಆಧಾರವಾಗಿ ನಿಂತು ಮುಂದಿನ ಪೀಳಿಗೆಯನ್ನು ರೂಪಿಸಬಹುದು.

5. ಅತ್ಮಾಯಣ

5. ಅತ್ಮಾಯಣ

ಕೆಲವರು ಮಕ್ಕಳನ್ನು ಹೆರಲು ತಡ ಮಾಡುತ್ತಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಇಂತಿವೆ:- ಅವರು ನಮ್ಮನ್ನು ನಾವು ಇನ್ನೂ ಅರ್ಥ ಮಾಡಿಕೊಂಡಿಲ್ಲ. ನಮಗೇನು ಬೇಕು ಈ ಜೀವನದಲ್ಲಿ ಎಂಬುದು ಇನ್ನು ಗೊತ್ತಿಲ್ಲ. ನಮಗೇ ಇನ್ನು ಒಂದು ನೆಲೆ ಸಿಕ್ಕಿಲ್ಲ. ನಮಗಿನ್ನು ಸ್ವಲ್ಪ ಕಾಲ ಬೇಕು. ನಾವಿನ್ನು ನಮ್ಮ ಕಾಲ ಮೇಲೆ ನಿಂತಿಲ್ಲ. ಹೀಗೆ ಸಾಗುತ್ತದೆ ಕಾರಣಗಳ ಸರಣಿ. ತಡ ಮಾಡಿದರೆ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಜೀವನದಲ್ಲಿ ಒಂದು ನೆಲೆ, ಗುರಿ ಮತ್ತು ಭದ್ರತೆ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆಗ ನೀವು ಒಂದು ಉತ್ತಮ ರೀತಿಯ ಪೋಷಕರಾಗಿ, ಒಂದು ಉತ್ತಮ ಪ್ರಜೆಯನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುತ್ತದೆ.

6. ವೃತ್ತಿ

6. ವೃತ್ತಿ

ನೀವು ವೃತ್ತಿಯಲ್ಲಿ ಸ್ಥಿರತೆಯನ್ನು ಹೊಂದಿದ್ದೀರಾ? ಇಲ್ಲವಾದರೆ ಮಗುವನ್ನು ಪಡೆಯುವ ಮೊದಲು ಸ್ಥಿರತೆಯನ್ನು ಸಂಪಾದಿಸಿ. ಅದಕ್ಕಾಗಿ ಮಾಡಬೇಕಾಗಿರುವ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಿ. ನಿಮ್ಮ ವೃತ್ತಿಯಲ್ಲಿ ಭದ್ರತೆಯನ್ನು ಸಂಪಾದಿಸಿ. ನಿಮ್ಮ ಕಂಪೆನಿಯನ್ನು ಕಟ್ಟಿ. ನಿಮ್ಮದೇ ಆದ ಬ್ರಾಂಡ್‍ನ್ನು ಸೃಷ್ಟಿಸಿ ಮತ್ತು ವೃತ್ತಿಯಲ್ಲಿ ನಿಮಗೆ ಒಂದು ನೆಲೆಯನ್ನು ಸ್ಥಾಪಿಸಿ ನಂತರ ಮಕ್ಕಳನ್ನು ಪಡೆಯುವುದರ ಬಗ್ಗೆ ಯೋಚಿಸಿ. ಆದರೆ ಇದಕ್ಕೆ ಸ್ವಲ್ಪ ಮಾತ್ರ ಸಮಯವಿದೆ ಎಂಬುದನ್ನು ಎಂದೆಂದಿಗು ಮರೆಯಬೇಡಿ.

7. ಪ್ರವಾಸ

7. ಪ್ರವಾಸ

ನಿಮ್ಮಷ್ಟಕ್ಕೆ ನೀವು ಗಂಟು ಮೂಟೆ ಕಟ್ಟಿಕೊಂಡು ಮಜವಾಗಿ ಪ್ರವಾಸ ಹೋಗುವುದು ಒಂದು ರೀತಿ. ನಿಮ್ಮ ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು ಸುತ್ತಾಡುವುದು ಬೇರೆಯದೆ ರೀತಿ. ನಡುವೆ ಹಲವಾರು ವ್ಯತ್ಯಾಸಗಳಿವೆ. ಮಕ್ಕಳಿಲ್ಲದೆ ಇದ್ದಾಗ ನೀವು ಮತ್ತು ನಿಮ್ಮ ಸಂಗಾತಿ ಇಡೀ ಪ್ರಪಂಚವನ್ನೆ ಸುತ್ತಾಡಬಹುದು. ಅದಕ್ಕಾಗಿ ಮಕ್ಕಳನ್ನು ಹಡೆಯುವ ಮೊದಲು ನೀವು ನೋಡಬೇಕಾದ ಸ್ಥಳಗಳನ್ನು ನೋಡಿ ಮುಗಿಸಿ. ನಂತರ ಸುತ್ತಾಟಕ್ಕೆ ಸ್ವಲ್ಪ ಮಟ್ಟಿಗೆ ತಡೆ ಬೀಳುತ್ತದೆ.

8. ಮನೆಯನ್ನು ಕೊಳ್ಳಿ

8. ಮನೆಯನ್ನು ಕೊಳ್ಳಿ

ನೀವು ಒಂದು ಬೆಡ್ ರೂಮ್ ಇರುವ ಅಪಾರ್ಟ್ ಮೆಂಟ್ ಅಥವಾ ಬಾಡಿಗೆ ಮನೆಯಲ್ಲಿದ್ದೀರಾ? ನೀವೊಮ್ಮೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕಷ್ಟ ಪಡುತ್ತಿದ್ದು, ಹೆಸರನ್ನು ಸಂಪಾದಿಸಲು ಹೆಣಗಾಡುತ್ತಿರುವುದು ನಿಜವೇ ಆಗಿದ್ದಲ್ಲಿ, ಮೊದಲು ನಿಮ್ಮದು ಎನ್ನುವ ಒಂದು ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳಿ. ಅದರಲ್ಲಿ ಉದ್ಯಾನವನ, ಈಜುಕೊಳ ಮುಂತಾದ ನಿಮ್ಮ ಕಲ್ಪನೆಯ ಎಲ್ಲಾ ಅಂಶಗಳು ಇರಲಿ. ಅದರಲ್ಲಿ ನಿಮ್ಮ ಮಗುವಿಗೆ ಯಾವುದೇ ಕೊರತೆಗಳು ಕಾಡದಂತೆ ಜಾಗ್ರತೆ ವಹಿಸಿ.

9. ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ

9. ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ

ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ವಿದ್ಯಾರ್ಹತೆಯು ನಿಮ್ಮ ಜೀವನಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸುತ್ತದೆ. ಮಗುವನ್ನು ಲಾಲನೆ- ಪಾಲನೆ ಮಾಡುತ್ತ ಪದವಿ ಪಡೆಯುತ್ತೇನೆ ಎಂಬುದು ನಿಜಕ್ಕು ಹೊಣೆಗೇಡಿತನದ ಮಾತಾಗುತ್ತದೆ. ಇದು ನಿಮಗೆ ತೊಂದರೆ ಮಾಡಬಹುದು ಅಥವಾ ನಿಮ್ಮ ಮನಸ್ಸಿಗೆ ಘಾಸಿ ಮಾಡಬಹುದು. ಏಕೆಂದರೆ ಎರಡು ದೋಣಿಯಲ್ಲಿ ಕಾಲಿಟ್ಟು ಯಾವುದಕ್ಕು ನ್ಯಾಯ ಸಲ್ಲಿಸಲಾಗದೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಮೊದಲು ನಿಮ್ಮ ಓದನ್ನು ಪೂರ್ಣಗೊಳಿಸಿ. ನಂತರ ಮಗುವನ್ನು ಪಡೆಯಲು ತಯಾರಾಗಿ ಎನ್ನುವುದು ಉತ್ತಮವಾದ ಸಲಹೆಯಾಗಿದೆ, ಏನಂತೀರಿ.

X
Desktop Bottom Promotion