Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರ್ಭಿಣಿಯರು ಈ ರೀತಿಯಲ್ಲಿ ಸ್ಟೈಲ್ ಮಾಡಬಾರದು!
ಗರ್ಭಿಣಿಯರು ಆರೋಗ್ಯದ ಬಗ್ಗೆ ಮಾತ್ರ ಗಮನ ಕೊಟ್ಟರೆ ಸಾಲದು ಫ್ಯಾಷನ್ ಹಾಗೂ ಸ್ಟೈಲ್ ಬಗ್ಗೆ ಕೂಡ ಗಮನ ಕೊಡಬೇಕು. ಏಕೆಂದರೆ ಸ್ಟೈಲ್ ಮಾಡಲು ಹೋಗಿ ಅದರಿಂದ ತಾಯಿ ಹಾಗೂ ಮಗುವಿಗೆ ಅಪಾಯ ಉಂಟಾಗಬಹುದು.
ಅದರಲ್ಲೂ ಯಾವ ರೀತಿಯ ಫ್ಯಾಷನ್ ಮಾಡಬಾರದು ಎಂಬುವುದರ ವಿವರ ಇಲ್ಲಿ ನೀಡಲಾಗಿದೆ ನೋಡಿ:

ಹೈಹೀಲ್ಡ್ ಚಪ್ಪಲಿ: ಗರ್ಭಿಣಿಯರು ಯಾವುದೇ ಕಾರಣಕ್ಕೂ ಹೈಹೀಲ್ಡ್ ಚಪ್ಪಲಿ ಹಾಕಬಾರದು. ಏಕೆಂದರೆ ನಡೆಯುವಾಗ ಸ್ವಲ್ಪ ಕಾಲು ಉಳುಕಿದರೂ ತಾಯಿ ಹಾಗೂ ಮಗುವಿಗೆ ಅಪಾಯ ಉಂಟಾಗಬಹುದು, ಅಷ್ಟು ಮತ್ರವಲ್ಲ ಹೈಹೀಲ್ಡ್ ಚಪ್ಪಲಿನಿಂದ ಸೊಂಟ ನೋವು ಬರುವುದು. ಆದ್ದರಿಂದ ಚಪ್ಪಟೆಯಾದ ಚಪ್ಪಲಿ ಬಳಸಿ.
ಬಿಗಿ ವಸ್ತ್ರ: ಕೆಲವರು ಹೊಟ್ಟೆ ಹೆಚ್ಚಾಗಿ ಕಾಣಬಾರದೆಂದು ಬಿಗಿ ವಸ್ತ್ರ ಧರಿಸುತ್ತಾರೆ ಇನ್ನೂ ಕೆಲವರು ಫ್ಯಾಷನ್ ಹೆಸರಿನಲ್ಲಿ ಧರಿಸುತ್ತಾರೆ, ಗರ್ಭಾವಸ್ಥೆಯಲ್ಲಿ ಬಿಗಿ ವಸ್ತ್ರ ಧರಿಸಿದರೆ ಮಗುವಿನ ಬೆವಣಿಗೆಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಹತ್ತಿಯ ಸಡಿಲ ವಸ್ತ್ರಗಳನ್ನು ಧರಿಸುವುದು ಒಳ್ಳೆಯದು.
ಮೇಕಪ್: ಗರ್ಭಾವಸ್ಥೆಯಲ್ಲಿರುವಾಗ ಪ್ರತಿನಿತ್ಯ ಲಿಪ್ ಸ್ಟಿಕ್ ಹಚ್ಚುವುದು, ನೇಲ್ ಪಾಲಿಷ್ ಹಚ್ಚುವುದು ಒಳ್ಳೆಯದಲ್ಲ. ಆದಷ್ಟು ರಾಸಾಯನಿಕ ವಸ್ತುಗಳಿಂದ ದೂರ ಇರಬೇಕು.
ಕೂದಲಿಗೆ ಬಣ್ಣ: ಗರ್ಭಿಣಿಯರು ಕೂದಲಿಗೆ ಬಣ್ಣ ಹಚ್ಚಬಾರದು. ಏಕೆಂದರೆ ಹೇರ್ ಕಲರ್ ನಲ್ಲಿ ಅಮೋನಿಯಂ ರಾಸಾಯನಿಕವಿರುತ್ತದೆ, ಇದು ಗರ್ಭಿಣಿಯರಿಗೆ ಆರೋಗ್ಯದ ಸಮಸ್ಯೆಯನ್ನು ತರುತ್ತದೆ.
ಶಸ್ತ್ರಕ್ರಿಯೆ: ಗರ್ಭಿಣಿಯರು ಸೌಂದರ್ಯವನ್ನು ವೃದ್ಧಿಸುವ ಯಾವುದೇ ಶಸ್ತ್ರಕ್ರಿಯೆ ಮಾಡಿಸಬಾರದು. ಈ ರೀತಿ ಮಾಡಿಸಿದರೆ ರಕ್ತ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿ ಅನಾರೋಗ್ಯ ಉಂಟಾಗುವುದು.
ಒಳ ಉಡುಪು: ಬಿಗಿಯಾದ ಡ್ರೆಸ್ ರಕ್ತ ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಗರ್ಭಿಣಿಯರು ತುಂಬಾ ಬಿಗಿಯಾದ ಒಳ ಉಡುಪು ಧರಿಸಬಾರದು. ತುಂಬಾ ಭಾರವಾದ ಡ್ರೆಸ್ ಹಾಕುವ ಬದಲು ಹಗುರವಾದ ಡ್ರೆಸ್ ಧರಿಸಿ.



Click it and Unblock the Notifications
