Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಗರ್ಭಿಣಿಯರಿಗೆ ಕಾಡುವ ಸ್ನಾಯು ಸೆಳೆತಕ್ಕೆ ಪರಿಹಾರ

ಗರ್ಭಿಣಿಯರಿಗೆ ಸುಸ್ತು , ತಲೆಸುತ್ತು , ವಾಂತಿ ಈ ರೀತಿಯ ಸಮಸ್ಯೆಗಳ ಜೊತೆ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಸ್ನಾಯು ಸೆಳೆತ. ಇದು ಬಂದರೆ ತಡೆಯಲು ಅಸಾಧ್ಯವಾದ ನೋವು ಕಂಡುಬರುತ್ತದೆ. ಅದರಲ್ಲೂ ಕೆಳ ಹೊಟ್ಟೆ ಮತ್ತು ಕಾಲಗಳಲ್ಲಿ ತುಂಬಾ ನೋವು ಕಂಡು ಬರುತ್ತದೆ.
ಈ ರೀತಿಯ ಸ್ನಾಯು ಸೆಳೆತ ಮೂರು ತಿಂಗಳಿನ ನಂತರ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ಹೆಚ್ಚು ಗ್ಯಾಸ್ ಉತ್ಪತ್ತಿ ಮಾಡುವ ಆಹಾರವನ್ನು ತಿನ್ನದಿರುವುದು ಒಳ್ಳೆಯದು. ಕೆಳ ಹೊಟ್ಟೆಯಲ್ಲಿ ಈ ರೀತಿಯ ನೋವು ಕಂಡು ಬಂದರೆ ಸ್ವಲ್ಪ ನಿಧಾನಕ್ಕೆ ಹಿಂದೆಕ್ಕೆ ವಾಲಿದರೆ ಸಾಕು ಸ್ವಲ್ಪ ನೋವು ಕಡಿಮೆಯಾಗುವುದು. ಕುರ್ಚಿಯಲ್ಲಿ ಕೂರುವಾಗ ಸ್ವಲ್ಪ ಮೆತ್ತಗೆ ಕೂರುಬೇಕು. ಓಡಿ ಬಂದು ಕೂರುವುದು, ಕೂತಲ್ಲಿಂದ ಬೇಗನೆ ಎದ್ದೇಳುವುದು ಮಾಡಬಾರದು.
ಇದು ವಿಟಮಿನ್ ಗಳ ಕೊರತೆ ಮತ್ತು ಫಾಲಿಕ್ ಆಸಿಡ್ ಕೊರತೆ ಉಂಟಾದರೆ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಿಣಿಯರು ಒಳ್ಳೆಯ ಪೋಷಕಾಂಶವಿರುವ ಆಹಾರ ತಿನ್ನಬೇಕು.
ಈ ರೀತಿಯ ಸ್ನಾಯು ಸೆಳೆತ ಕಂಡು ಬಂದರೆ ಈ ಕೆಳಗಿನ ಸಲಹೆಯನ್ನು ಪಾಲಿಸಬಹುದು:
1. ತುಂಬಾ ಹೊತ್ತು ಕೂರದೆ ಸ್ವಲ್ಪ ದೂರ ನಡೆಯುವುದು ಒಳ್ಳೆಯದು.
2. ರಾತ್ರಿ ಬೇಗನೆ ಮಲಗಬೇಕು, ಬೆಳಗ್ಗೆ ಬೇಗನೆ ಏಳಬೇಕು. ಬೆಳಗಿನ ಸ್ವಚ್ಛ ಗಾಳಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
3. ಗರ್ಭಾವಸ್ಥೆಯಲ್ಲಿ ಮಾಡುವ ಯೋಗ ಮತ್ತು ನೀರಿನಲ್ಲಿ ಮಾಡುವ ವ್ಯಾಯಾಮ (water exercise) ಈ ರೀತಿಯ ಸ್ನಾಯು ಸೆಳೆತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.



Click it and Unblock the Notifications
