Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮಗೊಂದು ಮಗು ಬೇಕೆಂದು ಬಯಸುತ್ತಿದ್ದೀರಾ?

ದಾಂಪತ್ಯ ಜೀವನ ಮತ್ತಷ್ಟು ಮಧುರವಾಗಲು ಮಗು ಬೇಕು ನಿಜ. ಹಿರಿಯರು, 'ನಾವು ಡಜನ್ ಮಕ್ಕಳನ್ನು ಹೆತ್ತಿ ಸಾಕಲಿಲ್ವಾ?' ಎಂದು ಕೇಳುತ್ತಾರೆ, ಆ ಕಾಲ ಬೇರೆ , ಈ ಕಾಲ ಬೇರೆ. ಈಗ ಒಂದು ಅಥವಾ ಎರಡು ಮಕ್ಕಳನ್ನು ಸಾಕುವುದೇ ದೊಡ್ಡ ವಿಷಯವಾಗಿದೆ. ಏಕೆಂದರೆ ಮಕ್ಕಳನ್ನು ಹೆರುವುದು ದೊಡ್ಡ ವಿಷಯವಲ್ಲ, ಆದರೆ ಹೆತ್ತ ಮೇಲೆ ಉತ್ತಮ ವಿಧ್ಯಾಭ್ಯಾಸ ಕೊಡಸಬೇಕು, ಅವರ ಆಸೆಗಳನ್ನು ಪೂರೈಸಬೇಕು.
ಅಲ್ಲದೆ ಗಂಡ-ಹೆಂಡತಿ ನಡುವೆ ಉತ್ತಮ ಸಾಮರಸ್ಯ ಇರಬೇಕು, ಇಲ್ಲದಿದ್ದರೆ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಗುತ್ತಿರುವ ಎಷ್ಟೋ ನಿದರ್ಶನಗಳು ನಮ್ಮ ಕಣ್ಣು ಮುಂದೆ ಇದೆ, ಆದ್ದರಿಂದ ಮಗು ಮಾಡಿಕೊಳ್ಳುವ ಮುನ್ನ ಮುಖ್ಯವಾಗಿ ಈ ಎರಡು ಪ್ರಶ್ನೆಗಳಿಗೆ ಉತ್ತರವನ್ನು ನೀವೇ ಕಂಡುಕೊಳ್ಳುವುದು ಒಳ್ಳೆಯದು.
1.ಮುಖ್ಯವಾಗಿ ಈಗ ಹೆರಿಗೆಗೆ, ಚೆಕಪ್ ಗೆ ಸಾಕಷ್ಟು ಖರ್ಚಾಗುತ್ತದೆ, ಮಗುವಿಗೆ ಎಲ್ ಕೆ ಜಿಗೆ ಕೊಡುವ ಡೊನೇಷನ್ ನಲ್ಲಿ ಹಿಂದೆಯೆಲ್ಲಾ ಇಂಜಿನಿಯರ್ ಕೋರ್ಸ್ ಮುಗಿಸಿ ಬರುತ್ತಿದ್ದರು, ಆದ್ದರಿಂದ ಮಗು ಮಾಡಿಕೊಳ್ಳುವ ಮುನ್ನ ನಮ್ಮಲ್ಲಿ ಮಗುವನ್ನು ಸರಿಯಾಗಿ ನೋಡಿಕೊಳ್ಳುವಷ್ಟು ಆರ್ಥಿಕ ಸಾಮರ್ಥ್ಯ ಇದೆಯೇ ಎಂದು ಯೋಚಿಸಬೇಕಾಗುತ್ತದೆ.
2. ನಿಮ್ಮ ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇದೆಯೇ ಅನ್ನುವುದನ್ನು ಕೂಡ ಯೋಚಿಸಬೇಕಾಗುತ್ತದೆ. ಎಷ್ಟೋ ಮಹಿಳೆಯರು ಗಂಡನ ನಡುವಳಿಕೆ ಸರಿಯಿಲ್ಲದೆ ಇದ್ದರೂ ಒಂದು ಮಗುವಾದರೆ ಅವನು ಬದಲಾಗಬಹುದೆಂಬ ಆಸೆಯಿಂದ ಮಗುವನ್ನು ಬಯಸುತ್ತಾರೆ, ಆದರೆ ಮಗುವಾದ ನಂತರ ಕೂಡ ಅವನು ತಿದ್ದಿಕೊಳ್ಳದಿದ್ದರೆ ಮಗು ಮತ್ತು ತಾಯಿಯ ಜೀವನ ಕಷ್ಟಕರವಾಗುತ್ತದೆ.
ಆದ್ದರಿಂದ ಮಗು ಬೇಕೆಂದು ನಿರ್ಧರಿಸುವ ಮುನ್ನ ಆರ್ಥಿಕ ಸ್ಥಿರತೆ ಮತ್ತು ಸಂಬಂಧದಲ್ಲಿ ಉತ್ತಮ ಹೊಂದಾಣಿಕೆಯಿದ್ದರೆ ಮಾತ್ರ ಹುಟ್ಟುವ ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ, ಏನಂತಿರಾ?



Click it and Unblock the Notifications
