Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಗುವಾದ ಮೇಲೆ ಈ ರೀತಿ ಮಾಡುವುದು ಸ್ವಲ್ಪ ಕಷ್ಟ ಕಣ್ರೀ!
ಬ್ಯಾಚುರಲ್ ಲೈಫ್ ಎಂಜಾಯ್ ನ ಮಾಡಿ ಮದುವೆಯಾದ ಮೇಲೆ ಜವಬ್ದಾರಿ ಜಾಸ್ತಿಯಾಗುತ್ತದೆ. ಆಗ ಈ ರೀತಿ ಎಂಜಾಯ್ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಮದುವೆಯಾಗಿ ಮಗು ಆದ ಮೇಲೆ ಜವಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ.
ಒಂದು ವೇಳೆ ನೀವು ಮಗ ಬೇಕೆಂದು ಬಯಸಿದರೆ ಕೆಲವೊಂದು ಎಂಜಾಯ್ ಗಳನ್ನು ಈಗಲೇ ಮಾಡಿ ಬಿಡಿ. ಏಕೆಂದರೆ ಮಗುವಾದ ಮೇಲೆ ಅವುಗಳನ್ನು ಮಾಡಲು ಸಾಧ್ಯವಿಲ್ಲ. ಈ ಕೆಳಗೆ ಕೆಲವು ಎಂಜಾಯ್ ಬಗ್ಗೆ ಹೇಳಲಾಗಿದೆ.

1. ಗದ್ದಲವಿರುವ ಪಾರ್ಟಿಗೆ ಹೋಗಿ
ಮಗುವಾದ ಮೇಲೆ ಈ ರೀತಿಯ ಪಾರ್ಟಿಗಳಿಗೆ ಹೋಗಲು ಸಾಧ್ಯವಿಲ್ಲ. ಅದ್ದರಿಂದ ನಿಮ್ಮ ಫ್ರೆಂಡ್ಸ್ ಜೊತೆ ಈ ರೀತಿಯ ಪಾರ್ಟಿಗಳಿಗೆ ಹೋಗ ಬಯಸುವುದಾದರೆ ಮಗುವಾಗುವ ಮೊದಲೇ ಹೋಗಿ ಬನ್ನಿ.

2. ಡ್ರೆಸ್
ನಿಮಗೆ ಇಷ್ಟವಾಗುವ ಡ್ರೆಸ್ ಗಳನ್ನು ಧರಿಸಿ. ಮಗುವಾದ ಮೇಲೆ ನಿಮಗೆ ಇಷ್ಟವಾದ ಡ್ರೆಸ್ ಗಳನ್ನು ಹಾಕಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ದೇಹದಲ್ಲೂ ವ್ಯತ್ಯಾಸ ಉಂಟಾಗಬಹುದು. ಆದ್ದರಿಂದ ಧರಿಸಬೇಕೆನಿಸಿದ ಸ್ಟೈಲಿಷ್ ಡ್ರೆಸ್ ಗಳನ್ನು ಮಗುವಾಗುವ ಮೊದಲೇ ಹಾಕಿ.

3. ಟ್ರಿಪ್
ದೂರದ ಸ್ಥಳಗಳಿಗೆ ಟ್ರಿಪ್ ಮಗುವಾಗುವ ಮೊದಲೇ ಹೋಗದಿದ್ದರೆ ಮಗುವಾಗಿ ಅದು ಸ್ವಲ್ಪ ದೊಡ್ಡದಾಗುವವರೆಗೆ ಹೋಗಲು ಸಾಧ್ಯವಗುವುದಿಲ್ಲ. ಆದ್ದರಿಂದಲೇ ಮೊದಲೇ ಹೋಗಿ ಬನ್ನಿ.

4. ವಿಶಿಷ್ಟ ಸ್ಥಳಗಳಿಗೆ ಭೇಟಿ ನೀಡಿ
ಬ್ಯಾಂಕಾಕ್ ನಂತಹ ಸ್ಥಳಗಳಿಗೆ ಮಗುವಾದ ಮೇಲೆ ಹೋಗುವುದು ಸ್ವಲ್ಪ ಕಷ್ಟವೇ, ಆದ್ದರಿಂದ ನಿಮಗೆ ಹೋಗಬೇಕೆನಿಸಿದ ಸ್ಥಳಗಳಿಗೆ ನಿಮ್ಮ ಮುದ್ದಿನ ಕಂದ ಬರುವ ಮುನ್ನ ಹೋಗಿ ಬನ್ನಿ.

5. ಸಾಹಸಿ ಕ್ರೀಡೆ
ಸಾಹಸಿ ಕ್ರೀಡೆಗಳನ್ನು ಮಗುವಾಗುವ ಮೊದಲೇ ಮಾಡಿ, ನಂತರ ನಿಮಗೆ ಈ ರೀತಿಯೆಲ್ಲಾ ಎಂಜಾಯ್ ಮಾಡಲು ಮತ್ತೆ ಪುರುಸೊತ್ತು ಸಿಗುವುದಿಲ್ಲ.

6. ನಿದ್ದೆ
ಮಗುವಾದ ಮೇಲೆ ತುಂಬಾ ಹೊತ್ತು ನಿದ್ದೆ ಮಾಡಬೇಕೆಂದು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿದ್ದೆ ಇಷ್ಟ ಪಡುವವರು ಮಗುವಾಗುವ ಮುನ್ನ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಿ.

7. ಬ್ಯೂಟಿ ಪಾರ್ಲರ್
ಮಹಿಳೆಯರು ಮಗುವಾದ ಮೇಲೆ ಕೂಡ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಆದರೆ ತುಂಬಾ ಹೊತ್ತು ಸಮಯ ಕಳಿಯಲು ಸಾಧ್ಯವಾಗುವುದಿಲ್ಲ. ಮಗುವಿನ ಆರೈಕೆ ಕಡೆ ಹೆಚ್ಚಿನ ಗಮನ ಕೊಡುವುದರಿಂದ ನಮ್ಮ ದೇಹದ ಆರೈಕೆ ಕಡೆ ಗಮನ ಕಮ್ಮಿಯಾಗುತ್ತದೆ.

8. ಗುರಿ
ಏನಾದರು ಓದಬೇಕು ಅಥವಾ ಕೋರ್ಸ್ ಮಾಡಬೇಕೆಂದು ಬಯಸುವುದಾದರೆ ಮಗುವಾಗುವ ಮುನ್ನ ಮಾಡಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಓದಲು ಸಾಧ್ಯವಾಗುವುದಿಲ್ಲ.



Click it and Unblock the Notifications
