Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರಿಗೆ ನಿಷೇಧ ಈ ಹಣ್ಣುಗಳು

ಹಣ್ಣುಗಳು ಎಂತಹ ಕಾಲಕ್ಕೂ ಒಳ್ಳೆಯದು ಎಂಬ ಮಾತಿದೆ. ಆದರೆ ಕೆಲವೊಂದು ಹಣ್ಣುಗಳನ್ನು ಗರ್ಭಿಣಿಯರು ತ್ಯಜಿಸಿದರೆ ಹೆರಿಗೆ ಸುಸೂತ್ರವಾಗುವುದು ಮತ್ತು ಇನ್ನಿತರ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ.
ಗರ್ಭಿಣಿಯರು ಯಾವ ಹಣ್ಣನ್ನು ಏಕೆ ಸೇವಿಸಬಾರದು ಎಂಬುದನ್ನು ಇಲ್ಲಿ ತಿಳಿಯೋಣ:
* ಪಪ್ಪಾಯಿ: ಗರ್ಭಿಣಿಯು ಯಾವುದೇ ಕಾರಣಕ್ಕೂ ಪಪ್ಪಾಯಿಯನ್ನು ಸೇವಿಸದೆ ಇದ್ದರೆ ಉತ್ತಮ. ಏಕೆಂದರೆ ಇದರಿಂದ ಗರ್ಭಪಾತ ಮತ್ತು ಇನ್ನಿತರ ತೊಂದರೆಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಪಪ್ಪಾಯ ಹಣ್ಣಿನಲ್ಲಿನ ವಿಟಮಿನ್ ಸಿ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಉಪಯುಕ್ತ ಎನ್ನಲಾಗಿದೆ. ಹಾಗೆಯೇ ಪಪ್ಪಾಯವನ್ನು ಜೇನು ಮತ್ತು ಹಾಲಿನೊಂದಿಗೆ ಕುಡಿದರೆ ಹಾಲು ಉತ್ಪತ್ತಿಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಆದರೆ ಯಾವುದಕ್ಕೂ ಸುರಕ್ಷತೆ ದೃಷ್ಟಿಯಿಂದ ಇದನ್ನು ತಿನ್ನದಿದ್ದರೇ ಒಳ್ಳೆಯದು.
* ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿಯಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಕಪ್ಪು ದ್ರಾಕ್ಷಿಯನ್ನು ಗರ್ಭಿಣಿಯರು ಆದಷ್ಟು ಸೇವನೆ ಮಾಡದಿದ್ದರೆ ಉತ್ತಮ ಎಂದು ತಜ್ಞರ ಸಲಹೆ.
* ಪೈನ್ ಆಪಲ್: ಪೈನ್ ಆಪಲ್ ನಲ್ಲಿರುವ ಅತಿ ಹೆಚ್ಚಿನ ಬ್ರೊಮೆಲಿನ್ ಅಂಶ ಗರ್ಭಕೋಶವನ್ನು ಮೃದುಗೊಳಿಸಿ ಅವಧಿಗೆ ಮುನ್ನವೇ ಹೆರಿಗೆ ಸಂಭವಿಸುವಂತೆ ಮಾಡುತ್ತದೆ. ಇದರಿಂದ ಅನವಶ್ಯಕ ಆರೋಗ್ಯ ತೊಂದರೆಗಳು ಹೆಚ್ಚು. ಒಂದೆರೆಡು ಪೀಸ್ ತಿಂದರೆ ಪರವಾಗಿಲ್ಲ, ಆದರೆ ಮೊದಲ ಮೂರು ತಿಂಗಳಿನಲ್ಲಂತೂ ಇದನ್ನು ಮುಟ್ಟಲೇ ಬಾರದು.
ಅಷ್ಟೇ ಅಲ್ಲ, ಈ ಸಮಯದಲ್ಲಿ ತರಕಾರಿಗಳನ್ನಾಗಲೀ, ಹಣ್ಣುಗಳನ್ನಾಗಲೀ ತೊಳೆಯದೇ ತಿನ್ನಲೇಬಾರದು. ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ಇದ್ದಷ್ಟು ಹೆರಿಗೆ ಸುಖಕರವಾಗಿರುತ್ತದೆ ಮತ್ತು ಮಗು ಆರೋಗ್ಯವಾಗಿರುತ್ತದೆ.



Click it and Unblock the Notifications
