Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆರಿಗೆಯ ಬಳಿಕ ಸೋಂಕು(Infection) ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು
ಹೆರಿಗೆ ಎಂಬುವುದು ಪ್ರತಿಯೊಬ್ಬ ಹೆಣ್ಣಿಗೆ ಮರುಜನ್ಮವಾಗಿರುತ್ತದೆ ಅದು ಸಹ ಹೆರಿಗೆಯಾಗಿರಲಿ, ಸಿ ಸೆಕ್ಷನ್ ಆಗಿರಲಿ ಅವಳು ಹೆರಿಗೆಯ ಸಮಯದಲ್ಲಿ ಹೆರಿಗೆಯ ನಂತರ ತುಂಬಾನೇ ನೋವು ಅನುಭವಿಸುತ್ತಾಳೆ. ಹೆರಿಗೆಯಾದ ಕ್ಷಣದಿಂದ ಅಕೆ ತನ್ನ ದೇಹದ ಮೇಲೆ ಗಮನಹರಿಸಲು ಸಾಧ್ಯವಾಗಲ್ಲ.
ಮಗುವಿಗೆ ಹಾಲುಣಿಸುವುದೇ ಪ್ರಮುಖ ಕೆಲಸವಾಗಿರುತ್ತದೆ. ನವಜಾತ ಶಿಶುವಿಗೆ ಎರಡು ಗಂಟೆಗೊಮ್ಮೆಯಾದರೂ ಹಾಲುಣಿಸಬೇಕು, ಹಾಗಾಗಿ ಅವಳ ದೇಹದ ಮೇಲೆ ಹೆಚ್ಚು ಗಮನಹರಿಸಲು

ಇನ್ನು ಹೆರಿಗೆಯ ಬಳಿಕ ಜಾಗ್ರತೆವಹಿಸದಿದ್ದರೆ ಇನ್‌ಫೆಕ್ಷನ್(ಸೋಂಕು ಉಂಟಾಗುವುದು), ಇದರ ಬಗ್ಗೆ ವಿವರವಾದರೆ ನೋಡುವುದಾದರೆ:
ಯೂಟ್ರೈನ್ ಲೈನಿಂಗ್ ಸೋಂಕು: ಜನನಾಂಗದ ಭಾಗದಲ್ಲಿ ನೋವು, ಸೋಂಕು ಈ ಬಗೆಯ ಸಮಸ್ಯೆ ಉಂಟಾಗುವುದು, ಅತಿಯಾದ ರಕ್ತಸ್ರಾವ, ಹೊಟ್ಟೆ ನೋವು ಮುಂತಾದ ಸಮಸ್ಯೆ ಕಂಡು ಬರುವುದು. ಅದರಲ್ಲಿಯೂ ಹೆರಿಗೆಯಾದ ಮೊದಲಿನ ವಾರ ತುಂಬಾನೇ ಮುಖ್ಯವಾಗಿದೆ.
ಇವೆಲ್ಲಾ ಲಕ್ಷಣಗಳು ಹೆರಿಗೆಯ ಬಳಿಕ ಸೋಂಕು ಉಂಟಾಗಿದೆ ಎಂದು ಸೂಚಿಸುವುದು:
ಜ್ವರ: ಹೆರಿಗೆಯ ಬಳಿಕ ಸುಸ್ತು, ತಲೆನೋವು, ಹಸಿವು ಇಲ್ಲದಿರುವುದು ಸಹಜ, ಆದರೆ ಅದರ ಜೊತೆಗೆ ಜ್ವರ ಕೂಡ ಬಂದರೆ ದೇಹಕ್ಕೆ ಸೋಂಕು ಉಂಟಾಗಿದೆ ಎಂದರ್ಥ.
ಕಿಬ್ಬೊಟ್ಟೆ ನೋವು ಕಡಿಮೆಯಾಗುವುದಿಲ್ಲ
ಹೆರಿಗೆಯ ಬಳಿಕ ನೋವು ಇರುತ್ತದೆ, ಆದರೆ ದಿನಗಳು ಕಳೆದಂತೆ ಕಡಿಮೆಯಾಗುವುದು , ಸಿ ಸೆಕ್ಷನ್ ಆದ್ರೆ 5 ದಿನಕ್ಕೆ ನೋವು ಕಡಿಮೆಯಾಗುವುದು. ಆದರೆ ನೋವು ಕಡಿಮೆಯಾಗುತ್ತಿಲ್ಲ ಎಂದಾದರೆ ನೀವು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮನ್ನು ಹೆರಿಗೆ ಮಾಡಿಸಿದ ವೈದ್ಯರಿಗೆ ತೋರಿಸಿ ಜೊತೆಗೆ ಬೇರೆ ವೈದ್ಯರಿಗೂ ತೋರಿಸುವುದು ಒಳ್ಳೆಯದು.
ಬಿಳುಪು ತುಂಬಾನೇ ದುರ್ವಾಸನೆ
ಬಿಳುಪು ಹೋಗುವುದು ಸಹಜ, ಸ್ವಲ್ಪ ದುರ್ವಾಸೆ ಇರುತ್ತದೆ, ಆದರೆ ವಿಪರೀತ ದುರ್ವಾಸೆ ಅಂತ ಅನಿಸಲ್ಲ, ಆದರೆ ನಿಮಗೆ ಅನಿಸುತ್ತಿದೆ ಎಂದಾದರೆ ಗಾಯ ಒಣಗಿಲ್ಲ ಎಂದರ್ಥ.
ಅಧಿಕ ರಕ್ತಸ್ರಾವ
ಹೆರಿಗೆಯಾದ ಬಳಿಕ ಒಂದು ತಿಂಗಳವರೆಗೆ ರಕ್ತಸ್ರಾವ ಇರುತ್ತದೆ, ಆದರೆ ಈ ರಕ್ತಸ್ರಾವ ದಿನ ಕಳೆದಂತೆ ಕಡಿಮೆಯಾಗುವುದು, ಆದರೆ ವಿಪರೀತ ರಕ್ತಸ್ರಾವ infections ಆಗಿದೆ ಎಂಬುವುದನ್ನು ಸೂಚಿಸುತ್ತದೆ.
ಹೆರಿಗೆಯ ಬಲಿಕ ಸೋಂಕು ಏಕೆ ಉಂಟಾಗುತ್ತದೆ?
ಸಿ ಸೆಕ್ಷನ್ ಹೆರಿಗೆಯಾದವರಿಗೆ ಈ ರೀತಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಇನ್ನು ಕೆಲವರಿಗೆ ಅವಧಿ ಪೂರ್ವವಾಗಿ ಗರ್ಭ ಚೀಲ ಬೇರ್ಪಟ್ಟರೆ ಕೂಡ ತುಂಬಾನೇ ಅಪಾಯಕಾರಿ.
ಈ ಸೋಂಕು ತಡೆಗಟ್ಟುವುದು ಹೇಗೆ?
ಕೆಲವರಿಗೆ ಟ್ಯಾಬ್ಲೆಟ್‌ನಿಂದ ಗುಣಮುಖವಾದರೆ ಇನ್ನು ಕೆಲವರಿಗೆ IV ನಡೆಯಲಿದೆ. ಆ ವ್ಯಕ್ತಿಯ ಆರೋಗ್ಯ ಸ್ಥಿತಿ ನೋಡಿ ವೈದ್ಯರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸೋಂಕು ಉಂಟಾದರೆ ಎದೆಹಾಲುಣಿಸಲು ತೊಂದರೆಯಿಲ್ಲ. ಎದೆಹಾಲುಣಿಸಲು ಸಾಧ್ಯವಾಗದಿದ್ದರೆ ಪಂಪ್ ಮಾಡಿ ಕೂಡ ಹಾಲನ್ನು ಕೊಡಬಹುದು.
ಈ ರೀತಿ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದೇ?
ಹೌದು ಹೆಚ್ಚು ಜಾಗ್ರತೆವಹಿಸಿದರೆ ಈ ರೀತಿ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು.
ಹೆರಿಗೆಯ ಬಳಿಕ ಶುಚಿತ್ವದ ಕಡೆಗೆ ಗಮನಹರಿಸಿ
ಸ್ಟಿಚ್ ಮಾಡಿದ ಭಾಗವನ್ನು ಕೈಯಿಂದ ಹಾಗೇ ಮುಟ್ಟಬೇಡಿ, ಸೋಪ್‌ನಿಂದ ಕೈ ತೊಳೆದ ಬಳಿಕವಷ್ಟೇ ಆ ಭಾಗವನ್ನು ಮುಟ್ಟಬೇಕು, ನೀರಿನಂಶ ನಿಲ್ಲದಂತೆ ಮೃದುವಾದ ಬಟ್ಟೆಯಿಂದ ಮೆಲ್ಲನೆ ಒಪ್ಪಿ-ಒಪ್ಪಿ ತೆಗೆಯಬೇಕು.
ವೈದ್ಯರು ಸೂಚಿಸಿದ ಸಲಹೆ ಪಾಲಿಸಿ
ವೈದ್ಯರು ಹೆರಿಗೆಯ ಬಳಿಕ antibiotics ನೀಡಿ ಅದನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿರುತ್ತಾರೆ, ಅದರಂತೆ ತೆಗೆದುಕೊಳ್ಳಬೇಕು.
ಯಾವಾಗ ವೈದ್ಯರಿಗೆ ತೋರಿಸಬೇಕು
ಸಿ ಸೆಕ್ಷನ್ ಆದ ಕಡೆ ನೀರು ಅಥವಾ ರಕ್ತ ಮಿಶ್ರಿತ ಕೀವು ಬರುತ್ತಿದ್ದರೆ
ದಿನದಿಂದ ದಿನಕ್ಕೆ ನಿಮ್ಮ ಆರೋಗ್ಯ ಸ್ಥಿತಿ ದುರ್ಬಲವಾಗುತ್ತಿದ್ದರೆ
ಸ್ವಿಚರ್ ಮಾಡಿದ ಭಾಗದಲ್ಲಿ ತುಂಬಾನೇ ನೋವಿದ್ದರೆ
ಕಿಬ್ಬೊಟ್ಟೆ ನೋವು
ಗಂಟೆಗೊಂದು ಪ್ಯಾಡ್ ಬಳಸುತ್ತಿದ್ದರೆ(ಅಧಿಕ ರಕ್ತಸ್ರಾವ)
ಸೂಕ್ತ ವೈದ್ಯರಿಗೆ ತೋರಿಸಬೇಕು.



Click it and Unblock the Notifications
