Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆರಿಗೆಯ ಬಳಿಕ ತಲೆಸುತ್ತು, ಸುಸ್ತು ತಡೆಗಟ್ಟುವುದು ಹೇಗೆ?
ಮಗುವನ್ನು 9 ತಿಂಗಳು ಹೊತ್ತು, ಹೆರುವುದು, ನಂತರ ಆ ಮಗುವಿನ ಅರೈಕೆ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಹೆಣ್ಣು ಗರ್ಭಾವಸ್ಥೆ ಧರಿಸುತ್ತಿದ್ದಂತೆ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದಾಗಿ ಸಾಕಷ್ಟು ವ್ಯತ್ಯಾಸಗಳು ಆಗುತ್ತವೆ. ಅದೇ ರೀತಿ ಹೆರಿಗೆ ಆದ ನಂತರವೂ ತಾಯಿಯ ದೇಹ ಸ್ಥಿತಿಯಲ್ಲಿ ಹಲವು ಬದಲಾವಣೆಗಳು ಆಗುತ್ತವೆ.
ತಾಯಿಯಾದ ನಂತರ ಮಗುವಿನ ಆರೈಕೆಗಾಗಿ ಆಕೆ ಹೆಚ್ಚು ಸಮಯ ಮೀಸಲಿಡಬೇಕು. ಅಂತಹ ಸಂದರ್ಭದಲ್ಲಿ ಅಮ್ಮಂದಿರಿಗೆ ಆಯಾಸವಾಗುವುದು ಸಹಜ. ಆದರೆ ಈ ಆಯಾಸವನ್ನು ಹೋಗಲಾಡಿಸಿ ದೇಹದಲ್ಲಿ ಮತ್ತೆ ಎನರ್ಜಿ ತಂದುಕೊಳ್ಳಲು ತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ.

ಪ್ರಸವದ ನಂತರದ ದಣಿವು:
ಪ್ರಸವದ ನಂತರ ತಾಯಿಯಾದವಳು ದೇಹದಲ್ಲಿ ಸಂಪೂರ್ಣ ಶಕ್ತಿ ಕಳೆದುಕೊಂಡಿರುತ್ತಾಲೆ. ಶೇಕಡ 40ರಷ್ಟು ಹೊಸ ತಾಯಂದಿರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ರೀತಿ ಗರ್ಭಾವಸ್ಥೆಯ ನಂತರ ತಾಯಂದಿರಲ್ಲಿ ಉಂಟಾಗುವ ಆಯಾಸದಿಂದ ಹೊರಬರಲು ಅಥವಾ ಈ ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ ಈ ಸವಾಲನ್ನು ಎದುರಿಸಲು ತಾಯಿಯಂದಿರು ಜೀವಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಈ ರೀತಿ ಹೊಸ ತಾಯಂದಿರು ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಬದಲಾವಣೆ ಅವರ ದೇಹದಲ್ಲಿ ಶಕ್ತಿಯನ್ನು ತರುವುದು ಮಾತ್ರವಲ್ಲದೆ ಮಗುವಿನ ಆರೋಗ್ಯದ ಮೇಲೆಯೂ ಕೂಡ ಉತ್ತಮ ಪರಿಣಾಮ ಬೀರಲಿದೆ.
ವಿಶ್ರಾಂತಿ ಪಡೆಯುವುದು:
ಮೊದಲನೇದಾಗಿ ತಾಯಿಯಾದವಳು ಮಗುವನ್ನು ಹೇರುತ್ತಿದ್ದ ಹಾಗೆ ದೇಹದಲ್ಲಿ ಶಕ್ತಿ ಕಡಿಮೆ ಆಗುತ್ತದೆ ಹಾಗಂತ ಮಗುವಿನ ಆರೈಕೆ ಮಾಡುವುದರಲ್ಲಿ ಯಾವ ಕೊರತೆಯನ್ನು ಮಾಡುವಂತಿಲ್ಲ. ಹಾಗಾಗಿ ಈ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿಯ ಅಗತ್ಯ ಇರುತ್ತದೆ. ಮನೆ ಕೆಲಸಕ್ಕಾಗಿ ಕೆಲಸದವರನ್ನು ನೇಮಿಸಿಕೊಂಡು ಆ ಸಮಯವನ್ನು ಉಳಿಸಿಕೊಂಡರೆ ಆ ಸಮಯದಲ್ಲಿ ವಿಶ್ರಾಂತಿ ಪಡೆಯಬಹುದು. ಇನ್ನು ಮಗು ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಮಲಗಿದಾಗ ನೀವು ಕೂಡ ಮಲಗಿ ವಿಶ್ರಾಂತಿ ಪಡೆದುಕೊಳ್ಳಿ ಮಗು ಮಲಗಿದೆ ಎಂದು ಬೇರೆ ಕೆಲಸ ಮಾಡುವುದರಲ್ಲಿ ಸಮಯ ಕಳೆದರೆ ದೇಹಕ್ಕೆ ಇನ್ನಷ್ಟು ಆಯಾಸವಾಗುತ್ತದೆ.
ಆರೋಗ್ಯಕರ ಆಹಾರ:
ತಾಯಿಯ ದೇಹದ ಆರೋಗ್ಯ ಹಾಗೂ ಮಗುವಿನ ಆರೋಗ್ಯ ಎರಡು ಚೆನ್ನಾಗಿರಬೇಕು ಅಂದ್ರೆ ಮೊಟ್ಟಮೊದಲನೆಯದಾಗಿ ಸೇವಿಸುವ ಆಹಾರ ಆರೋಗ್ಯಕರವಾಗಿ ಇರಬೇಕು. ಪ್ರೋಟೀನ್ ಕಾರ್ಬೋಹೈಡ್ರೇಟ್ಸ್ ಹೊಂದಿರುವಂತಹ ಹೆಚ್ಚು ಶಕ್ತಿ ನೀಡುವ ಆಹಾರವನ್ನು ಸೇವಿಸಬೇಕು. ನಿಮ್ಮ ಆಹಾರದಲ್ಲಿ ಪೋಷಕಾಂಶಗಳು, ಜೀವಸತ್ವಗಳು ಖನಿಜಗಳು ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ. ಆದರೆ ಕೆಫಿನ್ ಮತ್ತು ಸಕ್ಕರೆಯನ್ನು ಆದಷ್ಟು ದೂರ ಇಡಿ. ಕೆಫಿನ್ ಸೇವನೆ ಒಮ್ಮೆ ದೇಹಕ್ಕೆ ಆಹ್ಲಾದಕರ ಎನಿಸಿದರು ದೀರ್ಘಾವಧಿ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.
ಬಿಸಿನೀರಿನ ಸ್ನಾನ:
ಮಗು ಹೆತ್ತ ನಂತರ ತಾಯಿಯ ಸ್ನಾಯುಗಳು ಕೂಡ ದುರ್ಬಲವಾಗಿರುತ್ತದೆ ಹಾಗಾಗಿ ಸ್ನಾಯುಗಳನ್ನು ಗಟ್ಟಿಯಾಗಿಸಿಕೊಳ್ಳುವುದಕ್ಕೆ ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲದೆ ದೇಹ ಹಗುರವಾದಂತೆ ಅನುಭವವಾಗುತ್ತದೆ ಜೊತೆಗೆ ಸ್ನಾಯು ಸೆಳೆತವೂ ಕಡಿಮೆ ಆಗುತ್ತದೆ.
ಲ್ಯಾವೆಂಡರ್ ನ ಪರಿಮಳ:
ಗಿಡಮೂಲಿಕೆಗಳಿಂದ ಅಥವಾ ಲ್ಯಾವೆಂಡರ್ ಹೂವುಗಳಿಂದ ತಯಾರಿಸಲಾದ ಪರಿಮಳಯುಕ್ತ ವಸ್ತುಗಳು ನಿಮ್ಮ ಆಯಾಸವನ್ನು ಕಡಿಮೆ ಮಾಡಬಲ್ಲದು ಜೊತೆಗೆ ನಿದ್ರೆಯನ್ನು ಹೆಚ್ಚಿಸಬಲ್ಲದು. ಸಂಶೋಧನೆಯ ಪ್ರಕಾರ ಈ ಸುವಾಸನೆ ಮಗುವಿನ ಹಾಗೂ ತಾಯಿಯ ಬಂಧವನ್ನು ಕೂಡ ಉತ್ತಮಗೊಳಿಸುತ್ತದೆ. ರಾಸಾಯನಿಕಗಳಿಲ್ಲದ ಗಿಡಮೂಲಿಕೆಯ ಲೆವೆಂಡರ್ ಪರಿಮಳವನ್ನು ನಿಮ್ಮ ಕೋಣೆಯ ಒಳಗೆ ಬರುವಂತೆ ಮಾಡುವುದು ಒಳ್ಳೆಯದು.
ನೀರು ಸೇವನೆ:
ತಾಯಂದಿರಲ್ಲಿ ಆಯಾಸ ಹೆಚ್ಚಾಗಿ ಬೆವರುವುದು, ಮೂತ್ರ ವಿಸರ್ಜನೆ ಹೆರಿಗೆಯ ನಂತರ ಕಳೆದುಕೊಳ್ಳುವ ದ್ರವ ಇದೆಲ್ಲದರಿಂದ ಅದರಿಂದ ದೇಹ ಇನ್ನಷ್ಟು ಡಿ ಹೈಡ್ರೇಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತಾಯಿಯಂದಿರು ದಿನಕ್ಕೆ ಸುಮಾರು 16 ಕಪ್ ನಷ್ಟು ಲಿಕ್ವಿಡ್ ಅಥವಾ ನೀರನ್ನು ಸೇವನೆ ಮಾಡಬೇಕು. ಕೇವಲ ನೀರು ಮಾತ್ರ ಅಲ್ಲ ಹಣ್ಣುಗಳ ರಸ, ಸೂಪ್ ಮೊದಲಾದ ದ್ರವ ಆಧಾರಿತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
ವ್ಯಾಯಾಮ:
ನಿಮ್ಮ ಮಗು ತುಸು ದೊಡ್ಡದಾಗಿದ್ದರೆ ನೀವು ಆ ಮಗುವನ್ನು ಎತ್ತುಕೊಂಡು ಹೊರಗಿನ ತಾಜಾ ಗಾಳಿಯಲ್ಲಿ ನಡೆಯುವುದು ಉತ್ತಮ. ತಾಯಿ ಮತ್ತು ಮಗು ಹೊರಗಿನ ಗಾಳಿಗೆ ತೆರೆದುಕೊಳ್ಳಬಹುದು ಎನ್ನುವ ಸಂದರ್ಭದಲ್ಲಿ ಮಾತ್ರ ಹೋಗಿ. ಇದರ ಜೊತೆಗೆ ಪ್ರಸವದ ಬಳಿಕ ಮಾಡಬಹುದಾದ ವರ್ಕೌಟ್ ಅಥವಾ ವ್ಯಾಯಾಮವನ್ನು ತಪ್ಪದೆ ಮಾಡಿ ಇದು ಕೂಡ ದೇಹದಲ್ಲಿನ ಅನಾಸಕ್ತಿ ನಿಃಶಕ್ತಿ ಎಲ್ಲವನ್ನು ದೂರಮಾಡುತ್ತದೆ.
ಜೀವಸತ್ವಗಳ ಸೇವನೆ:
ವಿಶೇಷವಾಗಿ ಹಾಲುಣಿಸುವ ತಾಯಂದಿರು ಹೆರಿಗೆಯ ಬಳಿಕ ಶಕ್ತಿಯನ್ನು ಪಡೆದುಕೊಳ್ಳಲು ದೇಹಕ್ಕೆ ಹೆಚ್ಚುವರಿ ಪೋಷಣೆ ನೀಡಬೇಕು ಅದಕ್ಕಾಗಿ ಕಬ್ಬಿಣ, ವಿಟಮಿನ್ ಬಿ12, ಅಯೋಡಿನ್ ಮೊದಲಾದ ಅಂಶಗಳು ಇರುವಂತಹ ಆಹಾರವನ್ನು ಸೇವಿಸಬೇಕು. ಆರೋಗ್ಯಕರವಾದ ಆಹಾರ ಸೇವನೆ ಮಾಡಿದರೆ ಮಗುವಿಗೆ ಸರಿಯಾದ ಎದೆ ಹಾಲು ಕೂಡ ಸಿಗುತ್ತದೆ ಜೊತೆಗೆ ತಾಯಂದಿರ ದೇಹದಲ್ಲಿ ಶಕ್ತಿಯು ಹೆಚ್ಚಾಗುತ್ತದೆ.
ಮನೆಯವರ ಸಹಾಯ:
ಇನ್ನು ಪ್ರಸವದ ನಂತರ ತಾಯಂದಿರು ಮನೆಯವರ ಅಥವಾ ಕುಟುಂಬದ ಸದಸ್ಯರ ಸಹಾಯ ಪಡೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ದೇಹಕ್ಕೆ ಸ್ವಲ್ಪವಾದರೂ ಆರಾಮ ಸಿಗುತ್ತದೆ.
ಒತ್ತಡದಿಂದ ದೂರ:
ನಮ್ಮ ದೇಹದಲ್ಲಿ ಆಯಾಸ ಹೆಚ್ಚಾದರೆ ಮನಸ್ಸಿನ ಒತ್ತಡವು ಉಂಟಾಗುತ್ತದೆ ಇಂತಹ ಸಮಯದಲ್ಲಿ ನೀವು ಧ್ಯಾನ, ಪ್ರಾಣಾಯಾಮ, ಯೋಗವನ್ನು ಮಾಡಿ ನಿಮ್ಮ ಒತ್ತಡವನ್ನು ನಿಯಂತ್ರಿಸಿಕೊಳ್ಳಬಹುದು. ಇನ್ನು ಹೆರಿಗೆಯಾದ ನಂತರ ದೇಹವನ್ನು ಅತಿಯಾಗಿ ದಂಡಿಸಬಾರದು. ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವ ಎನರ್ಜಿ ಎಲ್ಲಾ ಕಳೆದು ಹೋಗುತ್ತದೆ.
ಒಟ್ಟಿನಲ್ಲಿ ವೈದ್ಯರು ಹೇಳುವ ಪ್ರಕಾರ ಹೆರಿಗೆಯಾದ ಬಳಿಕ ತಾಯಿಯಾದವಳು ಸಮತೋಲಿತ ಆಹಾರ, ಸರಿಯಾದ ನಿದ್ರೆ ಹಾಗೂ ವಿಶ್ರಾಂತಿಯನ್ನು ತೆಗೆದುಕೊಂಡರೆ ದೇಹದಲ್ಲಿನ ಆಯಾಸವು ನಿವಾರಣೆಯಾಗುತ್ತದೆ ಹಾಗೂ ಇದು ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯನ್ನು ತೊಡೆದು ಹಾಕುತ್ತದೆ.



Click it and Unblock the Notifications