Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಎದೆ ಹಾಲಿನ ಉತ್ಪತ್ತಿ ಹೆಚ್ಚಿಸುವ 8 ಆಹಾರಗಳಿವು
ಎದೆ ಹಾಲು ಕಡಿಮೆಯಾದರೆ ತಾಯಿಗೆ ಚಿಂತೆಯಾಗುವುದು ಸ್ವಾಭಾವಿಕ, ಮಗು ತುಂಬಾ ಚಿಕ್ಕದಿದೆ, ಅದಕ್ಕೆ ಹೊರಗಿನ ಆಹಾರವೇನೂ ನೀಡಬಾರದು ಎಂದು ಮಕ್ಕಳ ತಜ್ಞರು ಸೂಚಿಸಿರುತ್ತಾರೆ. ಆದರೆ ಮಗುವಿಗೆ ಹೊಟ್ಟೆ ತುಂಬದಿದ್ದರೆ ಅಳುತ್ತಲೇ ಇರುತ್ತದೆ. ಇದರಿಂದ ಅದನ್ನು ಸಮಧಾನ ಪಡಿಸುವುದೇ ಕಷ್ಟವಾಗುವುದು.
ಮಗುವಿಗೆ ಎದೆ ಹಾಲು ಕಡಿಮೆಯಾದಾಗ, ವೈದ್ಯರು ಪರ್ಯಾಯವಾಗಿ ಫಾರ್ಮುಲಾ ಹಾಲನ್ನು ಕೊಡಲು ಸೂಚಿಸುತ್ತಾರೆ. ಆದರೆ ಪಾರ್ಮುಲಾ ಹಾಲಿನಲ್ಲಿ ತಾಯಿಯ ಎದೆ ಹಾಲಿನಲ್ಲಿರುವಷ್ಟು ಪೋಷಕಾಂಶಗಳು ಇರಲು ಸಾಧ್ಯವೇ? ಅಲ್ಲದೆ ಮಗುವಿಗೆ ಎದೆ ಹಾಲನ್ನು ಕುಡಿಸಿದಷ್ಟೂ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಕೆಲವರಿಗೆ ಹೆರಿಗೆಯಾದಾಗಲೇ ಎದೆ ಹಾಲು ತುಂಬಿ ಹರಿಯುತ್ತಿದ್ದರೆ ಇನ್ನು ಕೆಲವರಿಗೆ ಮಗು ಕುಡಿಯುತ್ತಾ-ಕುಡಿಯುತ್ತಾ ಹಾಲು ಹೆಚ್ಚಾಗುವುದು. ಆದ್ದರಿಂದ ಮಗುವಿಗೆ ಎದೆ ಹಾಲುಣಿಸುವಾಗ ಸಮಧಾನವಾಗಿ ಕುಡಿಸಿ, ಅದು ಬೇಗ-ಬೇಗ ಕುಡಿಯಲಿ ಎಂಬ ಅವರಸ ಬೇಡ. ಇಷ್ಟೆಲ್ಲಾ ಮಾಡಿಯೂ ಎದೆ ಹಾಲಿನ ಉತ್ಪನ್ನ ಕಡಿಮೆಯಾಗಿದ್ದರೆ ಈ ಆಹಾರಗಳನ್ನು ಸೇವಿಸಿ:

1. ಮೆಂತೆ:
ಎದೆ ಹಾಲು ಹೆಚ್ಚಿಸುವಲ್ಲಿ ಮೆಂತೆ ಗಂಜಿ, ಮೆಂತೆ ಸೊಪ್ಪು ಎರಡೂ ಒಳ್ಳೆಯದು. ಇವುಗಳಲ್ಲಿರುವ ಈಸ್ಟ್ರೋಜನ್‌ನಂಥ ಅಂಶವು ಎದೆ ಹಾಲು ಉತ್ಪತ್ತಿ ಮಾಡುವುದು. ಕೆಲ ಮಕ್ಕಳ ತಜ್ಞರು ಮೆಂತೆ ತಿನ್ನಲು ಸೂಚಿಸುವುದಿಲ್ಲ, ಕೆಲ ಮಕ್ಕಳಿಗೆ ತಾಯಿ ಮೆಂತೆ ತಿಂದಾಗ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು, ಇನ್ನು ಅಸ್ತಮಾ ಇರುವವರಿಗೆ ಮೆಂತೆ ಒಳ್ಳೆಯದಲ್ಲ. ಮೆಂತೆ ಸೊಪ್ಪಿನ ಪಲ್ಯ, ಮೆಂತೆ ಗಂಜಿ ಇವುಗಳನ್ನು ಮಾಡಿ ತಿನ್ನುವುದು ಬಾಣಂತಿಯರಿಗೆ ಒಳ್ಳೆಯದು.

2. ಓಟ್‌ಮೀಲ್
ತಾಯಿಯಲ್ಲಿ ಎದೆ ಹಾಲು ಉತ್ಪತ್ತಿಗೆ ಓಟ್ಸ್ ತುಂಬಾನೇ ಒಳ್ಳೆಯದು. ಹಾಲಿಗೆ ಓಟ್ಸ್ ಹಾಕಿ ತಿನ್ನಬಹುದು. ಒಂದು ಕಪ್ ಓಟ್ಸ್ ತಿಂದರೆ 2mg ಕಬ್ಬಿಣದಂಶವಿರುತ್ತದೆ. ಒಂದು ದಿನ ತಾಯಿಗೆ ಅವಶ್ಯಕವಿರುವ ಕಬ್ಬಿಣದಂಶದಲ್ಲಿ ಶೇ.20ರಷ್ಟು ಕಬ್ಬಿಣದಂಶ ಒಂದು ಕಪ್ ಓಟ್ಸ್‌ನಲ್ಲಿದೆ. ಎದೆ ಹಾಲು ಉತ್ಪತ್ತಿಗೆ ಸಹಕಾರಿಯಾಗುವುದು ಮಾತ್ರವಲ್ಲ ನವಜಾತ ಶಿಶುಗಳ ತೂಕ ಹೆಚ್ಚಲು ಸಹಕಾರಿ.

3. ತೆಳು ಮಾಂಸ, ಪೌಲ್ಟ್ರಿ
ಲ್ಯಾಂಬ್, ಪೋರ್ಕ್, ಪೌಲ್ಟ್ರಿ ಆಹಾರಗಳಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಇವುಗಳನ್ನು ತಿನ್ನುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು. ಮಾಂಸಾಹಾರ ಎಣ್ಣೆಯಲ್ಲಿ ಕರಿದು ತಿನ್ನಬೇಡಿ, ಬದಲಿಗೆ ಸೂಪ್ ಮಾಡಿ ತಿನ್ನಿ.

4. ಬೆಳ್ಳುಳ್ಳಿ
ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ನೀಡಲಾಗುವುದು, ತುಪ್ಪದಲ್ಲಿ ಕರಿದ ಬೆಳ್ಳುಳ್ಲಿ ತಿನ್ನಿ, ಇದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು. ಬೆಳ್ಳುಳ್ಳಿ ಅನ್ನ ಮಾಡಿ ತಿನ್ನಿ.

5. ಸೋಂಪು
ಎದೆ ಹಾಲು ಹೆಚ್ಚಿಸಲು ಸೋಂಪನ್ನು ಮನೆಮದ್ದಾಗಿ ಬಳಸುತ್ತಾರೆ. ಸೊಂಪಿನಲ್ಲಿ ಈಸ್ಟ್ರೋಜನ್‌ನಂಥ ಅಂಶವಿದ್ದು ಎದೆ ಹಾಲು ಉತ್ಪತ್ತಿಗೆ ಸಹಕಾರಿಯಾಗಿದೆ. ದಿನಾ ಒಂದರಿಂದ ಎರಡು ಚಮಚ ಸೋಂಪು ತಿನ್ನುವುದು ಒಳ್ಳೆಯದು.

6. ನುಗ್ಗೆಕಾಯಿ ಸೊಪ್ಪು
ಎದೆ ಹಾಲಿನ ಉತ್ಪತ್ತಿ ಹೆಚ್ಚು ಮಾಡುವಲ್ಲಿ ನುಗ್ಗೆಕಾಯಿ ಸೊಪ್ಪು ಕೂಡ ಸಹಕಾರಿ. ಇದರಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ಬಾಣಂತಿಯರಿಗೆ ಅವಶ್ಯಕವಿರುವ ಕಬ್ಬಿಣದಂಶ ದೊರೆಯುವುದು.

7. ಸಬ್ಬಸ್ಸಿಗೆ ಸೊಪ್ಪು
ಸಬ್ಬಸ್ಸಿಗೆ ಸೊಪ್ಪು ಕೂಡ ಬಾಣಂತಿಯರಿಗೆ ಒಳ್ಳೆಯ ಆಹಾರವಾಗಿದೆ, ಇದರ ಪಲ್ಯ, ಸಾರು ತಿನ್ನುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.

8. ಆಯುರ್ವೇದ ಮದ್ದು
ತೆಂಗಳ್ ಪೂಕಾಳದಿ ಎಂಬ ಲೇಹ್ಯ ಆಯುರ್ವೇದ ಅಂಗಡಿಗಳಲ್ಲಿ ಸಿಗುವುದು, ಅದನ್ನು ಕೊಂಡು ಸೇವಿಸುವುದರಿಂದಲೂ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.



Click it and Unblock the Notifications