Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
ಹೆರಿಗೆಯ ನಂತರ ಋತುಚಕ್ರ ಯಾವಾಗ ಪ್ರಾರಂಭವಾಗುತ್ತೆ? ಮುಟ್ಟಾಗದೇ ಇದ್ದರೂ ಗರ್ಭಧಾರಣೆಯಾಗುವುದೇ?
ಗರ್ಭಿಣಿಯಾದಾಗ ಹೆಣ್ಣಿನ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತೆ, ಅವಳ ದೇಹದ ಹಾರ್ಮೋನ್‌ಗಳು ಬದಲಾಗುತ್ತೆ, ಅವಳ ದೇಹ ದಪ್ಪಗಾಗಲಾರಂಭಿಸುತ್ತೆ. ಹೆರಿಗೆಯಾಗಿ ಕೆಲವು ಸಮಯ ಕಳೆದ ಮೇಲಷ್ಟೇ ದೇಹದ ಗಾತ್ರ ಸ್ವಲ್ಪ ತೆಳ್ಳಗಾಗುವುದು. ಕೆಲವರು ವ್ಯಾಯಾಮದ ಮೂಲಕ ಬೇಗನೆ ಸಹಜ ಸ್ಥಿತಿಗೆ ಮರಳುತ್ತಾರೆ, ಆದರೆ ಮಗುವಿನ ನೋಡಿಕೊಳ್ಳೋಕೆ ಯಾರಾದರೂ ಇದ್ದರೆ ಮಾತ್ರ ಅದೆಲ್ಲಾ ಸಾಧ್ಯವಾಗುತ್ತೆ, ಇಲ್ಲದಿದ್ದರೆ ನಮ್ಮ ದೇಹದ ಆರೈಕೆ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ.

ಇನ್ನು ಋತುಚಕ್ರ ಪ್ರಾರಂಭವಾಗಲು ಕೂಡ ಕೆಲ ಸಮಯ ತೆಗೆದುಕೊಳ್ಳುತ್ತದೆ. ಆದರೆ ಮಗುವಾದ ಮೇಲೆ ಎಷ್ಟು ಸಮಯದ ಬಳಿಕ ಋತುಚಕ್ರ ಪ್ರಾರಂಭವಾಗುತ್ತದೆ ಎಂದು ನೋಡುವುದಾದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ.
ಸಾಮಾನ್ಯವಾಗಿ ಎಷ್ಟು ಸಮಯದ ಬಳಿಕ ಋತುಚಕ್ರ ಪ್ರಾರಂಭವಾಗುವುದು, ಋತುಚಕ್ರ ಪ್ರಾರಂಭವಾಗದೇ ಇದ್ದರೂ ಮತ್ತೊಮ್ಮೆ ಗರ್ಭ ಧರಿಸುವ ಸಾಧ್ಯತೆ ಇದೆಯೇ ಎಂಬುವುದನ್ನು ನೋಡೋಣ ಬನ್ನಿ:

ಮಗುವಾದ ಬಳಿಕ ಋತುಚಕ್ರ ಯಾವಾಗ ಪ್ರಾರಂಭವಾಗುತ್ತದೆ?
ಮಗುವಿಗೆ ಎದೆ ಹಾಲುಣಿಸುವಾಗ ಬೇಗನೆ ಋತುಚಕ್ರ ಪ್ರಾರಂಭವಾಗಲ್ಲ. ಯಾರು ಮಗುವಿಗೆ ಆಗಾಗ ಎದೆಹಾಲುಣಿಸುತ್ತಾರೋ ಅವರಲ್ಲಿ ಅಂಡಾಣುಗಳ ಉತ್ಪತ್ತಿಯಾಗಲ್ಲ. ಹಾಗಾಗಿ ಋತುಚಕ್ರ ಪ್ರಾರಂಭವಾಗಲ್ಲ. ನೀವು ಮಗು ಹಾಲುಣಿಸುವ ರೀತಿಯಲ್ಲಿ ನಿಮ್ಮಲ್ಲಿ ಋತುಚಕ್ರ ಯಾವಾಗ ಪ್ರಾರಂಭವಾಗುತ್ತದೆ ಎಂದು ಅಂದಾಜು ಮಾಡಬಹುದು.

ಸಾಮಾನ್ಯವಾಗಿ ಯಾರಲ್ಲಿ ಯಾವಾಗ ಮತ್ತೆ ಋತುಚಕ್ರ ಪ್ರಾರಂಭವಾಗುವುದು
ಎದೆ ಹಾಲುಣಿಸದಿದ್ದರೆ: ಹೆರಿಗೆಯಾದ ಅನೇಕ ಕಾರಣಗಳಿಂದಾಗಿ ಮಗುವಿಗೆ ಎದೆ ಹಾಲುಣಿಸದಿದ್ದರೆ ಹೆರಿಗೆಯಗಿ 6ರಿಂದ 12 ವಾರಗಳು ಕಳೆದ ಮೇಲೆ ಋತುಚಕ್ರ ಮರಳಿಸಬಹುದು. ಕೆಲವರು ಹೆರಿಗೆಯಾಗಿ 24 ವಾರಗಳ ಬಳಿಕ ಋತುಚಕ್ರ ಪ್ರಾರಂಭವಾಗುವುದು.

ನೀವು ತುಂಬಾ ಹಾಲುಣಿಸದಿದ್ದರೆ
ನೀವು ಮಗುವಿಗೆ ಆಗಾಗ ಹಾಲುಣಿಸುತ್ತಿದ್ದರೆ ನಿಮಗೆ ಮಗುವಿಗೆ 3, 6 ಅಥವಾ ವರ್ಷದ ಬಳಿಕ ಮತ್ತೆ ಋತುಚಕ್ರ ಪ್ರಾರಂಭವಾಗುವುದು. ಕೆಲವರಿಗೆ ಹೆರಿಗೆಯಾಗಿ 18 ತಿಂಗಳಾದ ಬಳಿಕ ಋತುಚಕ್ರ ಮರಳುತ್ತದೆ.

ಮತ್ತೆ ಋತುಚಕ್ರ ಪ್ರಾರಂಭವಾದಾಗ ರಕ್ತಸ್ರಾವ ಅಧಿಕವಿರುವುದೇ?
ಇಲ್ಲ, ಮೊದಲ ಹೇಗೆ ಇರುತ್ತಿತ್ತೋ ಅಷ್ಟೇ ಇರುತ್ತೆ, ಏನಾದರೂ ರಕ್ತಸ್ರಾವ ಅಧಿಕವಿದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ನೀವು ಹೆರಿಗೆಯಾಗಿ 6 ತಿಂಗಳು ಕಳೆದ ಮೇಲೆ ಟ್ಯಾಂಫುನ್ ಬಳಸಬಹುದು, ಆದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಬಳಸಿ.

ಹೆರಿಗೆಯ ಬಳಿಕ ಋತುಚಕ್ರದಲ್ಲಿ ಕಾಡುವ ಸಮಸ್ಯೆ ಕಡಿಮೆಯಾಗುವುದೇ?
ಕೆಲವರಿಗೆ ಋತುಚಕ್ರದ ವೇಳೆ ಮೊದಲೆಲ್ಲಾ ತುಂಬಾ ಹೊಟ್ಟೆ ನೋವು, ಸುಸ್ತು, ವಾಂತಿ, ಬೇಧಿ ಈ ರೀತಿಯ ಸಮಸ್ಯೆಗಳಿದ್ದರೆ ಹೆರಿಗೆಯ ಬಳಿಕ ಕಡಿಮೆಯಾಗುವ ಸಾಧ್ಯತೆ ತುಂಬಾನೇ ಇದೆ. ಹೆಚ್ಚಿನವರಿಗೆ ಹೆರಿಗೆಯ ಬಳಿಕ ಮುಟ್ಟಾದಾಗ ಮುಟ್ಟಿನ ನೋವು ಇರುವುದಿಲ್ಲ.

ಋತುಚಕ್ರ ಪ್ರಾರಂಭವಾಗದೇ ಇದ್ದರೂ ಗರ್ಭ ಧರಿಸುವುದೇ?
ಹೌದು ಸಾಧ್ಯತೆ ಇದೆ. ಏಕೆಂದರೆ ಅಂಡಾಣುಗಳು ಋತುಚಕ್ರದ ತಿಂಗಳಿನಲ್ಲಿ ಉತ್ಪತ್ತಿಯಾಗುತ್ತೆ, ಆಗ ಪತಿ-ಪತ್ನಿ ಒಂದಾದರೆ ಮತ್ತೆ ಗರ್ಭಧರಿಸುವ ಸಾಧ್ಯತೆ ಇದೆ. ಆದ್ದರಿಂದ ಮಗುವಾದ ಮೇಲೆ ಮತ್ತೊಂದು ಮಗು ಬೇಡ ಎಂದಾದರೆ ಸುರಕ್ಷತೆ ಕ್ರಮ ಅನುಸರಿಸಿ.



Click it and Unblock the Notifications
