Just In
- 4 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 1 hr ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 5 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- 14 hrs ago ದಿನ ಭವಿಷ್ಯ ಏಪ್ರಿಲ್ 25, 2024: ಗುರುವಾರ ಈ 4 ರಾಶಿಯವರಿಗೆ ತುಂಬಾನೇ ಶುಭ ದಿನ
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಗುವಿಗೆ ಎದೆಹಾಲು ನಿಲ್ಲಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?
ತಾಯಿಯಾಗುವುದು ಎಂದರೆ ಅದೊಂದು ಸುಂದರ ಅನುಭೂತಿಯಾಗಿದೆ. ಪ್ರತಿಯೊಂದು ಸ್ತ್ರೀಯೂ ತನ್ನ ಜೀವನದಲ್ಲಿ ಬಯಸುವ ಬಹು ದೊಡ್ಡ ಹಂಬಲವೆಂದರೆ ಮಗುವನ್ನು ಪಡೆಯುವುದಾಗಿದೆ. ತನ್ನ ರಕ್ತ ಮಾಂಸವನ್ನು ಹಂಚಿಕೊಂಡು ಭೂಮಿಗೆ ಬರುವ ಕಂದಮ್ಮನನ್ನು ಎತ್ತಿ ಆಡಿಸುವುದೇ ಆಕೆಗೆ ಕೋಟಿಗಿಂತಲೂ ಮಿಗಿಲಾಗಿರುವ ಸಂಪತ್ತಾಗಿದೆ. ಮಗುವಿಗೆ ಸ್ನಾನ ಮಾಡಿಸಿ ಆಹಾರ ನೀಡಿ ಜೋಗುಳ ಹಾಡಿ ನಿದ್ದೆ ಮಾಡಿಸುವುದೂ ಕೂಡ ತಾಯಿಯ ಇಷ್ಟದ ಕೆಲಸವಾಗಿದೆ. ಮಗುವಿಗೆ ಮೊದಲ ಆದ್ಯತೆಯನ್ನು ನೀಡಿ ನಂತರವಷ್ಟೇ ಆಕೆ ಕುಟುಂಬದ ಇತರ ಸದಸ್ಯರತ್ತ ಗಮನ ಹರಿಸುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಯ್ತನವೆನ್ನುವುದು ಹೆಣ್ಣಿಗೆ ಬಹುದೊಡ್ಡ ಆಸ್ತಿಯಾಗಿದೆ.
ಮಗುವಿನ ಸರ್ವತೋಮುಖ ಬೆಳವಣಿಗೆಯತ್ತ ತಾಯಿ ಗಮನ ಹರಿಸುತ್ತಾಳೆ. ತನ್ನ ಮಗುವಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ಖಾತ್ರಿಪಡಿಸಿಕೊಂಡೇ ಅದನ್ನು ಮಗುವಿಗೆ ತಿನ್ನಿಸುತ್ತಾಳೆ. ಅದರಲ್ಲೂ ಅತಿ ಮುಖ್ಯವಾಗಿರುವಂತಹದ್ದು ತನ್ನ ಎದೆಹಾಲನ್ನು ಮಗುವಿಗೆ ಕುಡಿಸುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಾಯಂದಿರುವ ತಮ್ಮ ಮಗುವಿಗೆ ಪ್ರೊಟೀನ್ ವಿಟಮಿನ್ಗಳ ಆಗರವಾಗಿರುವ ಎದೆಹಾಲನ್ನು ನೀಡುತ್ತಿರುವುದು ಸಂತಸಕರ ವಿಚಾರವಾಗಿದೆ.
ವೈದ್ಯರು ನೀಡುವ ಪ್ರಮುಖ ಸಲಹೆಗಳಲ್ಲಿ ಇದೂ ಒಂದಾಗಿರುವುದರಿಂದ ಎಷ್ಟೇ ಆಧುನಿಕ ಬ್ಯುಸಿ ತಾಯಿಯಾಗಿದ್ದರೂ ಮಗುವಿಗೆ ಒಂದಿಲ್ಲೊಂದು ರೀತಿಯಿಂದ ತನ್ನ ಎದೆಹಾಲು ದೊರೆಯುವಂತೆ ಮಾಡುತ್ತಾರೆ. ವೈದ್ಯರು ತಿಳಿಸುವಂತೆ ಆರು ತಿಂಗಳುಗಳ ಕಾಲ ಕಟ್ಟುನಿಟ್ಟಾಗಿ ಮಗುವಿಗೆ ಎದೆಹಾಲನ್ನು ನೀಡಬೇಕು ಎಂದಾಗಿದೆ. ಅದರಂತೆಯೇ ಹೆಚ್ಚಿನ ತಾಯಂದಿರು ಮಗುವಿಗೆ ಈ ಉತ್ತಮ ಪೋಷಕಾಂಶವನ್ನು ನೀಡುತ್ತಿದ್ದಾರೆ.
ಎದೆಹಾಲುಣಿಸುವ ಮಹಿಳೆಯರು, ಆದಷ್ಟು ತರಕಾರಿ ಜ್ಯೂಸ್ ಕುಡಿಯಿರಿ
ಆದರೆ ನಿರ್ದಿಷ್ಟ ಸಮಯದಲ್ಲಿ ಎದೆಹಾಲನ್ನು ಮಗುವಿಗೆ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ. ಎದೆಹಾಲು ನೀಡುವುದಕ್ಕೆ ಆರಂಭಿಸುವ ಹಂತ ಮತ್ತು ಎದೆಹಾಲು ನಿಲ್ಲಿಸುವ ಅಂತ್ಯ ಸಮಯದಲ್ಲೂ ತಾಯಿಯಾದವಳು ಕೆಲವೊಂದು ಮಾನಸಿಕ ದೈಹಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇದು ಅಷ್ಟೊಂದು ಪರಿಣಾಮಕಾರಿ ಸಮಸ್ಯೆ ಅಲ್ಲದಿದ್ದರೂ ನೀವು ಈ ರೀತಿ ಉಂಟಾದಾಗ ಗಂಭೀರರಾಗಬೇಡಿ ಅಂತೆಯೇ ಅದಕ್ಕೆ ಬೇಕಾದ ಉಪಶಮನಗಳನ್ನು ತೆಗೆದುಕೊಳ್ಳಿ ಎಂಬ ಕಿವಿಮಾತುಗಳನ್ನು ಸಲಹೆಗಳನ್ನು ಇಂದಿಲ್ಲಿ ನೀಡುತ್ತಿದ್ದೇವೆ. ಬನ್ನಿ ಆ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳೋಣ....
ಸ್ತನಗಳು ಸೂಕ್ಷ್ಮವಾಗಿರುತ್ತವೆ
ಮೊಲೆಗಳು ಸೂಕ್ಷ್ಮವಾಗಿರುವ ಭಾಗವಾಗಿದ್ದು ಮೊದಲಿಗೆ ಹಾಲುಣಿಸುವ ಸಮಯದಲ್ಲಿ ಮಗು ನೀಡುವ ಕೆಲವೊಂದು ಕೀಟಲೆಗಳನ್ನು ತಾಯಿ ಸಹಿಸಿಕೊಳ್ಳಬೇಕಾಗುತ್ತದೆ. ಪುಟ್ಟ ಕಂದಮ್ಮ ತನ್ನ ಪುಟ್ಟ ಚೂಪಾದ ಹಲ್ಲುಗಳಿಂದ ಸ್ತನಗಳನ್ನು ಕಚ್ಚುವ ಸಾಧ್ಯತೆ ಕೂಡ ಇರುತ್ತದೆ. ಆ ಸಂದರ್ಭದಲ್ಲಿ ನವಿರಾದ ನೋವನ್ನು ತಾಯಿ ಅನುಭವಿಸುತ್ತಾಳೆ.ಎದೆಹಾಲು ನೀಡುವುದನ್ನು ನಿಲ್ಲಿಸಿದ ನಂತರ ಎಲ್ಲವೂ ಸರಿಯಾಗುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳುವುದಕ್ಕಿಂತ ಮುಂಚೆ ನೀವು ಎದುರಿಸಬೇಕಾಗಿರುವ ಕೆಲವೊಂದು ಸವಾಲುಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಕೆಲವೊಮ್ಮೆ ಇದು ಸೂಕ್ಷ್ಮಗೊಳ್ಳಬಹುದು ಇಲ್ಲವೇ ನಿಸ್ತೇಜಗೊಳ್ಳಬಹುದು.
ಸ್ತನ ಛೇದನ
ಸ್ತನ್ಯಪಾನವನ್ನು ಆರಂಭಿಸುವ ಸಮಯದಲ್ಲಿ ಹೆಚ್ಚಿನ ತಾಯಂದಿರು ಸ್ತನಛೇನದಂತಹ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಸ್ತನಗಳ ನಾಳಗಳಲ್ಲಿ ಹಾಲಿನ ಧಾರಣ ಶಕ್ತಿಯ ಸಂಯೋಜನೆಯಿಂದ ಉರಿಯೂತ ಕೂಡ ಉಂಟಾಗ ಬಹುದು. ಹಾಲುಣಿಸುವಿಕೆಯನ್ನು ನೀವು ನಿಲ್ಲಿಸಿದಾಗ ನಿಮ್ಮ ಸ್ತನ ನಿಸ್ತೇಜಗೊಳ್ಳಬಹುದು. ಇದು ಸ್ತನಛೇದನಕ್ಕೆ ಕಾರಣವಾಗಬಹುದು. ನೋವುಳ್ಳ ಸ್ತನ, ಜ್ವರ ಶೀತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಹಾರ್ಮೋನ್ ಬದಲಾವಣೆಗಳು
ಸ್ತನ್ಯಪಾನವನ್ನು ನಿಲ್ಲಿಸಿದಾಗ ಹೆಚ್ಚಿನ ತಾಯಂದಿರು ಹಾರ್ಮೋನು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನೋವಿರುವ ಮತ್ತು ಊದಿಕೊಂಡಿರುವ ಸ್ತನ ಇದರಲ್ಲಿ ಒಂದಾಗಿದೆ. ಇನ್ನು ನಿಮ್ಮ ಭಾವನೆಗಳಲ್ಲಿ ಬದಲಾವಣೆ ಉಂಟಾಗುವುದು ಕೂಡ ಇದರಿಂದಾಗಿದೆ.
ನಿಮ್ಮ ಎದೆಹಾಲನ್ನು ಮಗುವು ನೆಚ್ಚಿಕೊಂಡಿರುತ್ತದೆ
ನೀವು ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದರೂ ಕೂಡ ಮಗುವಿಗೆ ನಿಮ್ಮ ಹಾಲು ಬೇಕು ಎಂದೆನಿಸುತ್ತದೆ. ಅದಕ್ಕೆ ನಿಮ್ಮ ಎದೆಹಾಲು ಸೇವನೆಯೇ ಹೆಚ್ಚು ಆರೋಗ್ಯದಾಯಕ ಎಂದನಿಸುತ್ತದೆ. ಆದರೆ ಇದು ನಿಮಗೆ ಸೂಕ್ತವೆನ್ನಿಸುವುದಿಲ್ಲ. ಈ ಸಮಯದಲ್ಲಿ ನಿಮಗೆ ಮಗುವಿನ ಮೇಲೆ ಕೋಪ ಬರುತ್ತದೆ.
ಸ್ತನದ ಜೋತುಬೀಳುವಿಕೆ
ಗರ್ಭಾವಸ್ಥೆ ಮತ್ತು ಹಾಲುಣಿಸುವ ಸಮಯದಲ್ಲಿ ಸ್ತನವು ಜೋತುಬೀಳುತ್ತದೆ. ಹಾಲುಣಿಸುವ ಸಮಯದಲ್ಲಿ ಅಸ್ಥಿರಜ್ಜುಗಳು ಮತ್ತು ಸಂಯೋಜಕ ಅಂಶಗಳು ಹೊರಬರುತ್ತದೆ ಆದರೆ ಇವುಗಳು ಪುನಃ ದೇಹಕ್ಕೆ ಹಿಂತಿರುಗುವುದಿಲ್ಲ. ಹಾಲಿನೊಂದಿಗೆ ಭರ್ತಿಗೊಂಡ ಸ್ತನವನ್ನು ನೀವು ಹೊಂದಿದಾಗ ಈ ಅಂಶ ನಿಮ್ಮ ಗಮನಕ್ಕೆ ಬರುವುದಿಲ್ಲ. ಒಮ್ಮೆ ಹಾಲುಣಿಸುವುದನ್ನು ನೀವು ನಿಲ್ಲಿಸಿದ ನಂತರ, ಹಿಂದಿನಂತೆ ನಿಮ್ಮ ಸ್ತನವಿಲ್ಲ ಎಂಬುದನ್ನು ನೀವು ಗಮನಿಸುತ್ತೀರಿ.
ಹಾಲು ಒಣಗಲು ಸಮಯ ಬೇಕು
ನೀವು ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದೊಡನೆ ಸ್ತನದಲ್ಲಿ ಹಾಲು ಕೂಡಲೇ ಒಣಗುತ್ತದೆ ಎಂಬುದಾಗಿ ನೀವು ಭಾವಿಸಿದರೆ ಇದು ಹಾಗೆ ಸಂಭವಿಸುವುದಿಲ್ಲ. ಹಾಲು ಒಣಗಲು ಕೆಲವೊಮ್ಮೆ ವಾರಗಳು ತಿಂಗಳುಗಳೂ ಬೇಕಾಗಿ ಬರಬಹುದು.
ಹಾಲಿನ ಹಠಾತ್ ಸೋರಿಕೆ
ನೀವು ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ನಿಮ್ಮ ಸ್ತನದಲ್ಲಿ ಹಾಲಿನ ಸೋರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ನಿಮಗೆ ಮುಜುಗರವನ್ನುಂಟು ಮಾಡಬಹುದು.
ಹಾಲುಣಿಸುವು ವಿಶೇಷ ಅನುಭೂತಿಯ ಕಳೆದುಕೊಳ್ಳುವಿಕೆ
ಹಾಲುಣಿಸುವ ಸಮಯದಲ್ಲಿ ಒಮ್ಮೊಮ್ಮೆ ತಾಯಂದಿರಿಗೆ ಇದನ್ನು ನಿಲ್ಲಿಸಿದರೆ ಸಾಕು ಎಂಬುದು ಮನದಲ್ಲಿರುತ್ತದೆ. ಆದರೆ ಒಮ್ಮೆ ಹಾಲುಣಿಸುವುದನ್ನು ನಿಲ್ಲಿಸಿದ ನಂತರ ತಾಯಿಗೆ ಅಯ್ಯೋ, ನನ್ನ ಮಗುವಿನೊಂದಿಗಿನ ವಿಶೇಷ ಬಾಂಧವ್ಯವನ್ನು ನಾನು ಕಳೆದುಕೊಂಡೆನಲ್ಲ ಎಂಬ ಬೇಸರ ಕಾಡಬಹುದು.
ನಿಮಗೆ ಹೆಚ್ಚು ವಿಶ್ರಾಂತಿ ದೊರಕುತ್ತದೆ
ಹಾಲುಣಿಸುವ ಸಮಯದಲ್ಲಿ ನೀವು ಮಧ್ಯರಾತ್ರಿ ಮಗು ಅತ್ತಾಗ ಆಗಾಗ ಏಳಬೇಕಾಗಿ ಬಂದಿರುತ್ತದೆ. ಈ ಸಮಯದಲ್ಲಿ ನಿಮ್ಮ ನಿದ್ದೆಗೆ ಭಂಗವಾಗುತ್ತದೆ. ಆದರೆ ಹಾಲುಣಿಸುವುದನ್ನು ನಿಲ್ಲಿಸಿದ ನಂತರ ಸುಖವಾದ ನಿದ್ದೆ ನಿಮಗೆ ಬಂದು ಬೆಳಗ್ಗೆ ನೀವು ಫ್ರೆಶ್ ಆಗಿ ಏಳುತ್ತೀರಿ.
ತೂಕದಲ್ಲಿ ಏರು ಪೇರು
ಹಾಲುಣಿಸುವಿಕೆಯು ನಿಮಗೆ ಹೆಚ್ಚಿನ ಸಂತಸವನ್ನು ಜೊತೆಗೆ ಹಚ್ಚು ಹಸಿವಾಗುವಿಕೆಯನ್ನು ಉಂಟುಮಾಡಬಹುದು. ಆದರೆ ಈ ಹೆಚ್ಚುವರಿ ಆಹಾರ ಸೇವನೆಯು ನಿಮ್ಮ ತೂಕದಲ್ಲಿ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ತಾಯಂದಿರುವ ಹಾಲುಣಿಸುವ ಸಮಯದಲ್ಲೇ ಹೆಚ್ಚಿನ ತೂಕವನ್ನು ಕಳೆದುಕೊಂಡಿರುತ್ತಾರೆ. ಆದರೆ ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ಈ ರೀತಿಯಾಗುವುದಿಲ್ಲ. ಹಾಲುಣಿಸುವ ಸಮಯದಲ್ಲಿ ನೀವು ಅನುಸರಿಸುವ ಅದೇ ಆಹಾರ ಪದ್ಧತಿಯನ್ನು ಹಾಲುಣಿಸುವುದನ್ನು ನಿಲ್ಲಿಸಿದ ಸಮಯದಲ್ಲಿ ಅನುಸರಿಸಿದರೂ ಕೂಡ ನಿಮ್ಮ ತೂಕ ಏರಿಕೆಯಾಗುವ ಸಾಧ್ಯತೆ ಇರುತ್ತದೆ.
ಭಾವನೆಗಳ ಏರಿಳಿತ
ಹಾಲುಣಿಸುವುದನ್ನು ನೀವು ನಿಲ್ಲಿಸಿದ ಒಡನೆ ಎಲ್ಲಾ ಭಾವನೆಗಳು ನಿಮ್ಮನ್ನು ಮುತ್ತಿಕೊಳ್ಳಬಹುದು, ಇದಕ್ಕೆ ಕಾರಣ ನಿಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನು ವೈಪರೀತ್ಯವಾಗಿರಬಹುದು. ನಿಮ್ಮ ಮತ್ತು ಮಗುವಿನ ಸ್ವಾತಂತ್ರ್ಯದಿಂದ ನಿಮಗೆ ಆನಂದವುಂಟಾಗಬಹುದು. ಆದರೆ ಒಮ್ಮೊಮ್ಮೆ ಹತಾಶೆ, ಬೇಸರ ಮತ್ತು ಒತ್ತಡಕ್ಕೆ ನೀವು ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ.