Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಸ್ತನದಲ್ಲಿ ನೋವಿರುವಾಗ ಮಗುವಿಗೆ ಹೀಗೆ ಹಾಲುಣಿಸಿ
ಸ್ತನ್ಯಪಾನ ಕೆಲವೊಮ್ಮೆ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಅದು ಯಾವಾಗೆಂದರೆ ನಮ್ಮ ಸ್ತನದಲ್ಲಿ ನೋವಿರುವಾಗ. ಹೆಣ್ಣು ಗರ್ಭಿಣಿಯಾಗಿರುವಾಗ ಅಥವಾ ಆಕೆ ಸ್ತನ್ಯಪಾನ ಮಾಡುತ್ತಿರುವಾಗ ಈ ತೊಂದರೆ ಆಕೆಯಲ್ಲಿ ಕಂಡುಬರುತ್ತದೆ. ಎದೆಹಾಲೂಣಿಸುವಿಕೆಯ ಮೊದಲ ಎರಡು ವಾರದಲ್ಲಿ ಮೊಲೆಗಳ ನೋವನ್ನು ನೀವು ಅನುಭವಿಸಬಹುದು.
ನಿಮ್ಮ ಮಗುವು ನಿಮ್ಮ ಸ್ತನವನ್ನು ಹೀರುವಾಗ ಅಥವಾ ಅದರ ಬಾಯಲ್ಲಿಟ್ಟು ಚೀಪುವಾಗ ನಿಮಗೆ ನೋವಿನ ಅನುಭವವಾಗುತ್ತದೆ. ಮೊದಲ ವಾರದಲ್ಲಿ ಎದೆಹಾಲೂಣಿಸುವಾಗ ಈ ತೊಂದರೆ ಕಾಡುತ್ತಲೇ ಇರುತ್ತದೆ ಇದಕ್ಕೆ ಮುಖ್ಯ ಕಾರಣ ತಾಯಿ ಎದೆಹಾಲ ಕುಡಿಸುವಾಗ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ಮಗುವಿಗೆ ನಿಮ್ಮ ನಿಪ್ಪಲ್ ಸರಿಯಾಗಿ ಎಟುಕದಿರುವುದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಗು ಹಾಲು ಕುಡಿಯಲು ನಿರಾಕರಿಸಲು ಕಾರಣಗಳೇನು?
ಮಗುವಿಗೆ ಹಾಲು ಪೂರೈಕೆಯಾಗುವಂತಹ ಭಂಗಿಯಲ್ಲಿ ಕುಳಿತು ಎದೆಹಾಲೂಣಿಸುವುದನ್ನು ನೀವು ಪ್ರಯತ್ನಿಸಬೇಕು. ಮೊಲೆ ತೊಟ್ಟುಗಳ ನೋವು ಕೆಲವು ಸೋಂಕಿಗೂ ಕಾರಣವಾಗಬಹುದು. ತೊಟ್ಟಿನಲ್ಲಿ ರಕ್ತ ಸೋರುವುದು, ಬಿರುಕುಗಳು ಮತ್ತು ತುರಿಕೆ ಹೊಸದಾಗಿ ಮೊಲೆಹಾಲು ಉಣಿಸುವ ತಾಯಂದಿರಿಗೆ ಸಾಮಾನ್ಯವಾಗಿರುತ್ತದೆ.

ನಿಮ್ಮ ಈ ಸಮಸ್ಯೆಗೆ ಪರಿಹಾರವಾಗಿ ನಮ್ಮ ಈ ಲೇಖನ. ಹೌದು ನಿಮ್ಮ ಮಗುವಿಗೆ ನೀವು ಯಾವ ಭಂಗಿಯಲ್ಲಿ ಹಾಲು ನೀಡಬೇಕು ಮತ್ತು ಮಗುವಿಗೆ ಹಾಲು ಪೂರೈಕೆಯಾಗುವಂತೆ ಯಾವ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಬ್ರಾ ಧರಿಸದಿರಿ:
ತುಂಬಾ ಬಿಗಿಯಾಗಿರುವ ಬ್ರಾಗಳು ನಿಮ್ಮ ಸ್ತನಗಳ ಮೇಲೆ ಒತ್ತಡವನ್ನು ಹಾಕಿ ತ್ವಚೆಗೆ ಉಸಿರಾಡಲು ಅನುವು ಮಾಡಿಕೊಡುವುದಿಲ್ಲ. ಒಳಭಾಗದಲ್ಲಿ ಹೆಚ್ಚು ಪ್ರಮಾಣದ ತೇವ ಉಂಟಾದಾಗ ಸಮಸ್ಯೆ ಉಲ್ಭಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಆದಷ್ಟು ಬ್ರಾ ಧರಿಸದಿರುವುದು ಸೂಕ್ತ ಪರಿಹಾರವಾಗಿದೆ. ನಿಮ್ಮ ಮೊಲೆ ತೊಟ್ಟುಗಳಿಗೆ ಹೆಚ್ಚು ಗಾಳಿಯಾಡಿದಂತೆ ನೋವು ಉಲ್ಭಣಗೊಳ್ಳುವುದು ಕಡಿಮೆಯಾಗುತ್ತದೆ.
ಆಗಾಗ್ಗೆ ಹಾಲುಣಿಸುವುದು:
ಪ್ರತಿ ಎರಡು ಗಂಟೆಗಳಿಗೊಮ್ಮೆ ಹಾಲುಣಿಸುವುದು ನಿಮಗೆ ಹೆಚ್ಚು ನೋವನ್ನು ಉಂಟುಮಾಡುವುದಿಲ್ಲ. ಹಾಲಣಿಸುವಿಕೆಯ ನಡುವೆ ನಿಮ್ಮ ಮಗುವಿಗೆ ಹಸಿವಾಗುವಂತೆ ಇದು ಮಾಡುವುದಿಲ್ಲ ಹಾಗೂ ಮಗು ತೀವ್ರವಾಗಿ ನಿಮ್ಮ ಸ್ತನವನ್ನು ಚೀಪುವಾಗ ನಿಮಗೆ ನೋವುಂಟಾಗುವುದಿಲ್ಲ. ನೋವಿರುವ ಸ್ತನದಿಂದ ಹಾಲುಣಿಸುವುದಕ್ಕಿಂತ ನೋವಿಲ್ಲದ ಸ್ತನದಿಂದ ನಿಮ್ಮ ಮಗುವಿಗೆ ಹಾಲು ನೀಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೈ ದುರ್ವಾಸನೆ-ಹೆರಿಗೆಯ ನಂತರ ಕಾಡುವ ಸಮಸ್ಯೆ
ನಿಮ್ಮ ಸ್ತನಗಳನ್ನು ಹಿಸುಕುವುದು:
ನಿಮ್ಮ ಕೈಯಿಂದ ಎರಡು ನಿಮಿಷ ಸ್ತನವನ್ನು ಹಿಸುಕಿ ಹೀಗೆ ಮಾಡುವುದು ಸ್ತನ ವಲಯವನ್ನು ಮೃದುವಾಗಿಸುತ್ತದೆ ಮತ್ತು ಮಗುವಿಗೆ ತೊಟ್ಟು ಚೀಪಲು ಸಹಕಾರಿಯಾಗುತ್ತದೆ. ಮಗು ಚೀಪುತ್ತಿರುವಾಗ ಹಾಲು ಸರಾಗವಾಗಿ ಪೂರೈಕೆಯಾಗುತ್ತದೆ ಮತ್ತು ಮಗು ರಭಸವಾಗಿ ಚೀಪುವುದಿಲ್ಲ. ಹಾಲುಣಿಸುವ ಮೊದಲು ನಿಮ್ಮ ಸ್ತನವನ್ನು ಹಿಸುಕುವುದು ಹಾಲಿನ ಸರಾಗತೆಯನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ಮಗುವಿಗೆ ಹಾಲಿನ ಪೂರೈಕೆಯನ್ನು ಹೆಚ್ಚು ಮಾಡುತ್ತದೆ. ಇದು ನಿಮ್ಮ ನೋವಿರುವ ಸ್ತನ ತೊಟ್ಟಿಗೆ ಉತ್ತಮ ಪರಿಹಾರವಾಗಿದೆ.
ನಿಮ್ಮ ಮೊಲೆ ತೊಟ್ಟು ಮಗುವಿಗೆ ಸಿಗಲಿ:
ಸರಿಯಾಗಿ ಚೀಪುವಂತಾಗಲು, ನಿಮ್ಮ ಮಗುವಿಗೆ ಸ್ತನ ತೊಟ್ಟು ಸಿಗುವಂತೆ ಮಾಡಿ, ಇದರಿಂದ ನಿಮ್ಮ ಮಗು ತನ್ನ ತುಟಿಯನ್ನು ದೊಡ್ಡದಾಗಿ ತೆರೆಯುತ್ತದೆ. ನಿಮ್ಮ ಮೊಲೆ ತೊಟ್ಟು ಮಗುವಿನ ತುಟಿಗೆ ಸರಿಯಾಗಿ ಸಿಗುವಂತಿರಲಿ. ಇದರಿಂದ ನಿಮ್ಮ ಮಗು ಚೀಪುವಾಗ, ಆಕೆಯ/ ಆತನ ಕೆನ್ನೆ ಮತ್ತು ಕೆಳ ತುಟಿ ವರ್ಣವಲಯವನ್ನು ಮೊದಲು ಸ್ಪರ್ಶಿಸುತ್ತದೆ ಮತ್ತು ಮೇಲ್ದುಟಿ ವರ್ಣವಲಯದ ಹೆಚ್ಚಿನದನ್ನು ಆಕೆಯ/ಆತನ ಬಾಯಿ ಸ್ಪರ್ಶಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅವಳಿ ಮಕ್ಕಳ ಕುರಿತ ರಹಸ್ಯಗಳು ನಿಮಗೆ ತಿಳಿದಿದೆಯೇ?
ಬೆಚ್ಚಗಿನ ಟೀ ಬ್ಯಾಗ್ಸ್:
ನೀವು ಹಾಲುಣಿಸುವ ಮುನ್ನ ನೋವಿರುವ ಮೊಲೆ ತೊಟ್ಟಿಗೆ ಟೀ ಬ್ಯಾಗ್‌ಗಳನ್ನು ಇರಿಸಿ. ಇದು ನಿಮ್ಮ ನೋವಿರುವ ಮೊಲೆ ತೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.



Click it and Unblock the Notifications
