Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೆರಿಗೆಯ ನಂತರ ಕೆಲಸಕ್ಕೆ ಹೊರಟು ನಿಂತಾಗ
ಗರ್ಭಾವಸ್ಥೆ, ಹೆರಿಗೆ, ಬಾಣಂತನ ಎಲ್ಲ ಮುಗಿಸಿದ ನಂತರ ಒಂದು ದೀರ್ಘ ಅವಧಿ ಕಳೆದಿರುತ್ತದೆ. ಇಷ್ಟು ದೀರ್ಘ ಅವಧಿಯ ನಂತರ ಕೆಲಸಕ್ಕೆ ಹೋಗುವುದು ಹೊಸದಾಗಿ ತಾಯಿಯಾದವಳಲ್ಲಿ ಮಿಶ್ರ ಭಾವನೆಗಳನ್ನು ಹುಟ್ಟುಹಾಕುತ್ತದೆ. ಕೆಲಸಕ್ಕೆ ಹೊರಟು ನಿಲ್ಲುವುದು ಅವಳಿಗೆ ಅಷ್ಟು ಸುಲಭವಲ್ಲ. ಉದಾಹರಣೆಗೆ ತನ್ನ ಪುಟ್ಟ ಕಂದನನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಅಪರಾಧಿ ಮನೋಭಾವ ಕಾಡಬಹುದು ಅಥವ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಸ್ವಲ್ಪ ಹೊತ್ತಾದರೂ ಬಿಡುಗಡೆ ಸಿಕ್ಕಿತಲ್ಲ ಎಂದೂ ಕೂಡ ಅನ್ನಿಸಬಹುದು. ಈ ಎರಡೂ ವೈರುಧ್ಯದ ಭಾವನೆಗಳು ಮನಸ್ಸಿನಲ್ಲಿ ಸುಳಿಯಲು ಸಾಧ್ಯವಿದೆ.
ಹೆರಿಗೆ ಬಾಣಂತನ ಮುಗಿಸಿದ ನಂತರ ಹೀಗೆ ಕೆಲಸಕ್ಕೆ ಹೊರಟು ನಿಂತಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ನಿಮ್ಮನ್ನೇ ನೀವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ನಿಮ್ಮ ಆರೋಗ್ಯ 9 ರಿಂದ 6ರವರೆಗೆ ಕೆಲಸ ಮಾಡಲು ಅನುಮತಿ ನೀಡುತ್ತದೆಯೇ? ಎರಡನೆಯದಾಗಿ ನೀವು ಮಗುವನ್ನು ಕೂಡ ನೋಡಿಕೊಳ್ಳಬೇಕಾಗಿರುವುದರಿಂದ ಹೆಚ್ಚು ಫ್ಲೆಕ್ಸಿಬಲ್ ಆದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸುವಿರೋ? ಎಲ್ಲಕ್ಕಿಂತ ಕಠಿಣ ಪ್ರಶ್ನೆಯೆಂದರೆ ನಿಮ್ಮ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ?

ಬೋಲ್ಡ್ ಸ್ಕೈ ಕೆಲಸಕ್ಕೆ ಹೋಗಲಿಚ್ಛಿಸುವ ಹೊಸ ಅಮ್ಮಂದಿರಿ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡೇ ಕೆಲವು ಸಲಹೆಗಳನ್ನು ಅವರ ಮುಂದಿಡುತ್ತಿದೆ.
ಮೊದಲಿಗೆ ಫ್ಲಕ್ಸಿಬಲ್ ಆದ ಕೆಲಸವನ್ನೇ ಮಾಡಿ: ಬಾಣಂತನ ಮುಗಿಸಿ ಕೆಲಸಕ್ಕೆ ಹೋದಾಗ ನಿಮ್ಮ ಬಾಸ್ ಹತ್ತಿರ ಕೆಲಸ ಮಾಡಲು ಫ್ಲೆಕ್ಸಿಬಲ್ ಟೈಂ ನೀಡುವಂತೆ ಕೇಳಿಕೊಳ್ಳಿ. ನಿಮ್ಮ ಕೆಲಸವನ್ನು ನಿಗದಿತ ಅವಧಿಯಲ್ಲಿ ಮುಗಿಸಿ ಮಗುವನ್ನು ನೋಡಿಕೊಳ್ಳಲು ಅನುವಾಗುವಂತೆ ವೇಳಾಪಟ್ಟಿ ರೂಪಿಸಿಕೊಳ್ಳಿ.
ಉತ್ತಮ ಚೈಲ್ಡ್ ಕೇರ್ ಹುಡುಕಿ: ನಿಮ್ಮ ಮಗುವಿನ ಸುರಕ್ಷತೆಗಾಗಿ ಉತ್ತಮ ಚೈಲ್ಡ್ ಕೇರ್ ಹುಡುಕಿಕೊಳ್ಳಿ. ನೀವು ಫುಲ್ ಟೈಂ ಕೆಲಸ ಮಾಡಲು ನಿರ್ಧರಿಸಿದಲ್ಲಿ ಚೈಲ್ಡ್ ಕೇರ್ ಸೆಂಟರ್ ಗಳ ಬಗ್ಗೆ ಹೆಚ್ಚು ಎಚ್ಚರದಿಂದಿರಬೇಕು.
ಅನಿರೀಕ್ಷಿತಗಳಿಗೆ ಸದಾ ಸನ್ನದ್ಧರಾಗಿರಿ: ಒಂದು ವೇಳೆ ಮಗುವಿಗೆ ಹುಷಾರಿಲ್ಲದಿದ್ದರೆ ಅಥವ ಚೈಲ್ಡ್ ಕೇರ್ ಸೆಂಟರ್ ಅಕಸ್ಮಾತ್ ಮುಚ್ಚಿದರೆ ಇಂತಹ ಸಂದರ್ಭಗಳನ್ನು ಎದುರಿಸಲು ಸದಾ ಸಿದ್ಧರಾಗಿರಿ. ನಿಮ್ಮ ತಾಯಿ ಅಥವ ಅತ್ತೆಯ ಸಹಾಯವನ್ನು ಇಂತಹ ಸಂದರ್ಭಗಳಲ್ಲಿ ಪಡೆದುಕೊಳ್ಳಿ. ಅನಿರೀಕ್ಷಿತಗಳು ಎದುರಾದ ಸಂದರ್ಭದಲ್ಲಿ ಅವುಗಳಿಗೆ ಪರಿಹಾರ ಹುಡುಕಲು ಹೆಣಗುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಇವುಗಳ ಬಗ್ಗೆ ಮೊದಲೇ ಎಚ್ಚರದಿಂದಿರಿ.
ಸಮಯವನ್ನು ಸೂಕ್ತವಾಗಿ ಬಳಸಿ: ಸಮಯದ ಸದ್ಬಳಕೆ ತಾಯಂದಿರಿಗೆ ದೊಡ್ಡ ಸವಾಲು. ಕಛೇರಿ ಮತ್ತು ಮನೆಯ ಕೆಲಸ ಎರಡನ್ನೂ ನಿರ್ವಹಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಯೋಜಿತ ರೀತಿಯಲ್ಲಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ. ಕಛೇರಿಯಲ್ಲಿ ತಡವಾಗದಂತೆ ಎಚ್ಚರ ವಹಿಸಿ. ಇಲ್ಲದೆ ಹೋದರೆ ನೀವು ಮನೆ ತಲುಪುವ ವೇಳೆಗೆ ಮಗು ನಿಮಗಾಗಿ ಅತ್ತು ಅತ್ತು ಸುಸ್ತಾಗಿರುತ್ತದೆ.
ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ: ಮನೆ ಮತ್ತು ಕಛೇರಿ ಎರಡನ್ನೂ ನಿಮಗೆ ನಿರ್ವಹಿಸಲು ಕಷ್ಟವೆನಿಸಿದರೆ ಕೆಲಸದಿಂದ ಕೆಲ ಕಾಲ ದೂರವುಳಿಯಿರಿ. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೆ ಅದನ್ನು ಬಳಸಿಕೊಳ್ಳಿ. ಇಲ್ಲದಿದ್ದರೆ ಕೆಲವು ಕಾಲ ಕೆಲಸದಿಂದ ದೂರವಿರಿ. ನಿಮ್ಮನ್ನು ನೀವು ಹೆಚ್ಚು ಒತ್ತಡಕ್ಕೆ ಒಳಗಾಗಿಸಿಕೊಂಡು ದಣಿದರೆ ಮಗುವನ್ನು ನೋಡಿಕೊಳ್ಳುವುದು ಮತ್ತು ಕೆಲಸ ಮಾಡುವುದು ಎರಡೂ ಕೂಡ ಕಷ್ಟವಾಗುತ್ತದೆ.
ಇವು ಬಾಣಂತನ ಮುಗಿಸಿ ಕೆಲಸಕ್ಕೆ ಹೋಗಬೇಕೆಂದುಕೊಳ್ಳುವ ತಾಯಂದಿರು ಗಮನಿಸಬೇಕಾದ ಕೆಲವು ಅಂಶಗಳು. ಇವುಗಳನ್ನು ಪಾಲಿಸಿ ನಿಮ್ಮ ಕಛೇರಿ ಮತ್ತು ಮನೆಯ ನಡುವೆ ಟೆನ್ಷನ್ ಇರದಂತೆ ನೋಡಿಕೊಳ್ಳಿ.



Click it and Unblock the Notifications