Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹೆರಿಗೆಯ ನಂತರ ಆಹಾರಕ್ರಮ ಹೀಗಿರಲಿ
ಗರ್ಭಿಣಿಯಾಗಿದ್ದಾಗ ಮಾತ್ರವಲ್ಲ ಹೆರಿಗೆಯಾಗಿ ಮಗು ಸ್ವಲ್ಪ ದೊಡ್ಡದಾಗುವವರೆಗೆ ಡಯಟ್ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಇಲ್ಲದಿದ್ದರೆ ಆರೋಗ್ಯ ಹಾಳಾಗುವುದು.
ಅದರಲ್ಲೂ ಚೊಚ್ಚಲ ಹೆರಿಗೆಯಾಗಿದ್ದರೆ ಕೆಲವರು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಹೊರ ಬರಲು ಆಹಾರಕ್ರಮ ಕೂಡ ಅಗತ್ಯ. ಮಗು ಹಾಲು ಕುಡಿಯುವಾಗ ಸಾಕಷ್ಟು ಕ್ಯಾಲೋರಿ ನಷ್ಟವಾಗುತ್ತದೆ. ಆದ್ದರಿಂದ ದಪ್ಪಗಾಗಬಹುದು ಎಂದು ಕೊಬ್ಬಿನಂಶದ ಆಹಾರಗಳನ್ನು ದೂರವಿಡುವ ಪ್ರಯತ್ನ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯ ಹಾಳಾಗುವುದು.
ಹೆರಿಗೆಯ ನಂತರ ಆಹಾರ ಪದ್ಧತಿ ಹೇಗಿರಬೇಕೆಂದು ಇಲ್ಲಿ ಹೇಳಲಾಗಿದೆ ನೋಡಿ:

ಕೊಬ್ಬಿನಂಶದ ಆಹಾರಗಳು
ಮೊಟ್ಟೆ, ಹಾಲು, ಮೀನು ಈ ರೀತಿ ಕೊಬ್ಬಿನಂಶದ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಎದೆ ಹಾಲು ಕೊಡುವಾಗ ಸಾಕಷ್ಟು ಕ್ಯಾಲೋರಿ ನಿಮ್ಮ ದೇಹಕ್ಕೆ ನಷ್ಟವಾಗುತ್ತದೆ. ಇದನ್ನು ಆಹಾರ ಪದ್ಧತಿಯ ಮೂಲಕ ನಿಮ್ಮ ದೇಹಕ್ಕೆ ಭರಿಸಬೇಕು. ಇಲ್ಲದಿದ್ದರೆ ನಿಶ್ಯಕ್ತಿ ಉಂಟಾಗುವುದು.
ನೀರಿನಂಶ
ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಕಂಡು ಬರುವ ಸಾಮಾನ್ಯ ಸಮಸ್ಯೆಗಳಲ್ಲೊಂದು ಮಲಬದ್ಧತೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ಫ್ರೂಟ್ ಜ್ಯೂಸ್ ಕುಡಿಯಿರಿ. ಇದು ತ್ವಚೆಗೂ ಒಳ್ಳೆಯದು.
ಸ್ವಲ್ಪ ಪ್ರಮಾಣದಲ್ಲಿ ಆಗಾಗ ತಿನ್ನಿ
ಮಗು ಆಗಾಗ ಹಾಲು ಕುಡಿಯುವಾಗ ನೀವು 3 ಹೊತ್ತು ಮಾತ್ರ ತಿಂದರೆ ದೇಹಕ್ಕೆ ಪೋಷಕಾಂಶ ಸಾಕಾಗುವುದಿಲ್ಲ. ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು 5-6 ಬಾರಿ ತಿನ್ನಿ. ತಾಯಿ ಆರೋಗ್ಯವಾಗಿದ್ದರೆ ಮಗುವಿನ ಆರೋಗ್ಯ ಕೂಡ ಹೆಚ್ಚುವುದು.
ಕಬ್ಬಿಣದಂಶ
ಹೆರಿಗೆಯ ಸಮಯದಲ್ಲಿ ಸಾಕಷ್ಟು ಕಬ್ಬಿಣದಂಶ ದೇಹದಿಂದ ನಷ್ಟವಾಗುತ್ತದೆ. ಈ ನಷ್ಟವನ್ನು ತುಂಬಲು ಕಬ್ಬಿಣದಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು.
ನಾರಿನಂಶ ಮತ್ತು ಪ್ರೊಟೀನ್
ನಾರಿನಂಶವಿರುವ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಿ. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಪ್ರೊಟೀನ್ ಇರುವ ಆಹಾರವನ್ನು ದಿನನಿತ್ಯ ತಿನ್ನಲು ಮರೆಯಬೇಡಿ.



Click it and Unblock the Notifications
