Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎದೆ ಹಾಲನ್ನು ಹೆಚ್ಚಿಸುವ ಸೂಪರ್ ಫುಡ್ಸ್
ಮಗುವಿಗೆ ಕೊಡಲು ಎದೆ ಹಾಲಿಗೆ ಸಮನಾದ ಪೌಷ್ಠಿಕ ಆಹಾರ ಮತ್ತೊಂದಿಲ್ಲ. ಎದೆ ಹಾಲು ಕುಡಿಸದಿದ್ದರೆ ಅಥವಾ ಬೇಗನೆ ನಿಲ್ಲಿಸಿದರೆ ಅಂತಹ ಮಕ್ಕಳಿಗೆ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಾ ಇರುತ್ತವೆ. ಕೆಲ ಮಹಿಳೆಯರಿಗೆ ಹೆರಿಗೆಯ ನಂತರ ಎದೆ ಹಾಲು ಸರಿಯಾಗಿ ಉತ್ಪತ್ತಿಯಾಗುವುದಿಲ್ಲ, ಈ ರೀತಿ ಉಂಟಾದರೆ ಮಗುವಿಗೆ ಪೋಷಕಾಂಶದ ಕೊರತೆ ಉಂಟಾಗುತ್ತದೆ.
ಅದರಲ್ಲೂ ಮಗುವಿಗೆ 3 ತಿಂಗಳಾಗುವವರೆಗೆ ಬೇರೆ ಆಹಾರ ಕೊಡುವ ಬದಲು ಬರೀ ಎದೆ ಹಾಲು ಕುಡಿಸುವುದು ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎದೆ ಹಾಲಿನಲ್ಲಿ ಕೊರತೆ ಉಂಟಾದರೆ ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿ ಹಸುವಿನ ಹಾಲು ಕೊಡಲಾರಂಭಿಸುತ್ತಾರೆ. ಹಸುವಿನ ಹಾಲು ಮಗುವಿಗೆ ಅಲರ್ಜಿ ತರಬಹುದು.
ಆದ್ದರಿಂದ ಎದೆ ಹಾಲಿನ ಕೊರತೆಯಿದೆ ಎಂದು ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಡಿ. ಅದರ ಬದಲು ತಾಯಿಯು ತನ್ನ ಆಹಾರದ ಜೊತೆ ಈ ಕೆಳಗಿನ ವಸ್ತುಗಳನ್ನು ತಿಂದರೆ ಎದೆ ಹಾಲು ಹೆಚ್ಚಾಗುವುದು.

ಮೆಂತೆ:
ಮೆಂತೆಯಲ್ಲಿ ಕಬ್ಬಿಣದಂಶ, ವಿಟಮಿನ್ ಗಳು, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಅಧಿಕವಿರುತ್ತದೆ. ಇದನ್ನು ಎದೆ ಹಾಲು ಹೆಚ್ಚಿಸುವ ಮನೆ ಮದ್ದಾಗಿ ಉಪಯೋಗಿಸಲಾಗುವುದು. ಮೆಂತೆ ಅನ್ನ ಮಾಡಿ ಸೇವಿಸಿ, ಮೆಂತೆ ತುಂಬಾ ತಿನ್ನಬಾರದು, ತುಂಬಾ ತಿಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಇದನ್ನು ಹಸಿಯಾಗಿ ತಿನ್ನದೆ ಆಹಾರಗಳ ಜೊತೆ ಹಾಕಿ ಅಥವಾ ಮೆಂತೆ ಅನ್ನ ಮಾಡಿ ತಿನ್ನಿ.

ತುಳಸಿ:
ತುಳಸಿಯನ್ನು ಮನೆಮದ್ದಿನಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಎದೆ ಹಾಲನ್ನು ಹೆಚ್ಚಿಸಲು ಕೂಡ ಬಳಸಲಾಗುವುದು. ಇದರಲ್ಲಿ ವಿಟಮಿನ್ ಕೆ ಅಂಶ ಇರುವುದರಿಂದ ಎದೆ ಹಾಲು ಹೆಚ್ಚಿಸಲು ಸಹಾಯಕವಾಗಿದೆ. ಇದನ್ನು ಹಸಿ ಅಥವಾ ಸೂಪ್ ಜೊತೆ ಅಥವಾ ಜೇನಿನ ಜೊತೆ ಮಿಶ್ರ ಮಾಡಿ ಸೇವಿಸಿ.

ಹಾಗಲಕಾಯಿ:
ಹಾಗಲಕಾಯಿ, ಸೋರೆಕಾಯಿ ಈ ತರಕಾರಿಗಳು ಎದೆ ಹಾಲನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ತಾಯಿಯ ಎದೆ ಹಾಲಿನ ಮುಖಾಂತರ ಮಗುವಿಗೆ ದೊರೆತರೆ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಾಲಿನ ಉತ್ಪನ್ನಗಳು:
ತುಪ್ಪ, ಬೆಣ್ಣೆ, ಹಾಲು ಇವುಗಳನ್ನು ಎದೆ ಹಾಲನ್ನು ಹೆಚ್ಚಿಸುತ್ತದೆ. ಆದರೆ ಈ ಆಹಾರಗಳನ್ನು ತಾಯಿ ತಿಂದರೆ ಎದೆ ಹಾಲನ್ನು ಕುಡಿದಾಗ ಮಗುವಿನಲ್ಲಿ ಅಲರ್ಜಿ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಮಗುವಿಗೆ ಅಲರ್ಜಿ ಆಗದಿದ್ದರೆ ಮಾತ್ರ ಈ ಆಹಾರ ಸೇವಿಸಿ.

ಬೆಳ್ಳುಳ್ಳಿ:
ಬೆಳ್ಳುಳ್ಳಿ ಎದೆ ಹಾಲು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಹಸಿಯಾಗಿ ತಿನ್ನದೆ ಸಾರಿನಲ್ಲಿ, ಉಪ್ಪಿನ ಕಾಯಿಯಲ್ಲಿ ಹಾಕಿ ಸೇವಿಸಿ.

ಕೆಂಪು ತರಕಾರಿ:
ಕೆಂಪು ತರಕಾರಿಯಲ್ಲಿ ಅಧಿಕ ನಾರಿನಂಶವಿರುತ್ತದೆ. ಪಾಲಕ್, ಬೀನ್ಸ್, ಸಿಹಿಗೆಣಸು ಇವುಗಳು ಎದೆ ಹಾಲನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೀಟ್ ರೂಟ್ ಜ್ಯೂಸ್ ಕುಡಿದರೆ ಎದೆ ಹಾಲು ಹೆಚ್ಚಾಗುವುದು.

ಚೀಸ್:
ಗರ್ಭಿಣಿಯಾಗಿರುವಾಗ ಹಾಗೂ ಹೆರಿಗೆಯ ನಂತರ ಚೀಸ್ ಸೇವಿಸುವುದರಿಂದ ದೇಹಕ್ಕೆ ಉತ್ತಮವಾದ ಪೋಷಕಾಂಶ, ವಿಟಮಿನ್ ಮತ್ತು ಪ್ರೊಟೀನ್ ದೊರೆಯುವುದು. ಈ ಸಮಯದಲ್ಲಿ ಚೀಸ್ ಸೇವಿಸಿದರೆ ಹೆರಿಗೆಯ ನಂತರ ಎದೆ ಹಾಲು ಉತ್ಪತ್ತಿಯನ್ನು ಹೆಚ್ಚು ಮಾಡಲು ಸಹಕಾರಿಯಾಗಿದೆ.



Click it and Unblock the Notifications
