Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎದೆಹಾಲುಣಿಸುತ್ತಿದ್ದರೆ ಯಾವ ಆಹಾರಗಳನ್ನು ತಿನ್ನದಿದ್ದರೆ ಒಳ್ಳೆಯದು?
ಸ್ತನ್ಯಪಾನ ಅಥವಾ ಮಗುವಿಗೆ ಎದೆ ಹಾಲು ಉಣಿಸುವುದು ಪ್ರತಿಯೊಬ್ಬ ತಾಯಿಗೂ ಆಹ್ಲಾದಕರ ಅನುಭವವನ್ನು ನೀಡುತ್ತದೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಮೊಲೆ ಹಾಲು ಚೀಪುವಾಗ ಪ್ರತಿಯೊಬ್ಬ ತಾಯಿಗೂ ಇನ್ನಿಲ್ಲದಷ್ಟು ಖುಷಿ ಆಗುತ್ತಿದೆ. ಸ್ತನ ಮಾಡುವಾಗ ಕೆಲವರಿಗೆ ಸಾಕಷ್ಟು ನೋವು ಕೂಡ ಆಗುತ್ತದೆ ಈ ನೋವನ್ನು ಕೂಡ ಸಹಿಸುವ ಶಕ್ತಿ ಆಕೆಗೆ ಇರುತ್ತದೆ. ಆದರೆ ನೀವು ಮಗುವಿಗೆ ಎದೆ ಹಾಲು ಕೊಡುತ್ತಿರುವ ಸಮಯದಲ್ಲಿ ಅಂದರೆ ಸುಮಾರು ಮಗುವಿಗೆ ಎರಡು ವರ್ಷ ವಯಸ್ಸಿನ ಒಳಗೆ ಯಾವೆಲ್ಲ ಆಹಾರಗಳನ್ನು ಸೇವಿಸಿದರೆ ಅದು ಮಗುವಿನ ಆರೋಗ್ಯಕ್ಕೆ ತೊಂದರೆ ಮಾಡಬಹುದು ಗೊತ್ತೇ?
ತಾಯಿಯಾದವಳು ಸಮತೋಲಿತ ಆಹಾರವನ್ನು ಸೇವಿಸಬೇಕು. ಮಗುವಿನ ಮೆದುಳಿನ ಬೆಳವಣಿಗೆಗೂ ಸಹಾಯಕವಾಗುವ ರೀತಿಯಲ್ಲಿ ಆಹಾರದ ಕ್ರಮ ಅಳವಡಿಸಿಕೊಳ್ಳಬೇಕು. ಆದರೆ ಈಗ ನಾವು ಹೇಳುವ ಈ ಐದು ಆಹಾರ ಪದಾರ್ಥಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸೇವಿಸಬೇಡಿ.

ಹೆಚ್ಚು ಮರ್ಕ್ಯೂರಿ ಅಂಶ ಇರುವ ಮೀನು:
ಮೀನಿನಲ್ಲಿ ಡಿ ಎಚ್ ಎ ಹಾಗೂ ಎಪಿಎಯನ್ನು ಎರಡು ರೀತಿಯ ಒಮೇಗಾ 3 ಆಮ್ಲದ ಅಂಶ ಇರುತ್ತದೆ. ಆದರೆ ಕೆಲವು ಮೀನುಗಳಲ್ಲಿ ಮರ್ಕ್ಯುರಿ ಅಂಶ ಅಧಿಕವಾಗಿರುತ್ತದೆ ಇದು ವಿಷಕಾರಿ ಲೋಹವಾಗಿದ್ದು, ತಾಯಂದಿರು ಸೇವಿಸಿದರೆ ಮಕ್ಕಳ ಮೇಲೆ ಸೂಕ್ಷ್ಮವಾಗಿ ಪರಿಣಾಮ ಬೀರಬಹುದು. ಮರ್ಕ್ಯೂರಿ ಅಧಿಕವಾಗಿರುವ ಮೀನುಗಳನ್ನು ಸೇವಿಸಿದಾಗ ಅದು ನೇರವಾಗಿ ಶಿಶುವಿನ ನರಮಂಡಲದ ಕೇಂದ್ರ ಭಾಗದಲ್ಲಿ ಪರಿಣಾಮ ಬೀರುತ್ತದೆ ಇದರಿಂದ ಮಗು ಅನಾರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತದೆ. ಎಲ್ಲವನ್ನು ಜ್ಞಾಪಿಸಿಕೊಳ್ಳುವುದು ಚೆನ್ನಾಗಿ ಮಾತನಾಡುವುದು ಹೊಸ ಕೌಶಲ್ಯ ರೂಢಿಸಿಕೊಳ್ಳುವುದು ಇವೆಲ್ಲ ವಿಷಯಗಳಿಂದಲೂ ನಿಮ್ಮ ಮಗು ಹಿಂದೆ ಇರುತ್ತದೆ. ಹಾಗಾಗಿ ಇಂತಹ ಮೀನನ್ನು ಆದಷ್ಟು ಸೇವಿಸುವುದನ್ನು ತಪ್ಪಿಸಿ.
ಮರ್ಕ್ಯೂರಿ ಅಧಿಕವಾಗಿರುವ ಮೀನುಗಳು
ತುನಾ
ಶಾರ್ಕ್
ಕತ್ತಿ ಮೀನಿನಲ್ಲಿ ಮರ್ಕ್ಯುರಿ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಇದನ್ನು ಅಧಿಕವಾಗಿ ತಿನ್ನುವ ಬದಲು ವಾರಕ್ಕೆ 225 ರಿಂದ 340 ಗ್ರಾಂನಷ್ಟು ಮಾತ್ರ ಈ ಮೀನುಗಳನ್ನು ಸೇವಿಸಬಹುದು.
ಗಿಡಮೂಲಿಕೆಗಳೂ ಅತಿಯಾಗಿ ಬೇಡ:
ಈ ಸಮಯದಲ್ಲಿ ಜೀರಿಗೆ ಅಥವಾ ತುಳಸಿ ಮೊದಲಾದ ಗಿಡಮೂಲಿಕೆಗಳನ್ನು ಅಥವಾ ಕೆಲವು ಮಸಾಲೆ ಪದಾರ್ಥಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ ಗಿಡಮೂಲಿಕೆ ವಿಚಾರಕ್ಕೆ ಬಂದಾಗ ಚಹಾ ಅಥವಾ ಕೆಫಿನ್ ಸೇವನೆ ಒಳ್ಳೆಯದಲ್ಲ. ಯುನೈಟೆಡ್ ಸ್ಟೇಟ್ ನ ಆಹಾರ ಮತ್ತು ಔಷಧ ಆಡಳಿತ ನಿಯಂತ್ರಣ ಸಂಸ್ಥೆ ಹೇಳಿರುವ ಪ್ರಕಾರ ಅತಿಯಾಗಿ ಗಿಡಮೂಲಿಕೆಗಳನ್ನು ಸೇವಿಸುವುದು ಕೂಡ ಅದರಲ್ಲಿ ಇರುವ ಭಾರವಾದ ಲೋಹಗಳಿಂದಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮದ್ಯ ಸೇವನೆ:
ಹಾಲುಣಿಸುವ ಸಮಯದಲ್ಲಿ ತಾಯಂದಿರು ಆಲ್ಕೋಹಾಲ್ ಸೇವನೆ ಮಾಡದೆ ಇರುವುದು ಒಳ್ಳೆಯದು ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಅದೇನು ತಿಳಿಸಿದೆ. ಅಥವಾ ನೀವು ಬಹಳ ಜಾಗರೂತೆಯಿಂದ ಇದ್ದು ಯಾವಾಗಲೂ ಅಪರೂಪಕ್ಕೆ ಒಮ್ಮೆ ಸ್ವಲ್ಪ ಮಧ್ಯಪಾನ ಮಾಡಬಹುದು. ಆದರೆ ಮದ್ಯಪಾನ ಮಾಡಿದ ಕನಿಷ್ಠ ಒಂದು ಗಂಟೆಯವರೆಗೆ ಮಗುವಿಗೆ ಎದೆ ಹಾಲನ್ನು ನೀಡಬಾರದು. ಆಲ್ಕೋಹಾಲ್ ನಮ್ಮ ದೇಹದಲ್ಲಿ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಹಾಗೆ ಇರುತ್ತದೆ ಹಾಗಾಗಿ ನೀವು ಮಿತವಾಗಿ ಯಾವಾಗಲಾದರೂ ಒಮ್ಮೆ ಸೇವಿಸುವುದಾದರೂ ಮಗುವಿಗೆ ಒಂದರಿಂದ ಎರಡು ಗಂಟೆ ಹಾಲುಣಿಸದೆ ಇರುವ ರೀತಿಯಲ್ಲಿ ಮ್ಯಾನೇಜ್ ಮಾಡಬೇಕು. ಹೆಚ್ಚಿನ ಆಲ್ಕೋಹಾಲ್ ಸೇವನೆಯಿಂದ ಎದೆ ಹಾಲು ಕನಿಷ್ಠ 20% ಆದರೂ ಕಡಿಮೆಯಾಗುತ್ತದೆ ಎಂಬುದನ್ನು ನೆನಪಿಡಿ.
ಕೆಫೀನ್ ಸೇವನೆ:
ಕೆಫಿನ್ ಅಂಶ ಅಧಿಕವಾಗಿರುವ ಕಾಫಿ, ಸೋಡ, ಚಹಾ, ಚಾಕ್ಲೇಟ್ ಮೊದಲಾದವುಗಳು ನಿಮ್ಮ ಎದೆ ಹಾಲಿನ ಕೊರತೆಗೂ ಕೂಡ ಕಾರಣವಾಗಬಹುದು. ನೀವು ಕೆಫೆನ್ ಸೇವನೆ ಮಾಡಿದರೆ ಅದು ನೇರವಾಗಿ ನಿಮ್ಮ ಮಗುವಿನ ಹೊಟ್ಟೆಗೆ ಸೇರುತ್ತದೆ. ಇದು ಮಗುವಿನ ಜೀರ್ಣಕ್ರಿಯೆಗೂ ಸಮಸ್ಯೆ ಉಂಟುಮಾಡುತ್ತದೆ ನಿದ್ರೆ ಮಾಡುವುದಕ್ಕೆ ಮಕ್ಕಳು ಕಿರಿಕಿರಿ ಪಟ್ಟುಕೊಳ್ಳಬಹುದು ಜೊತೆಗೆ ಆರೋಗ್ಯವು ಹದಗೆಡಬಹುದು. ಎದೆ ಹಾಲು ಉಣಿಸುವ ತಾಯಂದಿರು ದಿನಕ್ಕೆ 300 ಗ್ರಾಂ ಗಿಂತಲೂ ಹೆಚ್ಚಿನ ಕೆಫಿನ್ ಸೇವನೆ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.
ವಿಟಮಿನ್ ಹಾಗೂ ಗಿಡಮೂಲಿಕೆಗಳನ್ನು ಒಳಗೊಂಡಿರುವ ಎನರ್ಜಿ ಡ್ರಿಂಕ್ ಗಳನ್ನು ಆಗಾಗ ಸೇವನೆ ಮಾಡಬಹುದು ಆದರೆ ಹಾಲುಣಿಸುವ ತಾಯಂದಿರು ಇದನ್ನು ಸೇವನೆ ಮಾಡುವುದಕ್ಕೂ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಸಂಸ್ಕರಿಸಿದ ಆಹಾರ ಸೇವನೆ
ಸ್ತನ್ಯಪಾನ ಮಾಡಿಸುವಾಗ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಆದರೆ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು ಯಾಕೆಂದರೆ ಇದರಲ್ಲಿ ಹೆಚ್ಚಿನ ಕ್ಯಾಲರಿ, ಅನಾರೋಗ್ಯಕರ ಕೊಬ್ಬು ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಇವುಗಳ ಸೇವನೆ ತಾಯಿಗೆ ಮಾತ್ರವಲ್ಲದೆ ಮಗುವಿನ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಇವುಗಳನ್ನು ಹೊರತುಪಡಿಸಿ ಅತಿಯಾದ ವಾಸನೆ ಇರುವಂತಹ ಈರುಳ್ಳಿ, ಬೆಳ್ಳುಳ್ಳಿ ಮೊದಲಾದ ಮಸಾಲೆ ಪದಾರ್ಥಗಳನ್ನು ಕೂಡ ಸೇವಿಸಬಾರದು ಇದು ಶಿಶುವಿನ ಬಾಯಿಗೆ ಬರುವ ಹಾಲಿನ ಮೂಲಕ ದೇಹ ಸೇರುತ್ತದೆ ಅಥವಾ ತಾಯಿಯ ಎದೆ ಹಾಲು ಕೂಡ ವಾಸನೆ ಆಗುವುದರಿಂದ ಮಗುವಿಗೆ ಕುಡಿಯಲು ಸಾಧ್ಯವಾಗದೆ ಇರಬಹುದು. ಇದರ ಜೊತೆಗೆ ಹಾಲುಣಿಸುವ ತಾಯಂದಿರು ಹಸುವಿನ ಹಾಲು, ಸೋಯಾ ಉತ್ಪನ್ನಗಳನ್ನು ಕೂಡ ಸೇವಿಸದೆ ಇದ್ದರೆ ಉತ್ತಮ. ಕನಿಷ್ಠ ಆರರಿಂದ ಒಂದು ವರ್ಷದವರೆಗೆ ನೀವು ಸೇವಿಸುವ ಆಹಾರದ ಬಗ್ಗೆ ಗಮನವಹಿಸಿದರೆ ನಿಮ್ಮ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರಲು ಸಾಧ್ಯ.



Click it and Unblock the Notifications