Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯಾಗ ಬಯಸುತ್ತಿದ್ದೀರಾ? ಅಂಡೋತ್ಪತ್ತಿಯ ಈ 9 ಲಕ್ಷಣ ಕಂಡು ಬಂದರೆ ಅದುವೇ ಫಲವತ್ತತೆಯ ಸಮಯ
ಗರ್ಭಧಾರಣೆ ಎಂಬುವುದು ಕೆಲವು ಹೆಣ್ಮಕ್ಕಳ ಬಹುದೊಡ್ಡ ಕನಸಾಗಿರುತ್ತದೆ. ಮದುವೆಯಾಗಿ ವರ್ಷಗಳು ಕಳೆದರೂ ಒಂದು ಮಗುವಾಗಿಲ್ಲ ಎಂಬ ಸಂಕಟ ಮಕ್ಕಳಾಗದಿರುವ ಹೆಣ್ಮಕ್ಕಳಲ್ಲಿ ಇರುತ್ತದೆ. ಗರ್ಭಧಾರಣೆಗೆ ಚಿಕಿತ್ಸೆ ಪಡೆಯಲು ಹೋದಾಗ ವೈದ್ಯರು ನಿಮಗೆ ಅಂಡೋತ್ಪತ್ತಿ ಸಮಯದ ಬಗ್ಗೆ
ವಿವರಿಸಿ ಹೇಳುತ್ತಾರೆ. ಹೌದು ಗರ್ಭಧಾರಣೆಗೆ ಅಂಡೋತ್ಪತ್ತಿ ಸಮಯವೆಂಬುವುದು ಬಹುಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಮಿಲನಕ್ರಿಯೆವಾದಾಗ ಮಾತ್ರ ವೀರ್ಯಾಣು ಅಂಡಾಣು ಜೊತೆ ಸೇರಿ ಭ್ರೂಣರೂಪುಗೊಳ್ಳುವುದು, ಬೇರೆ ಯಾವ ಸಮಯದಲ್ಲೂ ಗರ್ಭಧಾರಣೆಯಾಗುವುದಿಲ್ಲ.

ಅಂಡೋತ್ಪತ್ತಿ ಸಮಯದಲ್ಲಿ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬರುತ್ತದೆ, ಅವುಗಳನ್ನು ಗಮನಿಸಿದರೆ ಅದು ಅಂಡೋತ್ಪತ್ತಿಯ ಸಮಯ ಎಂದು ತಿಳಿಯಬಹುದು:
1. ದೇಹದ ಉಷ್ಣಾಂಶದಲ್ಲಿ ಬದಲಾವಣೆಯಾಗುತ್ತದೆ
ಅಂಡೋತ್ಪತ್ತಿ ಸಮಯದಲ್ಲಿ ದೇಹದ ಉಷ್ಣಾಂಶ ಸ್ವಲ್ಪ ಹೆಚ್ಚಾಗುತ್ತದೆ, ನೀವು ಈ ಸಮಯದಲ್ಲಿ ಥರ್ಮೋಮೀಟರ್ ಮೂಲಕ ಚೆಕ್ ಮಾಡುತ್ತಿದ್ದಾರೆ ಫಲವತ್ತತೆಯ ದಿನ ಯಾವುದು ಎಂಬುವುದು ತಿಳಿಯುತ್ತದೆ.
2. ಗರ್ಭಕಂಠದ ಬಿಳುಪಿನಲ್ಲಿ ವ್ಯತ್ಯಾಸವಾಗುವುದು
ಈ ಸಮಯದಲ್ಲಿ ಆ ಭಾಗದಲ್ಲಿರುವ ನೋಳೆಯಾದ ಅಂಶ ಮತ್ತಷ್ಟು ಜಾರುವಂತಾಗುವಂತಾಗುವುದು. ವೀರ್ಯಾಣುಗಳು ಸುಲಭವಾಗಿ ಜಾರಿ ಅಂಡಾಣು ತಲುಪುವಂತೆ ದೇಹದಲ್ಲಿ ಬದಲಾವಣೆಯಾಗಿರುತ್ತದೆ.
3. ಕಿಬ್ಬೊಟ್ಟೆಯಲ್ಲಿ ಸೆಳೆತ
ಈ ಸಮಯದಲ್ಲಿ ಚಿಕ್ಕದಾಗಿ ಕಿಬ್ಬೊಟ್ಟೆಯಲ್ಲಿ ಸೆಳೆತ ಉಂಟಾಗುವುದು. ಮುಟ್ಟಿನ ಸಮಯದಲ್ಲಿ ಕಂಡು ಬರುವಷ್ಟು ನೋವಿನಿಂದ ಕೂಡಿರಲ್ಲ, ಆದರೆ ಆದರೆ ಸ್ವಲ್ಪ ಸೆಳೆತವಿರುತ್ತದೆ.
4. ಲೈಂಗಿಕ ಆಸಕ್ತಿ ಹೆಚ್ಚಾಗುವುದು
ಈ ಅವಧಿಯಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುವುದು, ಏಕೆಂದರೆ ಈ ಸಮಯದಲ್ಲಿ ಟೆಸ್ಟೋಸ್ಟಿರೋನೆ ಹೆಚ್ಚಾಗುವುದು. ಇದರಿಂದಾಗಿ ಕಾಮದ ಆಸಕ್ತಿ ಹೆಚ್ಚಾಗುವುದು.
5. ಸ್ತನಗಳಲ್ಲಿ ಬದಲಾವಣೆಯಾಗುವುದು
ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುವುದರಿಂದ ಸ್ತನಗಳು ಬಿಗಿಯಾದಂತೆ ಅನಿಸುವುದು.
6. ಹೊಟ್ಟೆ ಉಬ್ಬಿದಂತಾಗುವುದು
ಈ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಸ್ತನಗಳು ಬಿಗಿಯಾದಾಂತಾಗುವುದು.
7. ಮೂಡ್ ಸ್ವಿಂಗ್'ಈ ಸಮಯದಲ್ಲಿ ಹೆಚ್ಚು ಖುಷಿಯಾಗಿರುತ್ತೀರಿ, ಸಂಗಾತಿ ಜೊತೆ ರೊಮ್ಯಾಂಟಿಕ್ ಆಗಿ ವರ್ತಿಸುತ್ತೀರಿ ಎಂದು ಕೆಲವು ಅಧ್ಯಯನಗಳು ಹೇಳಿವೆ.
8. ಹೊಟ್ಟೆ ಹಸಿವು ಸ್ವಲ್ಪ ಅಧಿಕವಿರುತ್ತದೆ
ಅಂಡೋತ್ಪತ್ತಿ ಸಮಯದಲ್ಲಿ ಹೊಟ್ಟೆ ಹಸಿವು ಹೆಚ್ಚಾಗುವುದು.
9. ವಾಸನೆ ಬೇಗನೆ ಮೂಗಿಗೆ ಬಡಿಯುತ್ತದೆ
ಈ ಸಮಯದಲ್ಲಿ ನಿಮ್ಮ ಮೂಗಿನ ಗ್ರಹಿಕೆಯ ಸಾಮರ್ಥ್ಯ ಕೂಡ ಅಧಿಕವಿರುತ್ತದೆ.
ಅಂಡೋತ್ಪತ್ತಿ ಯಾವಾಗ ಉಂಟಾಗುತ್ತದೆ
ನಿಮ್ಮ ಮುಟ್ಟಿನ ಚಕ್ರದ ಅರ್ಧ ಭಾಗದಲ್ಲಿ ಅಂಡೋತ್ಪತ್ತಿಯಾಗುವುದು ಅಂದರೆ 28 ದಿನಗಳ ಅಂತರ ಮುಟ್ಟಿನ ಚಕ್ರ ಇರುವವರಿಗೆ ಮುಟ್ಟಾದ 13-14ದಿನದಲ್ಲಿ ಅಂಡೋತ್ಪತ್ತಿಯಾಗುವುದು. ಅಂದರೆ ನಿಮ್ಮ ನಿಗದಿತ ಮುಟ್ಟಿನ ದಿನಾಂಕಕ್ಕಿಂತ 14 ದಿನಗಳ ಮುಂಚೆ ಅಂಡೋತ್ಪತ್ತಿ ಉಂಟಾಗುವುದು.
ನೀವು ಈ ತಿಂಗಳು 30ಕ್ಕೆ ಮುಟ್ಟಾದರೆ ಮುಂದಿನ ತಿಂಗಳು 28ಕ್ಕೆ ಅಥವಾ 26ಕ್ಕೆ ಆಗಬಹುದು, 14-16ನೇ ದಿನಾಂಕದೊಳಗೆ ನಿಮ್ಮಲ್ಲಿ ಅಂಡೋತ್ಪತ್ತಿ ಉಂಟಾಗುವುದು.
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಯಾವಾಗ ಪ್ರಯತ್ನಿಸಬೇಕು?
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಅಂಡೋತ್ಪತ್ತಿಯ ಆ ವಾರದಲ್ಲಿ ದಿನಾ ಅಥವಾ ದಿನ ಬಿಟ್ಟು ದಿನ ಪ್ರಯತ್ನಿಸಬೇಕು. ವೀರ್ಯಾಣು ಮಹಿಳೆಯ ದೇಹದೊಳಗೆ ಒಂದು ವಾರದವರೆಗೆ ಜೀವಂತವಾಗಿರುತ್ತದೆ, ಈ ಸಮಯದಲ್ಲಿ ಅವಳಲ್ಲಿ ಅಂಡೋತ್ಪತ್ತಿಯಾದರೆ ವೀರ್ಯಾಣು ಜೊತೆ ಗರ್ಭಧಾರಣೆಯಾಗುವುದು.
ಓವ್ಯೂಲೇಷನ್ ಕಿಟ್ ಬಳಸಬಹುದು
ಮೇಲೆ ಹೇಳಿರುವ ಅಂಶಗಳ ಕಡೆ ಗಮನ ನೀಡುವುದು ಕಷ್ಟ ಎನ್ನುವವರು ಓವ್ಯೂಲೇಷನ್ ಕಿಟ್ ಬಳಸಬಹುದು, ಇದರಿಂದ ಯಾವ ದಿನ ನಿಮ್ಮಲ್ಲಿ ಅಂಡೋತ್ಪತ್ತಿಯಾಗುತ್ತದೆ ಎಂದು ತಿಳಿಯಬಹುದು.
ಮಗು ಬೇಡ ಎನ್ನುವವರಿಗೂ ಈ ಸಮಯ ಮುಖ್ಯವಾಗಿರುತ್ತದೆ
ಕೆಲವರಿಗೆ ಈಗಲೇ ಮಗು ಬೇಡ ಎಂಬುವುದಾಗಿ ಇರುತ್ತದೆ ಅಂಥವರು ಈ ಸಮಯದಲ್ಲಿ ಪತಿಯೊಂದಿಗೆ ಸೇರಬಾರದು ಅಥವಾ ಸುರಕ್ಷಾಕ್ರಮ ಅನುಸರಿಸಿ ಸೇರುವುದರಿಂದ ಗರ್ಭಧಾರಣೆ ತಡೆಗಟ್ಟಬಹುದು.



Click it and Unblock the Notifications
