ಮಕ್ಕಳಿರದ ದಂಪತಿ ಬಳಿ ಯಾರೇ ಆಗಲಿ ಈ ರೀತಿ ಮಾತನಾಡಲೇಬಾರದು?

ಮದುವೆಯಾಗಿ ವರ್ಷ ತುಂಬುವ ಮೊದಲೇ ನೆಂಟರಿಷ್ಟರು ಏನೂ ವಿಶೇಷವಿಲ್ಲ ಅಂತ ಕೇಳುತ್ತಾರೆ, ಅಂಥದ್ದರಲ್ಲಿ ಮದುವೆಯಾಗಿ ವರ್ಷಗಳು ಉರುಳುತ್ತಿದ್ದರು ಮಗುವಾಗಿಲ್ಲ ಎಂದರೆ ನೆಂಟರಿಷ್ಟರ ಮಾತು ಮನಸ್ಸಿಗೆ ತುಂಬಾನೇ ನೋವಾಗುತ್ತದೆ.

ಮಕ್ಕಳಾಗದಿದ್ದಾಗ ಮನಸ್ಸಿಗೆ ಅದರ ಬಗ್ಗೆ ಸ್ವಲ್ಪ ನೋವಿರುತ್ತದೆ, ಆದರೆ ಯಾವುದಾದರು ಸಮಾರಂಭಕ್ಕೆ ಹೋದಾಗ ನಿನಗೆ ಮಕ್ಕಳಾಗಿಲ್ವಾ? ಎಂದು ಕೇಳಿದಾಗ ಅಥವಾ ಅವರು ಹೇಳುವ ಕೆಲವೊಂದು ಮಾತಿನಿಂದಾಗಿ ತುಂಬಾನೇ ನೋವಾಗುತ್ತದೆ. ಹಾಗಾಗಿ ಮಕ್ಕಳಾಗದಿರುವ ದಂಪತಿ ಬಳಿ ಈ ಬಗೆಯ ಪ್ರಶ್ನೆ ಕೇಳಲೇಬಾರದು ನೋಡಿ:

words should not say with childless couple

ಚಿಂತೆ ಬಿಡಿ ?

ಚಿಂತೆ ಬಿಡಿ ಅಂತ ಹೇಳಬೇಡಿ, ನೀವು ಅವರಿಗೆ ಚಿಂತೆ ಮಾಡಬೇಡಿ ಅಂತೆಲ್ಲಾ ಹೇಳಲು ಹೋಗಬೇಡಿ, ಏಕೆಂದರೆ ಈ ರೀತಿ ಹೇಳಿದಾಗ ನೀವು ಅವರ ಬಗ್ಗೆ ಅನುಕಂಪ ತೋರಿಸುತ್ತಿದ್ದೀರಿ ಎಂದನಿಸುವುದು. ಅವರಿಗೆ ಒಂದು ವೇಳೆ ಏನಾದರೂ ಆರೋಗ್ಯ ಸಮಸ್ಯೆಯಿಂದಾಗಿ ಗರ್ಭಧಾರಣೆಗೆ ತೊಂದರೆಯಾಗುತ್ತಿರಬಹುದು, ಆದ್ದರಿಂದ ಅವರ ಬಳಿ ಚಿಂತೆ ಬಿಡಿ, ರಿಲ್ಯಾಕ್ಸ್ ಆಗಿ ಅಂತ ಹೇಳಲು ಹೋಗಬೇಡಿ. ನೀವು ಅವರ ಹತ್ರ ಇಷ್ಟೇ ಹಣಬರಹ ಅಂತ ಸುಮ್ಮನಾಗಿ ಅಥವಾ ಅದರ ಬಗ್ಗೆ ಚಿಂತೆ ಮಾಡಬೇಡ ಎಂದು ಹೇಳಿದರೆ ಅವರಿಗೆ ನನಗೆ ಮಕ್ಕಳಾಗಲ್ವಾ ಎಂಬ ಆತಂಕ ಉಂಟಾಗುವುದು, ಆದ್ದರಿಂದ ಹೇಳಲು ಹೋಗಬೇಡಿ. ಅವರಿಗೆ ಧೈರ್ಯ ತುಂಬಬೇಕು, ಅವರಲ್ಲಿ ಧನಾತ್ಮಕ ಭಾವನೆ ಮೂಡುವಂತೆ ಮಾಡಬೇಕು.

ಯಾರಿಗೆ ಸಮಸ್ಯೆಯಿದೆ?

ಇದನ್ನು ಕೇಳಲು ಹೋಗಬೇಡಿ, ಅಲ್ಲದೆ ಮಗುವಾಗದಿದ್ದರೆ ಅದಕ್ಕೆ ಹೆಣ್ಣೇ ಕಾರಣ ಎಂದು ಅವಳನ್ನು ದೂಷಿಸಲು ಹೋಗಬೇಡಿ. ಏಕೆಂದರೆ ಅವರಿಬ್ಬರ ಖಾಸಗಿ ವಿಷಯವದು, ಯಾರಿಗೆ ಸಮಸ್ಯೆಯಿದ್ದರೆ ಅದರಿಂದ ನಮಗೇನು? ಅವರ ಸಮಸ್ಯೆ ಅವರ ಬಗೆಹರಿಸಲು ಪ್ರಯತ್ನಿಸುತ್ತಾರೆ, ಆದ್ದರಿಂದ ಇದರ ಬಗ್ಗೆ ಕೇಳಲು ಹೋಗಲೇಬೇಡಿ. ಇಬ್ಬರು ಒಳ್ಳೆಯ ವೈದ್ಯರಿಗೆ ತೋರಿಸಿ ಎಂದು ಹೇಳಬಹುದು, ಆದರೆ ಅದರಲ್ಲಿ ಪತ್ನಿಗೆ ಸಮಸ್ಯೆನಾ ಪತಿಗೆ ಸಮಸ್ಯೆನಾ ಎಂದು ಕೇಳಲು ಹೋಗಬೇಡಿ. ಇಬ್ಬರಿಗೆ ಈ ಕುರಿತು ಪರೀಕ್ಷೆ ಮಾಡಿಸಲು ಸಲಹೆ ನೀಡಿ, ಆದರೆ ಯಾರಿಗೆ ಸಮಸ್ಯೆಯಿದೆ ಎಂದು ಕೇಳಬೇಡಿ.

ಗರ್ಭಾವಸ್ಥೆಯಲ್ಲಿ ನೀವು ಅನುಭವಿಸಿದ ಸಮಸ್ಯೆ ಹೇಳಲು ಹೋಗಬೇಡಿ

ಹೌದು ಅವರಿಗೆ ಗರ್ಭಾವಸ್ಥೆಯ ಅನುಭವವಿರಲ್ಲ, ಅದರ ಜೊತೆಗೆ ನೀವು ನಿಮ್ಮ ಅನುಭವ ಹೇಳಿ ಹೆದರಿಸಬೇಡಿ, ಬದಲಿಗೆ ಅವರಿಗೆ ಧನಾತ್ಮಕ ಭಾವನೆಗಳನ್ನು ತುಂಬಿ. ಇದರಿಂದಾಗಿ ಅವರಿಗೂ ಒಳ್ಳೆಯ ಆಲೋಚನೆ ಬರುವುದು. ನಿಮ್ಮ ಗರ್ಭಾವಸ್ಥೆಯ ಅನುಭವ ಹೇಳಿ ಭಯಪಡಿಸಬೇಡಿ. ಗರ್ಭಧಾರಣೆಯ ಸಮಯದಲ್ಲಿ ತಾಯಿಂದ ತಾಯಿಗೆ ಆರೋಗ್ಯ ಸಮಸ್ಯೆ, ಆರೋಗ್ಯ ಸ್ಥಿತಿ ಭಿನ್ನವಾಗಿರುತ್ತದೆ, ಆದ್ದರಿಂದ ನಿಮ್ಮ ಅನುಭವ ಬೇರೆಯವರದ್ದೂ ಆಗಬೇಕೆಂದಿಲ್ಲ. ಆದ್ದರಿಂದ ನಿಮ್ಮ ಗರ್ಭಾವಸ್ಥೆಯ ಕೆಲ ಸಂಕಟ, ನೋವುಗಳನ್ನು ಹೇಳಲು ಹೋಗಲೇಬೇಡಿ.

ಮಗುವನ್ನು ದತ್ತು ಪಡೆಯಲು ಸಲಹೆ ನೀಡಬೇಡಿ

ತುಂಬಾ ಜನರು ಈ ರೀತಿ ಸಲಹೆ ನೀಡುತ್ತಾರೆ. ಅವರಿಗೆ ಮನಸ್ಸಿಗೆ ಅನಿಸಿ ಗಂಡ-ಹೆಂಡತಿ ಇಬ್ಬರು ಮಗುವನ್ನು ದತ್ತು ಪಡೆಯಲು ಯೋಚಿಸಿದರೆ ಒಕೆ, ನೀವು ಅವರಿಗೆ ಮಗುವನ್ನು ದತ್ತು ಪಡೆಯಲು ಸಲಹೆ ನೀಡಬೇಡಿ, ಅವರ ಬದುಕಿಗೆ ಮೂರನೇಯ ವ್ಯಕ್ತಿಯ ಸಲಹೆ ಅಗ್ಯತವಿರಲ್ಲ, ಆದ್ದರಿಂದ ಜಾಗ್ರತೆವಹಿಸಿ.

ಅವರಿಗೆ ಮಕ್ಕಳಿಲ್ಲ ದುಃಖ ಇರುತ್ತದೆ, ನಮ್ಮ ವರ್ತನೆ ಅಥವಾ ನೋವುಗಳಿಂದ ಅವರಿಗೆ ನೋವುಂಟು ಮಾಡಬಾರದು. ಕೆಲವರಿಗೆ ಮದುವೆಯಾಗಿ 20 ವರ್ಷದ ಬಳಿಕ ಮಗುವಾಗಿದ್ದೂ ಉಂಟು ಆದ್ದರಿಂದ ಅವರಿಗೆ ಮಗು ಆಗಬಹುದು, ಆಗದೇ ಇರಬಹುದು, ಆದರೆ ಬೇರೆಯವರು ಅವರನ್ನು ನೋಯಿಸುವ ಪ್ರಯತ್ನ ಮಾಡಲೇಬಾರದು.

English summary

One Should Never Ask These Questions to Someone with Infertility

One should not ask these question with childless couple read on
X
Desktop Bottom Promotion