Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶಿಫ್ಟ್ ವರ್ಕ್‌ನಿಂದಾಗಿ ಹೆಚ್ಚಾಗುತ್ತಿದೆ ಬಂಜೆತನದ ಸಮಸ್ಯೆ!
ಒಂದು ಎರಡು ದಶಕದ ಹಿಂದೆ ನೋಡಿದರೆ ಬಂಜೆತನದ ಸಮಸ್ಯೆಯಿತ್ತು, ಆದರೆ ಈಗ ಇರುವಷ್ಟು ಇರುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ. ಬಂಜೆತನದ ಸಮಸ್ಯೆ ತಡೆಗಟ್ಟಲು ಹಲವಾರು ತಂತ್ರಜ್ಞಾನಗಳು ಬಂದಿದೆ, ಆದರೆ ಅದರ ಜೊತೆಗೆ ಬಂಜೆತನ ಸಮಸ್ಯೆ ಕೂಡ ಅಷ್ಟೇ ಅಧಿಕವಾಗುತ್ತಿದೆ.
ಯುವ ಜೋಡಿಗಳನ್ನು ನೋಡಿದರೆ 10 ಜೋಡಿಯಲ್ಲಿ 6 ಜೋಡಿಗೆ ಮಕ್ಕಳಾಗುವುದು ತಡವಾಗುತ್ತಿದೆ, ನಾಲ್ಕು ಜೋಡಿಗಷ್ಟೇ ಮಕ್ಕಳಾಗಲು ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ. ಹಲವಾರು ಕಾರಣಗಳಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ಶಿಫ್ಟ್ ವರ್ಕ್ ಕೂಡ ಬಂಜೆತನ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ನೈಟ್ ಶಿಫ್ಟ್ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ
ವಿದೇಶ ಕಂಪನಿಗಳಿಗೆ ಕೆಲಸ ಮಾಡುವವರಿಗೆ ಕೈ ತುಂಬಾ ಸಂಬಳ ಸಿಗುವುದು, ಲಕ್ಷುರಿ ಲೈಫ್‌ಸ್ಟೈಲ್ ಎಲ್ಲಾ ಸಿಗುವುದು, ಆದರೆ ಈ ನೈಟ್ ಶಿಫ್ಟ್ ಎಂಬುವುದು ದೇಹದ ಹಾರ್ಮೋನ್‌ಗಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು. ಈ ನೈಟ್ ಶಿಫ್ಟ್ ಎಂಬುವುದು ಮಹಿಳೆಯರ ಹಾಗೂ ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು.
ಮಹಿಳೆಯರ ಮುಟ್ಟಿನ ಚಕ್ರ, ಅಂಡಾಣು ಉತ್ಪತ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ
ಮಹಿಳೆಯರು ಶಿಫ್ಟ್ ವರ್ಕ್ ಮಾಡುವುದರಿಂದ ಅದು ನಿದ್ದೆಯ ಮೇಲೆ ಪ್ರಭಾವ ಬೀರುವುದು, ಇದರಿಂದ ಹಾರ್ಮೋನ್‌ಗಳ ಬದಲಾವಣೆಯಾಗಿ ಪಿಸಿಒಎಸ್, ಅನಿಯಮಿತ ಮುಟ್ಟಿನ ಸಮಸ್ಯೆ, ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ಕಾರಣಕ್ಕೆ ಬಂಜೆತನದ ಸಮಸ್ಯೆ ಉಂಟಾಗಬಹುದು. ದಿನದಲ್ಲಿ ಕೆಲಸ ಮಾಡುವವರಿಗಿಂತ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವವರಲ್ಲಿ ಬಂಜೆತನ ಸಮಸ್ಯೆ ಶೇ. 27ರಿಂದ 40ರಷ್ಟು ಅಧಿಕವಿದೆ.
ನೈಟ್ ಶಿಫ್ಟ್ ಜೊತೆಗೆ ಅತಿಯಾದ ಮಾನಸಿಕ ಒತ್ತಡ
ಎಷ್ಟು ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾರ ಕೆಲಸದ ಒತ್ತಡ ಕೂಡ ಅಷ್ಟೇ ಅಧಿಕವಾಗಿರುತ್ತದೆ. ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಕಂಪನಿ ಟಾರ್ಗೆಟ್ ಕೊಟ್ಟಿರುತ್ತದೆ. ಇಲ್ಲಿ ಸ್ತ್ರೀ-ಪುರುಷ ಎಂಬ ಬೇಧವಿರಲ್ಲ, ತಮ್ಮ ಟಾರ್ಗೆಟ್ ತಲುಪಬೇಕೆಂದರೆ ಅತ್ಯಂತ ಅಧಿಕ ಕೆಲಸದ ಒತ್ತಡಗಳಿರುತ್ತದೆ, ಕೆಲಸದ ಒತ್ತಡ ಅಧಿಕವಾದಂತೆ ಮಾನಸಿಕ ಒತ್ತಡ ಹೆಚ್ಚಾಗುವುದು. ಇದರಿಂದಾಗಿ ಕೂಡ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ.
ಅನಾರೋಗ್ಯಕರ ಆಹಾರ ಶೈಲಿ ಕೂಡ ಈ ಸಮಸ್ಯೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ
ಸಾಮಾನ್ಯವಾಗಿ ನೈಟ್ ಶಿಫ್ಟ್ ಮಾಡುವವರು ಆರೋಗ್ಯಕರ ಆಹಾರಕ್ರಮದ ಕಡೆಗೆ ಗಮನ ಕೊಡುವುದಿಲ್ಲ. ರಾತ್ರಿ ಪೂರ್ತಿ ಎಚ್ಚರವಾಗಿದ್ದು ಕೆಲಸ ಮಾಡುವುದರಿಂದ ಕೆಲವರು ಜಂಕ್‌ಫುಡ್ ಹೆಚ್ಚಾಗಿ ತಿನ್ನುತ್ತಾರೆ, ಅಲ್ಲದೆ ಟೀ, ಕಾಫಿ ಕುಡಿಯುವ ಸಂಖ್ಯೆ ಹೆಚ್ಚಾಗುವುದು, ಇನ್ನು ಹಗಲು ಹೊತ್ತಿನಲ್ಲಿ ಬಂದು ಮಲಗುವುದರಿಂದ ಬೆಳಗ್ಗಿನ ಬ್ರೇಕ್‌ಫಾಸ್ಟ್, ಮಧ್ಯಾಹ್ನದ ಲಂಚ್ ಸೇವಿಸದೆ ನಿದ್ದೆ ಮಾಡುವವರೇ ಅಧಿಕ. ಇವೆಲ್ಲಾ ದೇಹದ ಮೇಲೆ ತುಂಬಾನೇ ಪ್ರಭಾವ ಬೀರುವುದು.
ಅದರ ಜೊತೆಗೆ ಸ್ಮೋಕಿಂಗ್ ಅಭ್ಯಾಸವಿದ್ದರೆ ಇವೆಲ್ಲಾ ಬಂಜೆತನದ ಸಾಮರ್ಥ್ಯ ಹೆಚ್ಚಿಸುವುದು.
ಗಂಡ-ಹೆಂಡತಿಯ ವಿಭಿನ್ನ ಶಿಫ್ಟ್ ವರ್ಕ್
ಅಲ್ಲದೆ ಗಂಡ ಹೆಂಡತಿ ಬೇರೆ-ಬೇರೆ ಶಿಫ್ಟ್‌ನಲ್ಲಿದ್ದಾಗ ಅಂಡಾಣು ಉತ್ಪತ್ತಿ ಸಮಯದಲ್ಲಿ ಸೇರದಿದ್ದರೆ ಇದು ಕೂಡ ಮಕ್ಕಳಾಗದಿರಲು ಒಂದು ಪ್ರಮುಖ ಕಾರಣವಾಗಿದೆ. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿದರೆ ದೇಹ ಬೇಗನೆ ಬಳಲುವುದು, ಇದರಿಂದಾಗಿ ಸಂಗಾತಿ ಜೊತೆ ರೊಮ್ಯಾಂಟಿಕ್ ಆಗಿ ಕಳೆಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಕೂಡ ಮಕ್ಕಳಾಗುವುದು ವಿಳಂಬವಾಗುತ್ತಿದೆ.
ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಏನು ಮಾಡಬೇಕು?
* ಸಾಧ್ಯವಾದರೆ ನೀವು ಶಿಫ್ಟ್ ಬದಲಾಯಿಸಿ
* ದಿನದಲ್ಲಿ 8 ಗಂಟೆ ನಿದ್ದೆ ಮಾಡಿ
* ನಿದ್ದೆ ಮಾಡುವ ಸಮಯದಲ್ಲಿ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್ ಇಂಥ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ದೂರವಿಡಿ.
* ಮಾನಸಿಕ ಒತ್ತಡ ದೂರ ಮಾಡಲು ಧ್ಯಾನ ಮಾಡಿ
* ಅತಿಯಾಗಿ ಟೀ, ಕಾಫಿ ಕುಡಿಯುವುದು, ಸ್ಮೋಕಿಂಗ್ ಇವುಗಳನ್ನು ಮಾಡಬೇಡಿ
* ಆರೋಗ್ಯಕರ ಆಹಾರದ ಕಡೆಗೆ ಗಮನಹರಿಸಿ.
* ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಸ್ತ್ರೀ ರೋಗ ತಜ್ಞರ ಭೇಟಿಯಾಗಿ, ಅವರು ನಿಮಗೆ ಫಾಲಿಕ್ ಆಮ್ಲ ಸೇರಿದಂತೆ ಕೆಲವೊಂದು ಸಪ್ಲಿಮೆಂಟ್ಸ್ ಸೂಚಿಸುತ್ತಾರೆ.
ಇವೆಲ್ಲಾ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು.



Click it and Unblock the Notifications











