Latest Updates
-
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ತಾಯ್ತನ ಎಂಬ ಸುಂದರ ಪ್ರಪಂಚದಲ್ಲಿರುವ ಕಟು ವಾಸ್ತವಗಳಿವು
ಏಪ್ರಿಲ್ 12ನ್ನು ವಿಶ್ವ ತಾಯ್ತನದ ದಿನವನ್ನಾಗಿ ಆಚರಿಸಲಾಗುವುದು... ತಾಯ್ತನದ ಬಗ್ಗೆ ತುಂಬಾನೇ ಸುಂದರವಾಗಿ ವರ್ಣನೆ ಮಾಡಲಾಗುವುದು. ತಾಯಿಯಾಗಿ ಅವಳ ಕರ್ತವ್ಯಗಳ ಬಗ್ಗೆ ಹೇಳಲಾಗುವುದು, ಮಗುವಿನ ಲಾಲನೆ-ಪಾಲನೆ ಬಗ್ಗೆ ನೂರಾರು ಕಲ್ಪನೆಗಳು ಮೂಡುವಂತೆ ಕತೆಗಳನ್ನು ಹೇಳಲಾಗುವುದು.

ತಾಯ್ತನ ಎಂಬುವುದು ಎಷ್ಟು ಸುಂದರವೋ ಅಷ್ಟೇ ಸವಾಲುಗಳಿಂದಲೂ ಕೂಡಿರುತ್ತದೆ ಎಂದರೆ ಅದನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಅದರಲ್ಲೂ ವರ್ಕಿಂಗ್ ವುಮನ್ ಆಗಿದ್ದರೆ ಅವಳ ಮುಂದೆ ಸವಾಲುಗಳ ಪಟ್ಟಿಯೇ ಇರುತ್ತದೆ, ಅವುಗಳೆನ್ನೆಲ್ಲಾ ಎದುರಿಸಿ ತಾನೊಬ್ಬ ಒಳ್ಳೆಯ ತಾಯಿಯಾಗಬೇಕಾಗುತ್ತದೆ. ಈ ಸಮಯದಲ್ಲಿ ಅವಳಿಗೆ ಗಂಡ-ಕುಟುಂಬದವರ ಸಹಾಯ ಸಿಕ್ಕರೆ ಆ ಮಹಿಳೆ ನಿಜಕ್ಕೂ ಅದೃಷ್ಟವಂತಳು, ಇಲ್ಲದಿದ್ದರೆ ಅವಳ ಜೀವನ ಆ ದೇವರಿಗೇ ಪ್ರೀತಿ....
ಪ್ರತಿಯೊಬ್ಬ ಹೆಣ್ಣು ತಾನು ತಾಯಿಯಾದ ಮೇಲೆ ಎದುರಿಸುವ ಸವಾಲುಗಳೆಂದರೆ ..
ನಿದ್ದೆ ಎಂಬುವುದು ಮಾರುದ್ಧ ಓಡಿಹೋಗುವುದು
ಒಂದು ಕಾಲದಲ್ಲಿ ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ ಎಂದು ಯೋಚಿಸುವಷ್ಟು ದೂರ ನಿದ್ದೆ ಓಡಿ ಹೋಗಿರುತ್ತದೆ. ಅದರಲ್ಲೂ ಮಗುವಾಗ ಮೊದಲ 2-3 ವರ್ಷ ಅವಳಿಗೆ ಸಾಕಷ್ಟು ನಿದ್ದೆ ಎಂಬುವುದು ಸಿಗುವುದೇ ಇಲ್ಲ. ಮಗು ಆಗಾಗ ಎದ್ದೇಳುವಾಗ ಎದ್ದು ಹಾಲುಣಿಸಬೇಕು. ಹಗಲಿನಲ್ಲಿ ಮಗು ನಿದ್ರಿಸುವಾಗ ಸ್ವಲ್ಪ ನಿದ್ರಿಸೋಣ ಎಂದರೆ ಆವಾಗ ಒಂದಿಷ್ಟು ಕೆಲಸಗಳನ್ನು ಮಾಡಿ ಮುಗಿಸಬೇಕಾಗುತ್ತದೆ, ಏಕೆಂದರೆ ಗು ಎದ್ದ ಮೇಲೆ ಆ ಕೆಲಸ ಮಾಡಲು ಬಿಡಲ್ಲ, ಹೀಗಾಗಿ ನಿದ್ದೆ ಎಂಬುವುದು ಮರೆತೇ ಹೋಗುವಂತಾಗುವುದು ನಿಜ. ಮನೆಯವರ ಸಹಾಯವಿದ್ದರೆ ಸ್ವಲ್ಪ ವಿಶ್ರಾಂತಿ ಸಿಗುವುದು, ಇಲ್ಲಾಂದ್ರೆ ಮಕ್ಕಳು ಸ್ವಲ್ಪ ದೊಡ್ಡವರಾಗುವವರಿಗೆ ಸುಖ ನಿದ್ದೆ ಎಂಬುವುದು ಕನಸ್ಸಿನ ಮಾತು.
ವರ್ಕಿಂಗ್ ಮದರ್‌ಗೆ ಭಾವನಾತ್ಮಕ ಬೆಂಬಲ ಅಗ್ಯತವಿರುತ್ತದೆ
ಒಂದುನಕಡೆ ಕರಿಯರ್ ಮತ್ತೊಂದೆಡೆ ಕರುಳಿನ ಬಳ್ಳಿ ಇವೆರಡರ ನಡುವಿನ ತೊಳಲಾಟ ಇದೆಯೆಲ್ಲಾ ಇದು ಹೊರಗಡೆ ದುಡಿಯಲು ಹೋಗುವ ಹೆಣ್ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ನನ್ನ ಮಗುವನ್ನು ನೋಡಿಕೊಳ್ಳಲು ಅತ್ತೆ-ಮಾವ, ಅಪ್ಪ-ಅಮ್ಮ ಅಂತ ಯಾರಾದರೂ ಇದ್ದರೆ ಒಕೆ, ಇಲ್ಲದಿದ್ದರೆ ಮಗುವನ್ನು ಬೇರೆಯವರ ಕೈಯಲ್ಲಿ ಅಥವಾ ಡೇ ಕೇರ್‌ಗಳಲ್ಲಿ ಬಿಟ್ಟುವಾಗ ಮನಸ್ಸು ನೋವಿನಿಂದ ಹಿಂಡುತ್ತದೆ. ಕೆಲಸ ಬಿಡುವಂತಿಲ್ಲ, ಏಕೆಂದರೆ ಮಗುವಿನ ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು, ಆದರೆ ನನ್ನ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬ ನೋವು ಅವಳ ಮನಸ್ಸಿಗೆ ತುಂಬಾನೇ ನೋವುಂಟು ಮಾಡುತ್ತದೆ. ಈ ಸಮಯದಲ್ಲಿ ಗಂಡ ಹಾಗೂ ಮನೆಯವರ ಬೆಂಬಲ ಅವಳಿಗೆ ತುಂಬಾನೇ ಅವಶ್ಯಕತೆ ಇರುತ್ತದೆ.
ಜವಾಬ್ದಾರಿ
ಮಗುವಿನ ಜವಾಬ್ದಾರಿ ಎಂಬುವುದು ತಾಯಿಯದ್ದು ಮಾತ್ರವಲ್ಲ, ತಂದೆಯದ್ದು ಕೂಡ ಆಗಿರುತ್ತದೆ. ದುಡಿದು ತಂದು ಹಾಕುವುದಷ್ಟೇ ನನ್ನ ಕೆಲಸ ಎಂಬ ಮನಸ್ಥಿತಿಯ ಪುರುಷ ಬಾಳ ಸಂಗಾತಿಯಾಗಿದ್ದರೆ ಮಗುವಾದ ಬಳಿಕ ಸಂಸಾರದಲ್ಲಿ ಸಮಸ್ಯೆ ಹೆಚ್ಚಾಗುವುದು. ತಾಯಿ ಮಾತ್ರ ಮಗುವಿನ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳಬೇಕೆಂದರೆ ಅವಳಿಗೂ ಸಾಕಾಗಿ ಹೋಗುವುದು. ಒಂದು ಸ್ವಲ್ಪ ಹೊತ್ತು ಮಗುವಿನ ಜೊತೆ ಆಟ ಆಡುವುದು, ಮಗುವಿಗೆ ತಿನಿಸುವುದು, ನಿದ್ರೆ ಮಾಡಿಸುವುದು, ಮಗುವಿನ ಡಯಾಪರ್ ಚೇಂಜ್ ಮಾಡುವುದು ಈ ರೀತಿ ಗಂಡ ಹೆಂಡತಿಗೆ ನೆರವಾದರೆ ಅವಳಿಗೂ ವಿಶ್ರಾಂತಿಗೆ ಸ್ವಲ್ಪ ಸಮಯ ಸಿಗುವುದು. ಈ ರೀತಿಯ ಬೆಂಬಲ ನೀಡುವ ಮೂಲಕ ಅವಳು ಖಿನ್ನತೆಗೆ ಜಾರದಂತೆ ತಡೆಗಟ್ಟಬಹುದು.
ಹೆರಿಗೆಯ ಬಳಿಕ ಖಿನ್ನತೆ ತಡೆಗಟ್ಟುವುದು ಹೇಗೆ?
ಹೆರಿಗೆಯ ಬಳಿಕ ಖಿನ್ನತೆ ತಡೆಗಟ್ಟಲು ಗಂಡ ಹಾಗೂ ಮನೆಯವರ ಸಹಾಯ ಅವಳಿಗೆ ಅವಶ್ಯಕವಾಗಿರುತ್ತದೆ. ಕೆಲವರು ಸಹಾಯ ಮಾಡಿ ಅಂತ ಕೇಳುತ್ತಾರೆ, ಇನ್ನು ಕೆಲವರು ನನಗೆ ಕಷ್ಟವಾಗುತ್ತಿದೆ ಎಂದು ಹೇಳಲ್ಲ, ಮನಸ್ಸಿನಲ್ಲಿಯೇ ಕೊರಗುತ್ತಾರೆ, ಇದರಿಂದಾಗಿ ಖಿನ್ನತೆಗೆ ಜಾರುವ ಅಪಾಯ ಅಧಿಕ. ಕುಟುಂಬದಲ್ಲಿ ಮಗು ಬರುತ್ತದೆ ಎಂದರೆ ಎಲ್ಲರೂ ಸಂತೋಷ ಪಡುತ್ತಾರೆ, ಆದರೆ ಮಗುವಿನ ಜವಾಬ್ದಾರಿ ಅಂತ ಬಂದಾಗ ಅದು ತಾಯಿಯ ಜವಾಬ್ದಾರಿ ಮಾತ್ರ ಎಂದು ಭಾವಿಸದೆ ಗಂಡ-ಕುಟುಂಬದವರು ಅವಳ ಸಹಾಯಕ್ಕೆ ಬಂದರೆ ಅವಳು ತಾಯ್ತನ ಆ ಸುಂದರ ಅನುಭವಗಳನ್ನು ಖುಷಿಯಿಂದ ಅನುಣವಿಸುವಂತಾಗುವುದು. ಅಲ್ಲದೆ ನಿಮ್ಮ ಕುಟುಂಬದಲ್ಲಿ ಅನ್ಯೂನ್ಯತೆ ಮತ್ತಷ್ಟು ಹೆಚ್ಚಾಗುವುದು.
ತಾಯಿಯನ್ನು ದೂರುವುದು
ಮಕ್ಕಳು ಏನಾದರೂ ತಪ್ಪು ಮಾಡಿದರೆ ತಾಯಿ ಬೆಳೆಸಿದ್ದು ಸರಿಯಿಲ್ಲ ಎಂಬ ಅಪವಾದ ತಾಯಿ ಮೇಲೆ ಬೀಳುತ್ತದೆ. ಕೆಲವೊಂದು ಮನೆಗಳಲ್ಲಿ ಮಕ್ಕಳ ಎಲ್ಲಾ ವರ್ತನೆಗೂ ತಾಯಿಯತ್ತ ಬೊಟ್ಟು ಮಾಡುತ್ತಾರೆ, ಅದು ಸರಿಯಲ್ಲ. ಮಕ್ಕಳನ್ನು ಬೆಳೆಸುವಲ್ಲಿ ತಾಯಿ ಪಾತ್ರ ಎಷ್ಟು ಮುಖ್ಯವೋ ತಂದೆಯ ಪಾತ್ರವೋ ಅಷ್ಟೇ ಮುಖ್ಯವಾಗಿರುತ್ತದೆ. ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದಾಗ ತಾಯಿಗೆ ತಿರುಗಿ ಹೇಳುವ ಬುದ್ಧಿ ಕಲಿಯುತ್ತಾರೆ. ಮನೆಯಲ್ಲಿ ಈ ಬಗೆಯ ವಾತಾವರಣವಿದ್ದರೆ ಅದನ್ನು ಮೊದಲು ಬದಲಾಯಿಸಿ. ತಾಯಿಗೆ ಗೌರವ ಕೊಡಲು ಕಲಿಯುವ ಮಗು ಮಾತ್ರ ಇತತರಿಗೆ ಗೌರವ ಕೊಡುತ್ತೆ.
ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.



Click it and Unblock the Notifications
