Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಾರ್ಮಲ್ ಡೆಲಿವರಿ ಕುರಿತು ಇರುವ ತಪ್ಪು ಕಲ್ಪನೆಗಳಿವು
ಓ ಹೆರಿಗೆಯಾಯ್ತಾ? ನಾರ್ಮಲ್ ಹೆರಿಗೆನಾ (ಸಹಜ ಹೆರಿಗೆನಾ) ಓಹೋ ಹಾಗಾದರೆ ಏನೂ ತೊಂದರೆಯಿಲ್ಲ ... ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ನಾರ್ಮಲ್ ಹೆರಿಗೆಗಿಂತ ಸಿ ಸೆಕ್ಷನ್ ಒಳ್ಳೆಯದು, ನಾರ್ಮಲ್ ಹೆರಿಗೆಯಲ್ಲಿ ತುಂಬಾನೇ ನೋವು ಅನುಭವಿಸಬೇಕು ಎಂದು ಹೇಳುತ್ತಾರೆ. ಇವುಗಳನ್ನು ಕೇಳಿದಾಗ ಗರ್ಭಿಣಿಗೆ ಯಾವ ಹೆರಿಗೆ ಒಳ್ಳೆಯದು ಎಂಬ ಗೊಂದಲ ಉಂಟಾಗುವುದು. ನಾವಿಲ್ಲಿ ಸಹಜ ಹೆರಿಗೆ ಕುರಿತು ಇರುವ ತಪ್ಪು ಕಲ್ಪನೆಯ ಬಗ್ಗೆ ಹೇಳಿದ್ದೇವೆ ನೋಡಿ...

ಸಹಜ ಹೆರಿಗೆ ಸಿ ಸೆಕ್ಷನ್‌ಗಿಂತ ತುಂಬಾ ಕಷ್ಟಕರ
ಸಹಜ ಹೆರಿಗೆ ಎಲ್ಲರಿಗೆ ಕಷ್ಟಕರವಲ್ಲ. ಕೆಲವರು ನೋವು ಬಂದು 10 ನಿಮಿಷದೊಳಗೆ ಹೆರಿಗೆಯಾಗುತ್ತಾರೆ. ನನಗೆ ಹೆರಿಗೆಯಾಗಿದ್ದೇ ಗೊತ್ತಾಗಿಲ್ಲ, ಒಮ್ಮೆ ಮುಕ್ಕಿದ ತಕ್ಷಣ ಮಗು ಹೊರಬಂತು ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಕೆಲವು ಗಂಟೆ ನೋವು ಅನುಭವಿಸಿದ ಮೇಲೆ ಹೆರಿಗೆಯಾಗಿರುತ್ತದೆ. ಸಿ ಸೆಕ್ಷನ್‌ನಲ್ಲಿ ಅನಸ್ತೇಷಿಯಾದಿಂದ ಮಗುವನ್ನು ಹೊರ ತೆಗೆಯುವಾಗ ಏನೂ ಗೊತ್ತಾಗದಿದ್ದರೂ ನಂತರ ವಿಪರೀತ ನೋವು, ತಲೆನೋವು ಇರುತ್ತದೆ. ಆದ್ದರಿಂದ ನಾರ್ಮಲ್ ಹೆರಿಗೆ ತುಂಬಾನೇ ಕಷ್ಟಕರ ಎಂದು ಹೇಳುವುದು ತಪ್ಪು ಕಲ್ಪನೆ.
ನಾರ್ಮಲ್‌ಗಿಂತ ಸಿ ಸೆಕ್ಷನ್ ಒಳ್ಳೆಯದು
ಇತ್ತೀಚೆಗೆ ನಾರ್ಮಲ್ ಡೆಲಿವರಿ ಎನ್ನುವುದು ಅಪರೂಪವಾಗುತ್ತಿದೆ. ಆದರೆ ಸಿ ಸೆಕ್ಷನ್‌ಗಿಂತ ಸಹಜ ಹೆರಿಗೆ ತುಂಬಾನೇ ಒಳ್ಳೆಯದು. ಇದರಿಂದ ತಾಯಿಯ ಆರೋಗ್ಯಕ್ಕೆ ಒಳ್ಳೆಯದು, ಮಗು ಜನನೇಂದ್ರೀಯ ಮೂಲಕ ಬಂದಾಗ ಜನನೇಂದ್ರೀಯದ ಆರೋಗ್ಯಕರ ಬ್ಯಾಕ್ಟಿರಿಯಾಗಳು ಮಗುವಿಗೂ ತಗುಲುವುದು ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸಿ ಸೆಕ್ಷನ್ ಹೆರಿಗೆ ಕಷ್ಟಕರವಾದಾಗ ಅತವಾ ಹೊಕ್ಕಳ ಬಳ್ಳಿ ಸುತ್ತಿಕೊಂಡಾಗ, ಹೊಟ್ಟೆಯಲ್ಲಿ ಮಗು ತಿರುಗದೆ ಇದ್ದಾಗ ಮಾಡಿಸಿದರೆ ಒಕೆ, ಸುಮ್ಮನೆ ಸಿ ಸೆಕ್ಷನ್ ಮಾಡುವುದಕ್ಕಿಂತ ನಾರ್ಮಲ್ ಹೆರಿಗೆಗೆ ಪ್ರಯತ್ನಿಸುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಸಹಜ ಹೆರಿಗೆ ಬಳಿಕ ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಇದು ತಪ್ಪು ಕಲ್ಪನೆಯಾಗಿದೆ. ಸಹಜ ಹೆರಿಗೆಯ ಬಳಿಕ ಲೈಂಗಿಕ ಆಸಕ್ತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಿಳೆಯಲ್ಲಿ ಲೈಂಗಿಕ ಆಸಕ್ತಿ ಕುಗ್ಗುವುದಕ್ಕೂ ಸಹಜ ಹೆರಿಗೆಗೂ ಸಂಬಂಧವಿಲ್ಲ.
ಮೊದಲು ಸಿ ಸೆಕ್ಷನ್ ಮಾಡಿದರೆ ಎರಡನೇ ಡೆಲಿವರಿಯಲ್ಲಿ ಸಹಜ ಹೆರಿಗೆ ಸಾಧ್ಯವಿಲ್ಲ
ಇದು ತಪ್ಪು ಕಲ್ಪನೆಯಾಗಿದೆ. ಮೊದಲು ಸಿ ಸೆಕ್ಷನ್ ಆಗಿದ್ದರೆ ಎರಡನೇ ಬಾರಿ ಹೆರಿಗೆಯಲ್ಲಿ ಸಹಜ ಹೆರಿಗೆಯಾದ ಎಷ್ಟೋ ಪ್ರಕರಣಗಳಿವೆ. ಸಿ ಸೆಕ್ಷನ್ ಆಗಿ ಎರಡು ವರ್ಷದ ಬಳಿಕ ಗರ್ಭಧಾರಣೆಯಾದರೆ ಸಹಜ ಹೆರಿಗೆಗೆ ಪ್ರಯತ್ನಿಸಬಹುದು.
ಹೊಕ್ಕಳ ಬಳ್ಳಿ ಸುತ್ತಿದ್ದರೆ ಸಿ ಸೆಕ್ಷನ್ ಮಾಡಬೇಕು
ಸಾಮಾನ್ಯವಾಗಿ ಈ ರೀತಿ ವೈದ್ಯರು ಸಿ ಸೆಕ್ಷನ್ ಮಾಡುವಂತೆ ಸೂಚಿಸುತ್ತಾರೆ. ಆದರೆ ಎಲ್ಲಾ ಕೇಸ್‌ಗಳಲ್ಲಿ ಸಿ ಸೆಕ್ಷನ್ ಮಾಡಬೇಕೆಂದೇನಿಲ್ಲ, ಹೊಕ್ಕಳ ಬಳ್ಳಿ ಸುತ್ತಿಕೊಮಡರೂ ಸಹಜ ಹೆರಿಗೆಯಾಗಬಹುದು. ಇದರಿಂದ ಮಗುವಿಗೆ ತೊಂದರೆಯೇನೂ ಆಗುವುದಿಲ್ಲ.



Click it and Unblock the Notifications
