Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುಟ್ಟಿನ ಸಮಯದಲ್ಲಿ ಈ ಆಹಾರ ಸೇವಿಸಿದ್ರೆ ನೋವು ಮತ್ತಷ್ಟು ಹೆಚ್ಚಾಗುವುದು!
ಋತುಚಕ್ರದ ಸಮಯದಲ್ಲಿ ಮಹಿಳೆಯರು ಒಂದು ರೀತಿ ಹಿಂಸೆಯನ್ನು ಅನುಭವಿಸುತ್ತಾರೆ. ಹೆಚ್ಚಿನವರು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲಿದರೆ, ಇನ್ನೂ ಕೆಲವರಿಗೆ ತಲೆನೋವು ಮತ್ತು ಕಾಲು ನೋವಿನ ಸಮಸ್ಯೆಗಳು ಉಂಟಾಗುತ್ತದೆ. ಇನ್ನೂ ಈ ಸಮಯದಲ್ಲಿ ಮೂಡ್ ಸ್ವಿಂಗ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲ, ಈ ಸಂದರ್ಭದಲ್ಲಿ ಮಹಿಳೆಯರಿಗೆ ಏನಾದರೂ ತಿನ್ನಬೇಕು ಅನ್ನೋ ಆಸೆಯಾಗುತ್ತದೆ.
ಹೆಚ್ಚಿನ ಮಹಿಳೆಯರು ಮಸಾಲೆ ಮತ್ತು ಹುಳಿ ಆಹಾರವನ್ನು ತಿನ್ನಲು ಬಯಸುತ್ತಾರೆ. ಹಾಗೆ ನೋಡೋಕೆ ಹೋದ್ರೆ ಮುಟ್ಟಿನ ಸಮಯದಲ್ಲಿ ಅನಾರೋಗ್ಯಕರ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸೋದು ಒಳ್ಳೆಯದಲ್ಲ. ಒಂದು ಅಧ್ಯಯನದ ಪ್ರಕಾರ ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನು ಸೇವನೆ ಮಾಡಿದ್ರೆ ಹೆಚ್ಚು ನೋವು ಮತ್ತು ಸೆಳೆತವನ್ನು ಅನುಭವಿಸಬೇಕಾಗುತ್ತಂತೆ. ಅಷ್ಟಕ್ಕು ಋತುಚಕ್ರದ ಸಮಯದಲ್ಲಿ ಯಾವ ಆಹಾರಗಳನ್ನು ಸೇವಿಸಲೇಬಾರದು ಅನ್ನೋದನ್ನು ತಿಳಿಯೋಣ.

ಮಸಾಲೆ ಆಹಾರ
ಋತುಚಕ್ರದ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಸೆಳೆತ ಉಂಟಾಗುತ್ತದೆ. ಇಷ್ಟೇ ಅಲ್ಲದೇ, ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ ಮತ್ತು ವಾಕರಿಕೆ ಉಂಟಾಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಪೋಷಕಾಂಶ-ಭರಿತ ಆಹಾರವನ್ನು ತೆಗೆದುಕೊಳ್ಳಬೇಕು. ಇದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಂಪು ಮಾಂಸ
ಮುಟ್ಟಿನ ಸಮಯದಲ್ಲಿ ದೇಹವು ಪ್ರೊಸ್ಟಗ್ಲಾಂಡಿನ್‌ಗಳನ್ನು ಉತ್ಪಾದಿಸುತ್ತದೆ. ಇದು ಗರ್ಭಾಶಯದ ಸಂಕೋಚನಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಸ್ಟಗ್ಲಾಂಡಿನ್ಗಳು ಹೆಚ್ಚಾದಾಗ ಸೆಳೆತವನ್ನು ಉಂಟುಮಾಡಬಹುದು. ಕೆಂಪು ಮಾಂಸದ ಸೇವನೆಯು ನೋವನ್ನು ಹೆಚ್ಚಿಸುತ್ತದೆ. ರೆಡ್‌ಮೀಟ್‌ನಲ್ಲಿ ಕಬ್ಬಿಣಾಂಶ ಹೆಚ್ಚಿದ್ದು ಇದು ಪ್ರೋಸ್ಟಗ್ಲಾಂಡಿನ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ.
ಮದ್ಯ ಸೇವನೆ
ಋತುಚಕ್ರದ ಸಮಯದಲ್ಲಿ ಮದ್ಯ ಸೇವನೆಯು ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್ ಸೇವನೆಯು ತಲೆನೋವು ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಇದು ಅತಿಸಾರ ಮತ್ತು ವಾಕರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಪಿರಿಯಡ್ಸ್ ಸಮಯದಲ್ಲಿ ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಅಂಶಗಳನ್ನು ಹೆಚ್ಚು ಸೇವಿಸಬೇಕು. ಈ ಸಮಯದಲ್ಲಿ ಹೊರಗಿನಿಂದ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಅವಶ್ಯಕ.
ಉಪ್ಪು
ಋತುಚಕ್ರದ ಸಮಯದಲ್ಲಿ ಹೆಚ್ಚು ಉಪ್ಪು ಹಾಕಿದ ಆಹಾರವನ್ನು ಸೇವಿಸಬಾರದು. ಅಧ್ಯಯನಗಳ ಪ್ರಕಾರ ಹೆಚ್ಚು ಉಪ್ಪನ್ನು ತಿನ್ನುವುದು ನೀರಿನ ಧಾರಣಕ್ಕೆ ಕಾರಣವಾಗುತ್ತಂತೆ. ಇದು ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗಬಹುದು. ಊತವನ್ನು ಕಡಿಮೆ ಮಾಡಲು ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಈ ಸಮಯದಲ್ಲಿ ವಿಶೇಷವಾಗಿ ಸಂಸ್ಕರಿಸಿದ ಆಹಾರ ಮತ್ತು ಪ್ಯಾಕ್ ಮಾಡಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯಾಕಂದ್ರೆ ಇದ್ರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶವಿರುತ್ತದೆ.
ಸಕ್ಕರೆ
ಋತುಚಕ್ರದ ಸಮಯದಲ್ಲಿ ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಸಕ್ಕರೆಯ ಹೆಚ್ಚಿನ ಬಳಕೆಯು ಹೆಚ್ಚಿನ ಶಕ್ತಿಯ ಮಟ್ಟಗಳಿಗೆ ಕಾರಣವಾಗಬಹುದು. ಮತ್ತು ಇದು ಕೆಟ್ಟ ಮನಸ್ಥಿತಿಗೆ ಕಾರಣವಾಗಬಹುದು. ಋತುಚಕ್ರದ ಸಮಯದಲ್ಲಿ ದುಃಖ ಮತ್ತು ಆತಂಕಗಳಾಗೋದು ಸಹಜ. ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸುವುದರಿಂದ ಮೂಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ತುಂಬಾನೇ ಜಾಗರೂಕರಾಗಿ ಇರಬೇಕು. ಅಪ್ಪಿ ತಪ್ಪಿಯೂ ಈ ಆಹಾರಗಳನ್ನು ತಿನ್ನಲೇಬೇಡಿ.



Click it and Unblock the Notifications

