Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಗರ್ಭಿಣಿಯಾಗಿದ್ದಾಗ ಯಾವ ಮಂತ್ರ ಪಠಿಸಿದರೆ ತುಂಬಾ ಒಳ್ಳೆಯದು?
ತಾಯಿ ಆಗೋದು ಅಂದ್ರೆ ಪ್ರತಿಯೊಬ್ಬ ಹೆಣ್ಣಿಗೂ ಸಂಭ್ರಮ. ಅದರ ಅನುಭವವೇ ಬೇರೆ. ಗರ್ಭ ಧರಿಸಿದ ಮೇಲೆ ಮಹಿಳೆ ಹೊಸ ಜವಾಬ್ದಾರಿ, ಹೊಸ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ತಾಯಿಯಾದವಳು ಅದೆಂಥ ನೋವೇ ಇದ್ರೂ ಸರಿ ಮಗುವಿನ ನಗು ಮುಖವನ್ನು ನೋಡಿದರೆ ಸಾಕು ಎಲ್ಲವನ್ನು ಮರೆತು ಬಿಡುತ್ತಾಳೆ. ಮಹಿಳೆಗೆ ಒಂದು ಮಗುವಾದರೆ ಸಾರ್ಥಕ ಭಾವನೆ ಹುಟ್ಟಿಕೊಳ್ಳುತ್ತದೆ.
ಗರ್ಭಿಣಿಯಾದ ಸ್ತ್ರೀ ಹೇಗಿರಬೇಕು:
ಎಷ್ಟು ಬಾರಿ ನಾವು ವೈದ್ಯರ ಸಲಹೆಯನ್ನೂ ಪಡೆದುಕೊಳ್ಳದೆ ಕೆಲವು ಮೆಡಿಸಿನ್ ಗಳನ್ನು ತೆಗೆದುಕೊಂಡು ಬಿಡುತ್ತೇವೆ. ಅದರಲ್ಲೂ ಗರ್ಭಿಣಿ ಆಗಿದ್ದಾಗ ಈ ವಿಷಯದಲ್ಲಿ ತುಂಬಾನೇ ಕೇರ್ ಫುಲ್ ಆಗಿ ಇರಬೇಕು. ವೈದ್ಯರ ಸಲಹೆ ಇಲ್ಲದೆ ಸಣ್ಣಪುಟ್ಟ ಜ್ವರ ನೆಗಡಿ, ಕೆಮ್ಮು ಇದಕ್ಕೆಲ್ಲ ಮೆಡಿಕಲ್ ಶಾಪ್ ಗಳಿಂದ ಮಾತ್ರೆಗಳನ್ನು ತಂದು ನುಂಗಬಾರದು.
ಇದರಿಂದ ಹೊಟ್ಟೆಯಲ್ಲಿ ಇರುವ ಮಗುವಿಗೆ ತೊಂದರೆ ಆಗುತ್ತದೆ ಎಂಬುದನ್ನ ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು 9 ತಿಂಗಳು ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡು ಅದನ್ನು ಹೇರುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಮಹಿಳೆಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ ಉಂಟಾಗುತ್ತದೆ.

ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ:
ಕೇವಲ ಹೊಟ್ಟೆಯಲ್ಲಿ ಮಗು ಇರುವಾಗ ಮಾತ್ರವಲ್ಲ ಮಗು ಹುಟ್ಟಿದ ನಂತರವೂ ಕೂಡ ಆರೋಗ್ಯವಾಗಿ ಇರಬೇಕು ಅಂದ್ರೆ ಗರ್ಭಿಣಿ ಮಹಿಳೆ ತಿನ್ನುವ ಆಹಾರಗಳು ಸರಿಯಾಗಿ ಇರಬೇಕು ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ಹೆಚ್ಚು ಫೈಬರ್, ಪ್ರೋಟೀನ್, ವಿಟಮಿನ್ ಗಳು ಹೆಚ್ಚಾಗಿರುವಂತಹ ಹಸಿರು ತರಕಾರಿಗಳು ಹಣ್ಣು ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಬೇಕು. ಗರ್ಭಿಣಿ ಸ್ತ್ರೀ ಎಷ್ಟು ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಾರೋ ಅಷ್ಟೇ ಆರೋಗ್ಯಕರವಾದ ಮಗುವು ಕೂಡ ಹುಟ್ಟುತ್ತದೆ. ಮಗುವಿನ ಆರೋಗ್ಯ ಚೆನ್ನಾಗಿದ್ದರೆ ಹೆರಿಗೆಯು ಕೂಡ ಸುಲಭವಾಗಿ ಆಗುತ್ತದೆ.
ಮಾನಸಿಕ ಆರೋಗ್ಯ:
ಗರ್ಭಿಣಿ ಸ್ತ್ರೀಯ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಕೂಡ ಅಷ್ಟೇ ಮಹತ್ವದ್ದಾಗಿದೆ. ಒಂದು ವೇಳೆ ಮನಸ್ಸಿಗೆ ಸದಾ ಕಿರಿಕಿರಿ ಮಾಡಿಕೊಳ್ಳುತ್ತಾ ಇಲ್ಲ ಸಲ್ಲದ ಯೋಜನೆಗಳನ್ನ ಮಾಡುತ್ತಾ ತಲೆಯಲ್ಲಿ 108 ಯೋಜನೆಗಳನ್ನು ತುಂಬಿಕೊಂಡಿದ್ದರೆ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉಂಟಾಗುವ ಸಮಸ್ಯೆಗಳು ಅಷ್ಟಿಷ್ಟಲ್ಲ. ತಾಯಿಯ ಮಾನಸಿಕ ಆರೋಗ್ಯ ಮಗುವಿನ ಮನಸಿಗೆ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ ಎಂಬುದು ಬಹಳ ಮುಖ್ಯ.
ಮಗುವಿನ ಆರೋಗ್ಯಕ್ಕೆ ಈ ಕೆಲಸ ಮಾಡಿ:
ವೈದ್ಯಕೀಯವಾಗಿ ಮಗುವಿನ ಸಂತೋಷದ ಬಗ್ಗೆ ಗರ್ಭಿಣಿ ಸ್ತ್ರೀ ಎಷ್ಟು ಮುತುವರ್ಜಿಯಿಂದ ಇರಬೇಕು ಎಂಬುದರ ಬಗ್ಗೆ ಹೇಳಲಾಗಿದೆಯೋ ಅದೇ ರೀತಿ ಹುಟ್ಟುವ ಮಗು ಆರೋಗ್ಯವಂತ, ಅದೃಷ್ಟವಂತ ಜೊತೆಗೆ ಬುದ್ಧಿವಂತರಾಗಿ ಇರಲು ಜ್ಯೋತಿಷ್ಯದಲ್ಲಿಯೂ ಕೂಡ ಕೆಲವು ಪರಿಹಾರಗಳನ್ನು ಹೇಳಲಾಗಿದೆ ಅದರಲ್ಲಿ ಮುಖ್ಯವಾಗಿ ಹೇಳಿರುವ ಪರಿಹಾರ ಅಂದ್ರೆ ಮಂತ್ರ ಪಠಣ.
ಗರ್ಭ ಸಂಸ್ಕಾರ:
ಗರ್ಭಿಣಿ ಸ್ತ್ರೀಯರು ಗರ್ಭಾವಸ್ಥೆಯ 9 ತಿಂಗಳ ಅವಧಿಯಲ್ಲಿ ಆಹಾರ ಪದ್ಧತಿ ಜೀವನ ಕ್ರಮ ಸುಧಾರಿಸಿಕೊಳ್ಳುವುದರ ಜೊತೆಗೆ ಯೋಗ, ಮಂತ್ರ ಪಠಣೆ, ಧ್ಯಾನ ಮೊದಲಾದವುಗಳನ್ನು ಕೂಡ ರೂಡಿಸಿಕೊಳ್ಳಬೇಕು ಪ್ರಾಚೀನ ಕಾಲದಿಂದಲೂ ಕೂಡ ಶ್ಲೋಕ ಅಥವಾ ಮಂತ್ರ ಪಠಣಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ ಇದನ್ನು ಗರ್ಭ ಸಂಸ್ಕಾರ ಎಂದು ಕರೆಯಲಾಗುತ್ತದೆ. ಗರ್ಭಿಣಿ ಸ್ತ್ರೀಯರು ಈ ಮಂತ್ರವನ್ನು ದಿನವೂ ಜಪಿಸಿದರೆ ಅದರಿಂದ ಸುಸಂಸ್ಕೃತ ಮಗು ಜನಿಸುತ್ತದೆ ಜೊತೆಗೆ ಅದೃಷ್ಟವನ್ನು ಜಯಶಾಲಿಯಾಗುವ ಗುಣವನ್ನು ಮೈಗೂಡಿಸಿಕೊಂಡು ಹುಟ್ಟುತ್ತದೆ ಎಂದು ಹೇಳಲಾಗಿದೆ.
ಗರ್ಭಿಣಿ ಸ್ತ್ರೀ ಉಚ್ಚರಿಸಬಹುದಾದ ಮಂತ್ರ:
ರಕ್ಷಾ ರಕ್ಷಾ ಗಣಾಧ್ಯಕ್ಷ ರಕ್ಷ ತ್ತ್ರೈಲೋಕ್ಯ ನಾಯಕ
ಭಕ್ತಾನನಭಯಂ ಕರ್ತಾ ತ್ರಾತಭಾವ ಭವಾರ್ಣವತ್!!
ಪಠಣ ನಿಯಮ:
ಗರ್ಭಿಣಿಯಾದವರು ಗಣೇಶನ ಮುಂದೆ ಕುಳಿತು ಈ ಮಂತ್ರವನ್ನು ಪಠಿಸಿದರೆ ಒಳ್ಳೆಯದು ಈ ಮಂತ್ರವನ್ನು ಪಠಿಸುವಾಗ ನಿಮ್ಮ ಮುಖ ಪೂರ್ವ ದಿಕ್ಕಿನತ್ತ ಇರಬೇಕು. ಈ ಮಂತ್ರ ನಿಮ್ಮ ಹೊಟ್ಟೆಯಲ್ಲಿ ಇರುವಂತಹ ಭ್ರೂಣಕ್ಕೂ ಕೇಳಿಸುವಂತೆ ಜೋರಾಗಿ ಪಠಣೆ ಮಾಡಿದರೆ ಒಳ್ಳೆಯದು. ಇನ್ನು ದಿನಕ್ಕೆ 108 ಬಾರಿ ಜಪವನ್ನು ಜಪಿಸಬೇಕು ನಂತರ ಗಣೇಶನಿಗೆ ಲಡ್ಡು ಅಥವಾ ಇತರ ನೈವೇದ್ಯವನ್ನು ಅರ್ಪಿಸಿ ಅದನ್ನು ನೀವು ಸೇವಿಸಬೇಕು. ಇನ್ನು ರಾತ್ರಿ ಮಲಗು ಮುನ್ನ ಕೂಡ ಈ ಮಂತ್ರವನ್ನ ಪಠಣೆ ಮಾಡಿದರೆ ಒಳ್ಳೆಯದು.
ಸ್ನಾನ ಮಾಡಿ ಗಣೇಶನನ್ನು ಪೂಜೆ ಮಾಡಿ ಗಣೇಶನಿಗೆ ಆರತಿಯನ್ನು ಮಾಡಿ ನಂತರ ಮಂತ್ರವನ್ನು ಜಪಿಸಬೇಕು. ಗಣೇಶನ ವಿಗ್ರಹ ಮುಂದೆ 108 ಬಾರಿ ಈ ಮಂತ್ರವನ್ನು ಪಠಣೆ ಮಾಡಿ. ಇನ್ನು ಹೊಟ್ಟೆ ಒಳಗಿರುವ ಮಗುವಿನ ಕಿವಿಗೆ ಗಾಯತ್ರಿ ಮಂತ್ರ ಕೂಡ ಬಿದ್ದರೆ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಮಂತ್ರ ಪಠಣೆಯಿಂದ ಏನಾಗುತ್ತದೆ:
ಮೊಟ್ಟಮೊದಲನೆಯದಾಗಿ ಮಂತ್ರ ಪಠಣೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಹುಟ್ಟುವ ಮಗುವಿನ ಜೀವನ ಸಂತೋಷಮಯದಿಂದ ಕೂಡಿರುತ್ತದೆ ಮಗುವಿನ ವ್ಯಕ್ತಿತ್ವ ಉತ್ತಮವಾಗಿರುತ್ತದೆ. ಮಗು ಬಲಶಾಲಿಯಾಗಿಯೂ ಸಮೃದ್ಧವಾಗಿಯೂ ಸದ್ಗುಣಗಳನ್ನು ರೂಢಿಸಿಕೊಂಡಿರುತ್ತದೆ. ತಾಯಿಯ ಮಂತ್ರ ಪಠಣೆ ಮಗುವಿನ ಕಿವಿಗೆ ಬಿದ್ದರೆ ಆ ಮಗು ಹುಟ್ಟಿದ ಬಳಿಕ ಜೀವನದಲ್ಲಿ ಎಲ್ಲಾ ವಿಚಾರದಲ್ಲಿಯೂ ಯಶಸ್ಸನ್ನ ಗಳಿಸುತ್ತದೆ.
ಒಟ್ಟಿನಲ್ಲಿ ಮಗುವಿನ ಭವಿಷ್ಯ ಉತ್ತಮವಾಗಿರುತ್ತದೆ.
ಗರ್ಭಿಣಿಯಾದವಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆಕೆ ಒಬ್ಬ ಸಂಪೂರ್ಣ ಸದ್ಗುಣವಂತ ಮಗುವನ್ನು ಈ ಸಮಾಜಕ್ಕೆ ನೀಡಬೇಕು. ಹಾಗೆ ಮಗು ಸಂಸ್ಕಾರವನ್ನು ಕಲಿತು ಸಮಾಜಕ್ಕೆ ಒಳಿತು ಮಾಡುವಂತಹ ವ್ಯಕ್ತಿಯಾಗಿ ಬೆಳೆಯಬೇಕು ಅಂದ್ರೆ ಆರಂಭದಿಂದಲೇ ಮಗುವನ್ನು ಆ ನಿಟ್ಟಿನಲ್ಲಿ ಬೆಳೆಸಬೇಕು.



Click it and Unblock the Notifications