Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಲ್ಯುಕೇಮಿಯಾ ಬಂದ ಮಕ್ಕಳನ್ನು ಗುಣಪಡಿಸಬಹುದೇ?ರಕ್ತ ಕ್ಯಾನ್ಸರ್ ಕುರಿತು ಇರುವ ತಪ್ಪು ಕಲ್ಪನೆಗಳೇನು?
ಡಾ.ಹರ್ಷ ಪ್ರಸಾದ ಎಲ್, (Consultant Pediatric Hemato Oncology, KMC Hospital, Mangalore)
ಲ್ಯುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ ಎಂಬ ರೋಗದ ಬಗ್ಗೆ ಕೇಳಿರುತ್ತೀರಿ. ಆದರೆ ಈ ಬಗ್ಗೆ ಹಲವರಲ್ಲಿ ಅರಿವು ಕಡಿಮೆ. ಈ ರೋಗ ದೇಹದ ರಕ್ತ ಮತ್ತು ಮೂಳೆ ಮಜ್ಜೆ (ಬೋನ್ ಮ್ಯಾರೋ) ಮೇಲೆ ಪರಿಣಾಮ ಬೀರಿ ಅನಿಯಮಿತ ಬಿಳಿ ರಕ್ತ ಕಣ (ಡಬ್ಯೂಬಿಸಿ) ಪ್ರಸರಣಕ್ಕೆ ಕಾರಣವಾಗುತ್ತದೆ. ಇದರಿಂದ ರೋಗಿಯಲ್ಲಿ ಜ್ವರ, ಆಯಾಸ, ಸುಲಭವಾಗಿ ಗಾಯಗೊಳ್ಳುವುದು, ಆಗಾಗ್ಗೆ ಸೋಂಕುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಸಮಸ್ಯೆಗೆ ಕಂಡು ಬರುತ್ತದೆ. ಇದು ಲ್ಯಕೇಮಿಯಾದ ಪ್ರಾಥಮಿಕ ರೋಗ ಲಕ್ಷಣಗಳು ಎಂಬುದನ್ನು ಮರೆಯಬಾರದು.
ಶೀಘ್ರ ರೋಗ ಲಕ್ಷಣ ಪತ್ತೆಯೇ ಚಿಕಿತ್ಸೆ ಯಶಸ್ಸಿಗೆ ದಾರಿ. ಹೀಗಾಗಿ ಸಿಬಿಸಿ ( ಸಂಪೂರ್ಣ ರಕ್ತದ ಕಣಗಳ ಪರೀಕ್ಷೆ) , ಬೋನ್ ಮ್ಯಾರೋ ಪರೀಕ್ಷೆ ಮೂಲಕ ರೋಗವನ್ನು ಪತ್ತೆ ಹಚ್ಚಲಾಗುತ್ತದೆ.

ಬಾಲ್ಯಾವಸ್ಥೆಯಲ್ಲಿ ಕ್ಯಾನ್ಸರ್ ಸಾಧ್ಯವೇ?
ಬಾಲ್ಯಾವಸ್ಥೆಯಲ್ಲಿ ಕೂಡ ಲ್ಯುಕೇಮಿಯಾ ಕಾಣಿಸಿಕೊಳ್ಳುತ್ತದೆ. ಲ್ಯುಕೇಮಿಯಾ ರೋಗಕ್ಕೆ ಒಂದು ನಿರ್ದಿಷ್ಟ ಕಾರಣವನ್ನು ಗುರುತಿಸುವುದು ಕಷ್ಟ. ಆನುವಂಶಿಕವಾಗಿ ಬರುವ ರೂಪಾಂತರಗಳು ಕೂಡ ಪ್ರಮುಖ ಕಾರಣ. ಆದರೆ ಹೆಚ್ಚಿನ ಪ್ರಕರಣಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಸಂಭವಿಸುತ್ತವೆ.
ಸಾಮಾನ್ಯವಾಗಿ ಎಂದರೆ ಶೇ. 78ರಷ್ಟು ಪ್ರಕರಣಗಳು 'ಆಲ್ ಅಕ್ಯೂಟ್ ಡೆವೆಲೊಪಿಂಗ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ( ALL Acute Developing Lymphoblastic Leukaemia ) ಆಗಿರುತ್ತದೆ. ಇನ್ನು ವಿವಿಧ ಪ್ರಕರಣಗಳೆಂದರೆ,
• ಅಕ್ಯೂಟ್ ಮೈಲೋಯ್ಡ್ ಲ್ಯುಕೇಮಿಯಾ (AML): ಕಡಿಮೆ ಪ್ರಚಲಿತ, ಆದರೆ ಆಕ್ರಮಣಕಾರಿ.
• ದೀರ್ಘಕಾಲದ ಮೈಲೋಯ್ಡ್ ಲ್ಯುಕೇಮಿಯಾ (CML): ಮಕ್ಕಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳು ವುದು
• ಇತರೆ ಅಪರೂಪದ ವಿಧಗಳು: ಜುವೆನೈಲ್ ಮೈಲೋಮೊನೊಸೈಟಿಕ್ ಲ್ಯುಕೇಮಿಯಾ (ಜೆಎಂಎಂಎಲ್)
ಚಿಕಿತ್ಸೆ
ಲ್ಯುಕೇಮಿಯಾದ ಪ್ರಕಾರಗಳೇ ಚಿಕಿತ್ಸೆಯನ್ನು ನಿರ್ಧರಿಸುತ್ತದೆ. ಈ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಕೀಮೋಥೆರಪಿ, ಮೌಖಿಕ ಔಷಧಿ ಮತ್ತು ನಿಯಮಿತ ತಪಾಸಣೆಗಳನ್ನು ಒಳಗೊಂಡಿರುತ್ತದೆ. ರೋಗದಿಂದ ಬಾಧಿತರಾದ ಸುಮಾರು ಶೇ.85 ಮಕ್ಕಳು ದೀರ್ಘಾವಧಿಯ ಉಪಶಮನ ಮತ್ತು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಾಗುವ ಪ್ರಗತಿಗಳು ಗಣನೀಯವಾಗಿ ಲ್ಯುಕೇಮಿಯಾದಿಂದ ಬದುಕುಳಿಯುವ, ಸುಧಾರಿತ ಬದುಕನ್ನು ನಡೆಸುವ ಪ್ರಮಾಣವನ್ನು ಹೆಚ್ಚಿಸಿದೆ.
ಬಾಲ್ಯಾವಸ್ಥೆಯ ಲ್ಯುಕೇಮಿಯಾ ಬಗ್ಗೆ ಇರುವ ತಪ್ಪು ಕಲ್ಪನೆ
ಲ್ಯುಕೇಮಿಯಾ ಬಗ್ಗೆ ತಪ್ಪು ಕಲ್ಪನೆಗಳು ಅನಗತ್ಯ ಭಯ ಹಾಗೂ ಗೊಂದಲವನ್ನು ಮೂಡಿಸುತ್ತದೆ.
• ಲ್ಯುಕೇಮಿಯಾಕ್ಕೆ ಪರಿಸರದಲ್ಲಿನ ಅಂಶಗಳು ಕಾರಣವಾಗುತ್ತದೆ
ಹೆಚ್ಚಿನ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಅಪಾಯ ಹೆಚ್ಚಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಾರಣವಿಲ್ಲ.
• "ಲ್ಯುಕೇಮಿಯಾ ಮಾರಣಾಂತಿಕವಾಗಿದೆ."
ಇಂದಿನ ದಿನಗಳಲ್ಲಿ ದೊರಕುವ ಚಿಕಿತ್ಸೆಯೊಂದಿಗೆ, ಬದುಕುಳಿಯುವಿಕೆಯ ಪ್ರಮಾಣ ಹೆಚ್ಚಿದೆ ಮತ್ತು ಅನೇಕ ಮಕ್ಕಳು ಕೂಡ ಸಂಪೂರ್ಣ ಚೇತರಿಕೆ ಕಾಣುತ್ತಿದ್ದಾರೆ.
• "ಲಸಿಕೆಗಳು, ಲ್ಯುಕೇಮಿಯಾಗೆ ಕಾರಣವಾಗಬಹುದು"
ಲಸಿಕೆಗಳು ಹಾಗೂ ಲ್ಯುಕೇಮಿಯಾ ರೋಗಕ್ಕೆ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ. ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಲಸಿಕೆಗಳು ಅತ್ಯಗತ್ಯ.
• "ರೋಗ ಲಕ್ಷಣಗಳು ಎಂದಿಗೂ ಸೂಕ್ಷ್ಮವಾಗಿರುವುದಿಲ್ಲ"
ಆಯಾಸ, ಸೋಂಕು ಮುಂತಾದ ಆರಂಭಿಕ ರೋಗಲಕ್ಷಣಗಳು ಸಾಮಾನ್ಯವಾಗಿ ಬಾಲ್ಯಾವಸ್ಥೆಯಲ್ಲಿನ ವಿವಿಧ ಕಾಯಿಲೆಯ ಲಕ್ಷಣಗಳೂ ಆಗಿರಬಹುದು. ಹೀಗಾಗಿ ಆರಂಭಿಕ ಹಂತದಲ್ಲಿ ರೋಗ ಗುರುತಿಸಲು ಕಷ್ಟವಾಗುತ್ತದೆ.
• "ಒತ್ತಡ ಅಥವಾ ಕೆಟ್ಟ ಪೋಷಣೆರಿಂದ ಲ್ಯುಕೇಮಿಯಾ ಉಂಟಾಗುತ್ತದೆ."
ಲ್ಯುಕೇಮಿಯಾವು ಪೋಷಣೆ ಅಥವಾ ಭಾವನಾತ್ಮಕ ಅಂಶಗಳೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ.
• "ಲ್ಯುಕೇಮಿಯಾ ಸಾಂಕ್ರಾಮಿಕವಾಗಿದೆ."
ಇದು ಆನುವಂಶಿಕ ರೂಪಾಂತರಗಳಿಂದ ಪ್ರಚೋದಿಸಲ್ಪಟ್ಟಿದೆ ಆದರೆ ಸಾಂಕ್ರಾಮಿಕವಲ್ಲ.
• "ಚಿಕಿತ್ಸೆಯು ಯಾವಾಗಲೂ ತುಂಬಾ ನೋವಿನಿಂದ ಕೂಡಿದ್ದು ನಿಷ್ಕ್ರಿಯಗೊಳಿಸುವುದು.
ಚಿಕಿತ್ಸೆಯಲ್ಲಿ ಸಂಭವನೀಯ ಅಡ್ಡಪರಿಣಾಮಗಳಿದ್ದರೂ, ಅವುಗಳನ್ನು ಪರಿಪೂರ್ಣವಾಗಿ ನಿರ್ವಹಿಸುವಲ್ಲಿ ವೈದ್ಯಕೀಯ ಆರೈಕೆ ಸಹಾಯವಾಗುತ್ತದೆ ಮತ್ತು ಅನೇಕ ಮಕ್ಕಳು ಆರೋಗ್ಯಯುತ ಬಾಳು ನಡೆಸುತ್ತಾರೆ.
ಲ್ಯಕೇಮಿಯಾ ಚಿಕ್ಕಮಕ್ಕಳನ್ನು ಅಪಾಯಕ್ಕೆ ದೂಡುತ್ತದೆ ಎಂಬುದು ಸತ್ಯ. ಆದರೆ ಆರಂಭಿಕ ರೋಗ ಲಕ್ಷಣ ಪತ್ತೆ ಮತ್ತು ಸರಿಯಾದ ಚಿಕಿತ್ಸೆಯೊಂದಿಗೆ, ಮಕ್ಕಳು ಸಾಮಾನ್ಯ ಜೀವನ ನಡೆಸಲು ಶಕ್ತರಾಗುತ್ತಾರೆ. ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿಯಿಂದಾಗಿ, ರಕ್ತಕ್ಯಾನ್ಸರ್ ಕಾಯಿಲೆಗೆ ಹಿಂದೆಂದಿಗಿಂತಲೂ ಉತ್ತಮ ಚಿಕಿತ್ಸೆ ನೀಡಬಹುದಾಗಿದೆ. ಸಂದರ್ಭಕ್ಕೆ ತಕ್ಕಂತೆ ನಿಮ್ಮ ಮುಂಜಾಗರೂಕತೆ ಮತ್ತು ನಿಮ್ಮ ಮಗುವನ್ನು ಸಮಯಕ್ಕೆ ಸರಿಯಾಗಿ ವೈದ್ಯರ ಬಳಿಗೆ ಕರೆದೊಯ್ದರೆ, ಅವರು ಚೇತರಿಸಿ ಕೊಳ್ಳಲು ಸುಲಭವಾಗುತ್ತದೆ .



Click it and Unblock the Notifications