Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಮನ ಸೆಳೆದ ಯಶ್- ರಾಧಿಕಾ ಮಗನ ಫೋಟೋಶೂಟ್
ಯಶ್-ರಾಧಿಕಾ ತಮ್ಮ ಮುದ್ದಾದ ಮಗನ ಫೋಟೋ ರಿವೀಲ್ ಮಾಡಿದ್ದಾರೆ. 'ಮಗನಿಗೆ ಆರು ತಿಂಗಳಾಗುತ್ತಿದೆ, ನಾಳೆ ಮಗನ ಫೋಟೋ ರಿವೀಲ್ ಮಾಡುವುದಾಗಿ ನೆನ್ನೆ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹೇಳಿಕೊಂಡಿದ್ದರು. ಆ ಕ್ಷಣದಿಂದ ಜೂನಿಯರ್ ಯಶ್ ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.
ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಧಿಕಾ ತಮ್ಮ ಮುದ್ದಾದ ಮಗನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಅಕ್ಕ ಐರಾಳಂತೆ ಮುದ್ದು-ಮುದ್ದಾಗಿರುವ ತಮ್ಮನ ಫೋಟೋ ನೋಡಿ ಸೋ ಕ್ಯೂಟ್ ಅಂತಿದ್ದಾರೆ ನೆಟ್ಟಿಗರು.

ಯಶ್-ರಾಧಿಕಾ ದಂಪತಿ 2018 ಡಿಸೆಂಬರ್‌ನಲ್ಲಿ ಮಗಳನ್ನು 2019 ನವೆಂಬರ್‌ನಲ್ಲಿ ಮಗನನ್ನು ಬರಮಾಡಿಕೊಂಡಿದ್ದರು. ಮಗಳು ಹುಟ್ಟಿದಾಗ ಸೈಡ್ ಫೇಸ್ ಕಾಣುವ ಫೋಟೋ ಹಾಕಿದ್ದರು, ನಂತರ ಅಕ್ಷಯ ತೃತೀಯ ದಿನ ಮಗಳ ಫೋಟೋವನ್ನು ರಿವೀಲ್ ಮಾಡಿದ್ದರು.
ಯಶ್-ರಾಧಿಕಾ ಮಗನ ಪೋಟೋವನ್ನು ಎಲ್ಲಿಯೂ ಇದುವರೆಗೆ ರಿವೀಲ್ ಮಾಡಿಲಿಲ್ಲ.ಆದ್ದರಿಂದ ಮಗ ಹೇಗಿದ್ದಾನೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇತ್ತು. ಇದೀಗ ಆಕರ್ಷಕ ಫೋಟೋಶೂಟ್ ಮಾಡಿಸಿ ಮಗನ ಫೋಟೋ ರಿವೀಲ್ ಮಾಡಿದ್ದಾರೆ.

ಕ್ರಿಯೇಟಿವ್ ಪೋಟೋಶೂಟ್
ಮಗ ಹಾಗೂ ಮಗಳು ಇಬ್ಬರೂ ಮಗುಚಿ ಬೀಳುವ ಫೋಟೋ ಹಾಕುವ ಮೂಲಕ ತಮ್ಮ ಮಕ್ಕಳ ಫೋಟೋ ರಿವೀಲ್ ಮಾಡಿದ್ದಾರೆ ಈ ಸೆಲೆಬ್ರಿಟಿ ಕಪಲ್. ಬಿಳಿ ಹಾಸಿನ ಮೇಲೆ ಮಲಗಿಸಿ, ಬರಿ ಮೈಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ತಮ್ಮನ ಜೊತೆ ಐರಾ
ಯಾವುದೇ ಮಕ್ಕಳಾಗಿರಲಿ, ಮಕ್ಕಳ ಫೋಟೋ ಶೂಟ್ ನೋಡುವುದೇ ಚೆಂದ, ಇಲ್ಲಿ ಐರಾ ತಮ್ಮನ ಜೊತೆ ಇರುವ ಫೋಟೋ ತುಂಬಾ ಮುದ್ದಾಗಿದೆ. ಐರಾ ಸದಾ ತನ್ನ ಕ್ಯೂಟ್ ಎಕ್ಸ್‌ಪ್ರೆಷನ್‌ನಿಂದ ನೋಡುಗರ ಗಮನ ಸೆಳೆಯುತ್ತಾಳೆ. ಇಲ್ಲಿಯೂ ಕೂಡ ತಮ್ಮನ ಜೊತೆ ಇರುವ ಫೋಟೋ ಸಕತ್ ಮುದ್ದಾಗಿದೆ.

ರಾಧಿಕಾರ ಕ್ರಿಯೇಟಿವ್ ಫೋಟೋಶೂಟ್
ರಾಧಿಕಾ ಎರಡನೇಯ ಬಾರಿ ಗರ್ಭಿಣಿಯಾಗಿದ್ದಾಗ ಮಗಳು ಜೊತೆ ತೆಗೆಸಿದ ಈ ಕ್ರಿಯೇಟಿವ್ ಫೋಟೋ ಶೂಟ್ ತುಂಬಾ ಗಮನ ಸೆಳೆದಿತ್ತು.

ಯಶ್ ಫ್ಯಾಮಲಿ ಫೋಟೋ
ಈ ಫೋಟೋ ಯಶ್-ರಾಧಿಕಾ ಪಂಡಿತ್ ಅವರದ್ದು ಫ್ಯಾಮಲಿ ಫೋಟೋ ಆಗಿದ್ದರೂ ಇದರಲ್ಲಿ ಮಗನ ಫೋಟೋ ತೋರಿಸದೆ ನೋಡುಗರಲ್ಲಿ ಕುತೂಹಲ ಮೂಡಿಸಿದ್ದರು.

ಮಗಳ ಪರಿಚಯಿಸುವ ಮುನ್ನ
ರಾಧಿಕಾ ಮಗಳನ್ನು ಪರಿಚಯಿಸುವ ಮುನ್ನ ಕೂಡ ಈ ರೀತಿ ಐರಾಳ ಫೋಟೋ ಹಾಕಿ ಕುತೂಹಲ ಮೂಡಿಸಿದ್ದರು. ಯಶ್ ಮಗಳ ಜೊತೆ ಆಡುವ ಫೋಟೋದಲ್ಲಿ ಐರಾಳ ಕೈ ಮಾತ್ರ ಹೈಲೈಟ್ಸ್ ಮಾಡಿ ತೆಗೆಯಲಾಗಿದೆ.

ಅಕ್ಷಯ ತೃತೀಯದಂದು ಮಗಳ ಪರಿಚಯಿಸಿದ ರಾಧಿಕಾ ಪಂಡಿತ್
ಐರಾ ಈಗ ಸೆಲೆಬ್ರಿಟಿ ಕಿಡ್. ಆಕೆ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಒಂದು ಐಸ್ ತಿಂದರೂ ಗಮನ ಸೆಳೆಯುತ್ತಾಳೆ. ಅವಳ ಫೋಟೋವನ್ನು ಮೊದಲಿಗೆ ಪರಿಚಯಿಸಿದ್ದು ಈ ರೀತಿಯಲ್ಲಿ...

ಜೂನಿಯರ್ ಯಶ್ ಮೊದಲ ರಿವೀಲ್ ಫೋಟೋ
ಯಾವುದೇ ಅಲಂಕಾರವಿಲ್ಲದೆ ಸರಳವಾಗಿ, ಅಷ್ಟೇ ಕ್ರಿಯೇಟಿವ್ ಆಗಿ ಮೂಡಿ ಬಂದಿದೆ ಈ ಫೋಟೋ...



Click it and Unblock the Notifications
