Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಗರ್ಭಾವಸ್ಥೆಯಲ್ಲಿ ತೂಕ ಇಳಿಕೆಯಾದರೆ ಏನಾದರೂ ಅಪಾಯವಿದೆಯೇ?
ಗರ್ಭಧರಿಸಿದ ನಂತರ ಮಹಿಳೆಯರಲ್ಲಿ ತೂಕ ನಿಧಾನವಾಗಿ ಹೆಚ್ಚಾಗುವುದು ಸಾಮಾನ್ಯ. ಗರ್ಭಾವಸ್ಥೆಯಲ್ಲಿ ಹನ್ನೊಂದರಿಂದ ಹದಿನಾರರವರೆಗೆ ತೂಕ ಹೆಚ್ಚಾಗುವುದು ಸಾಮಾನ್ಯ ಎನ್ನುತ್ತಾರೆ ವೈದ್ಯರು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ತೂಕದ ಜೊತೆಗೆ ಪೌಷ್ಟಿಕ ಆಹಾರ ಸೇವನೆ,ಅಲ್ಲದೇ, ಅತಿಯಾದ ಆಹಾರ ಸೇವನೆಯಿಂದಲೂ ಗರ್ಭಿಣಿಯರಲ್ಲಿ ತೂಕದಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದು.
ಆದರೆ ಕೆಲವರಿಗೆ ಮೂರನೇ ತ್ರೈಮಾಸಿಕದಲ್ಲಿ ಇದ್ದಕ್ಕಿದ್ದಂತೆ ತೂಕದಲ್ಲಿ ಇಳಿಕೆಯಾಗಬಹುದು. ಅಥವಾ ತೂಕದಲ್ಲಿ ಹೆಚ್ಚಳವಾಗದೇ ಮೊದಲಿದ್ದಷ್ಟೇ ಇರಬಹುದು. ಹೀಗಾದಾಗ ಅಯ್ಯೋ ಯಾಕೆ ಹೀಗೆ ತೂಕದಲ್ಲಿ ಇಳಿಕೆ ಆಯ್ತು, ಮಗುವಿನ ತೂಕ ಇಳಿಕೆ ಆಗಿರಬಹುದಾ, ಬೇರೇನಾದೂ ಸಮಸ್ಯೆ ಇರಬಹುದಾ ಎನ್ನುವ ಗೊಂದಲ ಚಿಂತೆ ಕಾಡುತ್ತೆ.
ಇದು ಸಾಮಾನ್ಯವೇ ಎನ್ನುವ ನಿಮ್ಮ ಗೊಂದಲದ ಪ್ರಶ್ನೆಗಳಿಗೆ ಈ ಲೇಖನದಲ್ಲಿದೆ ಉತ್ತರ.

ಆಮ್ನಿಯಾಟಿಕ್ ದ್ರವದಲ್ಲಿ ಇಳಿಕೆ
ಮೂರನೇ ತ್ರೈಮಾಸಿಕದಲ್ಲಿ ಹೆರಿಗೆಯ ದಿನಗಳು ಸಮೀಪಿಸುತ್ತಿದ್ದಂತೆ, ನಿಮ್ಮ ಗರ್ಭಾಶಯದಲ್ಲಿನ ಆಮ್ನಿಯಾಟಿಕ್ ದ್ರವದ ಮಟ್ಟವು ಕ್ರಮೇಣ ಕಡಿಮೆಯಾಗುತ್ತದೆ. ಇದರಿಂದಾನೂ ತೂಕದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗಬಹುದು. ಆಮ್ನಿಯಾಟಿಕ್ ದ್ರವ ಒಂದು ರೀತಿಯಲ್ಲಿ ಗರ್ಭದಲ್ಲಿ ಮಗುವನ್ನು ರಕ್ಷಿಸುವ ದ್ರವರೂಪದ ಸಂರಕ್ಷಣಾ ಕವಚದಂತಿರುತ್ತದೆ. ಹಾಗಾಗಿ ಹೆರಿಗೆಯ ಅವಧಿ ಸಮೀಪಿಸುತ್ತಿದ್ದಂತೆ ವೈದ್ಯರು ಒಂಭತ್ತನೇ ತಿಂಗಳ ಆರಂಭದಲ್ಲಿ ಸ್ಕ್ಯಾನಿಂಗ್, ತೂಕವನ್ನು ನೋಡುವುದರ ಮೂಲಕ ಪರಿಶೀಲಿಸುತ್ತಾರೆ. ಗರ್ಭಾವಸ್ಥೆಯ ಅಂತ್ಯದ ವೇಳೆಗೆ ಆಮ್ನಿಯಾಟಿಕ್ ದ್ರವದ ಮಟ್ಟ ವಾಟರ್ ಬ್ರೇಕ್ ಆಗುವ ಮುಂಚೆಯೇ ಕಡಿಮೆಯಾಗಬಹುದು. ಹಾಗಾಗಿ ತೂಕದಲ್ಲಿ ಇಳಿಕೆ ಕಂಡುಬರುತ್ತದೆ.

ಹೆಚ್ಚಾಗುವ ಮೂತ್ರವಿಸರ್ಜನೆ
ಮೂರನೇ ತ್ರೈಮಾಸಿಕದಲ್ಲಿ ಗರ್ಭಕೋಶದಲ್ಲಿನ ಮಗುವು ಸಂಪೂರ್ಣವಾಗಿ ಬೆಳವಣಿಗೆ ಹೊಂದುತ್ತಿರುವಾಗ ಗರ್ಭಕೋಶವು ಹಿಗ್ಗಿ ಮೂತ್ರಕೋಶಕ್ಕೆ ಒತ್ತಡವನ್ನು ಹಾಕಲ್ಪಡುತ್ತದೆ. ಈ ಅವಧಿಯಲ್ಲಿ ಮಗುವಿನ ತಲೆಯು ಕೆಳಗೆ ಒತ್ತಲ್ಪಡುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಓಡುವ ಸರದಿ ನಿಮ್ಮದಾಗುತ್ತದೆ. ಸ್ವಲ್ಪ ನೀರು ಕುಡಿದರೂ ಮೂತ್ರ ವಿಸರ್ಜನೆಗೆ ಎದ್ದು ಹೋಗಲೇಬೇಕಾಗುತ್ತದೆ. ಹೀಗಾಗಿ ದೇಹದಲ್ಲಿ ದ್ರವದ ಪ್ರಮಾಣ ಕಡಿಮೆಯಾಗಿ, ತೂಕದಲ್ಲಿ ಇಳಿಕೆಯಾಗಬಹುದು.

ಆಗಾಗ ಮಲವಿಸರ್ಜನೆ
ನೀವು ಗರ್ಭಾವಸ್ಥೆಯ ಅಂತಿಮ ಹಂತದಲ್ಲಿರುವಾಗ ಕರುಳಿನ ಚಲನೆಗಳು ಹೆಚ್ಚಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಮೂತ್ರ ವಿಸರ್ಜನೆಯಂತೆ ಮಲವಿಸರ್ಜನೆಯನ್ನೂ ಆಗಾಗ್ಗೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ಮಲವೂ ಸಡಿಲಾವಗಿರಬಹುದು. ಇದು ಹೆಚ್ಚಿನ ನೀರಿನಂಶವನ್ನು ಒಳಗೊಂಡಿರುತ್ತದೆ. ಹಾಗಾಗಿ ದೇಹದಲ್ಲಿ ಕಡಿಮೆಯಾಗುವ ನೀರಿನಂಶದಿಂದ ತೂಕದಲ್ಲಿ ಇಳಿಕೆ ಕಂಡುಬರುತ್ತದೆ.

ಹೆಚ್ಚು ಬೆವರುವುದು
ಗರ್ಭಧಾರಣೆಯ ಕೊನೆಯ ಹಂತದಲ್ಲಿ ದೇಹವು ಹೆಚ್ಚುವರಿ ನೀರಿನ ಅಂಶವನ್ನು ಬೆವರಿನ ರೂಪದಲ್ಲಿ ಹೊರ ಹಾಕಲು ಆರಂಭಿಸುತ್ತದೆ. ಹೆರಿಗೆಗಿಂತ ಮುಂಚೆ ಮಾತ್ರವಲ್ಲ ಹೆರಿಗೆಯಾದ ನಂತರವೂ ಒಂಭತ್ತು ತಿಂಗಳಲ್ಲಿ ದೇಹದಲ್ಲಿ ಸಂಗ್ರಹವಾದ ದ್ರವಾಂಶವನ್ನು ದೇಹವು ಬೆವರಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೀಗಾಗಿಯೂ ತೂಕದಲ್ಲಿ ಇಳಿಕೆಯಾಗಬಹುದು.

ಹಸಿವೆ ಕಡಿಮೆಯಾಗುವುದು
ಗರ್ಭಾವಸ್ಥೆಯ ಕೊನೆಯ ಹಂತದಲ್ಲು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಅನಿಸಿಬಿಡತ್ತೆ. ಹಸಿವೇ ಇಲ್ಲದಂತೆ ಆಗುತ್ತದೆ. ಕೊನೆ ಕೊನೆಗೆ ಸ್ವಲ್ಪವೇ ಆಹಾರ ಸೇವಿಸುವುದರಿಂದ ತೂಕದಲ್ಲಿ ಇಳಿಕೆಯಾಗಬಹುದು ಅಥವಾ ತೂಕವು ಸ್ಥಿರವಾಗಿ ಅಂದರೆ ಮೊದಲಿದ್ದಷ್ಟೇ ಇರಬಹುದು, ತೂಕದಲ್ಲಿ ಹೆಚ್ಚಳವೂ ಆಗದು.

ಹೆಚ್ಚಾಗುವ ಚಟುವಟಿಕೆ
ಹೆರಿಗೆಯ ದಿನಗಳು ಸಮೀಪಿಸುತ್ತಿದೆ ಎನ್ನುವಾಗ ನಿಮ್ಮ ಚಟುವಟಿಕೆಗಳು ಹೆಚ್ಚಾಗಬಹುದು. ಮಗುವಿನ ಆಗಮನಕ್ಕಾಗಿ ರೂಮ್ ಸಿದ್ಧಗೊಳಿಸುವುದಾಗಲಿ, ಶಾಪಿಂಗ್‌ಗಾಗಿ ಓಡಾಡ, ಆಸ್ಪತ್ರೆಗೆ ಹೋಗಲು ಬಟ್ಟೆಗಳನ್ನು ಜೋಡಿಸುವುದು, ಮಗುವಿಗಾಗಿ ಬಟ್ಟೆಗಳನ್ನು ಜೋಡಿಸುವುದು, ಸ್ವಚ್ಛಮಾಡುವುದು ಹೀಗೆ ಸಣ್ಣಪುಟ್ಟ ಕೆಲಸಗಳೇ ಹೆಚ್ಚಾಗಬಹುದು. ಅಲ್ಲದೇ ಸುಲಭ ಹೆರಿಗೆಯಾಗಲಿ ಎಂದು ಮಾಡುವ ದೈಹಿಕ ಚಟುವಟಿಕೆಯಿಂದಲೂ ತೂಕದಲ್ಲಿ ಇಳಿಕೆಯಾಗಬಹುದು.
ನಿಮ್ಮ ಹೆರಿಗೆಯ ದಿನಗಳು ಸಮೀಪಿಸುತ್ತಿರುವಾಗ ಯಾವುದೇ ಕಾರಣಕ್ಕೂ ಆಹಾರ ಸೇವನೆಯಲ್ಲಿ ಕಡಿಮೆ ಮಾಡದಿರಿ. ಮೊದಲಿದ್ದಂತೇ ಹೊಟ್ಟೆಯಲ್ಲಿರುವ ಮಗುವಿಗೆ ಪೋಷಕಾಂಶಗಳನ್ನು ನೀಡುವುದು ಅಗತ್ಯ. ಯಾಕೆಂದರೆ ಮಗುವಿನ ತೂಕವೂ ಹೆಚ್ಚಾಗಬೇಕಲ್ಲವೇ.. ಹಸಿವಾಗದಿದ್ದರೂ ಸಾಧ್ಯವಾದಷ್ಟು ಉತ್ತಮ ಆಹಾರಗಳನ್ನು ಸೇವಿಸಿ. ಇನ್ನೊಂದು ವಿಚಾರವೆಂದರೆ ಪದೇ ಪದೇ ಮೂತ್ರವಿಸರ್ಜನೆಗೆ ಹೋಗಬೇಕು ಎನ್ನುವ ಕಾರಣದಿಂದ ನೀರು ಕುಡಿಯದೇ ಇರಬೇಡಿ. ಸಾಕಷ್ಟು ನೀರು ಕುಡಿಯುತ್ತಿರಿ. ಮುಂಬರುವ ಹೆರಿಗೆಯ ದಿನಕ್ಕಾಗಿ, ಪುಟ್ಟ ಮಗುವಿನ ಆಗಮನಕ್ಕಾಗಿ ಸಂತೋಷದಿಂದ ಕಾಯಿರಿ. ಹೆರಿಗೆಯ ದಿನ ಏನಾಗುವುದೋ ಎನ್ನುವ ಭಯ ಆತಂಕ ಬೇಡ. ಸುಸೂತ್ರವಾಗಿ ಹೆರಿಗೆಯಾಗುವುದೆಂಬ ಆತ್ಮವಿಶ್ವಾಸವಿರಲಿ.



Click it and Unblock the Notifications











