Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಸ್ಟಿಲ್ ಬರ್ತ್: ಹೊಟ್ಟೆಯೊಳಗೆ ಮಗು ಸಾವನ್ನಪ್ಪಲು ಕಾರಣವೇನು, ಹೀಗಾದರೆ ಮುಂದೆ ಗರ್ಭಧಾರಣೆಗೆ ತೊಂದರೆಯಾಗುವುದೇ?
ಹೆರಿಗೆ ಎಂಬವುದು ಹೆಣ್ಣಿಗೆ ಮರುಜನ್ಮ ಎಂದು ಹೇಳುತ್ತಾರೆ. ಒಂಭತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಜನ್ಮ ನೀಡುವವರೆಗೆ ಅವಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುತ್ತಾಳೆ. ವಾಂತಿ, ತಲೆಸುತ್ತು, ಊಟ ಸೇರಲ್ಲ ಕೆಲವರಿಗೆ ಉಸಿರಾಟದ ಸಮಸ್ಯೆ, ಬಿಪಿ, ಗರ್ಭಾವಸ್ಥೆಯಲ್ಲಿ ಕಾಡುವ ಶುಗರ್, ಗರ್ಭಿಣಿಯರಿಗೆ ಕಾಡುವ ಮಸಲ್ ಕ್ಯಾಚ್ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಇಷ್ಟೆಲ್ಲಾ ಅನುಭವಿಸಿ ಹೆರಿಗೆ ನೋವುಂಡು ಮುದ್ದಾದ ಮಗು ಮಡಿಲು ತುಂಬಿದರೆ ಆ ನೋವೆಲ್ಲಾ ಮರೆತು ಹೋಗುವುದು.
ದುರಾದೃಷ್ಟವಶಾತ್ ಕೆಲವರಿಗೆ ಹೆರಿಗೆಯಾಗುವಾಗ ಆ ಮಗು ಜೀವಂತವಾಗಿರುವುದಿಲ್ಲ. ಅದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಟಿಲ್ ಬರ್ತ್ ಎಂದು ಕರೆಯಲಾಗುವುದು. ಈ ರೀತಿಯಾಗಲು ಕಾರಣವೇನು? ಈ ರಿತಿಯಾದರೆ ಮುಂದೆ ಗರ್ಭಿಣಿಯಾದಾಗ ತೊಂದರೆಯಾಗುವುದೇ, ಈ ಸ್ಟಿಲ್ ಬರ್ತ್ ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಸ್ಟಿಲ್ ಬರ್ತ್ ಎಂದರೇನು?
ಗರ್ಭಿಣಿಯಾಗಿ 20 ವಾರಗಳ ಬಳಿಕ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದ್ದರೆ ಅದಕ್ಕೆ ಸ್ಟಿಲ್ ಬರ್ತ್ ಎಂದು ಕರೆಯಲಾಗುವುದು.
ಸ್ಟಿಲ್ ಬರ್ತ್ ಅನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ
* ಪ್ರಾರಂಭದಲ್ಲಿ: 20-27 ವಾರದೊಳಗೆ ಸಂಭವಿಸುವುದು
ನಂತರ: 28-36 ವಾರದೊಳಗೆ ಸಂಭವಿಸುವುದು
ಹೆರಿಗೆ ಸಮಯದಲ್ಲಿ: ಕೆಲವರಲ್ಲಿ ಭ್ರೂಣ ಸಂಪೂರ್ಣವಾಗಿ ಬೆಳವಣಿಗೆಯಾದ ನಂತರ ಸ್ಟಿಲ್ ಬರ್ತ್ ಉಂಟಾಗುವುದು.

ಸ್ಟಿಲ್ ಬರ್ತ್‌ನ ಲಕ್ಷಣಗಳೇನು?
ಕೆಲವರಿಗೆ ಹೊಟ್ಟೆಯೊಳಗೆ ಮಗು ತೀರಿ ಹೋಗಿದೆ ಎಂದು ತಕ್ಷಣ ಗೊತ್ತಾಗುವುದಿಲ್ಲ.
* ಮಗುವಿನ ಚಲನೆ ತಿಳಿಯದೇ ಹೋದಾಗ
* ಹೊಟ್ಟೆ ನೋವು, ರಕ್ತಸ್ರಾವ ಉಂಟಾದಾಗ
ಕೂಡಲೇ ನಿಮ್ಮ ವೈದ್ಯರಿಗೆ ಕರೆಮಾಡಿ ಅವರನ್ನು ಭೇಟಿಯಾಗಿ. ಅವರು ಅಲ್ಟ್ರಾಸೌಂಡ್ ಮಾಡುವ ಮೂಲಕ ಮಗುವಿನ ಹಾರ್ಟ್ ರೇಟ್ ಇದೆಯೇ, ಇಲ್ವಾ ಎಂಬುವುದನ್ನು ತಿಳಿಯುತ್ತಾರೆ.

ಸ್ಟಿಲ್ ಬರ್ತ್ ಎಂದು ತಿಳಿದಾಗ ಹೇಗೆ ಹೆರಿಗೆ ಮಾಡಿಸಲಾಗುವುದು?
ಹೊಟ್ಟೆಯೊಳಗೆ ಮಗು ಜೀವಂತವಾಗಿಲ್ಲ ಎಂದು ತಿಳಿದಾಗ ಅದು ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದ, ಹಾಗಾಗಿ ಆ ಗರ್ಭಿಣಿಯ ಮಾನಸಿಕ ಸ್ಥಿತಿ ಹಾಗೂ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಡಲಾಗುವುದು.
ಸ್ಟಿಲ್ ಬರ್ತ್ ಅಂತ ತಿಳಿದಾಗ
ಗರ್ಭಾವಸ್ಥೆ 20-26 ವಾರದೊಳಗೆ ಇದ್ದರೆ D&E (Dilation and evacuation) ವಿಧಾನ ಮೂಲಕ ಅಂದರೆ ಜನನೇಂದ್ರೀಯ ಹಾಗೂ ಗರ್ಭಕೋಶ ಓಪನ್ ಮಾಡಿ ಹೆರಿಗೆ ಮಾಡಿಸಲಾಗುವುದು.
* ಕೆಲವರಿಗೆ ಸ್ವಾಭಾವಿಕ ಹೆರಿಗೆ ನೋವು ಬರುವವರೆಗೆ ಕಾಯಲಾಗುವುದು.
* ಇನ್ನು ಕೆಲವರಿಗೆ ನೀರು ಒಡೆಯುವಂತೆ ಮಾಡಿ ಹೆರಿಗೆ ಮಾಡಿಸಲಾಗುವದುಉ.
* ಇದ್ಯಾವುದು ಸಾಧ್ಯವಿಲ್ಲದಿದ್ದಾಗ ಸಿ ಸೆಕ್ಷನ್ ಮಾಡಬೇಕಾಗುತ್ತದೆ.

ಸ್ಟಿಲ್ ಬರ್ತ್‌ಗೆ ಕಾರಣವೇನು?
ಸ್ಟಿಲ್ ಬರ್ತ್ ಅನೇಕ ಕಾರಣಗಳಿಂದ ಉಂಟಾಗುವುದು, ನಿಖರವಾಗಿ ಒಂದು ಕಾರಣ ಹೇಳುಉದು ಕಷ್ಟ
* ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದಲ್ಲಿ ಸಮಸ್ಯೆಯಿದ್ದರೆ
* ಹೊಕ್ಕಳು ಬಳ್ಳಿ ಸುತ್ತಿಕೊಂಡಿದ್ದರೆ
* ಮಗುವಿಗೆ ಸರಿಯಾಗಿ ರಕ್ತ ಸಂಚಾರವಾಗದಿದ್ದಾಗ
* ಗರ್ಭಿಣಿಗೆ ಆರೋಗ್ಯ ಸಮಸ್ಯೆಯಿದ್ದರೆ
* ಹೆರಿಗೆಯಲ್ಲಿ ತೊಂದರೆಯಾದರೆ
ಜೀವಂತ ಮಗು ಹುಟ್ಟುವುದಿಲ್ಲ.

ಯಾರಿಗೆ ಸ್ಟಿಲ್ ಬರ್ತ್ ಅಪಾಯ ಹೆಚ್ಚು?
* ಅತ್ಯಧಿಕ ರಕ್ತದೊತ್ತಡವಿದ್ದರೆ
* ಕಿಡ್ನಿ ಸಮಸ್ಯೆಯಿದ್ದರೆ
* ಮಧುಮೇಹ
* ಲುಪಸ್
* ಎಪಿಎಸ್ (antiphospholipid syndrome) ರಕ್ತ ಹೆಪ್ಪುಗಟ್ಟುವ ಸಮಸ್ಯೆ
ಸ್ಟಿಲ್ ಬರ್ತ್ ಆದಾಗ ಏನು ಮಾಡಬೇಕು?
ಸ್ಟಿಲ್ ಬರ್ತ್ ಆದಾಗ ಆ ಮಹಿಳೆ ತುಂಬಾನೇ ನೊಂದುಕೊಳ್ಳುತ್ತಾಳೆ, ಆ ಸಮದರ್ಭದಲ್ಲಿ ಮನೆಯವರ ಹಾಗೂ ಗಂಡನ ಬೆಂಬಲ ಬೇಕಾಗುತ್ತದೆ.ಅವಳ ಮೇಲೆ ಪ್ರೀತಿ ತೋರಿ ಆರೈಕೆ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಅವಳ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.
ಒಮ್ಮೆ ಸ್ಟಿಲ್ ಬರ್ತ್ ಆದರೆ ಮುಂದೆ ಗರ್ಭಿಣಿಯಾದರೆ ತೊಂದರೆಯಾಗುವುದೇ?
ಎಷ್ಟೋ ಜನರಿಗೆ ಮೊದಲು ಹುಟ್ಟುವಾಗಲೇ ಮಗು ಸತ್ತಿದ್ದರೂ ನಂತರ ಆರೋಗ್ಯವಂತ ಮಗುವಿಗೆ ಜ್ನಮ ನೀಡಿದ್ದಾರೆ. ಸ್ಟಿಲ್ ಬರ್ತ್ ಆದ ಬಳಿಕ ಗರ್ಭಿಣಿಯಾಗುವವರು ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸಬೇಕು.



Click it and Unblock the Notifications