ಪೋಷಕರೇ ಈ ವಿಚಾರಗಳು ಎಂದಿಗೂ ಮಕ್ಕಳ ಮುಂದೆ ಹೇಳಬೇಡಿ: ಯಾಕೆ ಗೊತ್ತಾ..?

ಮಕ್ಕಳು ಮತ್ತು ಪೋಷಕರ ನಡುವೆ ಅವಿನಾಭಾವ ಸಂಬಧ ಇರುತ್ತದೆ. ಪೋಷಕರಾಗಿ, ನಿಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ಇನ್ನು ಮಕ್ಕಳ ಮೇಲೆ ಮೊದಲು ಪ್ರಭಾವ ಬೀರುವ ವ್ಯಕ್ತಿಗಳೆಂದರೆ ಅದು ಪೋಷಕರು. ಹೌದು, ಹಲವು ಕಡೆ ಯಶಸ್ವಿ ಜನರು ಹೇಳುವ ಮಾತಿದು. ನನ್ನ ತಂದೆಯಿಂದ ನಾನು ಸ್ಪೂರ್ತಿ ಹೊಂದಿದೆ ಎಂದು. ಹೌದು, ಅದಕ್ಕಾಗಿ ಮಕ್ಕಳನ್ನು ನಾವು ಬೆಳೆಸುವಾಗ ಅತೀ ಜಾಗರೂಕರಾಗಿರಬೇಕು. ಹೌದು, ನಾವು ಮಕ್ಕಳ ಜೊತೆ ಯಾವ ರೀತಿ ಇರುತ್ತೇವೆ, ಯಾವ ರೀತಿಯ ಮಾತುಗಳನ್ನು ಆಡುತ್ತೇವೆ ಎಲ್ಲವೂ ಅತೀ ಮುಖ್ಯವಾಗಿದೆ. ಕೆಲವೊಂದು ಬಾರಿ ನಿಮ್ಮ ಮಾತುಗಳು ಪ್ರಪಂಚದ ಎಲ್ಲಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡಬಹುದು. ನಿಮ್ಮ ಮಗುವಿಗೆ ನೀವು ಏನು ಹೇಳುತ್ತೀರೋ ಅದು ಉತ್ತಮ ಅಥವಾ ಕೆಟ್ಟ ಪ್ರಭಾವವನ್ನು ಉಂಟುಮಾಡಬಹುದು. ಆದ್ದರಿಂದ, ಇಲ್ಲಿ ಕೆಲವು ವಿಷಯಗಳನ್ನು ಪೋಷಕರು ಮಕ್ಕಳಿಗೆ ಹೇಳಬಾರದು. ಹಾಗಾದರೆ ಯಾವ ವಿಷಯ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಕ್ಕಳಾಟಿಕೆ ಮಾಡುವುದಕ್ಕೆ ಮಕ್ಕಳನ್ನು ಅವಮಾನಿಸುವುದು!

ಮಕ್ಕಳಾಟಿಕೆ ಮಾಡುವುದಕ್ಕೆ ಮಕ್ಕಳನ್ನು ಅವಮಾನಿಸುವುದು!

ಮಕ್ಕಳು ಎಂದರೆ ಅದು ಮಕ್ಕಳೇ ಅವರು ಮುಗ್ದರಾಗಿರುತ್ತಾರೆ. ಏನೋ ಒಂದು ಮಾಡುತ್ತಾರೆ, ಗಲಾಟೆ ಮಾಡುತ್ತಾರೆ, ಆಟಕ್ಕೆ ಹೋಗುತ್ತಾರೆ, ಎಲ್ಲೋ ಒಂದು ಕಾರ್ಯಕ್ರಮಕ್ಕೆ ಹೋದ ಅಲ್ಲಿ ಏನೋ ರೀತಿಯಲ್ಲಿ ವಿಜೃಂಭಿಸುತ್ತಾರೆ ಅಂದರೆ ಅದು ಮಕ್ಕಳ ಗುಣ ಹೀಗಾಗಿ ಮಕ್ಕಳಾಟಿಕೆ ಮಾಡುವುದಕ್ಕೆ ಮಕ್ಕಳನ್ನು ಯಾವತ್ತು ಟೀಕಿಸಲು ಹೋಗಬೇಡಿ. ಈ ವಿಚಾರವನ್ನು ಯಾವತ್ತೂ ಮಕ್ಕಳ ಜೊತೆ ಹಂಚಿಕೊಳ್ಳಲು ಹೋಗಬೇಡಿ ಇದು ಪೋಷಕರು ಮಾಡಬೇಕಾದ ಮೊದಲ ಕೆಲಸ. ಅವರು ಏನು ಬೇಕಾದರು ಮಾಡಲಿ, ಹೇಗೆ ಬೇಕಾದರೆ ಇರಲಿ ಯಾವತ್ತು ಅವರಿಗೆ ಬೈಯಲು ಹೋಗಬೇಡಿ. ಮಕ್ಕಳ ಜೀವನವನ್ನು ಮಕ್ಕಳು ಅನುಭವಿಸಲಿ. ಒಂದು ನಿರ್ದಿಷ್ಟ ರೀತಿಯಲ್ಲಿ ಏಕೆ ವರ್ತಿಸುತ್ತಾರೆ ಎಂದು ಪ್ರಶ್ನಿಸುವುದು, ವ್ಯಂಗ್ಯದ ಟೀಕೆಗಳನ್ನು ರವಾನಿಸುವುದು ಅಥವಾ ವರ್ತನೆಯಲ್ಲಿ ಬದಲಾವಣೆಗೆ ಒತ್ತಾಯಿಸುವುದು ಸರಿಯಲ್ಲ.

ಈ ಪದಗಳನ್ನು ಯಾವತ್ತು ಮಕ್ಕಳಿಗೆ ಬಳಕೆ ಮಾಡಬೇಡಿ "ನೀನು ಯಾಕೆ ಹಾಗೆ ಮಾತನಾಡುತ್ತಿದ್ದೀಯಾ?", "ನೀನು ಹಾಗೆ ನಡೆಯುವುದು ಚೆನ್ನಾಗಿ ಕಾಣುತ್ತಿದೆಯೇ?", "ನಿನ್ನ ನಡವಳಿಕೆ ತುಂಬಾ ವಿಚಿತ್ರವಾಗಿದೆ".

ಮಕ್ಕಳನ್ನು ಸಾಕಬೇಕು ಎಂದು ಕೊರಗಬೇಡಿ!

ಮಕ್ಕಳನ್ನು ಸಾಕಬೇಕು ಎಂದು ಕೊರಗಬೇಡಿ!

ಕೆಲವರು ಪೋಷಕರು ಇರುತ್ತಾರೆ ತಮಗೆ ಆದ ಸಮಸ್ಯೆಯನ್ನು ಮಕ್ಕಳ ಮೇಲೆ ಹೇರುತ್ತಾರೆ, ಅಥವಾ ಯಾವುದಾದರೂ ತಪ್ಪು ಮಾಡಿದರೆ ಮಕ್ಕಳನ್ನು ಬೈಯುವುದು. ಹೌದು, ಇಂತಹ ತಪ್ಪು ಯಾವ ಪೋಷಕರು ಕೂಡ ಮಾಡಬಾರದು. ಯಾಕೆಂದರೆ ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅವರು ತಪ್ಪು ಮಾಡಿದರೆ ಅವರಿಗೆ ನೀವು ತಿಳಿ ಹೇಳಬೇಕು. ಕೆಲವು ಪೋಷಕರು ಏನು ಮಾಡುತ್ತಾರೆ ಎಂದರೆ ಮಗು ತಪ್ಪು ಮಾಡಿದರೆ ನೀನು ಹುಟ್ಟಿದ ಮೇಲೆ ನನ್ನ ಸಮಯವೇ ಸರಿ ಇಲ್ಲ, ನೀನು ಯಾಕೆ ಹುಟ್ಟಿದ್ದೀಯಾ?, ನಿನಗಾಗಿ ಬಹಳ ಖರ್ಚು ಮಾಡುತ್ತಿದ್ದೇನೆ ಅದು ದಂಡ, ನಿನ್ನನ್ನು ಸಾಕುವುದಕ್ಕಿಂತ ದನ ಸಾಕಬಹುದು.ಕೋಪದಲ್ಲೋ ಅಥವಾ ನೋವಿನಲ್ಲೋ ಈ ರೀತಿಯ ಪದಗಳನ್ನು ಪೋಷಕರು ಬಳಕೆ ಮಾಡುತ್ತಾರೆ. ಈ ರೀತಿಯ ಯಾವುದೇ ಪದ ಬಳಕೆಯನ್ನು ಮಕ್ಕಳ ಮುಂದೆ ಯಾವತ್ತೂ ಮಾಡಬೇಡಿ. ಒಂದು ವೇಳೆ ಅವರಿಗೆ ನಾನು ನನ್ನ ಪೋಷಕರಿಗೆ ಭಾರವಾಗಿದ್ದೇನೆ ಎಂದು ಅನಿಸಿದರೆ ಅವರು ಪ್ರಾಣವನ್ನೇ ಕಳೆದುಕೊಳ್ಳಬಹುದು.

ಹೋಲಿಕೆ ಮಾಡಬೇಡಿ!

ಹೋಲಿಕೆ ಮಾಡಬೇಡಿ!

ಮಕ್ಕಳನ್ನು ಯಾರ ಜೊತೆಯೂ ಹೋಲಿಕೆ ಮಾಡಲು ಹೋಗಬೇಡಿ. ಹೌದು, ನೀನು ಅವನೆ ಹಾಗೇ ಕಲಿಯುವುದಿಲ್ಲ, ನೀನು ಅವಳ ತರ ಆಕ್ಟೀವ್ ಇಲ್ಲ, ನೀನು ಅವನ ತರ ಚಟುವಟಿಕೆ ಮಾಡುತ್ತಿಲ್ಲ. ಈ ರೀತಿ ಹೇಳಿದರೆ ಇದ್ದ ಅವರ ಉತ್ಸಾಹವು ಕಡಿಮೆ ಆಗುತ್ತದೆ. ಹೋಲಿಕೆ ಮಾಡಿದರೆ ತಾನು ಏನು ಇಲ್ಲ ಎಂಬ ಕೀಳರಿಮೆ ಉಂಟಾಗುತ್ತದೆ..? ತನ್ನಲ್ಲಿ ಸಾಮರ್ಥ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಅದು ಸಂಪೂರ್ಣ ನಕರಾತ್ಮಕ ಭಾವನೆಗಳನ್ನು ಉಂಟು ಮಾಡುತ್ತದೆ. ಇದರಿಂದ ಅವರ ಜೀವನವೇ ನಶಿಸಿ ಹೋಗಬಹುದು. ಹೀಗಾಗಿ ಮಕ್ಕಳ ಜೊತೆ ಮಾತನಾಡುವಾಗ ಜಾಗೃತೆಯಿಂದ ಇರಿ. ಅವರನ್ನು ಬೇರೆಯವರಿಗೆ ಹೋಲಿಕೆ ಮಾಡಲು ಹೋಗಿ. ಆತ ಚೆನ್ನಾಗಿ ಕಲಿಯದಿದ್ದರೆ ಕಲಿಯಲು ಪ್ರೇರಿಪಿಸಿ ಬೇರೆಯವರನ್ನು ಉದಾಹರಣೆಕೊಡಬೇಡಿ.

ಮಕ್ಕಳ ನೋಟದಲ್ಲಿ ದೋಷಗಳನ್ನು ಕಂಡುಹಿಡಿಯುವುದು

ಮಕ್ಕಳ ನೋಟದಲ್ಲಿ ದೋಷಗಳನ್ನು ಕಂಡುಹಿಡಿಯುವುದು

ಯಾವುದೇ ಮಗುವಿನ ದೈಹಿಕ ನೋಟವನ್ನು ನಿರ್ಣಯಿಸುವುದು ನೈತಿಕವಾಗಿ ತಪ್ಪು. ಪಾಲಕರು ವಿಶೇಷವಾಗಿ ಈ ಬಗ್ಗೆ ಜಾಗರೂಕರಾಗಿರಬೇಕು ಮತ್ತು ತಮ್ಮ ಮಕ್ಕಳಿಗೆ ಅವರು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಜಾಗೃತಗೊಳಿಸಬಾರದು. ಇದು ಅವರ ಸ್ವಾಭಿಮಾನದ ಮೇಲೆ ಸಮಸ್ಯೆ ಉಂಟು ಮಾಡುತ್ತದೆ. ಅಲ್ಲದೇ ಇದು ಅವರ ಜೀವನದ ಬೆಳವಣಿಗೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅವರ ದೈಹಿಕ ನೋಟದ ಬಗ್ಗೆ ಕಾಮೆಂಟ್ ಮಾಡಲು ಹೋಗಬೇಡಿ. ಈ ಪದಗಳನ್ನು ಪೋಷಕರು ಎಂದಿಗೂ ಮಕ್ಕಳ ಬಳಿ ಹೇಳಬಾರದು. ನೀವು ದಪ್ಪವಾಗಿದ್ದಿ, ನೀನು ತೆಳುವಾಗಿದ್ದಿ, ಈ ಉಡುಗೆಯು ನಿನ್ನನ್ನು ತುಂಬಾ ಅಸಹ್ಯವಾಗಿ ಕಾಣುವಂತೆ ಮಾಡುತ್ತಿದೆ, ನೀನು ನನ್ನಂತೆ ಕೂದಲನ್ನು ಹೊಂದಲು ನಾನು ಬಯಸುತ್ತೇನೆ.

ಪೊಳ್ಳು ಭರವಸೆಗಳನ್ನು ನೀಡಬೇಡಿ!

ಪೊಳ್ಳು ಭರವಸೆಗಳನ್ನು ನೀಡಬೇಡಿ!

ನಮ್ಮಲ್ಲಿ ಅನೇಕ ಪೋಷಕರಿದ್ದಾರೆ ತಾವು ಹೇಳಿದ ಹಾಗೇ ಮಕ್ಕಳು ಇರಬೇಕು ಎನ್ನುವ ಉದ್ದೇಶದಿಂದ ಅವರಿಗೆ ಪೊಳ್ಳು ಭರವಸೆ ನೀಡುವುದು. ಹೌದು, ನೀನು ಸರಿಯಾಗಿ ವರ್ತಿಸಿದರೆ ಈ ವಸ್ತು ಕೊಡುತ್ತೇನೆ ಎನ್ನುವುದು. ಈ ರೀತಿ ಮಾಡುವುದರಿಂದ ನಿಮ್ಮ ಮಕ್ಕಳು ಆ ಸಮಯದಲ್ಲಿ ಅದನ್ನು ಪಾಲನೆ ಮಾಡಬಹುದೇನೋ, ಮತ್ತೆ ಅವರಿಗೆ ಏನಾದರೂ ಸಿಕ್ಕಿದರೆ ಮಾತ್ರ ನೀವು ಹೇಳಿದ ಹಾಗೇ ಅವರು ಮಾಡಬಹುದು. ಅಥವಾ ನೀವು ಒಂದು ಬಾರಿ ಭರವಸೆ ನೀಡಿ ಅದನ್ನು ನೀವು ಪೂರ್ಣಗೊಳಿಸದಿದ್ದರೆ ಅದು ಪೊಳ್ಳು ಭರವಸೆ ಆಗುತ್ತದೆ. ಹಾಗೆ ಮಾಡುವುದರಿಂದ ಅವರು ನಿಮ್ಮಿಂದ ದೂರವಾಗುತ್ತಾರೆ. ನಿಮ್ಮ ಮಗು ನಿಮ್ಮನ್ನು ಎಂದಿಗೂ ನಂಬುವುದಿಲ್ಲ ಮತ್ತು ನಿಮ್ಮ ಮೇಲಿನ ಎಲ್ಲಾ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಈ ಪದಗಳನ್ನು ಯಾವತ್ತು ಮಕ್ಕಳ ಮುಂದೆ ಬಳಸಬೇಡಿ. ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ವರ್ತಿಸಿದರೆ ಈ ವಸ್ತು ನೀಡುತ್ತೇನೆ, ನೀನು ಈ ಬಾರಿ ಉತ್ತಮ ಸ್ಕೋರ್ ತೆಗೆದರು ಸ್ಕೂಟರ್ ತೆಗೆದುಕೊಡುತ್ತೇನೆ. ಹೀಗೆ ಪೊಳ್ಳು ಭರವಸೆ ನೀಡಬೇಡಿ.

ಮಕ್ಕಳ ಬಗ್ಗೆ ಅಸಭ್ಯ ಪದಗಳನ್ನು ಬಳಸುವುದು

ಮಕ್ಕಳ ಬಗ್ಗೆ ಅಸಭ್ಯ ಪದಗಳನ್ನು ಬಳಸುವುದು

ನಿಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯವರು ಆಗಬೇಕಾದರೆ ಪೋಷಕರ ಪಾತ್ರ ಅತೀ ಮುಖ್ಯ. ಅದರಲ್ಲಿ ಮಕ್ಕಳ ಬಗ್ಗೆ ಕೆಟ್ಟದು ಮಾತನಾಡುವುದು ನಿಲ್ಲಿಸಬೇಕು. ಕೆಲವು ಕಡೆ ಮಕ್ಕಳ ಬಗ್ಗೆ ಹಾಗೂ ಮಕ್ಕಳ ಮೇಲೆ ಎಷ್ಟು ಕೆಟ್ಟದಾಗಿ ಪದ ಬಳಕೆ ಮಾಡುತ್ತಾರೆ ಎಂದರೆ ಅವರು ಇದರಿಂದ ಸಮಾಜದಲ್ಲಿ ಕೆಟ್ಟ ಜನರಾಗಿ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಅವರಿಗೆ ಕಠೋರವಾದ, ನಿರ್ದಯ ಪದಗಳನ್ನು ಬಳಸುತ್ತಿದ್ದರೆ, ಅವರು ಗೊಂದಲಕ್ಕೊಳಗಾಗುತ್ತಾರೆ ಮತ್ತು ಪೀಡಿಸಲ್ಪಡುತ್ತಾರೆ. ನೀವು ಅವರ ಸ್ವಾಭಿಮಾನವನ್ನು ಹತ್ತಿಕ್ಕುವ ಬದಲು ಪ್ರೋತ್ಸಾಹ ಮತ್ತು ಬೆಂಬಲದ ಮೂಲವಾಗಿರಬೇಕು. ಹಾಗಾದರೆ ಈ ಪದಗಳನ್ನು ಎಂದು ಮಕ್ಕಳಿಗೆ ಬಳಕೆ ಮಾಡಬೇಡಿ. ನೀವು ತುಂಬಾ ಮೂರ್ಖರು, ನೀವು ಯಾಕೆ ತುಂಬಾ ನಿಷ್ಪ್ರಯೋಜಕರಾಗಿದ್ದೀರಿ? ಎಂಬ ಪದಗಳನ್ನು ಬಳಕೆ ಮಾಡಬೇಡಿ.

English summary

Things Toxic Parents Say To Their Kids in kannada

Here we saying about 6 Things Toxic Parents Say To Their Kids in kannada, readon.
Story first published: Saturday, November 5, 2022, 12:44 [IST]
X
Desktop Bottom Promotion