Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಕಂಡು ಬರುತ್ತಿದೆ ಈ ಆರೋಗ್ಯ ಸಮಸ್ಯೆ
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಾಗ ಅಬ್ಬಾ.. ಅಂತೂ ಕೊರೊನಾ ಕಪಿಮುಷ್ಠಿಯಿಂದ ಪಾರಾದೆವು ಅಂದುಕೊಳ್ಳುವಷ್ಟರಲ್ಲಿ ಕೋವಿಡ್ 19 ನಂತರ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗಳು ಜನರಲ್ಲಿ ಆತಂಕ ಹೆಚ್ಚಿಸಿದೆ. ಅದರಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆ ಪೋಷಕರ ಚಿಂತೆಗೆ ಕಾರಣವಾಗಿದೆ.

ಕೋವಿಡ್ 19ನಿಂದ ಗುಣಮುಖರಾದ ಮಕ್ಕಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ, ತಲೆನೋವು, ಮಾನಸಿಕ ಒತ್ತಡ ( brain fog), ಉಸಿರಾಟದದ ತೊಂದರೆಯ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ದೆಹಲಿಯ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಜ್ಞರು ಹೇಳುವುದಾದರೂ ಏನು?
ಯಾವ ಮಕ್ಕಳಿಗೆ ಕೋವಿಡ್ 19 ಸೋಂಕು ತಗುಲಿ ರೋಗ ಲಕ್ಷಣಗಳು ತೀವ್ರವಾಗಿತ್ತೋ ಅಂಥ ಮಕ್ಕಳಲ್ಲಿ ಈ ರೀತಿಯ ತೊಂದರೆಗಳು ಕಂಡು ಬರುತ್ತಿವೆ. ಕೋವಿಡ್ 19ನಿಂದ ಚೇತರಿಸಿದ 3-4 ತಿಂಗಳವರೆಗೆ ಈ ಸಮಸ್ಯೆಗಳು ಕಂಡು ಬರುತ್ತಿವೆ, ಕೆಲ ಮಕ್ಕಳು ಚೇತರಿಸಿಕೊಳ್ಳುವುದು ನಿಧಾನವಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಹೆಚ್ಚಿನ ರೋಗಿಗಳಲ್ಲಿ ಬೇಧಿ, ತಲೆಸುತ್ತು, ಮೈಕೈ ನೋವು, ಜೀರ್ಣಕ್ರಿಯೆಗೆ ತೊಂದರೆ
ಕೋವಿಡ್ 19ನಿಂದ ಚೇತರಿಸಿದ ಶೇ 1-2ರಷ್ಟು ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ ಅಥವಾ ಎಂಐಎಸ್‌ಸಿ ಸಮಸ್ಯೆ ಕಂಡು ಬರುತ್ತಿದೆ' ಎಂದು ಪೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ರಾಹುಲ್ ನಾಗ್‌ಪಾಲ್ ಹೇಳಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.
ಹಲವು ರೋಗಿಗಳಲ್ಲಿ ಬೇಧಿ, ತಲೆಸುತ್ತು, ಮೈಕೈ ನೋವು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತಿವೆ. ಈ ರೀತಿಯ ರೋಗ ಲಕ್ಷಣಗಳು ಕೋವಿಡ್ 19 ಸೋಂಕಿನಿಂದಲೇ ಕಂಡು ಬರುತ್ತಿದೆಯೇ ಅಥವಾ ಇನ್ನಿತರ ಕಾರಣಗಳಿಂದ ಉಂಟಾಗುತ್ತಿದೆಯೇ ಎಂಬುವುದರ ಬಗ್ಗೆ ಅಧ್ಯಯನಗಳಿಂದ ಇನ್ನಷ್ಟೇ ತಿಳಿಯಬೇಕಾಗಿದೆ.

ಬ್ರೈನ್‌ಫಾಗ್ ಅಥವಾ ಮಾನಸಿಕ ಒತ್ತಡದ ಸಮಸ್ಯೆ
ಕೋವಿಡ್ 19 ನಂತರದ ಸಮಸ್ಯೆಗಳಲ್ಲಿ ಬ್ರೈನ್ ಫಾಗ್ ಕೂಡ ಒಂದು. ಅಂದ್ರೆ ಓದಿದ್ದು ಮರೆತು ಹೋಗುವುದು, ಮಕ್ಕಳು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಈ ರೀತಿಯ ತೊಂದರೆಗಳು ಕಂಡು ಬರುತ್ತಿವೆ.
ಕೊರೊನಾ ಕಾರಣದಿಂದಾಗಿ ಮಕ್ಕಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದ ಕಾರಣ ಇತರ ಮಕ್ಕಳ ಜೊತೆ ಬೆರೆಯದೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎಂದು ಮಾನಸಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಮಕ್ಕಳು ಕೊರೊನಾದಿಂದಾಗಿ ತಮ್ಮ ಕುಟುಂಬದ ಸದಸ್ಯರು ಸಾವನ್ನಪ್ಪಿರುವುದು ನೋಡಿದ್ದಾರೆ. ಇವೆಲ್ಲಾ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿ ಅವರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿರಬಹುದು ಎಂದು ಮ್ಯಾಕ್ಸ್ ಆಸ್ಪತ್ರೆಯ ಮಾನಸಿಕ ತಜ್ಞ ಡಾ. ಶ್ಯಾಮ್ ಕುರ್ಜೆಜಾ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ಮಕ್ಕಳಿಗೆ ಅಪಾಯಕಾರಿಯೇ?
ಈಗ ಕಂಡು ಬರುತ್ತಿರುವ ಡೆಲ್ಟಾ ಪ್ಲಸ್ ವೈರಸ್ 18 ವರ್ಷ ಕೆಳಗಿನ ಮಕ್ಕಳಿಗೆ ಅಪಾಯಕಾರಿಯಾಗಬಹುದು ಎಂದು ಕೆಲ ತಜ್ಞರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲ ತಜ್ಞರು ಈ ರೂಪಾಂತರ ವೈರಸ್ ಅಷ್ಟೇನು ಗಂಭೀರ ಸ್ವರೂಪದ್ದಲ್ಲ, ಆದ್ದರಿಂದ ಭಯ ಪಡಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಲಸಿಕೆ ಡ್ರೈವ್ ನಡೆಯುತ್ತಿದ್ದು ಬಹುತೇಕ ಎಲ್ಲರಿಗೆ ಲಸಿಕೆ ಸಿಕ್ಕರೆ ಈ ವೈರಸ್ ತಡೆಗಟ್ಟುವುದು ಸುಲಭವಾಗುವುದು.



Click it and Unblock the Notifications