Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಹಣದ ಮೌಲ್ಯದ ಬಗ್ಗೆ ಮಕ್ಕಳಿಗೆ ತಿಳಿಸೋದು ಹೇಗೆ?
ದುಡ್ಡಿನ ಮೌಲ್ಯ ತಿಳಿದವನಿಗಷ್ಟೇ ಜಗತ್ತಿನಲ್ಲಿ ಬದುಕೋದಕ್ಕೆ ಸಾಧ್ಯ. ಬಡವರಾಗಲಿ-ಶ್ರೀಮಂತರಾಗಲಿ ಸಣ್ಣವರಿದ್ದಾಗಲೇ ಮಕ್ಕಳಿಗೆ ಹಣದ ಮೌಲ್ಯ ಏನು ಎಂಬುವುದನ್ನು ಅರ್ಥ ಮಾಡಿಸಬೇಕು. ಇಲ್ಲವಾದರೆ ಸಣ್ಣ ವಯಸ್ಸಿನಲ್ಲಿ ದುಶ್ಚಟಗಳ ಮೋಹಕ್ಕೆ ಬಿದ್ದು ಬದುಕು ಹಾಳು ಮಾಡಿಕೊಳ್ಳುತ್ತಾರೆ.

ದುಡ್ಡಿನ ಮೋಹಕ್ಕೆ ಬಿದ್ದರೆ ಸಣ್ಣ ವಯಸ್ಸಿನಲ್ಲೇ ಮಕ್ಕಳ ಭವಿಷ್ಯ ಹಾಳಾಗಬಹುದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಮಕ್ಕಳು ಬೆಳೆಯುತ್ತಿರಬೇಕಾದರೆ ಹಣದ ಮಹತ್ವ ಎಂತಹದ್ದು ಅನ್ನೋದನ್ನ ತಿಳಿಸಿಕೊಡಿ. ಹಾಗಾದ್ರೆ ಪೋಷಕರು ಮಕ್ಕಳಿಗೆ ಕಲಿಸಲೇಬೇಕಾದ ದುಡ್ಡಿನ ಮಹತ್ವದ ಪಾಠಗಳು ಯಾವುದು ಅನ್ನೋದನ್ನ ತಿಳಿಯೋಣ.

1. ಚಿಕ್ಕವಯಸ್ಸಿನಲ್ಲೇ ಹಣದ ಪರಿಚಯ ಮಾಡಿಕೊಡಿ
ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಏನೇ ಕೊಟ್ಟರು ಅದನ್ನು ಹರಿದು ಹಾಕುತ್ತಾರೆ. ಬಣ್ಣಗಳ ಗುರುತಿಸುವಿಕೆಯ ಮೂಲಕ ಮಕ್ಕಳಿಗೆ ಹಣದ ಪರಿಚಯ ಮಾಡಿಕೊಡಿ. ಇನ್ನೂ ನೋಟು ಹಾಗೂ ಚಿಲ್ಲರೆಗಿರುವ ವ್ಯತ್ಯಾಸವನ್ನು ತಿಳಿಸಿಕೊಡಿ.

2. ದುಡ್ಡು ಮರದಲ್ಲಿ ಬೆಳೆಯುವುದಿಲ್ಲ ಎಂಬುದನ್ನು ಅರ್ಥೈಸಿ
ಮಕ್ಕಳು ಇನ್ನೇನು ದೊಡ್ಡವರಾಗುತ್ತಿದ್ದಾರೆ ಅನ್ನೋವಾಗ ಮನೆಯಲ್ಲಿ ಪದೇ ಪದೇ ದುಡ್ಡು ಕೇಳಲು ಶುರು ಮಾಡುತ್ತಾರೆ. ಆ ಹಣ ಎಲ್ಲಿಂದ ಬರುತ್ತೆ ಅನ್ನೋದು ಅವರಿಗೆ ಗೊತ್ತಿರೋದಿಲ್ಲ. ಅಪ್ಪನ ಪಾಕೇಟ್‌ನಲ್ಲಿ ಸಿಕ್ಕಾಪಟ್ಟೆ ಹಣ ಇರುತ್ತೆ ಅಂತ ಲೆಕ್ಕಾಚಾರ ಹಾಕಿರುತ್ತಾರೆ. ಆ ಹಣ ಕಷ್ಟಪಟ್ಟು ದುಡಿದರಷ್ಟೇ ಬರುತ್ತೆ ಎಂಬ ಸತ್ಯವನ್ನು ತಿಳಿಸಿ.

3. ಪಾಕೆಟ್ ಮನಿ ನೀಡಿ
ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕ ಮೊತ್ತದ ಪಾಕೆಟ್ ಮನಿ ಕೊಡುವುದು ಉತ್ತಮ. ಅವರಿಗೊಂದು ಪಿಗ್ಗಿ ಬ್ಯಾಂಕ್ ತಂದು ಕೊಟ್ಟು ಅದರಲ್ಲಿ ಹಣವನ್ನು ಕೂಡಿಟ್ಟುಕೊಳ್ಳಲು ತಿಳಿಸಿ. ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಸಿ ಅದಕ್ಕೆ ತಕ್ಕಂತೆ ರೂಪಾಯಿ ಲೆಕ್ಕದಲ್ಲಿ ದುಡ್ಡುಕೊಡಿ. ಒಂದು ಸಲ ಖರ್ಚಾದರೆ ಮತ್ತೆ ಪುನಃ ದುಡ್ಡು ಕೊಡಲು ಹೋಗಬೇಡಿ. ಆಗ ಅವರು ಹಣದ ಮಹತ್ವ ಅರಿತುಕೊಳ್ಳುತ್ತಾರೆ.

4. ಸೇವಿಂಗ್‌ನ ಮಹತ್ವ ತಿಳಿಸಿ
ಜೀವನದಲ್ಲಿ ಸೇವಿಂಗ್ ತುಂಬಾನೇ. ಬಂದ ದುಡ್ಡನ್ನೆಲ್ಲಾ ಸಿಕ್ಕಾಪಟ್ಟೆ ಖರ್ಚು ಮಾಡಿದರೆ ಕೈಯಲ್ಲಿ ಒಂದು ರೂಪಾಯಿಯು ಉಳಿಯುವುದಿಲ್ಲ. ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸೇವಿಂಗ್ ಮಾಡುವ ಹವ್ಯಾಸವನ್ನು ಬೆಳೆಸಿ. ಮುಂದೆ ದೊಡ್ಡವರಾದ ಮೇಲೆ ಇತಿ-ಮಿತಿಯಿಂದ ದುಡ್ಡು ಖರ್ಚು ಮಾಡುತ್ತಾರೆ.

5. ಹಣದ ಆಟಕ್ಕೆ ಪ್ರೋತ್ಸಾಹಿಸಿ
ಮಕ್ಕಳ ಕೈಯಲ್ಲಿ ಇಂತಿಷ್ಟು ದುಡ್ಡು ಕೊಟ್ಟು ಇದೇ ದುಡ್ಡಿನಲ್ಲಿ ಅತಿ ಹೆಚ್ಚು ವಸ್ತುಗಳನ್ನು ಖರೀದಿಸಲು ತಿಳಿಸಿ. ಅವರಷ್ಟಕ್ಕೆ ಅವರು ಖರೀದಿಸಲು ಹೋದಾಗ ಮಕ್ಕಳಿಗೆ ವಸ್ತುಗಳ ಬೆಲೆ ತಿಳಿಯುತ್ತದೆ.

6. ಶಾಪಿಂಗ್‌ಗೆ ಕರೆದುಕೊಂಡು ಹೋಗಿ
ನೀವು ಶಾಪಿಂಗ್‌ಗೆ ಹೋದಾಗ ಮಕ್ಕಳನ್ನು ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ. ಖರೀದಿ ಮಾಡುವ ವಸ್ತುವಿನ ಬೆಲೆಯನ್ನು ಮಕ್ಕಳಿಗೂ ತಿಳಿಸಿ. ಯಾವ ಬ್ರಾಂಡ್‌ನ ವಸ್ತುಗಳು ಎಂತಹ ಬೆಲೆಗೆ ಲಭ್ಯವಾಗುತ್ತದೆ. ಯಾವುದು ಉತ್ತಮ ಹಾಗೂ ಯಾವುದು ಉತ್ತಮ ಅಲ್ಲ ಅನ್ನುವುದರ ಅರಿವು ಮೂಡಿಸಿ

7. ಲಕ್ಷುರಿ ಮತ್ತು ಅಗತ್ಯ ವಸ್ತುಗಳ ವ್ಯತ್ಯಾಸ ತಿಳಿಸಿ
ನಮಗೆ ಅಗತ್ಯ ವಸ್ತುಗಳು ಯಾವುದು ಹಾಗೂ ಲಕ್ಷುರಿ ವಸ್ತುಗಳು ಯಾವುದು ಎಂಬುದನ್ನು ತಿಳಿಸಿ. ಅಗತ್ಯ ವಸ್ತುಗಳ ಮಹತ್ವ ಹಾಗೂ ಲಕ್ಷುರಿ ವಸ್ತುಗಳ ಅನಗತ್ಯತೆ ಬಗ್ಗೆ ತಿಳಿಸಿ. ಯಾವಾಗ ನಾವು ಲಕ್ಷುರಿ ವಸ್ತುಗಳನ್ನು ಖರೀದಿಸಿರೆ ಉತ್ತಮ ಎಂಬ ಬಗ್ಗೆ ಅರಿವು ಮೂಡಿಸಿ.
ಮಕ್ಕಳಿಗೆ ಚಿಕ್ಕಂದಿನಿಂದಲೇ ಈ ಎಲ್ಲಾ ವಿಚಾರಗಳ ಬಗ್ಗೆ ಪೋಷಕರು ಸರಿಯಾಗಿ ತಿಳಿಸಿಕೊಡಬೇಕು. ಮುಂದೆ ದೊಡ್ಡವರಾದ ಮೇಲೆ ಅವರ ಜೀವನವನ್ನು ಕಟ್ಟಿಕೊಳ್ಳಲು ಇಂಥಹ ಪಾಠಗಳು ನೆರವಾಗುತ್ತದೆ.



Click it and Unblock the Notifications











