Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಕೋವಿಡ್ 19 ಬಂದ ಮಕ್ಕಳಲ್ಲಿ ಕಂಡು ಬರುತ್ತಿದೆ MIS-C ಎಂಬ ಅಪಾಯಕಾರಿಯಾದ ಕಾಯಿಲೆ
ಕೋವಿಡ್ 19ನಿಂದ ಚೇತರಿಸಿಕೊಂಡವರು ನೆಮ್ಮದಿಯ ಉಸಿರು ಬಿಡುವಂತಿಲ್ಲ. ಏಕೆಂದರೆ ಕೋವಿಡ್ 19 ಬಳಿಕ ಹಲವರಿಗೆ ಹಲವು ಬಗೆಯ ಸಮಸ್ಯೆಗಳು ಕಂಡು ಬರುತ್ತಿವೆ. ಕೋವಿಡ್ 19ನಿಂದ ಚೇತರಿಸಿದ ಕೆಲ ಮಕ್ಕಳಲ್ಲಿ MIS-C ಲಕ್ಷಣಗಳು ಕಂಡು ಬರುತ್ತಿರುವುದು ಪೋಷಕರಿಗೆ ಆತಂಕ ಉಂಟು ಮಾಡುತ್ತಿದೆ. MIS-C ಎಂದರೆ ವೈದ್ಯಕೀಯ ಭಾಷೆಯಲ್ಲಿ Multisystem Inflammatory Syndrome ಎಂದು ಕರೆಯಲಾಗುವುದು.

ಇಂಥ ಸಮಸ್ಯೆ ಮೊದಲಿಗೆ 2020ರಲ್ಲಿ ಅಮೆರಿಕ ಹಾಗೂ ಯುಕೆಯಲ್ಲಿ ಕಂಡು ಬಂತು. ಭಾರತದ ಕೆಲ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಿದ್ದೆವು. ಶಾಲೆ ಪ್ರಾಯದ ಮಕ್ಕಳಲ್ಲಿ ಇಂಥ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು ಈ ಲಕ್ಷಣಗಳು ಕಂಡು ಬಂದರೆ ತುಂಬಾನೇ ಅಪಾಯಕಾರಿ.

MIS-C ಎಂದರೇನು, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:
MIS-C ಲಕ್ಷಣಗಳು ಮಕ್ಕಳಲ್ಲಿ ಕಂಡು ಬರುವ ಕವಾಸಕಿ ಕಾಯಿಲೆಯನ್ನು ಹೋಲುತ್ತದೆ. ಎರಡೂ ಕಾಯಿಲೆಯಲ್ಲೂ ಉರಿಯೂತದ ಸಮಸ್ಯೆ ಉಂಟಾಗುತ್ತದೆ.
ಕೋವಿಡ್ 19 ಸೋಂಕಿನಿಂದ ಚೇತರಿಸಿದ 4 ವಾರಗಳ ಬಳಿಕ ಮಕ್ಕಳಲ್ಲಿ MIS-C ಲಕ್ಷಣಗಳು ಕಂಡು ಬರುತ್ತಿದೆ.
MIS-C ಕಾಯಿಲೆಯ ಲಕ್ಷಣಗಳು
* ಪ್ರಾರಂಭದಲ್ಲಿ ಜ್ವರದ ಜೊತೆಗೆ ಮೈಯಲ್ಲಿ ಗುಳ್ಳೆಗಳು ಕಂಡು ಬರುವುದು
* ಕಣ್ಣುಗಳು ಕೆಂಪಾಗುವುದು
* ವಾಂತಿ-ಬೇಧಿ (ದಿನ ಕಳೆದಂತೆ ಪರಿಸ್ಥಿತಿ ಕೆಟ್ಟದಾಗುವುದು)
* ಈ ಉರಿಯೂತ ಹೃದಯ ಹಾಗೂ ರಕ್ತ ನಾಳಗಳಿಗೆ, ಇತರ ಅಂಗಾಂಗಗಳಿಗೆ ತೊಂದರೆ ಉಂಟಾಗುವುದು.
ಆದ್ದರಿಂದ ಇಂಥ ಲಕ್ಷಣಗಳು ಕಂಡು ಬಂದ ತಕ್ಷಣ ಕೂಡಲೇ ಮಕ್ಕಳ ತಜ್ಞರ ಬಳಿ ಕೊಂಡೊಯ್ಯಿರಿ.

MIS-C ಬಗ್ಗೆ ತಜ್ಞರು ಏನು ಹೇಳುತ್ತಾರೆ?
* ಕೋವಿಡ್ 19 ಬಳಿಕ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪರೂಪದ ಕಾಯಿಲೆ ಇದಾಗಿದೆ.
* ಮಕ್ಕಳಲ್ಲಿ ಏನಾದರೂ ಇಂಥ ಲಕ್ಷಣಗಳು ಕಂಡು ಬಂದರೇ ಕುಡಲೇ ಮಕ್ಕಳ ತಜ್ಞರ ಬಳಿ ಕರೆತರಬೇಕು.
* ಶಾಲೆ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ. ಸಾಮಾನ್ಯವಾಗಿ 8-9 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಚಿಕ್ಕ ಮಗುವಿನಲ್ಲೂ, ಹದಿ ಹರೆಯದ ಪ್ರಾಯದವರಲ್ಲೂ ಈ ಲಕ್ಷಣಗಳು ಕಂಡು ಬರುತ್ತಿವೆ.
* ಕೋವಿಡ್ 19 ಸೋಂಕು ತಗುಲಿದ 2-6 ವಾರಗಳ ಒಳಗೆ ಇಂಥ ಕಾಯಿಲೆಯ ಲಕ್ಷಣಗಳು ಕಂಡು ಬರುವುದು.
* MIS-C ಕಾಯಿಲೆಯನ್ನು ಗುಣಪಡಿಸಬಹುದು. ಆದರೆ ಮಕ್ಕಳಿಗೆ ಬೇಗನೆ ಚಿಕಿತ್ಸೆ ಕೊಡಿಸಬೇಕು, ಇಲ್ಲದಿದ್ದರೆ ಅಂಗಾಂಗಗಳಿಗೆ ತೊಂದರೆಯಾಗುವುದು.

MIS-Cಗೆ ಚಿಕಿತ್ಸೆ
MIS-C ಪತ್ತೆಯಾದರೆ ಅದನ್ನು ಗುಣಪಡಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಸ್ಟಿರಾಯ್ಡ್ಸ್ ಹಾಗೂ ಆ್ಯಂಟಿ ಇನ್‌ಫ್ಲೇಮಟರಿ ಡ್ರಗ್ಸ್ ಇವುಗಳನ್ನು ನೀಡಲಾಗುವುದು. ಈ ಚಿಕಿತ್ಸೆಗಳ ಮೂಲಕ ಮಕ್ಕಳ ಹೃದಯ, ಕಿಡ್ನಿ ಇತರ ಅಂಗಾಂಗಗಳಿಗೆ ಹಾನಿಯುಂಟಾಗುವುದನ್ನು ತಡೆಯಲಾಗುವುದು.

MIS-C ಹಾಗೂ ಕೋವಿಡ್ 19 ನಡುವಿನ ಸಂಬಂಧವೇನು?
ಕೋವಿಡ್ 19 ತಗುಲಿದಾಗ MIS-C ಕೂಡ ಉಲ್ಭಣವಾಗುವುದು. ರೋಗ ಲಕ್ಷಣಗಳು ಇಲ್ಲದ ಕೋವಿಡ್ 19 ತಗುಲಿದ ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡುಬರಬಹುದು. ಕೋವಿಡ್ 19 ತಗುಲಿದ ಬಳಿಕ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಏಕೆ ಕಂಡು ಬರುತ್ತದೆ ಎಂಬುವುದರ ಬಗ್ಗೆ ಅನೇಕ ಅಧ್ಯಯನಗಳನ್ನು ಮಾಡಲಾಗುತ್ತಿದೆ.



Click it and Unblock the Notifications
