Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಸಾಕು ಪ್ರಾಣಿಗಳ ಸಾವು ತರುವುದು ಮಕ್ಕಳ ಮನಸ್ಸಿಗೆ ಆಘಾತ: ಪೋಷಕರೇ ಎಚ್ಚರ
According to a new study the death of pet can trigger mental health issues in children read on....
ಮಕ್ಕಳು ಹಾಗೂ ಸಾಕು ಪ್ರಾಣಿಗಳಿರುವ ಮನೆಯಲ್ಲಿ ಸದಾ ಒಂದು ರೀತಿಯ ಕಲರವ, ಖುಷಿ ಇರುತ್ತದೆ. ಎಷ್ಟೇ ಒತ್ತಡವಿರಲಿ, ಚಿಂತೆಯಿರಲಿ ಮಕ್ಕಳ ತುಂಟಾಟ, ಸಾಕು ಪ್ರಾಣಿಗಳು ತೋರುವ ಪ್ರೀತಿ ನೋಡಿದರೆ ಮನಸ್ಸಿಗೆ ರಿಲ್ಯಾಕ್ಸ್ ಆಗುವುದು.
ಇನ್ನು ಎಷ್ಟೋ ಮನೆಗಳಲ್ಲಿ ಸಾಕುಪ್ರಾಣಿಗಳು ಹಾಗೂ ಮಕ್ಕಳು ಒಂದಕ್ಕೊಂದು ತುಂಬಾ ಹಚ್ಚಿಕೊಂಡು ಬಿಟ್ಟಿರುತ್ತವೆ. ಊಟ, ತಿಂಡಿ, ಆಟ, ತುಂಟಾಟ ಎಲ್ಲವೂ ಜೊತೆಗೆ ಮಾಡುತ್ತವೆ. ಕೆಲವು ಸಾಕು ಪ್ರಾಣಿಗಳು ಅದರಲ್ಲೂ ನಾಯಿ ಮಕ್ಕಳ ಬಗ್ಗೆ ಕೇರ್ ತೆಗೆದುಕೊಳ್ಳುತ್ತವೆ. ಇನ್ನು ಕೆಲ ಮನೆಗಳಲ್ಲಿ ಒಂದೇ ಮಗು ಇರುತ್ತದೆ. ಅದಕ್ಕೆ ಆಟ ಆಡಲು ಯಾರೂ ಇರುವುದಿಲ್ಲ. ಆಗ ಸಾಕು ಪ್ರಾಣಿಯಿದ್ದರೆ ಅದನ್ನು ತುಂಬಾ ಹಚ್ಚಿಕೊಂಡು ಬಿಟ್ಟಿರುತ್ತದೆ. ಆ ಪ್ರಾಣಿಗಳೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಟ್ಟಿರುತ್ತದೆ.
ಇತ್ತೀಚೆಗೆ ಅಧ್ಯಯನವೊಂದು ಸಾಕು ಪ್ರಾಣಿಗಳ ಸಾವು ಮಕ್ಕಳ ಮನಸ್ಸಿನ ಮೇಲೆ ಅವರ ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಿದೆ.

ಅಧ್ಯಯನ ವರದಿ
ಸಾಕು ಪ್ರಾಣಿಗಳನ್ನು ಇಷ್ಟಪಡುವವರು ಅದರೊಂದಿಗೆ ಭಾವನಾತ್ಮಕವಾಗಿ ತುಂಬಾನೇ ಬೆಸೆದಿರುತ್ತಾರೆ. ಅಂಥ ಸಾಕುಪ್ರಾಣಿ ಒಂದು ದಿನ ಸಾವನ್ನಪ್ಪಿದಾಗ ಮನಸ್ಸಿಗೆ ತುಂಬಾ ನೋವು ಉಂಟಾಗುವುದು. ಅದರಲ್ಲೂ ಮಕ್ಕಳ ಮನಸ್ಸಿಗೆ ತುಂಬಾನೇ ನೋವುಂಟು ಮಾಡುವುದು. ಯುರೋಪಿಯನ್‌ನ ಎಂ ಜಿ ಹೆಚ್ (Massachusetts General Hospital)ನಲ್ಲಿ ಅಧ್ಯನ ನಡೆಸಿದ ಮಾನಸಿಕ ತಜ್ಞರು ಈ ಕುರಿತು ಹೇಳಿದ್ದಾರೆ.
ಸಾಕು ಪ್ರಾಣಿಗಳು ಸಾವನ್ನಪ್ಪಿದ್ದರೆ ಅದರ ದುಃಖ ಅವರ ಮನಸ್ಸಿನಲ್ಲಿ ಎರಡರಿಂದ ಮೂರು ವರ್ಷ ಇರುತ್ತದೆ, ಇನ್ನು ಕೆಲ ಮಕ್ಕಳಲ್ಲಿ ಆ ಪ್ರಾಣಿಯ ನೆನಪು ಅವರನ್ನು ಕಾಡುತ್ತಿರುತ್ತದೆ ಎಂದು ಅಧ್ಯಯನ ಹೇಳಿದೆ.

ಮಕ್ಕಳ ಬಗ್ಗೆ ಪೋಷಕರು ಗಮನಹರಿಸಬೇಕು
ಮನೆಯ ಸದಸ್ಯನಂತೆ ಸಾಕು ಪ್ರಾಣಿ ಸಾವನ್ನಪ್ಪಿದರೆ ಮನೆಯವರಿಗೆಲ್ಲಾ ತುಂಬಾನೇ ಬೇಸರವಾಗುವುದು. ಆದರೆ ಮಕ್ಕಳ ಮನಸ್ಸಿನಲ್ಲಿ ಆ ನೋವು ತುಂಬಾ ಗಾಢವಾಗಿರುತ್ತದೆ. ಇದರಿಂದ ಮಾನಸಿಕ ಸಮಸ್ಯೆಯ ಲಕ್ಷಣಗಳು ಕಂಡು ಬರುವುದು. ಇದನ್ನು ಪೋಷಕರು ನಿರ್ಲಕ್ಷ್ಯ ಮಾಡಬಾರದು. ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಲಕ್ಷಣಗಳನ್ನು ಪೋಷಕರು ಗುರುತಿಸುವುದರಿಂದ ಮುಂದೆ ಉಂಟಾಗುವ ಅಪಾಯ ತಪ್ಪಿಸಬಹುದು.

ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವುದು
ಸಾಕು ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಪ್ರೀತಿ ಒಂದು ರೀತಿಯ ಭಾವನಾತ್ಮಕವಾದ ಬಂಧ ಏರ್ಪಟ್ಟಿರುತ್ತದೆ. ಅದರಲ್ಲೂ ಸಾಕು ಪ್ರಾಣಿಗಳ ಸಾವು ಮೊದಲ ಏಳು ವರ್ಷದ ಒಳಗೆ ತುಂಬಾ ಗಾಢವಾದ ಪರಿಣಾಮ ಬೀರುತ್ತದೆ. ಈ ಅಧ್ಯಯನದಲ್ಲಿ 6, 260 ಮಕ್ಕಳು ಅವರ ಪೋಷಕರ ಬಳಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಲಾಯಿತು. ಇದರಲ್ಲಿ ಶೇ. 63ರಷ್ಟು ಮಕ್ಕಳಲ್ಲಿ ಸಾಕು ಪ್ರಾಣಿಗಳ ಸಾವು ಮಕ್ಕಳ ಮನಸ್ಸಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿರುವುದು ತಿಳಿದು ಬಂತು. ಅದರಲ್ಲೂ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಮನಸ್ಸಿನ ತುಂಬಾ ಪರಿಣಾಮ ಬೀರುವುದು ಎಂದು ಈ ಅಧ್ಯಯನ ಹೇಳಿದೆ.

ಪೋಷಕರು ಏನು ಮಾಡಬೇಕು?
ಮಕ್ಕಳು ತುಂಬಾ ನೆಚ್ಚಿಕೊಂಡಿದ್ದ ಸಾಕು ಪ್ರಾಣಿಗಳು ಸಾವನ್ನಪ್ಪಿದರೆ ಅದರ ನೋವು ಕೆಲವು ದಿನ ಇರುವುದು ಸಹಜ. ಆದರೆ ತುಂಬಾ ದಿನಗಳಾದರು ಅವರಲ್ಲಿ ಆ ನೋವು ಕಾಡುತ್ತಿದ್ದರೆ ಅವರಿಗೆ ಸಮಧಾನ ಪಡಿಸುವಂತೆ ಮಾತನಾಡಿ. ಅಲ್ಲದೆ ಅವರು ಅದನ್ನು ಮರೆಯುವಂತೆ ಮಾಡಿ. ಅಂದರೆ ಬೇರೆ ಸಾಕು ಪ್ರಾಣಿ ತಂದು ಅದರ ಜೊತೆ ಆಡುವಂತೆ ಮಾಡುವುದು ಅಥವಾ ಯಾವುದಾದರೂ ಆಟದಲ್ಲಿ ಅವರನ್ನು ಮಗ್ನರಾಗಿರುವಂತೆ ನೋಡಿಕೊಳ್ಳಿ.



Click it and Unblock the Notifications











