Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
15-18 ವರ್ಷದವರು ಕೋವಿಡ್ ಲಸಿಕೆಗಾಗಿ ನೋಂದಣಿ ಮಾಡುವುದು ಹೇಗೆ?
ಮಕ್ಕಳಿಗೆ ಯಾವಾಗ ಲಸಿಕೆ ಬರುತ್ತದೆ ಎಂದು ಪೋಷಕರು ಆತಂಕದಿಂದ ಎದುರು ನೋಡುತ್ತಿದ್ದರು, ಮಕ್ಕಳಿಗೆ ಶಾಲೆ ಶುರುವಾಗಿರುವುದರಿಂದ ಲಸಿಕೆ ಬಂದ್ರೆ ಸಾಕು ಎಂದು ಪೋಷಕರು ಬಯಸುತ್ತಿದ್ದಾರೆ, ಅದರಲ್ಲಿ ಈಗ ಹದಿ ಹರೆಯದ ಪ್ರಾಯದವರಿಗೆ 15-18 ವರ್ಷದವರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಜನವರಿ 1ರಿಂದ CoWIN ಆ್ಯಪ್‌ನಲ್ಲಿ ನೋಂದಣ ಮಾಡಿ ಲಸಿಕೆ ಪಡೆಯಬಹುದು.
ನೋಂದಣಿ ಮಾಡಲು ಏನೆಲ್ಲಾ ದಾಖಲೆಗಳು ಬೇಕು, ನೋಂದಣಿ ಮಾಡುವುದು ಹೇಗೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ನೋಂದಣಿ ಮಾಡಲು ಬೇಕಾದ ದಾಖಲೆ
* CoWIN ಆ್ಯಪ್‌ನಲ್ಲಿ ನೋಂದಣಿ ಮಾಡಲು ಸ್ಟೂಡೆಂಟ್ ಐಡಿ (ವಿದ್ಯಾರ್ಥಿಗಳ ಐಡಿ ಕಾರ್ಡ್) ಬೇಕು. ಏಕೆಂದರೆ ಕೆಲ ಮಕ್ಕಳಿಗೆ ಆಧಾರ್ ಅಥವಾ ಇತರ ದಾಖಲೆಗಳು ಇರುವುದಿಲ್ಲ, ಆದ್ದರಿಂದ ಸ್ಟೂಡೆಂಟ್ ಐಡಿ ಕಾರ್ಡ್ ಡಾಂಕ್ಯೂಮೆಂಟ್ ಆಗಿ ನೀಡಬಹುದು.
* ಇದುವರೆಗೆ ವಯಸ್ಕರು ಹೇಗೆ ನೋಂದಣಿ ಮಾಡಿಕೊಳ್ಳುತ್ತಿದ್ದರೋ ಅದೇ ರೀತಿ ನೋಂದಣಿ ಮಾಡಬಹುದು.
ಒಮಿಕ್ರಾನ್ ಆತಂಕ ಎದುರಾಗಿರುವುದಿಂದ 2007ಕ್ಕಿಂತ ಮೊದಲು ಜನಿಸಿದವರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ.
ಇದೀಗ ಮಕ್ಕಳಲ್ಲಿ ಕೋವಿಡ್ 19 ಸೋಂಕು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಸರ್ಕಾರ 15-18 ವರ್ಷದ ಪ್ರಯದವರಿಗೆ ಲಸಿಕೆ ನೀಡಲು ಮುಂದಾಗಿದೆ.

ಮಕ್ಕಳಿಗೆ ಯಾವ ಲಸಿಕೆ ನೀಡಲಾಗುತ್ತಿದೆ?
ಭಾರತದಲ್ಲಿ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಡಬಲ್ ಡೋಸ್ ವ್ಯಾಕ್ಸಿನ್ ಕೊವಾಕ್ಸಿನ್ ಅಥವಾ ಜೈಡಸ್ ಕ್ಯಾಡಿಲಾದ ZyCoV-D ಮೂರು ಡೋಸ್ ಲಸಿಕೆಗಳಲ್ಲಿ ಯಾವುದಾದರೂ ಒಂದು ಕಂಪನಿಯ ಲಸಿಕೆ ನೀಡಲಾಗುವುದು. ಈ ಎರಡೂ ಕಂಪನಿಯ ಲಸಿಕೆಗಳು ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂಬುವುದು ಕ್ಲಿನಿಕಲ್ ಟ್ರಯಲ್‌ನಿಂದ ಸಾಬೀತಾಗಿದೆ.

ಚಿಕ್ಕ ಮಕ್ಕಳಿಗೆ ಲಸಿಕೆ ಯಾವಾಗ ಸಿಗುವುದು?
7-11 ವರ್ಷದ ಮಕ್ಕಳಿಗೆ ಸೆರಮ್ ಇನ್ಸಿಟ್ಯೂಟ್‌ನ ನೊವಾವ್ಯಾಕ್ಸ್‌ಗೆ, 5 ವರ್ಷದ ಮೇಲಿನ ಮಕ್ಕಳಿಗೆ ಬಯೋಲಾಜಿಕಲ್ E's Corbevaxಗೆ ಸುರಕ್ಷಿತವಾದ ಲಸಿಕೆ ಎಂದು ಡ್ರಗ್ ಕಂಟ್ರೋಲರ್ (ಔಷಧ ನಿಯಂತ್ರಕ ಸಂಸ್ಥೆ) ಅನುಮತಿ ನೀಡಿದೆ. ಆದರೆ ಅವುಗಳನ್ನು ಮಕ್ಕಳಿಗೆ ನೀಡಲು ಇನ್ನೂ ಅನುಮತಿ ಸಿಕ್ಕಿಲ್ಲ.

ಪ್ರಿಕಾಷನ್ ಡೋಸ್/ ಬೂಸ್ಟರ್ ಡೋಸ್‌ಗೆ ನೋಂದಣಿ
60 ವರ್ಷ ಮೇಲ್ಪಟ್ಟವರು ಬೂಸ್ಟರ್‌ಗೆ ನೋಂದಣಿ ಮಾಡುವ ವಿಧಾನ ಈ ಹಿಂದೆ ಲಸಿಕೆಗಾಗಿ ನೋಂದಣಿ ಮಾಡಿದಂತೆಯೇ ಇದೆ. 60 ವರ್ಷ ಮೇಲ್ಪಟ್ಟವರಾಗಿದ್ದರೆ 2 ನೇ ಡೋಸ್ ತೆಗೆದು 9 ತಿಂಗಳಾಗಿದ್ದರೆ (39 ವಾರಗಳು) ಅವರು ಬೂಸ್ಟರ್/ ಪ್ರಿಕಾಷನ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.



Click it and Unblock the Notifications
