Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಫೋಟೋ ಶೂಟ್‌ಗೆ ಸೂಪರ್ ಐಡಿಯಾ, ಪಾಕೆಟ್ ಫ್ರೆಂಡ್ಲೀ ಹೌದು
ಮುದ್ದಾದ ಮಕ್ಕಳಿಗೆ ಏನು ಹಾಕಿದರೂ ಚೆಂದನೇ... ಅದರಲ್ಲೂ ಫೋಟೋಶೂಟ್ ಮಾಡಿಸುವಾಗ ಅವರು ಮತ್ತಷ್ಟು ಮುದ್ದಾಗಿ ಕಾಣಲು ಯಾವ ರೀತಿಯ ಡ್ರೆಸ್ಸಿಂಗ್ ನಾಡಿದರೆ ಚೆನ್ನಾಗಿರುತ್ತದೆ ಎಂದು ತುಂಬಾನೇ ತಲೆಕೆಡಿಸಿಕೊಳ್ಳುತ್ತೇವೆ.
ಶಾಪ್‌ಗೆ ಹೋದರೆ ನಾವು ಬಯಸಿದಂಥ ಡ್ರೆಸ್‌ಗಳು ಕೆಲವೊಮ್ಮೆ ಸಿಗಲ್ಲ, ಸಿಕ್ಕರೂ ತುಂಬಾ ದುಬಾರಿ ಅನಿಸುತ್ತದೆ. ಮಕ್ಕಳಿಗೆ ದುಬಾರಿ ಬಟ್ಟೆ ತರುವುದು ದೊಡ್ಡ ವಿಷಯವಲ್ಲ, ಆದರೆ ತಂದ ಬಟ್ಟೆಗಳನ್ನು ತುಂಬಾ ಸಮಯ ಬಳಸಲು ಸಾಧ್ಯವಾಗದಿದ್ದಾಗ ಬೇಸರವಾಗುತ್ತದೆ. ನೀವು ಎರಡರಿಂದ-ಮೂರು ಸಾವಿರ ಕೊಟ್ಟು ಒಂದು ಚಂದದ ಉಡುಪು ತಂದಿರುತ್ತೀರಿ, ಮುಂದಿನ ತಿಂಗಳು ನೋಡಿದರೆ ಆ ಬಟ್ಟೆ ಮಕ್ಕಳಿಗೆ ಚಿಕ್ಕದಾಗುತ್ತದೆ.

ಇನ್ನು ಹೇರ್ ಬ್ಯಾಂಡ್ ಮತ್ತಿತರ ವಸ್ತುಗಳನ್ನು ಕೊಳ್ಳುವಾಗ ಕೂಡ ತುಂಬಾ ದುಬಾರಿ ಅನಿಸುವುದು. ಅಲ್ಲದೆ ಮಕ್ಕಳಿಗೆ ಶಾಲೆ ಪ್ರಾರಂಭವಾದ ಮೇಲೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಎಲ್ಲಾ ಇದ್ದೇ ಇರುತ್ತದೆ. ಇಲ್ಲಿ ಅಂಜಲಿ ಕೆಲವೊಂದು ಸೂಪರ್ ಐಡಿಯಾ ನೀಡಿದ್ದಾರೆ, ಇವುಗಳನ್ನು ಬಳಸಿ ನಿಮ್ಮ ಮಕ್ಕಳಿಗೆ ಆಕರ್ಷಕ ಡ್ರೆಸ್ಸಿಂಗ್ ಸ್ಟೈಲ್ ಮಾಡಬಹುದು ನೋಡಿ.

ಟ್ವಿನ್ನಿಂಗ್ ಡ್ರೆಸ್ ಐಡಿಯಾ
ನಿಮ್ಮಲ್ಲಿ ನೀವು ಬಳಸದೇ ಇರುವ ರೇಷ್ಮೆ ಸೀರೆ ಇದ್ದರೆ ಅದರಿಂದ ಅಮ್ಮ-ಮಗಳಿಗೆ ಸೂಪರ್ ಆದ ಟ್ವಿನ್ನಿಂಗ್ ಡ್ರೆಸ್ ಟ್ರೈ ಮಾಡಬಹುದು. ಹೀಗೆ ಮಾಡುವುದರಿಂದ ಫೋಟೋಶೂಟ್‌ಗೆ ಇಬ್ಬರೂ ಮುದ್ದಾಗಿ ಕಾಣುವಿರಿ ಅಲ್ಲದೆ ಅದಕ್ಕಾಗಿ ಹೊಸ ಬಟ್ಟೆ ಕೊಳ್ಳುವ ಖರ್ಚು ಕೂಡ ಮಿಕ್ಕುತ್ತೆ. ಇನ್ನು ನೀವು ಟ್ವಿನ್ನಿಂಗ್ ಡ್ರೆಸ್ಸಿಂಗ್ ಸ್ಟೈಲ್ ಮಾಡಿದ್ದೇ ಆದರೆ ನೋಡುಗರ ಗಮನ ಕೂಡ ಸೆಳೆಯುವುದು.

ಬನ್ನಿ ಹೇರ್ ಬ್ಯಾಂಡ್
ನೀವು ಕಲರ್‌ಫುಲ್ ಹೇರ್‌ಬ್ಯಾಂಡ್ ಮಾಡಬೇಕೆಂದರೆ ಇಲ್ಲಿ ನೀಡಿರುವ ವೀಡಿಯೋ ಗಮನಿಸಿ. ಸ್ವಲ್ಪ ತಂತಿ, ಪೇಪರ್ ಪೀಸ್, ಫ್ಯಾಬ್ರಿಕ್ ಗ್ಲೂ ಇಂಥ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಬನ್ನಿ ಹೇರ್ ಬ್ಯಾಂಡ್, ಟೆನ್ನಿಸ್ ಹ್ಯಾಟ್ ಹೀಗೆ ಬಗೆ-ಬಗೆಯ ಹೇರ್ ಬ್ಯಾಂಡ್ ಹಾಗೂ ಟೋಪಿಗಳನ್ನು ಮಾಡಿ ಮಕ್ಕಳಿಗೆ ಹಾಕಿ ಸಂಭ್ರಮಿಸಬಹುದು.

ಮುರಿದ ಕೊಡೆ ನಿಮ್ಮಲ್ಲಿದೆಯೇ?
ನಿಮ್ಮಲ್ಲಿ ಕಪ್ಪು ಮುರಿದ ಕೊಡೆ ಇದ್ದರೆ ಅದರಿಂದ ಬ್ಯಾಟ್‌ವಿಂಗ್ ಮಾಡಬಹುದು, ಅದೇ ಬಣ್ಣದ ಕೊಡೆ ಮುರಿದಿದ್ದರೆ ಅದರಿಂದ ಬಟರ್‌ಫ್ಲೈ (ಚಿಟ್ಟೆ) ರೀತಿ ಕೂಡ ಮಾಡಬಹುದು. ಇವುಗಳನ್ನು ಮಾಡಿ ಮಕ್ಕಳಿಗೆ ಹಾಕಿ ಫೋಟೋ ಶೂಟ್ ಮಾಡಿಸಿ, ಮುಂದೆ ಅವರು ದೊಡ್ಡವರಾದಾಗ ನಿಮ್ಮ ಕ್ರಿಯೇಟಿವಿಟಿ ಖಂಡಿತ ಮೆಚ್ಚಿಕೊಳ್ಳುತ್ತಾರೆ.

ಕಿರೀಟ
ಈಗ ನೀವು ಮಕ್ಕಳ ಹುಟ್ಟು ಹಬ್ಬವಿದ್ದರೆ ಅವರಿಗೊಂದು ಚೆಂದದ ಕಿರೀಟ ತೊಡಿಸಿ ಕೇಕ್ ಕಟ್ ಮಾಡಲು ಬಯಸುತ್ತೀರಿ. ಒಂದು ದಿನ ಹಾಕಲು ನೀವು ನೂರಾರು ರುಪಾಯಿ ಖರ್ಚು ಮಾಡಬೇಕಾಗಿಲ್ಲ, ಇಲ್ಲಿ ಅಂಜಲಿಯವರು ನೀಡಿರುವ ಟಿಪ್ಸ್ ಬಳಸಿದರೆ ಸಾಕು ನಿಮ್ಮ ಮಗಳನ್ನು ರಾಜಕುಮಾರಿಯಂತೆ ಸಿಂಗರಿಸಲು ನೀವೇ ಕಿರೀಟ ತಯಾರಿಸಬಹುದು.
ಈ ರೀತಿ ಅನೇಕ ಡ್ರೆಸ್ಸಿಂಗ್ ಟಿಪ್ಸ್ ಬಳಸಬಹುದು. ಈ ಐಡಿಯಾ ನಿಮಗೂ ಇಷ್ಟವಾಗಿರಬಹುದು ಅಲ್ವಾ?



Click it and Unblock the Notifications
