Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜನ್ಮಾಷ್ಟಮಿ ಸ್ಪೆಷಲ್: ಕೃಷ್ಣ-ರಾಧೆಯಾದ ಕಂದಮ್ಮಗಳ ನೋಡುವುದೇ ಕಣ್ಣಿಗೆ ಹಬ್ಬ
ಶ್ರೀ ಕೃಷ್ಣನ ಜನ್ಮ ದಿನವಾದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಭಾರತದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ದಿನದಲ್ಲಿ ಕೃಷ್ಣನ ಬಾಲ ಲೀಲೆಗಳ ಕೀರ್ತನೆಯನ್ನು ಹಾಡಲಾಗುವುದು.
ಮನೆಯಲ್ಲಿರುವ ಮಕ್ಕಳಲ್ಲಿಯೇ ಮುದ್ದು ಕೃಷ್ಣ ಬಾಲಲೇಲೆಯನ್ನು ನೋಡ ಬಯಸುವ ಪೋಷಕರು ಮಕ್ಕಳಿಗೆ ಕೃಷ್ಣ, ರಾಧೆಯ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಮಕ್ಕಳಂತೂ ಕೃಷ್ಣನ ವೇಷ ತೊಟ್ಟು ಮಾಡುವ ತುಂಟಾಟಗಳು ಥೇಟ್ ಕೃಷ್ಣನ ತುಂಟಾಟದಂತೆ ಭಾಸವಾಗುವುದು.

ಮನೆಯ ಕೃಷ್ಣ-ರಾಧೆಯರ ಅಂದವನ್ನು ಕಣ್ತುಂಬಿ ಕೊಳ್ಳುವುದೇ ಪೋಷಕರಿಗೆ ಮಹದಾನಂದ. ಜನ್ಮಾಷ್ಟಮಿಗೆ ಮಕ್ಕಳಿಗೆ ಕೃಷ್ಣ-ರಾಧೆಯರ ವೇಷ ಹಾಕಿದ ತಮ್ಮ ಮುದ್ದಿನ ಮಕ್ಕಳ ಫೋಟೋಗಳನ್ನು ಪೋಷಕರು ಕನ್ನಡ ಬೋಲ್ಡ್‌ಸ್ಕೈಗೆ ಕಳುಹಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಇಲ್ಲಿ ನೀಡಲಾಗಿದೆ. ಒಂದೊಂದು ಫೋಟೋವೂ ಅತಿ ಸುಂದರವಾಗಿದ್ದು ಥೇಟ್ ಕೃಷ್ಣ-ರಾಧೆಯರಂತೆ ಮುದ್ದಾಗಿ ಕಾಣುತ್ತಿದ್ದಾರೆ ಅಲ್ವಾ?

ಮುದ್ದ ಮಕ್ಕಳ ಕೃಷ್ಣ-ರಾಧೆ ಲುಕ್
ಕೊಡಗಿನ ರತೀಶ್-ಸುಮಿತ್ರಾ ಅವರ ಮಗಳು ತನುಷ್ಕಾ ಕೃಷ್ಣ ವೇಷದಲ್ಲಿ, ಸುಭಾಶ್-ಪ್ರಿಯಾ ಅವರ ಮಗಳು ರಾಧೆ ಲುಕ್‌ನಲ್ಲಿ ಜೊತೆಗೆ ಮತ್ತೊಂದು ಮುದ್ದು ಬಾಲಕೃಷ್ಣ ಕೂಡ ಇದ್ದಾರೆ.

ಹೇಗಿದೆ ನಮ್ಮ ಲುಕ್
ಕೊಡಗಿನ ಸತೀಶ್, ರಮ್ಯಾರ ಮಕ್ಕಳಾದ ಅಜ್ವಲ್, ಅನನ್ಯ ಕೃಷ್ಣ-ರಾಧೆಯರ ಲುಕ್‌ನಲ್ಲಿ.

ಬಾಲಕೃಷ್ಣ
ಬಾಲಕೃಷ್ಣನಾದ ಬೆಂಗಳೂರಿನ ಅಂಜಲಿರಾವ್-ಪ್ರಕಾಶ್ ರಾವ್ ಪುತ್ರಿ ಅನೀಶಾ.

ತುಂಟ ಕೃಷ್ಣ
ತುಂಟ ಕೃಷ್ಣನ ಲುಕ್‌ನಲ್ಲಿ ಶಿವಮೊಗ್ಗದ ನಾಗಶ್ರುತಿಅವರ ಪುತ್ರ ಆದ್ಯಾನಾಥ್ .

ಬ್ಲೂ ಡ್ರೆಸ್‌ನಲ್ಲಿ ಕೃಷ್ಣ ರಾಧೆ
ಗಾಜಿಯಾಬಾದ್‌ನ ಅನಾಮಿಕ ಸಿನ್ಹಾ ಅವರು ತಮ್ಮ ಮುದ್ದಿನ ಮಕ್ಕಳು ಕೃಷ್ಣ-ರಾಧೆಯ ವೇಷದಲ್ಲಿ ಕಂಗೊಳಿಸಿದ್ದನ್ನು ನಮಗೆ ಕಳಿಸಿದ್ದಾರೆ ನೋಡಿ
ಕೃಷ್ಣ ರಾಧೆ ಲುಕ್‌ನಲ್ಲಿ ಅನಿಕೇಶ್ ಸೆಕ್ಸೇನಾ, ತನೀಶಾ ಸೆಕ್ಸೇನಾ

ನಾನು ಕೃಷ್ಣನ ಮುದ್ದು ರಾಧೆ
ಕೃಷ್ಣನ ಪ್ರೀತಿಯ ರಾಧೆಯಾದ ಬೆಂಗಳೂರಿನ ವಿಪ್ರ ನಾರಾಯಣ ಹಾಗೂ ಪೃಥ್ವಿಶ್ರೀ ಅವರ ಪುತ್ರಿ ಮನನ್ಯ.

ಮುದ್ದು ಕೃಷ್ಣ
ಕೃಷ್ಣನ ನಗು ಬೀರುತ್ತಿರುವರವೀನಾ ಭಾವಸಾರ್ ಪುತ್ರ ಮಿವಾನ್.

ಶ್ಯಾಮ
ಶ್ಯಾಮನಾದ ಅಶ್ವಿನಿ ಕಿರಣ್ ಪತ್ರ ಏಕನಾಶ್

ಬಾಲಕೃಷ್ಣ
ಕೃಷ್ಣ ವೇಷದಲ್ಲಿ ಮುದ್ದಾಗಿ ಕಾಣುತ್ತಿರುವ ಮಂಗಳೂರಿನ ಶ್ರೀಲೇಖಾ-ಸಂದೀಪ್ ದಂಪತಿಯ ಪುತ್ರಿ ಸೃಷ್ಠಿ.

ಕೃಷ್ಣನಾದೆ ನಾನು
ಮುದ್ದಾದ ಕೃಷ್ಣ ಲುಕ್‌ನಲ್ಲಿ ಪುತ್ತೂರಿನ ಪ್ರವೀಣ್ ಚಂದ್ರ ಹಾಗೂ ರಶ್ಮಿ ಬಂಗೇರ ಅವರ ಪುತ್ರ ಅವ್ಯುಕ್ತ್ ಪಿ ಬಂಗೇರ.

ಕೃಷ್ಣನ ರಾಧೆ
ಕೃಷ್ಣನ ಮುದ್ದು ರಾಧೆಯಾದ ಮೀರಾ-ಮೊಹ್ಮದ್ ಶಕೀರ್ ಪುತ್ರಿ ಆರುಷಿ.

ಆಹಾ ಕೃಷ್ಣ
ಹೇಗಿದೆ ನನ್ನ ಲುಕ್ ಕೇಳುತ್ತಿರುವ ಮುದ್ದು ಕೃಷ್ಣ.
ಬೆಂಗಳೂರಿನ ಸಾವಿತ್ರಿ-ರವಿ ದಂಪತಿ ಪುತ್ರಿ ತನುಷ್ಕಾ ಬಾಲಕೃಷ್ಣನ ವೇಷದಲ್ಲಿ.



Click it and Unblock the Notifications
