Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೊಜ್ಜು ದೇಹದ ಮಕ್ಕಳನ್ನು ಅಪಹಾಸ್ಯ ಮಾಡಬೇಡಿ
ಇಂದಿನ ದಿನಗಳಲ್ಲಿ ವಯಸ್ಕರು ಮಾತ್ರವಲ್ಲದೆ ಮಕ್ಕಳು ಕೂಡ ಒಂದು ಗಂಭೀರವಾದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇನೆಂದರೆ ಬೊಜ್ಜು ದೇಹ. ಜೀವನ ಶೈಲಿ, ಜಂಕ್ ಫುಡ್ ಮತ್ತು ವ್ಯಾಯಮ ಮಾಡದೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗದೆ ಇರುವುದು ಮಕ್ಕಳಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗಿದೆ.

ಬೊಜ್ಜು ದೇಹದ ಮಕ್ಕಳು ಹೋಗುತ್ತಿದ್ದರೆ ಅವರನ್ನು ನೋಡಿ ಅಯ್ಯೋ ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟು ತೂಕ ಬೆಳೆಸಿಕೊಂಡಿದ್ದಾನೆ ಎಂದು ಅನಿಸುತ್ತದೆ. ಆದರೆ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ
ಯಾಕೆಂದರೆ ಮುಂದಿನ ಕೆಲವೇ ವರ್ಷಗಳಲ್ಲಿ ಬೊಜ್ಜು ದೇಹದ ಮಕ್ಕಳ ಸಂಖ್ಯೆ ಈಗ ಇರುವ ಸಂಖ್ಯೆಗಿಂತ ದುಪ್ಪಟ್ಟು ಹೆಚ್ಚಾಗಲಿದೆಯಂತೆ. ಕೆಲವು ಪೋಷಕರಿಗೆ ಬೊಜ್ಜಿನಿಂದ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿದಿಲ್ಲ. ಇನ್ನು ಕೆಲವು ಪೋಷಕರು ಎಲ್ಲವನ್ನು ತಿಳಿದುಕೊಂಡಿದ್ದರೂ ಸಮಯದ ಅಭಾವದಿಂದ ಸುಮ್ಮನಿರುತ್ತಾರೆ.
ವೈದ್ಯಕೀಯ ತಜ್ಞರ ಪ್ರಕಾರ ಮಕ್ಕಳ ಬೊಜ್ಜನ್ನು ಯಾವ ರೀತಿಯಿಂದ ನಿವಾರಿಸಬಹುದು ಎಂದು ಪೋಷಕರೇ ತಿಳಿದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಮಕ್ಕಳ ಆಹಾರ ಮತ್ತು ಅವರ ಚಟುವಟಿಕೆಗಳಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳಲ್ಲಿ ಸ್ಥೂಲಕಾಯಕ್ಕೂ ಹಾರ್ಮೋನುಗಳಿಗೂ ಸಂಬಂಧವಿದೆಯೇ?
ಬೊಜ್ಜು ದೇಹದ ಮಕ್ಕಳ ಸಮಸ್ಯೆಯನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ಯಾಕೆಂದರೆ ಅವರ ತೂಕದ ಬಗ್ಗೆ ಮಾತನಾಡುವಾಗ ಅವರಲ್ಲಿ ಕೀಳರಿಮೆ ಮೂಡಬಹುದು. ಹೀಗೆ ಆಗುತ್ತದೆಯೆಂದು ಮೌನವಾಗಿದ್ದರೆ ಅವರಿಗೆ ತಾವು ತುಂಬಾ ಅನಾರೋಗ್ಯಕರ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಯುವುದೇ ಇಲ್ಲ.
ಬೊಜ್ಜನ್ನು ಹೊಂದಿರುವ ಮಕ್ಕಳಿಗೆ ಅವರ ದೇಹದ ಬಗ್ಗೆ ಯಾರಾದರೂ ಸಲಹೆ ನೀಡಿದರೆ ಅವರು ನಾಚಿಕೆ ಪಟ್ಟುಕೊಳ್ಳುತ್ತಾರೆ. ಇದರ ಬಗ್ಗೆ ಅಪಹಾಸ್ಯ ಮಾಡಲು ಹೋದರೆ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇದೆ. ಪೋಷಕರಾಗಿ ನೀವು ಏನೂ ಮಾಡದೆ ಇದ್ದರೆ ಮುಂದೆ ದೊಡ್ಡ ಆರೋಗ್ಯ ಸಮಸ್ಯೆ ಮಕ್ಕಳನ್ನು ಕಾಡಬಹುದು.
ಮಕ್ಕಳ ದೇಹ ಮತ್ತು ಅವರ ಸೌಂದರ್ಯದ ಬಗ್ಗೆ ಯಾವತ್ತೂ ಟೀಕೆ ಮಾಡಲು ಹೋಗಬಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳನ್ನು ಆರೋಗ್ಯಕರ ಆಹಾರ ತಿನ್ನುವಂತೆ ಪ್ರೇರೇಪಿಸಬೇಕು ಮತ್ತು ಕ್ಯಾಲರಿ ದಹಿಸಲು ಅವರು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಮಕ್ಕಳ ಸ್ಥೂಲಕಾಯವನ್ನು ಕಡಿಮೆ ಮಾಡಬೇಕೆ?
ಮಕ್ಕಳಿಗೆ ಅವರ ದೇಹವನ್ನು ಉದಾಹರಣೆಯಾಗಿಸದೆ ಆರೋಗ್ಯಕರ ಆಹಾರ ಮತ್ತು ಅನಾರೋಗ್ಯಕರ ಆಹಾರದ ಬಗ್ಗೆ ತಿಳಿಸಿಕೊಡಬೇಕು. ಈ ರೀತಿಯಲ್ಲಿ ಸಮಸ್ಯೆಯನ್ನು ತುಂಬಾ ಸಮಾಧಾನವಾಗಿ ನಿಭಾಯಿಸಬಹುದು. ಮಕ್ಕಳ ಬೊಜ್ಜು ತುಂಬಾ ಸೂಕ್ಷ್ಮ ವಿಚಾರ ಎನ್ನುವುದನ್ನು ಮರೆಯದಿರಿ.



Click it and Unblock the Notifications




