Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್‌ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಆಟ-ಪಾಠದ ಜೊತೆಗೆ ಭಾಷಾ ಕೌಶಲ್ಯವೂ ಅತ್ಯಗತ್ಯ
ಮಕ್ಕಳಿಗೆ ಕಲಿಯುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಅವರು ನಿಮ್ಮನ್ನು ಅನುಕರಿಸಿಯೆ ಕಲಿಯುವಷ್ಟು ಬುದ್ಧಿವಂತರಾಗಿರುತ್ತಾರೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಭಾಷೆಗಳನ್ನು ಕಲಿಯುವ ಶಕ್ತಿ ಇರುತ್ತದೆ.
ಒಂದು ದೊಡ್ಡ ಅಪಾರ್ಟ್‌ಮೆಂಟ್ ಅಥವಾ ವಠಾರದಲ್ಲಿ ಬೆಳೆಯುವ ಮಗು, ಅಲ್ಲಿ ವಿವಿಧ ಭಾಷೆಯನ್ನು ಮಾತನಾಡುವ ಜನರನ್ನು ನೋಡಿ ಅನುಕರಿಸಿಯೇ ಅವರು ಮಾತನಾಡುವ ಭಾಷೆಗಳನ್ನು ಕಲಿಯುತ್ತದೆ. ಅಯ್ಯೋ ಮಗು ಅದು ಇದು ಭಾಷೆ ಕಲಿತು ಬಿಡುತ್ತದೆ ಎಂಬ ಭಾವನೆಯನ್ನು ಕೆಲವೊಮ್ಮೆ ಪೋಷಕರು ವ್ಯಕ್ತಪಡಿಸುವುದಿದೆ.

ಆದರೆ ಮಗುವಿನ ಬೆಳವಣಿಗೆಯಲ್ಲಿ ಭಾಷಾ ಕೌಶಲ್ಯಗಳ ಬೆಳವಣಿಗೆಯು ಸಹ ಮುಖ್ಯವೆಂದು ಇತ್ತೀಚಿನ ಸಂಶೋಧನೆಯು ದೃಢಪಡಿಸಿದೆ. ಅದರಲ್ಲಿಯೂ ಮಗು ಎರಡಕ್ಕಿಂತ ಹೆಚ್ಚಿನ ಭಾಷೆಗಳನ್ನು ಕಲಿತ ಮಗುವಿಗೆ, ಒಂದು ಭಾಷೆಯನ್ನು ಕಲಿತ ಮಗುವಿಗಿಂತ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯ ಸಿದ್ಧಿಸುತ್ತದೆ ಎಂದು ಈ ಸಂಶೋಧನೆ ಅಭಿಪ್ರಾಯಪಟ್ಟಿದೆ.
ಅಧ್ಯಯನಕಾರರ ಪ್ರಕಾರ ಹೆಚ್ಚು ಭಾಷೆಯನ್ನು ಕಲಿಯುವುದರಿಂದ ಮಕ್ಕಳಿಗೆ ಕೆಲವೊಂದು ಮಾನಸಿಕ ಮತ್ತು ಮನೋಜನ್ಯ ಕೌಶಲ್ಯಗಳ ಬಳಕೆಯ ಕುರಿತಾಗಿ ಹೆಚ್ಚಿನ ಜ್ಞಾನ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಮಗು ಬೆಳೆದಂತೆಲ್ಲ ಮುಂದೆ ಭವಿಷ್ಯದಲ್ಲಿ ಹಲವಾರು ಭಾಷೆಗಳನ್ನು ಸುಲಭವಾಗಿ ಕಲಿಯಲು ಇದರಿಂದ ಮಗುವಿಗೆ ಸಹಾಯವಾಗುತ್ತದೆ.
ಇಂತಹ ಮಕ್ಕಳ ಮೆದುಳಿನಲ್ಲಿ ಪದಸಂಪತ್ತು ಮತ್ತು ಮಾಹಿತಿಯು ಶೇಖರಣೆಗೊಂಡು, ಸಮಸ್ಯೆಗಳು ಬಂದಾಗ, ಮಗು ಆ ಮಾಹಿತಿಗಳ ಆಧಾರದ ಮೇಲೆ ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ.
ಅಧ್ಯಯನಕಾರರು ಏಕ ಭಾಷೆಯನ್ನು ಮಾತನಾಡುವ ಮತ್ತು ಎರಡಕ್ಕಿಂತ ಹೆಚ್ಚು ಭಾಷೆ ಮಾತನಾಡುವ ಮಕ್ಕಳ ಗುಂಪಿನ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಎರಡಕ್ಕಿಂತ ಹೆಚ್ಚು ಭಾಷೆ ಮಾತನಾಡುವ ಮಕ್ಕಳು ಹಲವಾರು ಪರೀಕ್ಷೆ ಮತ್ತು ಕಾರ್ಯಗಳನ್ನು ಸಮರ್ಥವಾಗಿ ಮತ್ತು ಶೀಘ್ರವಾಗಿ ಮಾಡಿ ಮುಗಿಸುತ್ತಾರಂತೆ.
ಇದಕ್ಕಾಗಿಯೇ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಎರಡು ಮೂರು ಭಾಷೆಯನ್ನು ಕಲಿಸಲು ಪ್ರಶಸ್ತ್ಯವನ್ನು ನೀಡುತ್ತಾರೆ. ಈ ಅವಧಿಯಲ್ಲಿ ಮಕ್ಕಳಿಗೆ ಕಲಿಯುವ ಮತ್ತು ಗ್ರಹಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಮಗುವಿಗೆ ವಿಪರೀತವಾದ ಮಾನಸಿಕ ಬೆಳವಣಿಗೆಯಾಗುತ್ತಿರುವುದರಿಂದಾಗಿ, ಮಕ್ಕಳಿಗೆ ಕಲಿಯುವ ಅವಕಾಶಗಳು ಮತ್ತು ಮಾರ್ಗಗಳು ಹೆಚ್ಚಾಗಿ ಗೋಚರಿಸುತ್ತವೆ. ಹಾಗಾಗಿ ಮಕ್ಕಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನಕಾರರು ತಿಳಿಸುತ್ತಾರೆ.



Click it and Unblock the Notifications


