Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಒಳಿತಿಗಾಗಿ ಮನೆಯ ಪರಿಸರ ಚೆನ್ನಾಗಿರಲಿ
ಮನೆ ಇದ್ದಲ್ಲಿ ಮಕ್ಕಳು ಬೇಕೇ ಬೇಕು. ಅವರ ಸದ್ದುಗದ್ದಲ, ಆಟಪಾಠ ಮನೆತುಂಬಾ ಹರಡಿದ್ದರೆ ಅದು ನಂದನವನದಂತೆ ಕಂಗೊಳಿಸುತ್ತದೆ. ಮಗುವಿನ ಬೆಳವಣಿಗೆಯಲ್ಲಿ ಮನೆಯ ವಾತಾವರಣ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅವರು ಬೆಳೆಯುತ್ತಿರುವಾಗ ಹೆಚ್ಚುವರಿ ಕಾಳಜಿಯನ್ನು ಅವರಿಗೆ ನೀವು ನೀಡಬೇಕಾಗುತ್ತದೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಇಲ್ಲಿ ಹೇಳಿಕೊಟ್ಟ ಅಂಶಗಳನ್ನೇ ಅದು ಜೀವನದಲ್ಲಿ ಕೈಗೊಳ್ಳುವುದೂ ಕೂಡ.

ಮನೆಯ ಹಿರಿಯರು ಸದಾಕಾಲ ಜಗಳವಾಡುತ್ತಾ, ಹೊಡೆದಾಡುತ್ತಾ ಇದ್ದಲ್ಲಿ ಮಗುವಿನ ಮಾನಸಿಕ ನೆಮ್ಮದಿಗೆ ಇದು ಧಕ್ಕೆಯನ್ನುಂಟು ಮಾಡಿ ಅವರಿಗೆ ಮನೋವ್ಯಾಧಿಯನ್ನು ತಂದೊಡ್ಡಬಹುದು. ಇದರಿಂದ ಮಗುವೇ ತನ್ನ ಸ್ವಂತ ಹೆತ್ತ ತಂದೆ ತಾಯಿಯನ್ನೇ ದೂರಮಾಡುವ ಸಂಭವ ಕೂಡ ಇರುತ್ತದೆ. ಕೆಲವೊಂದು ಮಕ್ಕಳು ಬಾಲ್ಯದ ಸುಖವನ್ನು ಅನುಭವಿಸದೇ ಇರುತ್ತವೆ. ಇದಕ್ಕೆ ಕಾರಣ ಹೆತ್ತವರು ಅವರುಗಳ ಮೇಲೆ ಬೇಕಾದ ಕಾಳಜಿಯನ್ನು ವಹಿಸದೇ ಇರುವುದಾಗಿದೆ.
ಮನೆಯ ವಾತಾವರಣ ಚೆನ್ನಾಗಿದ್ದರೆ ಇಲ್ಲಿ ಬೆಳೆಯುತ್ತಿರುವ ಮಕ್ಕಳೂ ಕೂಡ ಒಳ್ಳೆಯ ಅಂಶಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ. ಆದರೆ ಮನೆಯ ವಾತಾವರಣವೇ ಚೆನ್ನಾಗಿಲ್ಲ ಎಂದಾದಲ್ಲಿ ಮಕ್ಕಳೂ ಅಶಿಸ್ತಿನಿಂದ ಕೂಡಿರುತ್ತಾರೆ.
ನಿಮ್ಮದೇ ಗುಣಗಳನ್ನು ಅವರು ಮೈಗೂಡಿಸಿಕೊಂಡು ಅದನ್ನೇ ಚಾಳಿಯನ್ನಾಗಿ ಅವರು ಮುಂದುವರಿಸುತ್ತಾರೆ. ಹೊಡೆಯುವುದು, ಸುಳ್ಳು ಹೇಳುವುದು, ಜಗಳವಾಡುವುದು, ಹೀಗೆ ಇಂತಹ ಕೆಟ್ಟ ಚಾಳಿಗಳನ್ನೇ ಅವರು ಅನುಸರಿಸುತ್ತಾರೆ.
ಆದ್ದರಿಂದ ಮನೆಯ ವಾತಾವರಣ ಪ್ರೀತಿ ಮತ್ತು ಶಿಸ್ತಿನಿಂದ ಕೂಡಿರಲಿ. ಅಂತೆಯೇ ಮಕ್ಕಳಿಗೆ ಬಾಲ್ಯದ ಸುಖವನ್ನು ಪೂರ್ಣವಾಗಿ ಆನಂದಿಸುವಂತೆ ಮಾಡಿ. ನೀವು ನಿಮ್ಮ ಕೆಲಸದಲ್ಲಿ ಎಷ್ಟೇ ನಿರತರಾಗಿದ್ದರೂ ಕೊಂಚ ಸಮಯ ಅವರಿಗಾಗಿ ಮೀಸಲಿಡಿ.



Click it and Unblock the Notifications



