Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದೇ ಮಗು, ದೇಶಕ್ಕಷ್ಟೇ ಅಲ್ಲ ಮನೆಗೂ ನಗು!
"ಮನೆಗೊಂದು ಮಗು ದೇಶಕ್ಕೆ ನಗು" ಈ ಮಾತನ್ನು ನೀವು ಸುಮಾರು ಬಾರಿ ಕೇಳಿರುತ್ತೀರಿ ಮತ್ತು ಓದಿರುತ್ತೀರಿ. ನಿಜ ಹೆಚ್ಚುತ್ತಿರುವ ಜನಸಂಖ್ಯೆ ದೇಶಕ್ಕೆ ಹೊರೆಯಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಜನಸಂಖ್ಯೆಯನ್ನು ಸಹ ಒಂದು ರಾಷ್ಟ್ರೀಯ ಪಿಡುಗು ಆಗಿ ಪರಿಗಣಿಸಲಾಗಿದೆ. ಇದನ್ನು ಹತೋಟಿಗೆ ತರಲು ಸರ್ಕಾರವು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗ ಸಂಗತಿ ಏನಪ್ಪಾ ಎಂದರೆ ಮನೆಗೊಂದು ಮಗುವನ್ನು ಪಡೆಯುವುದು ಎರಡು ಮೂರು ಮಕ್ಕಳನ್ನು ಹೆರುವುದಕ್ಕಿಂತ ಒಳ್ಳೆಯದು ಎಂಬ ವಿಚಾರವನ್ನು ಅಧ್ಯಯನದ ಮೂಲಕ ಸಾಬೀತು ಮಾಡಲಾಗಿದೆ. ಅದಕ್ಕೆ ಹಲವಾರು ಕಾರಣಗಳನ್ನು ಸಹ ನೀಡಲಾಗಿದೆ.

ಮೊದಲನೆಯದಾಗಿ ಒಂದೇ ಮಗು ಇದ್ದಲ್ಲಿ ಅದರ ಜೀವಿತಾವಧಿ ಹೆಚ್ಚಾಗುತ್ತದೆಯಂತೆ. ಇದು ಹೇಗೆ ಎಂದರೆ ಸಣ್ಣ ಕುಟುಂಬಗಳಲ್ಲಿ ಮಗುವು ತನ್ನ ದಾಯಾದಿಗಳು ಮತ್ತು ಒಡ ಹುಟ್ಟಿದವರ ಜೊತೆಗೆ ಸಂಪನ್ಮೂಲಗಳಿಗಾಗಿ ಸ್ಪರ್ಧೆಗೆ ಬಿದ್ದು ಬದುಕುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ನಿಮಗೆ ಒಂದೇ ಮಗು ಇದ್ದಾಗ, ನೀವು ನಿಮ್ಮ ಎಲ್ಲಾ ಸಂಪನ್ಮೂಲಗಳನ್ನು ಮತ್ತು ಸೌಲಭ್ಯಗಳನ್ನು ಆ ಮಗುವಿಗೆ ನೀಡುತ್ತೀರಿ. ಜೊತೆಗೆ ನಿಮ್ಮ ಮಗುವಿಗೆ ಉನ್ನತ ಮಟ್ಟದ ದುಬಾರಿ ಶಿಕ್ಷಣವನ್ನು ಸಹ ನೀಡುತ್ತೀರಿ.
ಒಂದು ವೇಳೆ ನಿಮಗೆ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ, ನಿಮ್ಮ ಸಂಪನ್ಮೂಲವನ್ನು ನೀವು ಹಲವರ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ನಿಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಒಂದು ವೇಳೆ ನೀವು 10 ಮಕ್ಕಳನ್ನು ಸಹ ಸಾಕುವಷ್ಟು ಶ್ರೀಮಂತರಾಗಿದ್ದರು ಸಹ, ನಿಮ್ಮ ಸಮಯ ಮತ್ತು ಗಮನವನ್ನು ನೀವು ಆ ಎಲ್ಲಾ 10 ಮಕ್ಕಳಿಗೆ ನೀಡಲು ಆಗುವುದಿಲ್ಲ.
ವಾಸ್ತವ ಏನಪ್ಪಾ ಎಂದರೆ ಹಲವಾರು ಕುಟುಂಬ ಯೋಜನೆಗಳು ಇದೇ ಒಳನೋಟದ ಆಧಾರದ ಮೇಲೆ ರಚನೆಗೊಂಡಿರುತ್ತವೆ. ಆದ್ದರಿಂದಲೆ ಒಂದೇ ಒಂದು ಮಗುವನ್ನು ಹೊಂದುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಆಗ ಮಗುವು ನಿಮ್ಮ ಸಂಪನ್ಮೂಲಗಳನ್ನು, ಪೋಷಕಾಂಶಭರಿತ ಆಹಾರವನ್ನು, ಪ್ರೀತಿಯನ್ನು ಮತ್ತು ಸಮಯವನ್ನು ಪರಿಪೂರ್ಣವಾಗಿ ಅನುಭವಿಸುತ್ತದೆ. ಮಕ್ಕಳು ಹೆಚ್ಚಾದಷ್ಟು ಅನಾರೋಗ್ಯಕರ ಬೆಳವಣಿಗೆಗಳು ಮತ್ತು ಪರಿಣಾಮಗಳನ್ನು ಮಗು ಎದುರಿಸಬೇಕಾಗುತ್ತದೆ.
ಒಂದೇ ಮಗುವಿದ್ದಾಗ ಅದಕ್ಕೆ ಪೋಷಕರುಉ ತಮ್ಮ ಸಮಯ ಮತ್ತು ಪ್ರೀತಿಯನ್ನು ನೀಡಲು ಸುಲಭವಾಗುತ್ತದೆ. ಮಕ್ಕಳ ಭವಿಷ್ಯವು ಉಜ್ವಲವಾಗಿರುವುದರ ಜೊತೆಗೆ ಆರೋಗ್ಯಕರವಾಗಿಯೂ ಸಹ ಇರುತ್ತದೆ. ಅದಕ್ಕಾಗಿಯೇ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳು ಈ ನೀತಿಯನ್ನು ಹೊಂದಿವೆ. ಅವುಗಳು ಕುಟುಂಬವು ಕಡಿಮೆ ಮಕ್ಕಳನ್ನು ಹೊಂದುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಸಿಕೊಡುತ್ತಿವೆ ಮತ್ತು ಜವಾಬ್ದಾರಿಯುತವಾದ ಪೋಷಕರಾಗಲು ಸಲಹೆ ನೀಡುತ್ತಿದೆ.
ಒಂದು ಮಗುವನ್ನು ಸಾಕುವುದು, ಹಲವು ಮಕ್ಕಳನ್ನು ಸಾಕುವುದಕ್ಕಿಂತ ಕಡಿಮೆ ಸಮಸ್ಯೆಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹ ಒಂದು ಮಗುವನ್ನು ಹೊಂದುವುದು ಒಳ್ಳೆಯದಲು. ಇದರಿಂದ ನಿಮಗೂ, ನಿಮ್ಮ ಮಗುವಿಗೂ ಮತ್ತು ದೇಶಕ್ಕು ನಗು ಖಂಡಿತ.



Click it and Unblock the Notifications




