Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೂವಿನಂಥ ಮಗುವಿನ ಮನಸ್ಸನ್ನು, ನೋಯಿಸಬೇಡಿ ಪ್ಲೀಸ್
ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಪೋಷಕರು ಸಹ ತಪ್ಪು ಮಾಡುತ್ತಾರೆ ಎಂಬುದನ್ನು ನಾವು ಒಪ್ಪಲೇ ಬೇಕು. ಹಿರಿಯರು, ಓದಿದವರು ಆದ ನಾವು ಹಲವಾರು ತಪ್ಪುಗಳನ್ನು ಮಾಡುತ್ತೇವೆ. ಅದರಲ್ಲಿ ತಿಳಿಯದೆ ಮಾಡುವ ತಪ್ಪುಗಳನ್ನು ಬೇಕಾದರು ಕ್ಷಮಿಸಬಹುದು. ಆದರೆ ತಿಳಿದು ತಿಳಿದು ಮಾಡುವ ತಪ್ಪುಗಳನ್ನು ಕ್ಷಮಿಸುವುದು ಸಾಧ್ಯವಿಲ್ಲ.
ಪೋಷಕರು ಮಾಡುವ ತಪ್ಪುಗಳಲ್ಲಿ ಅತ್ಯಂತ ಗುರುತರವಾದುದು, ಮಕ್ಕಳನ್ನು ಇತರರ ಜೊತೆಗೆ ಹೋಲಿಸುವುದು. ಹೌದು ಮಕ್ಕಳು ತಾವು ಅಂದುಕೊಂಡದ್ದಕ್ಕಿಂತ ಕಡಿಮೆ ಸಾಧನೆ ಮಾಡಿದಾಗ ಅವರನ್ನು ಇತರರ ಜೊತೆಗೆ ಹೋಲಿಸಿ ಹೀಗಳೆಯುವ ಕೆಲಸವನ್ನು ಹಲವಾರು ಪೋಷಕರು ಮಾಡುತ್ತಿರುತ್ತಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಮಕ್ಕಳ ತಜ್ಞರು ಹೇಳುತ್ತಿರುತ್ತಾರೆ.

ನಿಮ್ಮ ಮಗುವನ್ನು ಶಾಲೆಯಲ್ಲಿನ ಅಥವಾ ನೆರೆಹೊರೆಯ ಮಗುವಿನ ಜೊತೆಗೆ ಹೋಲಿಕೆ ಮಾಡುವುದರಿಂದ, ಆ ಮಗುವಿಗೆ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಸಾಧನೆ ಮಾಡಲಾಗಲಿಲ್ಲವಲ್ಲ ಎಂಬ ಜಿಗುಪ್ಸೆಯನ್ನು ನೀವು ಉಂಟು ಮಾಡಿಬಿಡುತ್ತೀರಿ. ತನ್ನ ಆರಂಭಿಕ ಜೀವನದಲ್ಲಿ ಮಗುವು ತನ್ನ ಪೋಷಕರು ಇಷ್ಟಪಟ್ಟಂತೆ ಜೀವಿಸಬೇಕು ಎಂದು ಬಯಸುತ್ತದೆ. ಮತ್ತು ಅದು ಮಗುವಿನ ಕಲಿಕೆಯ ಆರಂಭಿಕ ಕಾಲವಾದ್ದರಿಂದ, ಮಗುವು ನಿಧಾನವಾಗಿ ಹಲವಾರು ವಿಚಾರಗಳನ್ನು ಕಲಿಯುತ್ತ ಸಾಗುತ್ತದೆ.
ಇದಕ್ಕೆ ಮಗುವಿಗೆ ಸಮಯಾವಕಾಶ ಸಹ ಬೇಕಾಗುತ್ತದೆ. ಹಾಗು ಮಗುವಿಗೆ ಈ ಕುರಿತು ಆಸಕ್ತಿ ಸಹ ಇರಬೇಕಾಗುತ್ತದೆ, ಕಲಿಕೆಯಲ್ಲಿ ಆಸಕ್ತಿಯು ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಆದರೆ ಪೋಷಕರು ಇದಕ್ಕೆಲ್ಲಾ ಸಮಯವನ್ನು ನೀಡದೆ ಮಗುವಿನ ಮೇಲೆ ಒತ್ತಡವನ್ನು ತರುತ್ತಾರೆ. ಮಕ್ಕಳಿಗೂ ಆತ್ಮಾಭಿಮಾನವಿದೆ, ನಿರ್ಲಕ್ಷ ಮಾಡಬೇಡಿ
ಮಗುವನ್ನು ಏಕೆ ಇತರರ ಜೊತೆಗೆ ಹೋಲಿಕೆ ಮಾಡುತ್ತೀರಾ
ಇದು ಪೋಷಕರು ಮಾಡುವ ಅತ್ಯಂತ ದೊಡ್ಡ ಅಪರಾಧ. ಇದರಿಂದ ಮಗುವಿಗೆ ತನ್ನ ಮೇಲೆ ತನಗೆ ಕೀಳರಿಮೆ ಬರುತ್ತದೆ ಮತ್ತು ಆ ಮಗುವಿನ ಮನಸ್ಸಿಗೆ ಇದರಿಂದ ಮಾಸಲಾಗದ ಗಾಯವಾಗುತ್ತದೆ. ಇದು ನಿಮ್ಮ ಮಗುವಿನ ಮೇಲೆ ಅಧಿಕ ಒತ್ತಡವನ್ನು ಉಂಟು ಮಾಡುತ್ತದೆ ಎಂಬುದನ್ನು ಮರೆಯಬೇಡಿ. ಹೋಲಿಕೆ ಮಾಡುವ ಬದಲಿಗೆ ನಿಮ್ಮ ಮಗುವಿಗೆ ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಹೇಳಿ.
ಒಂದು ಅಧ್ಯಯನದ ಪ್ರಕಾರ ಮಕ್ಕಳು ಸಾಮಾನ್ಯವಾಗಿ ಕಡಿಮೆ ಆತ್ಮವಿಶ್ವಾಸವನ್ನು ಹೊಂದಿರುತ್ತಾರಂತೆ. ಕೀಳರಿಮೆಯು ಮಕ್ಕಳಲ್ಲಿ ಬೆಳೆಯುತ್ತದೆ. ಇದರಿಂದ ನಿಮ್ಮ ಮಗು ಪ್ರಾಪ್ತ ವಯಸ್ಸಿಗೆ ಬಂದಾಗ ಸಹ ಇದರಿಂದ ಅವರಿಗೆ ತೊಂದರೆಯುಂಟಾಗುತ್ತದೆ.
ಇದಲ್ಲದೆ ನಿಮ್ಮ ಮಗು ಇತರರನ್ನು ನೋಡಿ ಅಸೂಯೆಪಡುವ ಗುಣವನ್ನು ಸಹ ಬೆಳೆಸಿಕೊಳ್ಳುತ್ತದೆ. ಯಾರೊಂದಿಗೆ ನಿಮ್ಮ ಮಗುವನ್ನು ನೀವು ಹೋಲಿಸುತ್ತೀರೋ, ಅವರ ಮೇಲೆ ಇನ್ನೂ ಹೆಚ್ಚಿನ ಅಸೂಯೆ ಇವರಿಗೆ ಇರುತ್ತದೆ. ಎಲ್ಲರ ಮೇಲೆ ಅಸಹನೆ ಸಹ ಇವರಿಗೆ ಬೆಳೆಯುತ್ತದೆ.



Click it and Unblock the Notifications


