Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಂಜಾಟದ ಬದುಕಿನ ನಡುವೆ, ತಾಯಿ-ಮಗುವಿನ ಮೂಕ ವೇದನೆ....
ಪ್ರತಿಯೊಬ್ಬ ಮಹಿಳೆಯರು ತಾಯಿಯಾಗಬೇಕೆಂದು ಬಯಸುವುದು ಸಹಜ. ತಾಯ್ತನದಲ್ಲಿ ಅನುಭವಿಸುವ ಕಷ್ಟಸುಖಗಳು ಏನೇ ಇದ್ದರೂ ಅದನ್ನು ಅನುಭವಿಸಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಇಂದಿನ ದಿನಗಳಲ್ಲಿ ತಾಯಿಯಾಗುವುದು ಅಷ್ಟೊಂದು ಸುಲಭದ ಮಾತಲ್ಲ. ಯಾಕೆಂದರೆ ಪ್ರತಿಯೊಬ್ಬ ಮಹಿಳೆಯು ಯಾವುದಾದರೊಂದು ಉದ್ಯೋಗವನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಗುವಿನ ಲಾಲನೆಪಾಲನೆ ತುಂಬಾ ಕಷ್ಟ.

ಇಂತಹ ಸಮಯದಲ್ಲಿ ಮಗುವನ್ನು ಬೇರೆ ಯಾರಾದರೂ ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಸಂಬಂಧಿಕರು ಯಾರೂ ಇಲ್ಲವೆಂದಾದರೆ ಆಗ ಬೇಬಿ ಸಿಟ್ಟಿಂಗ್ ನಲ್ಲಿ ಮಗುವನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ. ಇದು ಅನಿವಾರ್ಯ ಕೂಡ. ಯಾಕೆಂದರೆ ಬೆಲೆಏರಿಕೆಯ ಈ ಕಾಲದಲ್ಲಿ ಒಬ್ಬ ವ್ಯಕ್ತಿ ದುಡಿದು ಬದುಕು ನಡೆಸುವುದು ಕಷ್ಟ. ಹೊಸ ತಾಯಂದಿರು ಮಾಡುವ 6 ದೊಡ್ಡ ತಪ್ಪುಗಳು
ಇಂತಹ ಸಂದರ್ಭದಲ್ಲಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯರದ್ದಾಗಿರುತ್ತದೆ. ಕೆಲಸ ಮಾಡುವ ತಾಯಂದಿರುವ ಕೆಲಸದ ಒತ್ತಡ, ಆರ್ಥಿಕ ಮುಗ್ಗಟ್ಟು ಇವುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಕಚೇರಿಗೆ ತೆರಳುವಾಗ ಮಗುವನ್ನು ಬಿಟ್ಟು ಹೋಗುವಂತಹ ಸಮಯದಲ್ಲಿ ತಾಯಿ ಹೃದಯ ಏನೆಲ್ಲಾ ಅನುಭವಿಸುತ್ತದೆ ಎಂದು ಇಲ್ಲಿ ತಿಳಿದುಕೊಳ್ಳುವ.
ತಪ್ಪಿತಸ್ಥ ಭಾವನೆ
ಉದ್ಯೋಗಸ್ಥ ಮಹಿಳೆಯರು ತಮ್ಮ ಮಗುವನ್ನು ತುಂಬಾ ಚೆನ್ನಾಗಿ ಪೋಷಣೆ ಮಾಡಬೇಕೆಂದು ಬಯಸುತ್ತಾರೆ. ಆದರೆ ಶೇ.50ರಷ್ಟು ಮಹಿಳೆಯರು ತಮ್ಮ ಮಗುವಿನ ಅಗತ್ಯತೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ನೋವಿನಿಂದ ತಪ್ಪಿತಸ್ಥಳೆಂದು ಭಾವಿಸುತ್ತಾರೆ. ಕೆಲಸದಿಂದ ಸಿಗುವಂತಹ ಆರ್ಥಿಕ ಹಾಗೂ ಭಾವನಾತ್ಮಕ ಸ್ವಾತಂತ್ರ್ಯವನ್ನು ಅವರು ಅನುಭವಿಸಿದರೂ ಮಗುವಿನ ಬೆಳವಣಿಗೆಯನ್ನು ನೋಡಲು ಸಾಧ್ಯವಾಗುತ್ತಿಲ್ಲವಲ್ಲಾ ಎನ್ನುವ ನೋವು ಅವರಲ್ಲಿರುತ್ತದೆ.
ಅಸಮಾಧಾನ
ಸಣ್ಣ ಮಗುವನ್ನು ಬಿಟ್ಟು ಹೋಗಿ ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ಪ್ರತಿಯೊಬ್ಬ ಮಹಿಳೆಗೂ ದೊಡ್ಡ ಸವಾಲಾಗಿರುತ್ತದೆ. ಪ್ರೀತಿ, ಅಸಹನೆ, ಸಂತೋಷ, ಕೋಪ ಇತ್ಯಾದಿ ತಾಯ್ತನದ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯಲ್ಲೂ ಸಾಮಾನ್ಯವಾಗಿರುತ್ತದೆ.
ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗುತ್ತದೆ. ಕೆಲವು ಮಹಿಳೆಯರು ತಮ್ಮ ಹೆರಿಗೆ ರಜೆ ಮುಕ್ತಾಯವಾದ ಕೂಡಲೇ ಕಚೇರಿಗೆ ತೆರಳುವ ಖುಷಿಯಲ್ಲಿರುತ್ತಾರೆ. ಆದರೆ ವಾಸ್ತವ ಅರಿವಾದಾಗ ತುಂಬಾ ಅಸಮಧಾನವಾಗುತ್ತದೆ. ಕೆಲಸಕ್ಕಾಗಿ ಮಗುವನ್ನು ಬಿಟ್ಟು ತೆರಳುವಾಗ ತಾಯಿಗೆ ತುಂಬಾ ಅಸಮಧಾನವಾಗುತ್ತದೆ.
ಸಂಕಟ
ಮಹಿಳೆಯರಿಗೆ ಮನೆಯಲ್ಲೇ ಕುಳಿತುಕೊಂಡು ಬೇಸರವಾಗಿರುವಾಗ ಕಚೇರಿಗೆ ತೆರಳುವುದು ಸಂತಸವನ್ನು ಉಂಟುಮಾಡಬಹುದು. ಆದರೆ ಮನೆ ಹಾಗೂ ಕಚೇರಿ ಮಧ್ಯೆ ನಡೆಸುವ ಜಂಜಾಟ ನೋಡಿದಾಗ ಅವರಿಗೆ ಸಂಕಷ್ಟವಾಗುತ್ತದೆ. ಮರಳಿ ಕಚೇರಿಗೆ ತೆರಳುವ ಮಹಿಳೆಯರ ತಲೆಯಲ್ಲಿ ಮಗುವಿನ ವಿಷಯವೇ ತಲೆಯಲ್ಲಿ ತುಂಬಿರುವ ಕಾರಣದಿಂದ ಅವರಿಗೆ ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಯಾವಾಗಲೂ ಚಿಂತೆ
ತಾವು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ ಎನ್ನುವ ಗೊಂದಲ ಅವರಲ್ಲಿ ಯಾವಾಗಲೂ ಕಾಡುತ್ತಲಿರುತ್ತದೆ. ಮಗುವಿಗೆ ಕಥೆ ಹೇಳುವುದು, ಅವನು/ಅವಳೊಂದಿಗೆ ಮಾತನಾಡುವುದು, ಆಡುವುದಕ್ಕೆ ಸಾಧ್ಯವಾಗುತ್ತಿಲ್ಲವೆನ್ನುವ ಕೊರಗು ಅವರಲ್ಲಿರುತ್ತದೆ. ಡೇಕೇರ್‌ನಲ್ಲಿ ಮಗುವನ್ನು ಬಿಟ್ಟು ಹೋಗುವ ಪರಿಸ್ಥಿತಿ ಇರುವಂತಹ ಮಹಿಳೆಯರು ಕಚೇರಿಯಲ್ಲಿ ಕುಳಿತುಕೊಂಡು ತಮ್ಮ ಮಗುವಿನ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಲಿರುತ್ತಾರೆ.



Click it and Unblock the Notifications



